AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepavali Firecracker Safety: ಪಟಾಕಿ ಸಿಡಿಸುವಾಗ ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಇದು ಅತ್ಯಂತ ಸಂಭ್ರಮ ಮತ್ತು ಸಂತೋಷದಿಂದ ಆಚರಿಸಲ್ಪಡುವ ಹಬ್ಬವಾಗಿದೆ. ಈ ಹಬ್ಬದ ದಿನ ದೀಪ ಬೆಳಕಿ, ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತದೆ. ಆದರೆ ಪಟಾಕಿ ಸಿಡಿಸುವಾಗ ತೋರುವ ಒಂದು ಸಣ್ಣ ಅಜಾಗರೂಕತೆಯೂ ಹಬ್ಬದ ಸಂಭ್ರಮವನ್ನೇ ಹಾಳು ಮಾಡಬಹುದು. ಆದ್ದರಿಂದ ದೀಪಾವಳಿಯಂದು ಪಟಾಕಿ ಹಚ್ಚುವಾಗ ಪ್ರತಿಯೊಬ್ಬರೂ ಸಹ ಈ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.

Deepavali Firecracker Safety: ಪಟಾಕಿ ಸಿಡಿಸುವಾಗ ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on: Nov 05, 2026 | 6:52 PM

Share

ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಶುರುವಾಗಿದೆ. ಈ ಹಬ್ಬವನ್ನು ದೀಪಗಳನ್ನು ಬೆಳಗುವ ಮೂಲಕ ಹಾಗೂ ಪಟಾಕಿಗಳನ್ನು (Firecracker) ಹಚ್ಚುವ ಮೂಲಕ ಬಲು ಜೋರಾಗಿ ಆಚರಿಸಲಾಗುತ್ತದೆ. ದೀಪಾವಳಿಯಂದು, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಖುಷಿ ಖುಷಿಯಿಂದ ಬಹಳಷ್ಟು ಪಟಾಕಿಗಳನ್ನು ಸಿಡಿಸುತ್ತಾರೆ. ಪಟಾಕಿಗಳನ್ನು ಹಚ್ಚುವಾಗ ಎಚ್ಚರಿಕೆ ವಹಿಸದಿದ್ದರೆ, ಗಂಭೀರ ಗಾಯಗಳಾಗುವ ಸಾಧ್ಯತೆಯಿದೆ. ಸ್ವಲ್ಪ ಅಜಾಗರೂಕತೆಯು ಈ ಹಬ್ಬದ ಸಂತೋಷವನ್ನು ದುರಂತವಾಗಿ ಪರಿವರ್ತಿಸಬಹುದು. ಹೌದು ಪಟಾಕಿಗಳಿಂದ ಹೊರಸೂಸುವ ಕಿಡಿಗಳು, ಹೊಗೆ ಮತ್ತು ದೊಡ್ಡ ಶಬ್ದವು ಸಮಸ್ಯೆಗಳನ್ನು ಉಂಟುಮಾಡುವುದಲ್ಲದೆ, ಮಕ್ಕಳು, ವೃದ್ಧರು ಮತ್ತು ಸಾಕುಪ್ರಾಣಿಗಳಿಗೂ ಹಾನಿ ಮಾಡುತ್ತದೆ. ಆದ್ದರಿಂದ, ಯಾವುದೇ ರೀತಿಯ ಹಾನಿಯನ್ನು ತಪ್ಪಿಸಲು ಪಟಾಕಿ ಹಚ್ಚುವಾಗ ಈ ಮುನ್ನೆಚ್ಚರಿಕಾ ಕ್ರಮಗಳು ಪಾಲಿಸಬೇಕು.

ಮೊದಲು ಪಟಾಕಿ ಖರೀದಿಸುವಾಗ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ:

  • ಪಟಾಕಿಗಳನ್ನು ಖರೀದಿಸುವಾಗ, ಅವುಗಳ ಗುಣಮಟ್ಟವನ್ನು ಪರಿಶೀಲಿಸಿ.
  • ನೀವು ಖರೀದಿಸುವ ಪಟಾಕಿಗಳು ಸರ್ಕಾರದಿಂದ ಅನುಮೋದಿತ, ಪರವಾನಗಿ ಪಡೆದ ಮಾರಾಟಗಾರರಿಂದ ಬಂದಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಅಕ್ರಮ ಅಥವಾ ಕಡಿಮೆ ಗುಣಮಟ್ಟದ ಪಟಾಕಿಗಳಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು.
  • ಲೇಬಲ್ ಇಲ್ಲದ, ತೆರೆದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಿ.
  • ನೀವು ಹಸಿರು ಪಟಾಕಿಗಳನ್ನು ಖರೀದಿಸಬಹುದು.

ನಿಮ್ಮ ಕೈಯಲ್ಲಿ ಪಟಾಕಿಗಳನ್ನು ಹಚ್ಚಬೇಡಿ:

ಕೆಲವರು ಕೈಯಲ್ಲಿ ಹಿಡಿದುಕೊಂಡು ಪಟಾಕಿಯನ್ನು  ಹಚ್ಚಿ, ಅದನ್ನು  ಎಸೆಯುತ್ತಾರೆ. ಇದು ಬೇರೆಯವರ ಮೈಮೇಲೆ ಬಿದ್ದರೆ ಗಾಯಗಳಾಗುವ ಅಪಾಯ ಇರುತ್ತದೆ. ಇದಲ್ಲದೆ, ಪಟಾಕಿ ಕೈಯಲ್ಲಿ ಸಿಡಿಯುವ ಅಪಾಯವೂ ಇರುತ್ತದೆ. ಆದ್ದರಿಂದ, ಯಾವಾಗಲೂ ಪಟಾಕಿಗಳನ್ನು ನೆಲದ ಮೇಲೆ ಇಟ್ಟು ಹಚ್ಚಿ.

ಪಟಾಕಿ ಹಚ್ಚಲು ತೆರೆದ, ಸುರಕ್ಷಿತ ಸ್ಥಳಗಳನ್ನು ಆಯ್ಕೆ ಮಾಡಿ:

ಪಟಾಕಿಗಳನ್ನು ಸುಡಲು ಯಾವಾಗಲೂ ತೆರೆದ ಸ್ಥಳವನ್ನು ಆರಿಸಿ. ಮನೆಯ ಒಳಗೆ, ಬಾಲ್ಕನಿಯಲ್ಲಿ, ಮೆಟ್ಟಿಲುಗಳಲ್ಲಿ ಅಥವಾ ಮುಚ್ಚಿದ ಸ್ಥಳದಲ್ಲಿ ಪಟಾಕಿಗಳನ್ನು ಸುಡುವುದು ಅಪಾಯಕಾರಿ. ಹಾಗಾಗಿ ಮರಗಳು, ವಾಹನಗಳು ಮತ್ತು ಕಟ್ಟಡಗಳಿಂದ ದೂರವಿರುವ  ವಿಶಾಲವಾದ ತೆರೆದ ಸ್ಥಳಗಳಲ್ಲಿ ಪಟಾಕಿ ಸಿಡಿಸಿ. ಇದರಿಂದ ಅವಘಡಗಳು ಸಂಭವಿಸದಂತೆ ತಡೆಯಬಹುದು. ಸಿಡಿಸಿದ ಪಟಾಕಿಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ನಂತರ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ.

ಮಕ್ಕಳನ್ನು ಮೇಲ್ವಿಚಾರಣೆ ಮಾಡುತ್ತಿರಿ:

ಮಕ್ಕಳು ಮೇಲ್ವಿಚಾರಣೆಯಿಲ್ಲದೆ ಸಣ್ಣ ಪಟಾಕಿಗಳನ್ನು ಸಹ ಸಿಡಿಸಲು  ಬಿಡಬೇಡಿ. ಸರಿಯಾದ ಮಾರ್ಗದರ್ಶನ ನೀಡಿ, ಅಪಾಯಕಾರಿಯಲ್ಲದ ಸಣ್ಣಪುಟ್ಟ ಪಟಾಕಿಗಳನ್ನು ಮಾತ್ರ ಮಕ್ಕಳ ಕೈಯಿಂದ ಸಿಡಿಸಿ. ಜೊತೆಗೆ ಮಕ್ಕಳು ಪಟಾಕಿ ಹಚ್ಚುವಾಗ ಅವರ ಜೊತೆ ನೀವು ಕೂಡ ಇರಲೇಬೇಕು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ.

ಪಟಾಕಿ ಹಚ್ಚುವಾಗ ಬಟ್ಟೆಗಳ ಬಗ್ಗೆ ಇರಲಿ ಗಮನ:

ದೀಪಾವಳಿ ಸಂಜೆಯಲ್ಲಿ ಪಟಾಕಿ ಸಿಡಿಸುವ ವೇಳೆಯಲ್ಲಿ ನೆಟೆಡ್, ಸ್ಯಾಟಿನ್, ವೆಲ್ವೆಟ್, ರೇಷ್ಮೆ, ಜಾರ್ಜೆಟ್ ಮುಂತಾದ ಬಟ್ಟೆಗಳನ್ನು ಧರಿಸುವ ಬದಲು ಹತ್ತಿ ಬಟ್ಟೆ ಮಾತ್ರ ಧರಿಸಿ. ಏಕೆಂದರೆ ಹತ್ತಿ ಬಟ್ಟೆ ಚರ್ಮಕ್ಕೆ ಅಂಟಿಕೊಳ್ಳುವುದಿಲ್ಲ. ಆದರೆ ಸಿಂಥೆಟಿಕ್ ಬಟ್ಟೆಗಳು ಚರ್ಮಕ್ಕೆ ಅಂಟಿಕೊಳ್ಳುತ್ತವೆ. ಹಾಗಾಗಿ ಅಪಾಯಗಳನ್ನು ತಪ್ಪಿಸಲು ಚರ್ಮದ ಬಟ್ಟೆ ಧರಿಸಿ.

ನೀರು ಮತ್ತು ಪ್ರಥಮ ಚಿಕಿತ್ಸೆ ಕಿಟ್ ಸಿದ್ಧವಾಗಿರಿಸಿ:

ಪಟಾಕಿ ಸಿಡಿಸುವಾಗ ಯಾವಾಗಲೂ ಹತ್ತಿರದಲ್ಲಿ ನೀರು, ಮರಳು ಅಥವಾ ಫೈರ್‌ ಸ್ಟಾಪ್‌ ಗ್ಯಾಸ್‌ ಇಟ್ಟುಕೊಳ್ಳಿ. ಜೊತೆಗೆ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ಸಹ ಜೊತೆಗಿರಿಸಿ.  ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಅಪ್ಪಿತಪ್ಪಿ ಏನಾದರೂ ಸಣ್ಣಪುಟ್ಟ ಗಾಯಗಳಾದರೆ, ಇದರಿಂದ ತಕ್ಷಣಕ್ಕೆ ಚಿಕಿತ್ಸೆ ನೀಡಬಹುದು.

ಇದನ್ನೂ ಓದಿ: ಹಬ್ಬದ ಶಾಪಿಂಗ್‌ನಲ್ಲಿ ಈ ಸ್ಮಾರ್ಟ್‌ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಅನಗತ್ಯ ಖರ್ಚುಗಳನ್ನು ತಪ್ಪಿಸಿ

ಕಣ್ಣುಗಳ ಸುರಕ್ಷತೆಯ ಬಗ್ಗೆ ಇರಲಿ ಗಮನ:

ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಕಣ್ಣಿನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ವಿಶೇಷವಾಗಿ ಮಕ್ಕಳ ಕಣ್ಣುಗಳ ಬಗ್ಗೆ. ಕಣ್ಣಿನ ಸುರಕ್ಷತೆಗೆ ಸಂಬಂಧಿಸಿದಂತೆ, ಹತ್ತಿರದಿಂದ ಪಟಾಕಿ ಸಿಡಿಸುವಾಗ ಕಣ್ಣುಗಳಿಗೆ ಕನ್ನಡಕವನ್ನು ಧರಿಸಿ ಅಥವಾ ಪಟಾಕಿ ಹೊಡೆಯುವಾಗ ಮಕ್ಕಳ ಮುಖವನ್ನು ತಿರುಗಿಸಿ. ಪಟಾಕಿಗಳನ್ನು ಸುಟ್ಟ ನಂತರ ಕಣ್ಣುಗಳನ್ನು ಮುಟ್ಟುವ ಮೊದಲು ಸೋಪ್ ಅಥವಾ ನೀರಿನಿಂದ ಕೈಯನ್ನು ತೊಳೆಯಿರಿ.

ಆರೋಗ್ಯ ಕಾಳಜಿ ಹೀಗಿರಲಿ:

ನಿಮ್ಮ ಮನೆಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದರೆ, ಪಟಾಕಿಗಳ ದೊಡ್ಡ ಶಬ್ದಗಳಿಂದ ಉಂಟಾಗುವ ಹಾನಿಯಿಂದ ಕಿವಿಯನ್ನು ರಕ್ಷಿಸಲು ಮಕ್ಕಳ ಕಿವಿಗೆ ಇಯರ್ ಪ್ಲಗ್‌ ಅಥವಾ ಹತ್ತಿ ಚೆಂಡನ್ನು ಇಡಿ. ನಿಮ್ಮ ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿದ್ದರೆ, ವಿಶೇಷವಾಗಿ ಉಸಿರಾಟದ ತೊಂದರೆಗಳಿದ್ದರೆ, ಅವರನ್ನು ಹೊಗೆ ತುಂಬಿದ ಪ್ರದೇಶಗಳಿಂದ ಆದಷ್ಟು ದೂರವಿರಿಸಿ. ಸುಟ್ಟಗಾಯಗಳಾದಾಗ, ಮನೆಮದ್ದುಗಳನ್ನು ಆಶ್ರಯಿಸುವ ಬದಲು, ಗಾಯವಾದ ಸ್ಥಳಕ್ಕೆ ತಣ್ಣೀರನ್ನು ಸುರಿಯಿರಿ. ಪ್ರಥಮ ಚಿಕಿತ್ಸೆಯನ್ನು ನೀಡಿ. ಅಗತ್ಯವಿದ್ದರೆ, ತಕ್ಷಣ ಆಸ್ಪತ್ರೆಗೆ ಹೋಗಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಕನ್ನಡ 13: ಕ್ಯಾಪ್ಟನ್ ಆಗಲು ಯೋಗ್ಯತೆ ಇಲ್ಲದ ಸ್ಪರ್ಧಿಗಳು ಯಾರು?
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​