ನಿಮ್ಮ ನಿದ್ರೆಗೆ ಅಡ್ಡಿಯಾಗುವ 5 ಅನಾರೋಗ್ಯಕರ ಅಭ್ಯಾಸಗಳ ಯಾವುವು? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2023 | 11:00 AM

ನಿಮ್ಮ ನಿದ್ರೆಗೆ ಅಡ್ಡಿಪಡಿಸುವ 5 ಅನಾರೋಗ್ಯಕರ ಅಭ್ಯಾಸಗಳು ಯಾವುದು? ನೀವು ನಿದ್ರೆ ಮಾಡುವಾಗ ಯಾವ ರೀತಿಯ ಅಭ್ಯಾಸಗಳನ್ನು ಪಾಲಿಸುತ್ತಿರಿ. ಅದರಿಂದ ಏನಿದೆ ಪ್ರಯೋಜನ? ಈ ಬಗ್ಗೆ ಇಲ್ಲಿದೆ ಮಾಹಿತಿ.

ನಿಮ್ಮ ನಿದ್ರೆಗೆ ಅಡ್ಡಿಯಾಗುವ 5 ಅನಾರೋಗ್ಯಕರ ಅಭ್ಯಾಸಗಳ ಯಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ಚೆನ್ನಾಗಿ ತಿನ್ನುವುದು ಎಷ್ಟು ಮುಖ್ಯವೋ ಉತ್ತಮ ನಿದ್ರೆ ಪಡೆಯುವುದು ಕೂಡ ಅಷ್ಟೇ ಮುಖ್ಯ. ನಮ್ಮಲ್ಲಿ ಹೆಚ್ಚಿನವರು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಜೀವನಶೈಲಿಯನ್ನು ಬದಲಾಯಿಸುವ ಬದಲು ಔಷಧಿಗಳನ್ನು ತೆಗೆದುಕೊಳ್ಳುವ ಆಯ್ಕೆ ಮಾಡುತ್ತಾರೆ. ಆದರೆ ಅದು ತಪ್ಪು. ನಾವು ಪ್ರತಿದಿನ ಮಾಡುವ ಅಥವಾ ಚರ್ಚೆ ಮಾಡುವ ಹಲವಾರು ವಿಷಯಗಳು ನಮ್ಮ ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ನಾವು ಏನನ್ನು ಯೋಚಿಸುತ್ತೇವೆ? ಯಾವ ವಿಷಯದ ಬಗ್ಗೆ ಚಿಂತಿಸುವುದು ಎಲ್ಲವೂ ನಮಗೆ ಅರಿವಿಲ್ಲದೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ದಿ ಸ್ಲೀಪ್ ಕಂಪನಿಯ ಸಹ-ಸಂಸ್ಥಾಪಕಿ ಪ್ರಿಯಾಂಕಾ ಸಲೋಟ್ ಅವರು ನಿದ್ರೆ ಮಾಡಲು ಅಡ್ಡಿಪಡಿಸುವ ಐದು ನಡವಳಿಕೆಗಳನ್ನು ಹಂಚಿಕೊಂಡಿದ್ದಾರೆ: ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

-ನಾವೆಲ್ಲರೂ ರಾತ್ರಿ ಮಲಗುವ ಮೊದಲು ನಮ್ಮ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್​​​ಗಳನ್ನು ಬಳಸುವುದನ್ನು ಆನಂದಿಸುತ್ತೇವೆ. ಆದರೆ ಹಾಗೇ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಪರಿಣಾಮ ಬಿರಬಹುದು ಎಂಬುದನ್ನು ಯೋಚಿಸಿದ್ದೀರಾ? ಇದರಿಂದ ನಮ್ಮ ದೇಹಕ್ಕೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಜನರು ತಮ್ಮ ಲ್ಯಾಪ್ಟಾಪ್ಗಳನ್ನು ಬಳಸಿದ ನಂತರ ಅಥವಾ ಮಲಗುವ ಮೊದಲು ಟಿವಿ ನೋಡಿ ನಂತರ ನಿದ್ರೆ ಮಾಡಲು ಹೆಣಗಾಡುತ್ತಾರೆ ಆದರೆ ಅದು ಒಳ್ಳೆಯದಲ್ಲ. ರಾತ್ರಿ ಉತ್ತಮ ನಿದ್ರೆ ಪಡೆಯಲು, ಮಲಗುವ ಮೊದಲು ಪರದೆಯ ಸಮಯವನ್ನು ನಿರ್ಬಂಧಿಸಬೇಕು. ವಾಸ್ತವವಾಗಿ, ಹಾಸಿಗೆಗೆ ಹೋಗುವ ಮೊದಲು ವಿಶ್ರಾಂತಿ ಪಡೆಯುವುದು ಮತ್ತು ಸ್ವಲ್ಪ ಪುಸ್ತಕ ಓದುವುದು ಅಥವಾ ದಿನಚರಿಯನ್ನು ಬರೆದಿಡುವುದು ಉತ್ತಮವಾಗಿದೆ.

-ಮಲಗುವ ಮುನ್ನ ವ್ಯಾಯಾಮ ಅಗತ್ಯ. ಆದರೆ ಮಲಗುವ ಮೊದಲು ಕಷ್ಟಪಟ್ಟು ಕೆಲಸ ಮಾಡುವುದು ಒಳ್ಳೆಯದಲ್ಲ. ಕಾಲಾನಂತರದಲ್ಲಿ, ಇದು ನಿದ್ರೆಯ ಪ್ರಮಾಣ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮ ಮಾಡುವ ಬದಲು ರಾತ್ರಿಯ ಮೊದಲು ಸ್ಟ್ರೆಚಿಂಗ್ ಅಥವಾ ಯೋಗವನ್ನು ಪ್ರಯತ್ನಿಸಿ. ಇವು ದೇಹಕ್ಕೂ ಮನಸ್ಸಿಗೂ ವಿಶ್ರಾಂತಿ ನೀಡುತ್ತದೆ.

-ದಿನದ ಕೊನೆಯಲ್ಲಿ ನಮ್ಮ ಸ್ನಾಯುಗಳು ಮತ್ತು ಕೀಲುಗಳ ಮೇಲೆ ಒತ್ತಡ ಹೇರುವುದನ್ನು ತಪ್ಪಿಸುವುದು ಬಹಳ ಮುಖ್ಯ. ಹಾಗಾಗಿ ಹಾಸಿಗೆ ಚೆನ್ನಾಗಿರುವುದು ಕೂಡ ಮುಖ್ಯವಾಗಿರುತ್ತದೆ. ಹಾಸಿಗೆಯ ಮೇಲೆ ನಿದ್ರೆ ಬರದೇ ಅನೇಕ ಜನರು ಉರುಳಾಡುತ್ತಾರೆ. ಪದೇ ಪದೇ ಎಚ್ಚರಗೊಳ್ಳುತ್ತಾರೆ. ಇದರಿಂದ ನೀವು ನಿಮ್ಮ ನಿದ್ರೆಯ ಅಡೆತಡೆಗಳನ್ನು ಅನುಭವಿಸಿದರೆ ಅಥವಾ ನಿರಂತರವಾಗಿ ದಣಿದಿದ್ದರೆ ಒಳ್ಳೆಯ ಹಾಸಿಗೆಯ ಮೇಲೆ ಮಲಗುವುದು ಒಳ್ಳೆಯದು. ಇದು ನಿಮಗೆ ಒಳ್ಳೆಯ ನಿದ್ರೆ ನೀಡುವುದರ ಜೊತೆಗೆ ದೇಹಕ್ಕೆ ವಿಶ್ರಾಂತಿ ನೀಡುತ್ತದೆ.

-ನಮ್ಮಲ್ಲಿ ಅನೇಕರಿಗೆ ಇದರ ಬಗ್ಗೆ ತಿಳಿದಿಲ್ಲದಿರಬಹುದು, ಕಾಫಿ ಬಳಕೆಯು ನಮ್ಮನ್ನು ನಿದ್ರೆಗೆ ಜಾರದಂತೆ ತಡೆಯಬಹುದು. ಇದು ನಮಗೆ ಎಚ್ಚರವಾಗಿರಲು ತ್ರಾಣವನ್ನು ನೀಡುತ್ತದೆಯಾದರೂ, ರಾತ್ರಿಯ ಸಮಯದಲ್ಲಿ ನಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ಈ ಅಹಿತಕರ ಭಾವನೆಯಿಂದ ನಿದ್ರೆ ಬರುವುದಿಲ್ಲ. ಹಾಗಾಗಿ ಮಲಗುವ ಮೊದಲು ಅಥವಾ ರಾತ್ರಿ ಊಟದ ನಂತರ ಕಾಫಿ ಸೇವಿಸುವುದನ್ನು ತಪ್ಪಿಸಿದರೆ ಒಳ್ಳೆಯದು. ಇದು ನಿಮ್ಮ ನಿದ್ರೆ ಹಾಳು ಮಾಡುವುದರ ಜೊತೆಗೆ ಮನಸ್ಸನ್ನು ಕೆಡಿಸಬಹುದು ಎನ್ನುತ್ತದೆ ಅಧ್ಯಯನ.

ಇದನ್ನೂ ಓದಿ:Stone Crusher Quarry: ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಬ್ಲಾಸ್ಟ್, ಕೆಲ ರೈತರಿಗೆ ಗಾಯ

-ನಿದ್ರೆ ಮಾಡುವಾಗ ಬೆಳಕು ಅಥವಾ ಶಬ್ದದ ಪರಿಣಾಮದಿಂದ ರಾತ್ರಿಯಲ್ಲಿ ಉತ್ತಮ ನಿದ್ರೆಯಾಗುವುದಿಲ್ಲ. ಹಾಗಾಗಿ ನಿದ್ದೆಗೆ ವಾತಾವರಣವು ಒಂದು ಪ್ರಮುಖ ಅಂಶವಾಗಿದೆ. ನಿದ್ರೆ ಮಾಡುವಾಗ ಪ್ರಕಾಶ ಮಾನವಾದ ಬೆಳಕು ಅಡಚಣೆ ಉಂಟು ಮಾಡುತ್ತದೆ. ಜೊತೆಗೆ ಶಬ್ದವು ಸಹ ನಿದ್ರೆ ಹಾಳು ಮಾಡುವ ಒಂದು ಪ್ರಮುಖ ಅಂಶವಾಗಿದೆ. ಮುಂದಿನ ಕೋಣೆಯಲ್ಲಿ ಅಥವಾ ನಮ್ಮ ಕಿಟಕಿಯ ಹೊರಗೆ ಯಾರಾದರೂ ಜೋರಾಗಿ ಮಾತನಾಡುವುದರಿಂದ ಅಥವಾ ಶಬ್ದ ಮಾಡುವುದರಿಂದ ನಿದ್ರೆ ಮಾಡುವುದು ತುಂಬಾ ಕಷ್ಟ. ಹಾಗಾಗಿ ಶಾಂತಯುತವಾಗಿ ನಿದ್ರೆ ಮಾಡುವುದು ತುಂಬಾ ಮುಖ್ಯವಾಗಿದೆ.

ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಾಕಷ್ಟು ನಿದ್ರೆಯ ಅಗತ್ಯವಿದೆ. ಪ್ರತಿದಿನವೂ ನಾವು ಊಟ ಮಾಡುವುದರ ಜೊತೆಗೆ ಸರಿಯಾಗಿ ನಿದ್ರೆ ಮಾಡುವುದನ್ನು ಕೂಡ ರೂಡಿಸಿಕೊಳ್ಳಬೇಕು. ಅದಕ್ಕಾಗಿಯೇ ಹಲವಾರು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ