Dhanvantari Jayanti 2024: ಧನ್ವಂತರಿ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ಕೋರಿ

ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 29 ರಂದು ಧನ್ವಂತರಿ ದಿನವನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ಸಕಲ ಆರೋಗ್ಯವನ್ನು ಕರುಣಿಸುವ ಧನ್ವಂತರಿ ದೇವರನ್ನು ಪೂಜಿಸಲಾಗುತ್ತದೆ. ಈ ವಿಶೇಷ ದಿನದಂದು ನೀವು ನಿಮ್ಮ ಪ್ರೀತಿಪಾತ್ರರಿಗೆ ಈ ಸಂದೇಶಗಳನ್ನು ಕಳುಹಿಸಿ ಶುಭಾಶಯಗಳು ಕೋರಬಹುದು.

Dhanvantari Jayanti 2024: ಧನ್ವಂತರಿ ಜಯಂತಿಗೆ ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ಶುಭಾಶಯ ಕೋರಿ
ಸಾಂದರ್ಭಿಕ ಚಿತ್ರ
Edited By:

Updated on: Oct 29, 2024 | 9:24 AM

ಭಾರತೀಯ ಸಂಸ್ಕೃತಿಯಲ್ಲಿ ಧನ್ವಂತರಿ ದೇವರಿಗೆ ವಿಶೇಷವಾದ ಸ್ಥಾನವಿದೆ. ಈ ಪುರಾತನ ವೇದ ಗ್ರಂಥಗಳಲ್ಲಿ ವಿಷ್ಣುವಿನ ಅವತಾರವಾದ ಧನ್ವಂತರಿ ದೇವರನ್ನು ಆಯುರ್ವೇದ ಶಾಸ್ತ್ರದ ದೇವರು ಎಂದು ಕರೆಯಲಾಗುತ್ತದೆ. ಆಶ್ವಯುಜ ಕೃಷ್ಣ ಪಕ್ಷ ತ್ರಯೋದಶಿಯಂದು ಅಂದರೆ ಈ ಬಾರಿ ಅಕ್ಟೋಬರ್ 29 ರಂದು ಧನ್ವಂತರಿ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ಹಬ್ಬಕ್ಕೆ ಸಿಂಪಲ್‌ ಆಗಿ ಶುಭಾಶಯಗಳನ್ನು ಕೋರಲು ಇಲ್ಲಿದೆ ಸಂದೇಶಗಳು.

  • ಆರೋಗ್ಯದ ದೇವರಾಗಿರುವ ಧನ್ವಂತರಿಯೂ ನಿಮ್ಮ ಹೃದಯವನ್ನು ಸಂತೋಷದಿಂದ ತುಂಬಲಿ ಮತ್ತು ಮುಂಬರುವ ವರ್ಷವು ನಿಮಗೆ ಸಮೃದ್ಧಿ ಮತ್ತು ಯಶಸ್ಸನ್ನು ತರಲಿ. ಧನ್ವಂತರಿ ಜಯಂತಿಯ ಶುಭಾಶಯಗಳು.
  • ನಿಮ್ಮ ಪ್ರೀತಿ ಪಾತ್ರರೊಂದಿಗೆ ಸದಾ ಸಂತೋಷದಿಂದ ಇರುವಂತಾಗಲಿ, ಧನ್ವಂತರಿ ದೇವರು ಆರೋಗ್ಯ ಹಾಗೂ ಸಂತೋಷವನ್ನು ನೀಡಿ ನಿಮ್ಮನ್ನು ಆಶೀರ್ವದಿಸಲಿ, ನಿಮಗೂ ನಿಮ್ಮ ಕುಟುಂಬಕ್ಕೂ ಧನ್ವಂತರಿ ಜಯಂತಿಯ ಶುಭಾಶಯಗಳು.
  • ನಿಮ್ಮ ಮನೆಯಲ್ಲಿ ಸಂಪತ್ತಿನ ಮಳೆಯಾಗಲಿ, ಲಕ್ಷ್ಮಿ ದೇವಿ ನೆಲೆಸಲಿ, ಧನ್ವಂತರಿ ದೇವರು ಆರೋಗ್ಯವನ್ನು ಕರುಣಿಸಲಿ. ನಿಮಗೆ ಧನ್ವಂತರಿ ಜಯಂತಿಯ ಹಾರ್ಥಿಕ ಶುಭಾಶಯಗಳು.
  • ಜೀವನದ ಪ್ರತಿಯೊಂದು ಹಂತದಲ್ಲಿಯೂ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ದೈವಿಕ ಆಶೀರ್ವಾದಗಳಿಂದ ತುಂಬಿದ ದಿನವು ನಿಮ್ಮದಾಗಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಧನ್ವಂತರಿ ದಿನದ ಶುಭಾಶಯಗಳು!
  • ಆರೋಗ್ಯಕ್ಕಿಂತಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ನಿಮಗೆ ಆರೋಗ್ಯ, ಆಯಸ್ಸು ಎಲ್ಲವನ್ನು ಕರುಣಿಸಲಿ ಎಂದು ಆ ಧನ್ವಂತರಿ ದೇವರಲ್ಲಿ ಕೇಳಿ ಕೊಳ್ಳುತ್ತೇನೆ. ಧನ್ವಂತರಿ ಜಯಂತಿಯ ಹಾರ್ಥಿಕ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ