Deepavali 2023: ಈ ಬಾರಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿ

ಇನ್ನೇನು ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಆದ್ದರಿಂದ ಮಾರುಕಟ್ಟೆ ದುಬಾರಿ ಬೆಲೆಯ ರಾಸಾಯನಿಕಗಳನ್ನು ಒಳಗೊಂಡ ದೀಪಾವಳಿಯ ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಬದಲಾಗಿ, ಪರಿಸರ ಸ್ನೇಹಿಯಾಗಿ ದೀಪಾವಳಿ ಹಬ್ಬವನ್ನು ಆಚರಿಸಿ. ನಿಮಗಾಗಿ ಕೆಲವೊಂದು ಸಲಹೆಗಳು ಇಲ್ಲಿವೆ.

Deepavali 2023: ಈ ಬಾರಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಿ
Deepavali 2023
Image Credit source: Pinterest

Updated on: Nov 07, 2023 | 7:05 PM

ನವೆಂಬರ್ 12 ರಂದು ದೇಶಾದ್ಯಂತ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಆದರೆ ದೀಪಾವಳಿಗೆ ಕೆಲವೇ ದಿನಗಳು ಉಳಿದಿರುವಾಗ, ಹಬ್ಬ ಆಚರಣೆಯಿಂದ ಪರಿಸರದ ಮೇಲೆ ಎಷ್ಟು ಹಾನಿಯಾಗುತ್ತದೆ ಎಂದು ತಿಳಿದುಕೊಳ್ಳುವುದು ಅಗತ್ಯವಾಗಿದೆ. ದೀಪಾವಳಿಯಂದು ಪಟಾಕಿಗಳನ್ನು ಸುಡುವುದರಿಂದ, ಆರೋಗ್ಯಕ್ಕೆ ಹಾನಿಕಾರಕವಾದ ಮಾಲಿನ್ಯವು ಹೆಚ್ಚಾಗಬಹುದು. ಪರಿಸರವನ್ನು ಸ್ವಚ್ಛವಾಗಿಡಲು ಸಹಕರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇದಕ್ಕಾಗಿ ಈ ಬಾರಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ.ದೀಪಾವಳಿಯು ಸಂತೋಷದ ಹಬ್ಬವಾಗಿದೆ, ಆದ್ದರಿಂದ ನಿಮ್ಮ ಹಬ್ಬದ ಸಂಭ್ರಮವನ್ನು ಕಡಿಮೆ ಮಾಡಬೇಡಿ, ಆದರೆ ಕೆಲವು ಸಲಹೆಗಳ ಸಹಾಯದಿಂದ ನೀವು ಪರಿಸರ ಸ್ನೇಹಿ, ಹಸಿರು ಮತ್ತು ಸ್ವಚ್ಛ ದೀಪಾವಳಿಯನ್ನು ಆಚರಿಸಬಹುದು.

ಸೌರ ಬೆಳಕನ್ನು ಬಳಸಿ:

ದೀಪಾವಳಿಯಂದು, ಅಂಗಡಿಗಳಿಂದ ಹಿಡಿದು ದೊಡ್ಡ ಕಟ್ಟಡಗಳು, ಕಚೇರಿಗಳು ಮತ್ತು ಮನೆಗಳವರೆಗೆ ಎಲ್ಲೆಡೆ ಮಿನುಗುವ ದೀಪಗಳಲ್ಲಿ ಅಲಂಕರಿಸಲಾಗುತ್ತದೆ. ಆದರೆ ಈ ಬಾರಿ ದೀಪಾವಳಿಗೆ ಸೋಲಾರ್ ದೀಪಗಳನ್ನು ಬಳಸಿ.

ಪರಿಸರ ಸ್ನೇಹಿ ಉಡುಗೊರೆಗಳು:

ದೀಪಾವಳಿಯಂದು ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳು ಅಥವಾ ಸಿಹಿತಿಂಡಿಗಳನ್ನು ನೀಡಲು ನೀವು ಬಯಸಿದರೆ, ಪ್ಯಾಕೇಜಿಂಗ್ ಹೆಸರಿನಲ್ಲಿ ಪ್ಲಾಸ್ಟಿಕ್ ಅನ್ನು ಬಳಸುವ ಬದಲು, ಪರಿಸರ ಸ್ನೇಹಿ ಪ್ಯಾಕಿಂಗ್ ಅನ್ನು ಆಯ್ಕೆಮಾಡಿ. ನೀವು ಬಯಸಿದರೆ, ಬಣ್ಣಬಣ್ಣದ ಕಾಗದ ಮೂಲಕ ನೀವು ಮನೆಯಲ್ಲಿ ಸಿಹಿತಿಂಡಿಗಳು ಮತ್ತು ಉಡುಗೊರೆಗಳನ್ನು ಚೆನ್ನಾಗಿ ಪ್ಯಾಕ್ ಮಾಡಬಹುದು.

ಇದನ್ನೂ ಓದಿ:  ಧನತ್ರಯೋದಶಿ ಹಬ್ಬದ ಶುಭ ಮುಹೂರ್ತ ಯಾವಾಗ? ಯಾವ ಸಮಯದಲ್ಲಿ ಚಿನ್ನ ಬೆಳ್ಳಿ ಖರೀದಿಸಿದರೆ ಸೂಕ್ತ

ಮಣ್ಣಿನ ದೀಪಗಳಿಗೆ ಆದ್ಯತೆ ನೀಡಿ:

ಇತ್ತೀಚಿನ ದಿನಗಳಲ್ಲಿ, ಹಲವಾರು ರೀತಿಯ ದೀಪ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಣ್ಣಿನ ದೀಪಗಳ ಬದಲಾಗಿ ಈಗ ಬಣ್ಣಬಣ್ಣದ ಮೇಣದ ಬತ್ತಿಗಳು ಬಂದಿವೆ. ಈ ದೀಪಾವಳಿಯಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮಾಡಿದ ಮಣ್ಣಿನ ದೀಪಗಳಿಂದ ನಿಮ್ಮ ಮನೆಯನ್ನು ಬೆಳಗಿಸಿ. ದೀಪಾವಳಿಯ ನಂತರ, ಈ ದೀಪಗಳು ಯಾವುದೇ ತ್ಯಾಜ್ಯವನ್ನು ಉತ್ಪಾದಿಸುವುದಿಲ್ಲ ಏಕೆಂದರೆ ಅವುಗಳನ್ನು ಮರಳಿ ಗೊಬ್ಬರ ಮಾಡಬಹುದು.

ಈ ರೀತಿ ರಂಗೋಲಿ ಮಾಡಿ:

ದೀಪಾವಳಿಯಂದು ಅಂಗಳ ಮತ್ತು ಬಾಗಿಲ ಮೇಲೆ ರಂಗೋಲಿ ಹಾಕದಿದ್ದರೆ ಅದು ಅಪೂರ್ಣ ಎನಿಸುತ್ತದೆ. ಈ ಬಾರಿ ಮಾರುಕಟ್ಟೆಯಿಂದ ರಾಸಾಯನಿಕ ಬಣ್ಣಗಳನ್ನು ಖರೀದಿಸುವ ಬದಲು ಹೂವಿನ ದಳಗಳು ಮತ್ತು ಅಕ್ಕಿ ಪುಡಿ ಬಳಸಿ ರಂಗೋಲಿ ಮಾಡಿ. ಇದರೊಂದಿಗೆ ನೀವು ಪರಿಸರ ಸ್ನೇಹಿ ರಂಗೋಲಿಯನ್ನು ಬಿಡಿಸಿ, ಮನೆಯ ಅಂದ ಹೆಚ್ಚಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us