
ನಮ್ಮ ದೇಶದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ದೀಪಾವಳಿ (Deepavali) ಕೂಡ ಒಂದು. ಈ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಮನೆಯನ್ನು ದೀಪ, ಲೈಟಿಂಗ್ಸ್‌ಗಳಿಂದ ಸಿಂಗರಿಸುತ್ತಾರೆ. ಅದಕ್ಕೂ ಮುನ್ನ ಮನೆಯನ್ನು ಡೀಪ್ ಕ್ಲೀನ್ ಮಾಡುತ್ತಾರೆ. ಲಕ್ಷ್ಮೀ ದೇವಿ ಒಲಿಯುತ್ತಾಳೆ ಎಂಬ ಕಾರಣಕ್ಕೆ ಬೆಳಕಿನ ಹಬ್ಬ ದೀಪಾವಳಿಗೆ ಮುನ್ನ ಮನೆಯನ್ನು ಸ್ವಚ್ಛಗೊಳಿಸುವುದು ವಾಡಿಕೆ. ಈ ಬಾರಿಯ ಹಬ್ಬಕ್ಕೂ ದಿನಗಣನೆ ಆರಂಭವಾಗಿದ್ದು, ಈಗಾಗ್ಲೇ ಅನೇಕರು ತಮ್ಮ ಮನೆಯ ಸ್ವಚ್ಛತಾ ಕಾರ್ಯವನ್ನು ಶುರು ಮಾಡಿದ್ದಾರೆ. ನೀವು ಕೂಡ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರೆ, ಸ್ವಿಚ್‌ಬೋರ್ಡ್ ಸ್ವಚ್ಛತೆಯ ಬಗ್ಗೆ ಸ್ವಲ್ಪ ಗಮನ ಹರಿಸಿ, ಹೆಚ್ಚಿನವರು ಅದರ ಸ್ವಚ್ಛತೆಯ ಬಗ್ಗೆ ಅಷ್ಟಾಗಿ ಗಮನ ಹರಿಸುವುದಿಲ್ಲ, ಹೀಗೆ ಮಾಡಿದರೆ ಮನೆಯ ಸೌಂದರ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಹಾಗಾಗಿ ಈ ಕೆಲವೊಂದು ಸಿಂಪಲ್ ಟಿಪ್ಸ್‌ಗಳನ್ನು (Deepavali Cleaning Hacks) ಪಾಲಿಸುವ ಮೂಲಕ ಸ್ವಿಚ್‌ಬೋರ್ಡ್‌ಗಳಲ್ಲಿ ಅಂಟಿರುವ ಕಲೆ, ಕೊಳೆಯನ್ನು ಸುಲಭವಾಗಿ ಹೋಗಲಾಡಿಸಿ.
ಟೂತ್‌ಪೇಸ್ಟ್: ಸ್ವಿಚ್‌ಬೋರ್ಡ್‌ನಲ್ಲಿ ಅಂಟಿರುವ ಕೊಳೆಯನ್ನು ತೆಗೆದುಹಾಕಲು ಟೂತ್‌ಪೇಸ್ಟ್ ಪರಿಣಾಮಕಾರಿಯಾಗಿದೆ. ಅದಕ್ಕಾಗಿ ಮೊದಲು ನೀವು ಸ್ವಿಚ್‌ಬೋರ್ಡ್‌ಗೆ ಸ್ವಲ್ಪ ಪ್ರಮಾಣದ ಟೂತ್‌ಪೇಸ್ಟ್ ಅನ್ವಯಿಸಿ ಬಳಿದ ಅದನ್ನು ಟೂತ್ ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ ಒಣಬಟ್ಟೆಯಿಂದ ಒರಸಿದರೆ, ಸ್ವಿಚ್‌ಬೋರ್ಡ್ ಹೊಸದರಂತೆ ಪಳಪಳನೆ ಹೊಳೆಯುತ್ತದೆ.
ನಿಂಬೆ ಮತ್ತು ಉಪ್ಪು: ನಿಂಬೆ ರಸ ಮತ್ತು ಉಪ್ಪಿನ ಸಹಾಯದಿಂದಲೂ ಸ್ವಿಚ್‌ಬೋರ್ಡ್ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ಅರ್ಧ ನಿಂಬೆ ಹೋಳು ತೆಗೆದುಕೊಂಡು ಅದಕ್ಕೆ ಸ್ವಲ್ಪ ಪುಡಿ ಉಪ್ಪು ಹಾಕಿ ಸ್ವಿಚ್‌ಬೋರ್ಡ್ ಮೇಲೆ ನಿಧಾನಕ್ಕೆ ಸ್ಕ್ರಬ್ ಮಾಡಿ. ಈ ಸಂದರ್ಭದಲ್ಲಿ ಎಲ್ಲಾ ಸ್ವಿಚ್‌ಗಳು ಆಫ್ ಆಗಿರುವಂತೆ ನೋಡಿಕೊಳ್ಳಿ.
ಬಿಳಿ ವಿನೆಗರ್: ಸ್ಪ್ರೇ ಬಾಟಲಿಯಲ್ಲಿ ಬಿಳಿ ವಿನೆಗರ್ ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಈ ದ್ರಾವಣವನ್ನು ನೇರವಾಗಿ ಸ್ವಿಚ್ ಮೇಲೆ ಸಿಂಪಡಿಸುವ ಬದಲು, ಅದನ್ನು ಸ್ವಚ್ಛವಾದ ಹತ್ತಿ ಬಟ್ಟೆಯ ಮೇಲೆ ಸಿಂಪಡಿಸಿ ಮತ್ತು ನಂತರ ಬೋರ್ಡ್ ಅನ್ನು ನಿಧಾನವಾಗಿ ಒರೆಸಿ. ಈ ದ್ರಾವಣವು ಮೊಂಡುತನದ ಕಲೆಗಳು ಮತ್ತು ಕೊಳೆಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ: ಈರುಳ್ಳಿ ಕತ್ತರಿಸುವಾಗ ಅಳಲು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಸುಲಭ ವಿಧಾನ
ಅಡಿಗೆ ಸೋಡಾ: ನಿಮ್ಮ ಸ್ವಿಚ್‌ಬೋರ್ಡ್‌ನಲ್ಲಿ ಕೊಳೆ ಇದ್ದರೆ, ಅಡಿಗೆ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟನ್ನು ಕೊಳೆ ಇರುವ ಜಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಹಾಗೆಯೇ ಬಿಡಿ. ನಂತರ, ಮೃದುವಾದ ಬ್ರಷ್‌ನಿಂದ ನಿಧಾನವಾಗಿ ಸ್ಕ್ರಬ್ ಮಾಡಿ. ಅಂತಿಮವಾಗಿ, ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಹೀಗೆ ಮಾಡುವುದರಿಂದ ಸುಲಭವಾಗಿ ಕಲೆಯನ್ನು ತೆಗೆದುಹಾಕಬಹುದು.
ಸ್ವಿಚ್‌ಬೋರ್ಡ್ ಸ್ವಚ್ಛಗೊಳಿಸುವಂತಹ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ನಂತರವೇ ಕ್ಲೀನ್ ಮಾಡಿ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶುಚಿಗೊಳಿಸುವಿಕೆಯ ಜೊತೆಗೆ, ಪ್ರತಿ 15 ದಿನಗಳಿಗೊಮ್ಮೆ ಮನೆ ಸ್ವಿಚ್‌ಬೋರ್ಡ್‌ಗಳನ್ನು ಲಘುವಾಗಿ ಸ್ವಚ್ಛಗೊಳಿಸುವ ಅಭ್ಯಾಸವನ್ನುರೂಢಿಸಿಕೊಳ್ಳಿ. ಹೀಗೆ ಮಾಡುವುದರಿಂದ ಸ್ವಿಚ್‌ಬೋರ್ಡ್ ಹೊಸದರಂತೆ ಹೊಳೆಯುತ್ತಿರುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ