Dhanteras 2023: ಧನತ್ರಯೋದಶಿ ಹಬ್ಬದ ಶುಭ ಮುಹೂರ್ತ ಯಾವಾಗ? ಯಾವ ಸಮಯದಲ್ಲಿ ಚಿನ್ನ ಬೆಳ್ಳಿ ಖರೀದಿಸಿದರೆ ಸೂಕ್ತ 

ಐದು ದಿನಗಳ  ದೀಪಾವಳಿ ಹಬ್ಬದ ಆಚರಣೆಯು ಧನತ್ರಯೋದಶಿ ದಿನದಂದು ಪ್ರಾರಂಭವಾಗುತ್ತದೆ.  ಈ ದಿನ  ಲಕ್ಷ್ಮೀ ದೇವಿ ಹಾಗೂ ಸಂಪತ್ತಿನ ದೇವ ಕುಬೇರನನ್ನು ಪೂಜಿಸುವುದರಿಂದ ಸಂಪತ್ತು ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಈ ಶುಭ ದಿನದಂದು  ಚಿನ್ನ ಬೆಳ್ಳಿಯನ್ನು ಖರೀದಿಸುವುದು ಕೂಡಾ ತುಂಬಾ ಒಳ್ಳೆಯದು ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಹೆಚ್ಚಿನವರು ಈ ದಿನದನ್ನು ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಖರೀದಿಸುತ್ತಾರೆ.  ನೀವು ಕೂಡ ಚಿನ್ನವನ್ನು ಖರೀದಿಸುವ ಯೋಜನೆಯಲ್ಲಿದ್ದರೆ,  ಈ ಬಾರಿಯ ಧನತ್ರಯೋದಶಿಯ ಶುಭ ಮುಹೂರ್ತ, ಮತ್ತು  ಚಿನ್ನ , ಬೆಳ್ಳಿ ಖರೀದಿಸಲು ಸೂಕ್ತ ಸಮಯ ಯಾವುದು ಎಂಬುದನ್ನು ತಿಳಿಯಿರಿ.

Dhanteras 2023: ಧನತ್ರಯೋದಶಿ ಹಬ್ಬದ ಶುಭ ಮುಹೂರ್ತ ಯಾವಾಗ? ಯಾವ ಸಮಯದಲ್ಲಿ ಚಿನ್ನ ಬೆಳ್ಳಿ ಖರೀದಿಸಿದರೆ ಸೂಕ್ತ 
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷತಾ ವರ್ಕಾಡಿ

Updated on:Nov 07, 2023 | 6:55 PM

ಪವಿತ್ರ ದೀಪಾವಳಿ ಹಬ್ಬವನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಅಮವಾಸ್ಯೆಯಂದು ಆಚರಿಸಲಾಗುತ್ತದೆ. ಈ ವರ್ಷ ಈ ಹಬ್ಬವನ್ನು ನವೆಂಬರ್ 12 ರಂದು ಆಚರಿಸಲಾಗುತ್ತಿದೆ. ಐದು ದಿನಗಳ ದೀಪಾವಳಿ ಹಬ್ಬದ ಆಚರಣೆಯು ಧನತ್ರಯೋದಶಿ ದಿನದಂದು ಪ್ರಾರಂಭವಾಗುತ್ತದೆ. ಧನತ್ರಯೋದಶಿಯ ಶುಭ ದಿನದಂದು ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವಿ ಹಾಗೂ ಕುಬೇರರನ್ನು ಪೂಜಿಸುವುದರಿಂದ ಸಂಪತ್ತು, ಸಮೃದ್ಧಿ ಮತ್ತು ಸುಖ, ಶಾಂತಿ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಸಮುದ್ರ ಮಂಥನದ ಸಮಯದಲ್ಲಿ ಸಾಗರದಿಂದ ಲಕ್ಷ್ಮೀ ದೇವಿಯು ಹೊರಬಂದ ದಿನವೇ ಧನತ್ರಯೋದಶಿ ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದ ಈ ದಿನ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀ ದೇವಿಯನ್ನು ಹಾಗೂ ಸಂಪತ್ತಿನ ದೇವರು ಕುಬೇರನನ್ನು ಪೂಜಿಸಲಾಗುತ್ತದೆ. ಅಲ್ಲದೆ ಈ ದಿನದಂದು ಚಿನ್ನ ಮತ್ತ ಬೆಳ್ಳಿಯ ವಸ್ತುಗಳನ್ನು  ಖರೀದಿಸುವುದರಿಂದಲೂ ಮನೆಗೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಹೆಚ್ಚಿನ ಜನರು ಈ ದಿನ ಚಿನ್ನ ಬೆಳ್ಳಿಯನ್ನು ಖರೀದಿಸುತ್ತಾರೆ.  ಈ ಬಾರಿ  ಧನತ್ರಯೋದಶಿಯ ದಿನ ಚಿನ್ನ ಬೆಳ್ಳಿ ಖರೀದಿಸಲು ಯೋಜಿಸುತ್ತಿದ್ದರೆ,  ಧನತ್ರಯೋದಶಿಯ ಶುಭ ಮುಹೂರ್ತ ಮತ್ತು ಚಿನ್ನವನ್ನು ಖರೀದಿಸಲು ಸೂಕ್ತ ಸಮಯ ಯಾವುದೆಂದು ತಿಳಿಯಿರಿ.

ಧನತ್ರಯೋದಶಿ ಯಾವಾಗ?

ಈ ಬಾರಿಯ ಧನತ್ರಯೋದಶಿ ದಿನವನ್ನು ನವೆಂಬರ್ 10 ರಂದು ಆಚರಿಸಲಾಗುತ್ತಿದೆ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯ ಶುಭ ದಿನದಂದು ಧನತ್ರಯೋದಶಿ ಹಬ್ಬವನ್ನು ಆಚರಿಸಲಾಗುತ್ತದೆ.

ಧನತ್ರಯೋದಶಿ ಮುಹೂರ್ತ:

ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯ ತಿಥಿಯು ನವೆಂಬರ್ 10 ರಂದು ಮಧ್ಯಾಹ್ನ 02:35 ಕ್ಕೆ ಪ್ರಾರಂಭವಾಗಿ ಮತ್ತು ನವೆಂಬರ್ 11 ರಂದು ಮಧ್ಯಾಹ್ನ  01:57 ಕ್ಕೆ ಕೊನೆಗೊಳ್ಳಲಿದೆ. ಧನತ್ರಯೋದಶಿ ದಿನದಂದು ಪ್ರದೋಷ ಕಾಲದಲ್ಲಿ ದೇವರನ್ನು ಪೂಜಿಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ದೀಪಾವಳಿಯ ಧನತ್ರಯೋದಶಿ ವೇಳೆ ಚಿನ್ನ ಖರೀದಿಸುತ್ತಿದ್ದೀರಾ? ಅದಕ್ಕೆ ಮುಂಚೆ ಈ ಸಲಹೆ ತಿಳಿದಿರಿ

ನವೆಂಬರ್ 10, 2023 ರಂದು ಧನ ತ್ರಯೋದಶಿ ಪೂಜಾ ಮುಹೂರ್ತವು  ಸಂಜೆ 05:47 ರಿಂದ  ಸಂಜೆ 07:43 ರವೆರೆಗೆ ಇರುತ್ತದೆ.

ಪ್ರದೋಷ ಕಾಲ – ಸಂಜೆ 05:30 ರಿಂದ 08:08 ರ ವರೆಗೆ

ವೃಷಭ ಕಾಲ – ಸಂಜೆ 05:47 ರಿಂದ 07:43 ರವರೆಗೆ

ತ್ರಯೋದಶಿ ತಿಥಿ ಪ್ರಾರಂಭ – ನವೆಂಬರ್ 10 ಮಧ್ಯಾಹ್ನ 12:35 ಕ್ಕೆ

ತ್ರಯೋದಶಿ ತಿಥಿ ಮುಕ್ತಾಯ ನವೆಂಬರ್ 11 ಮಧ್ಯಾಹ್ನ 01:57 ಕ್ಕೆ

ಚಿನ್ನ ಬೆಳ್ಳಿ ಖರೀದಿಸಲು ಉತ್ತಮ ಸಮಯ ಯಾವುದು?

ಧನತ್ರಯೋದಶಿ ಹಬ್ಬದ ದಿನದಂದು  ಚಿನ್ನ, ಬೆಳ್ಳಿ ವಸ್ತುಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಧನತ್ರಯೋದಶಿಯ ಶುಭದಿನದಂದು ಹೆಚ್ಚಿನ ಭಾರತೀಯರು ಚಿನ್ನ ಬೆಳ್ಳಿಯ ವಸ್ತುಗಳನ್ನು  ಖರೀದಿಸುತ್ತಾರೆ. ಈ ಬಾರಿ ಧನತ್ರಯೋದಶಿಯಂದು ಚಿನ್ನವನ್ನು ಖರೀದಿಸಲು  ನವೆಂಬರ್ 10 ರಂದು ಮಧ್ಯಾಹ್ನ 02:35 ರಿಂದ ನವೆಂಬರ್ 11 ರ ಮಧ್ಯಾಹ್ನ 1:57 ರವರೆಗೆ ಚಿನ್ನ ಬೆಳ್ಳಿ ಖರೀದಿಸಲು ಅತ್ಯಂತ ಮಂಗಳಕರ ಸಮಯವಾಗಿದೆ.

ಚಿನ್ನ, ಬೆಳ್ಳಿಯ ಹೊರತಾಗಿ ಧನತ್ರಯೋದಶಿ ದಿನದಂದು ಪಾತ್ರೆಗಳು, ವಾಹನ ಮತ್ತು ಕುಬೇರ ಯಂತ್ರವನ್ನು ಖರೀದಿಸುವುದು ಸಹ ಒಳ್ಳೆಯದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 5:54 pm, Mon, 6 November 23

ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು