ವಿದೇಶದಲ್ಲಿ ಮಾರಾಟವಾಗ್ತಿದೆ ಅಕ್ಕಿ ಚೀಲದಿಂದ ತಯಾರಿಸಿದ ಜಾಕೆಟ್;‌ ಇದ್ರ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ

ಇತ್ತೀಚಿನ ದಿನಗಳಲ್ಲಿ, ಫ್ಯಾಷನ್ ಹೆಸರಿನಲ್ಲಿ, ಬ್ರ್ಯಾಂಡ್‌ಗಳು ಹೊಸ ಹೊಸ ಪ್ರಯೋಗಳನ್ನು ಮಾಡುತ್ತಿವೆ. ಇತ್ತೀಚಿಗೆ ಭಾರತದಲ್ಲಿ ನಾವು 10 ರೂ. ಗೆ ಎಲ್ಲಾ ಸಿಗುವ ಬಟ್ಟೆಯ ಚೀಲವನ್ನು ಅಮೆರಿಕದ ಕಂಪೆನಿಯೊಂದು ಬರೋಬ್ಬರಿ 4,000 ರೂ. ಗಳಿಗೆ ಮಾರಾಟ ಮಾಡಿದಂತಹ ಸುದ್ದಿಯೊಂದು ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದ್ದು, ನಾವು ಮೂಲೆಗೆ ಎಸೆಯುವ ಅಕ್ಕಿ ಚೀಲದಿಂದ ಅಮೆರಿಕದ ಕಂಪೆನಿಯೊಂದು ಡಿಸೈನರ್‌ ಜಾಕೆಟ್‌ ತಯಾರಿಸಿ, ಅದನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದೆ. ಈ ಜಾಕೆಟ್‌ ಬೆಲೆ ಕೇಳಿದ್ರೆ ನೀವು ಖಂಡಿತ ಶಾಕ್‌ ಆಗ್ತೀರಾ.

ವಿದೇಶದಲ್ಲಿ ಮಾರಾಟವಾಗ್ತಿದೆ ಅಕ್ಕಿ ಚೀಲದಿಂದ ತಯಾರಿಸಿದ ಜಾಕೆಟ್;‌ ಇದ್ರ ಬೆಲೆ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ
ಬಾಸ್ಮತಿ ಅಕ್ಕಿ ಚೀಲದ ಜಾಕೆಟ್
Image Credit source: Instagram

Updated on: Jun 02, 2025 | 7:09 PM

ಫ್ಯಾಷನ್‌ ಲೋಕದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಬಟ್ಟೆಯ ವಿಚಾರದಲ್ಲಿ ಚಿತ್ರ ವಿವಿತ್ರ ಪ್ರಯೋಗಳು ಆಗುತ್ತಿರುತ್ತವೆ. ಈ ಹಿಂದೆ ಗೋಣಿ ಚೀಲದಿಂದ ತಯಾರಿಸಿದಂತ ಉಡುಗೆ ಸಖತ್‌ ಸುದ್ದಿಯಲ್ಲಿತ್ತು. ಇದೀಗ ಅಮೆರಿಕದ (America) ಕಂಪೆನಿಯೊಂದು ಇಂತಹದ್ದೇ ಪ್ರಯೋಗಕ್ಕೆ ಕೈ ಹಾಕಿದ್ದು, ಬಾಸ್ಮತಿ ಅಕ್ಕಿ ಚೀಲದಿಂದ ಡಿಸೈನರ್‌ ಜಾಕೆಟ್‌ ತಯಾರಿಸಿ ಮಾರಾಟ ಮಾಡುತ್ತಿದೆ. ನಾವೆಲ್ಲ ಅಕ್ಕಿ ಚೀಲ ಎಲ್ಲಾ ಯಾಕೆ ಬೇಕು ಅಂತ ಅದನ್ನು ಮೂಲೆಗೆ ಎಸೆದ್ರೆ, ಈ ಕಂಪೆನಿ ಮಾತ್ರ ನಾವು ವೇಸ್ಟ್‌ ಎಂದು ಬಿಸಾಡುವ ಅಕ್ಕಿ ಚೀಲದಿಂದ ಡಿಸೈನರ್‌ ಜಾಕೆಟ್‌ಗಳನ್ನು (expensive designer jacket made from rice bag) ದುಬಾರಿ ಬೆಲೆಗೆ ಮಾರಾಟ ಮಾಡಿ ಒಳ್ಳೆ ಲಾಭ ಗಳಿಸುತ್ತಿದೆ. ಅಷ್ಟಕ್ಕೂ ಈ ದುಬಾರಿ ಜಾಕೆಟ್‌ ಬೆಲೆ ಎಷ್ಟು ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.  ‌

ದುಬಾರಿ ಬೆಲೆಯ ಅಕ್ಕಿ ಚೀಲದ ಜಾಕೆಟ್:

ನಮಗೆಲ್ಲರಿಗೂ ಗೊತ್ತಿರುವಂತೆ ಉರ್ಫಿ ಜಾವೇದ್‌ ತಾವು ತೊಡುವಂತಹ ಬಟ್ಟೆಗಳಲ್ಲಿ ಅನೇಕಾರು ಪ್ರಯೋಗಳನ್ನು ಮಾಡುತ್ತಿರುತ್ತಾರೆ. ಈ ಹಿಂದೆ ಈಕೆ ಗೋಣಿ ಚೀಲದಿಂದ ತಯಾರಿಸಿದ ಲಂಗ ಮತ್ತು ಅಂಗಿಯನ್ನು ತೊಟ್ಟು ಸಖತ್‌ ಸುದ್ದಿಯಲ್ಲಿದ್ದರು. ಇದೀಗ ಇಲ್ಲೊಂದು ಅಮೆರಿಕದ ಕಂಪೆನಿ ಕೂಡಾ ಇಂತಹದ್ದೇ ವಿಚಿತ್ರ ಪ್ರಯೋಗಕ್ಕೆ ಕೈ ಹಾಕಿದ್ದು, ನಾವು ವೇಸ್ಟ್‌ ಎಂದು ಬಿಸಾಡುವ ಹಾಗೂ ಫ್ಲೋರ್‌ ಮ್ಯಾಟ್‌ ರೀತಿಯಲ್ಲಿ ಬಳಸುವ ಅಕ್ಕಿ ಚೀಲದಿಂದ ಡಿಸೈನರ್‌ ಜಾಕೆಟ್‌ ತಯಾರಿಸಿ ಮಾರಾಟ ಮಾಡುತ್ತಿದೆ.

ಇದನ್ನೂ ಓದಿ
ಗಂಡ ಬೇರೆ ಹೆಣ್ಣಿನ ಆಕರ್ಷಣೆಗೆ ಒಳಗಾಗಬಾರದೆಂದರೆ, ಹೀಗೆ ಮಾಡಿ
ಯಾವುದೇ ಕಾರಣಕ್ಕೂ ತುಳಸಿಯನ್ನು ಅಗಿಯಬೇಡಿ
ಬೇಬಿ ಬಂಪ್​​ ಫೋಟೋಶೂಟ್​​ಗೆ ಆಕರ್ಷಕ ಹೊಟ್ಟೆಯ ಮೇಲಿನ ಮೆಹೆಂದಿ ವಿನ್ಯಾಸ
ಮಳೆಯಿಂದಾಗಿ ಒಳ ಉಡುಪು ಸರಿಯಾಗಿ ಒಣಗುತ್ತಿಲ್ವಾ; ಈ ಟಿಪ್ಸ್‌ ಫಾಲೋ ಮಾಡಿ

1.6 ಲಕ್ಷ ರೂ. ಮೌಲ್ಯದ ಬಾಸ್ಮತಿ ಅಕ್ಕಿ ಚೀಲದ ಜಾಕೆಟ್:

ರಾಯಲ್‌ ಬ್ರಾಂಡ್‌ನ ಬಾಸ್ಮತಿ ಅಕ್ಕಿ ಚೀಲದಿಂದ ತಯಾರಾದ ಈ ಡಿಸೈನರ್‌ ಜಾಕೆಟನ್ನು $2000 ಡಾಲರ್‌ ಅಂದ್ರೆ ಬರೋಬ್ಬರಿ 1.6 ಲಕ್ಷ ರೂ. ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಕುರಿತ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಬೇಬಿ ಬಂಪ್​​ ಫೋಟೋಶೂಟ್​​ಗೆ ಆಕರ್ಷಕ ಹೊಟ್ಟೆಯ ಮೇಲಿನ ಮೆಹೆಂದಿ ವಿನ್ಯಾಸ

ವೈರಲ್‌ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವನ್ನು sipping.thoughts ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಯುವತಿಯೊಬ್ಬಳು ಮಾಲ್‌ ಒಂದರಲ್ಲಿ ರಾಯಲ್‌ ಗೋಲ್ಡ್‌ ಬಾಸ್ಮತಿ ಅಕ್ಕಿಯ ಚೀಲದಿಂದ ತಯಾರಿಸಿದ ಜಾಕೆಟ್‌ ಅನ್ನು ತೊಟ್ಟು ನೋಡುವ ದೃಶ್ಯವನ್ನು ಕಾಣಬಹುದು. ಇದನ್ನು ಖರೀದಿಸೋಣ ಎಂದು ಆಕೆ ಇದರ ಬೆಲೆಯನ್ನು ನೋಡಿದಾಗ, ಈ ಜಾಕೆಟ್‌ನ ದುಬಾರಿ ಬೆಲೆಯನ್ನು ಕಂಡು ಫುಲ್‌ ಶಾಕ್‌ ಆಗಿದ್ದಾಳೆ. ಅಕ್ಕಿ ಚೀಲದ ಬಟ್ಟೆಯ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:08 pm, Mon, 2 June 25