Deepavali 2025: ಬೆಳಕಿನ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಈ ಸಂದೇಶ ಕಳುಹಿಸಿ ಶುಭಾಶಯ ಕೋರಿ

ಬೆಳಕಿಗೆ ಹಬ್ಬದಂದು ಮನೆ ಮಂದಿ ಎಲ್ಲಾ ಜೊತೆ ಸೇರಿ ಸಂಭ್ರಮಿಸುವ ದಿನ. ಎಲ್ಲೆಲ್ಲೂ ಬೆಳಕನ್ನು ಹರಡುತ್ತಾ ಸಂಭ್ರಮದ ವಾತಾವರಣವನ್ನು ಹೆಚ್ಚಿಸುವ ದೀಪಾವಳಿ ಹಬ್ಬದ ಆಚರಣೆಯೂ ಒಂದು ಕಡೆಯಿಂದ ಮತ್ತೊಂದು ಕಡೆ ಭಿನ್ನ. ಬದುಕಿನ ಅಂಧಕಾರವನ್ನು ತೊಡೆದು ಹಾಕಿ, ಬೆಳಕನ್ನು ಚೆಲ್ಲುವ ಈ ದೀಪಾವಳಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಸಂದೇಶ ಕಳುಹಿಸಿ ಶುಭ ಕೋರಿ.

Deepavali 2025: ಬೆಳಕಿನ ಹಬ್ಬದಂದು ನಿಮ್ಮ ಪ್ರೀತಿಪಾತ್ರರಿಗೆ ಈ ಸಂದೇಶ ಕಳುಹಿಸಿ ಶುಭಾಶಯ ಕೋರಿ
ದೀಪಾವಳಿ

Updated on: Oct 19, 2025 | 5:05 PM

ಬೆಳಕಿನ ಹಬ್ಬ ದೀಪಾವಳಿಗೆ (Deepavali) ಎಲ್ಲರ ಮನೆಯಲ್ಲೂ ತಯಾರಿ ಜೋರಾಗಿಯೇ ನಡೆಯುತ್ತಿದೆ. ಹೊಸ ಬಟ್ಟೆ ಖರೀದಿ, ಉಡುಗೊರೆಗಳನ್ನು ನೀಡುವುದು ಇನ್ನಷ್ಟು ಹಬ್ಬದ ಸಂಭ್ರಮವನ್ನು ಹೆಚ್ಚಿಸುತ್ತದೆ. ಐದು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬಕ್ಕೆ ನೀವು ನಿಮ್ಮ ಸ್ನೇಹಿತರಿಗೆ, ಆತ್ಮೀಯರಿಗೆ ಶುಭಾಶಯ ಕೋರಿ ನಿಮ್ಮವರನ್ನು ಖುಷಿಪಡಿಸಬಹುದು. ಬೆಳಕಿನ ಹಬ್ಬ ದೀಪಾವಳಿಗೆ ಅರ್ಥಪೂರ್ಣ ಸಂದೇಶಗಳನ್ನು (messages) ಕಳಿಸಿ ಶುಭಾಶಯ ಕೋರಬಹುದು, ಇಲ್ಲಿದೆ ಸಂದೇಶಗಳು.

ದೀಪಾವಳಿ ಹಬ್ಬಕ್ಕೆ ಶುಭಾಶಯಗಳು ಕೋರಲು ಇಲ್ಲಿವೆ ಸಂದೇಶಗಳು

  • ಜ್ಞಾನದ ಬೆಳಕು ಮನಸನು ಬೆಳಗಲಿ, ಹಣತೆಯ ಬೆಳಕು ಮನೆಯನ್ನು ಬೆಳಗಲಿ, ಮನದ ಕತ್ತಲು ಕಳೆದು ಬೆಳಕು ಮೂಡಲಿ, ದೀಪಾವಳಿಯ ಶುಭಾಶಯಗಳು.
  • ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ದೀಪಾವಳಿ ಹಬ್ಬದ ಶುಭಾಶಯಗಳು.
  • ನಿಮ್ಮೆಲ್ಲಾ ಕನಸುಗಳು ಈಡೇರಲಿ, ನಿಮ್ಮ ಬದುಕಿನ ಹಾದಿಯಲ್ಲಿದ್ದ ಅಡೆತಡೆಗಳು ಬೆಳಕಿನ ಹಬ್ಬದಲ್ಲಿ ನಿವಾರಣೆಯಾಗಲಿ, ನಿಮ್ಮ ಇಷ್ಟಾರ್ಥಗಳೆಲ್ಲಾ ಈರೇಡಲಿ. ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.
  •  ದೀಪದ ಬೆಳಕಿನಿಂದ ಎಲ್ಲಾ ಕತ್ತಲು ದೂರವಾಗಲಿ, ನೀವು ಬಯಸಿದ ಸಂತೋಷವನ್ನು ಸಿಗಲಿ, ಬೆಳಕಿನ ಹಬ್ಬದ ಶುಭಾಶಯಗಳು.
  • ಕತ್ತಲೆಯನ್ನು ಓಡಿಸಲು ಯಾವಾಗಲೂ ಬೆಳಕು ಇರುತ್ತದೆ. ಅದೇ ರೀತಿ ದೀಪಗಳ ಬೆಳಕು ನಿಮ್ಮ ಜೀವನದಲ್ಲಿ ಸಂತೋಷವನ್ನು ಹರಡಲಿ. ದೀಪಾವಳಿಯ ಶುಭಾಶಯಗಳು.
  • ಈ ದೀಪಾವಳಿಯಲ್ಲಿ ನಾನು ನಿಮ್ಮ ಕುಟುಂಬಕ್ಕೆ, ನಿಮ್ಮ ಸ್ನೇಹಿತರಿಗೆ ಉತ್ತಮ ಆರೋಗ್ಯ ಮತ್ತು ಆಯುಷ್ಯವನ್ನು ಕರುಣಿಸಲಿ. ಬೆಳಕಿನ ಹಬ್ಬದ ಹಾರ್ಥಿಕ ಶುಭಾಶಯಗಳು.

ಇದನ್ನೂ ಓದಿ:Deepavali 2025: ನಮ್ಮ ಭಾರತ ಮಾತ್ರವಲ್ಲ ಈ ದೇಶಗಳಲ್ಲೂ ಬೆಳಕಿನ ಹಬ್ಬ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ

ಇದನ್ನೂ ಓದಿ
ಸಂಭ್ರಮದ ಜೊತೆ ಮುನ್ನೆಚ್ಚರಿಕೆಯೂ ಇರಲಿ; ಸುರಕ್ಷಿತ ದೀಪಾವಳಿ ನಿಮ್ಮದಾಗಲಿ!
ದೀಪಾವಳಿ ಶಾಪಿಂಗ್‌ ಮಾಡುವಾಗ ಈ ವಿಚಾರಗಳನ್ನು ನೆನಪಿನಲ್ಲಿಡಿ
ಮಕ್ಕಳನ್ನು ಪಟಾಕಿಯಿಂದ ದೂರವಿಡಲು ಏನು ಮಾಡಬೇಕು?
ಭಾರತವೂ ಸೇರಿದಂತೆ ದೀಪಾವಳಿ ಹಬ್ಬವನ್ನು ಆಚರಿಸುವ ದೇಶಗಳಿವು
  • ದೀಪಾವಳಿಯೂ ನಿಮ್ಮ ಜೀವನದಲ್ಲಿ ಭವಿಷ್ಯದ ಹೊಸ ಭರವಸೆಗಳನ್ನು ಹಾಗೂ ನಾಳೆಯ ಹೊಸ ಕನಸುಗಳನ್ನು ನನಸು ಮಾಡಲಿ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
  • ಮನೆಯಲ್ಲಿ ದೀಪ ಬೆಳಗುತ್ತಿರಲಿ, ಮನದಲ್ಲಿ ತೃಪ್ತಿಈ ಇರಲಿ ಬದುಕು ಬೃಂದಾವನವಾಗಲಿ. ದೀಪಾವಳಿಯ ಹೃದಯಪೂರ್ವಕ ಶುಭಾಶಯಗಳು.
  • ದೀಪದ ಬೆಳಕಿನಲ್ಲಿ ಕತ್ತಲು ದೂರ ಸರಿಯುವಂತೆ, ನಮ್ಮಲ್ಲಿರುವ ಕೋಪ, ಅಹಂ ದೂರವಾಗಲಿ, ಪ್ರೀತಿಯ ಬೆಳಕು ಹರಡಲಿ. ಬೆಳಕಿನ ಹಬ್ಬದ ಶುಭಾಶಯಗಳು.
    ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Sun, 19 October 25