Stone Crusher Quarry: ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಬ್ಲಾಸ್ಟ್, ಕೆಲ ರೈತರಿಗೆ ಗಾಯ
ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಕಲ್ಲು ಬ್ಲಾಸ್ಟ್ ಮಾಡುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯಲು ರೈತರು ಮುಂದಾಗಿದ್ದು ಈ ವೇಳೆ ಕಲ್ಲಿನ ಚೂರುಗಳು ರೈತರಿಗೆ ತಗುಲಿವೆ. ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರಿಗೂ ಕಲ್ಲುಗಳು ತಗುಲಿವೆ.
ಕೊಪ್ಪಳ: ಗಂಗಾ ಸ್ಟೋನ್ ಕ್ರಷರ್ ಕ್ವಾರಿಯಲ್ಲಿ ಬ್ಲಾಸ್ಟ್ ಸಂಭವಿಸಿದ್ದು ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದಲ್ಲಿ ಇಂತಹದೊಂದು ಘಟನೆ ನಡೆದಿದೆ. ಬ್ಲಾಸ್ಟ್ನಿಂದ ಕೆಲ ರೈತರು ಗಾಯಗೊಂಡಿದ್ದಾರೆ.
ರೈತರ ವಿರೋಧದ ನಡುವೆಯೇ ಬ್ಲಾಸ್ಟ್ ಮಾಡಲು ಕಲ್ಲು ಕ್ವಾರಿ ಮಾಲೀಕರು ಸಿದ್ದತೆ ಮಾಡಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಮುಂದಾದ ವೇಳೆಯೇ ಬ್ಲಾಸ್ಟ ಮಾಡಲಾಗಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದೆ. ಕೊಪ್ಪಳ ತಾಲೂಕು ಟಣಕನಕಲ್ ಗ್ರಾಮದಲ್ಲಿನ ಗಂಗಾ ಸ್ಟೋನ್ ಕ್ರಷರ್ ಪ್ಲಾಂಟ್ ನಲ್ಲಿ ನಿನ್ನೆ ಸಂಜೆ ಕಲ್ಲು ಬ್ಲಾಸ್ಟ ಮಾಡಲು ಮಾಲೀಕರು ಮುಂದಾಗಿದ್ದಾರೆ. ಪ್ಲಾಂಟ್ ನ ಸುತ್ತಮುತ್ತಲಿನ ಹೊಲಗಳ ರೈತರು ಬ್ಲಾಸ್ಟ್ ಮಾಡುವುದನ್ನು ವಿರೋಧಿಸಿ, ಹೊಲದಲ್ಲೇ ಕೆಲಸ ಮಾಡಲು ಮುಂದಾಗಿದ್ದಾರೆ. ಆದಾಗ್ಯೂ ಕ್ವಾರಿ ಮಾಲೀಕರು ಬ್ಲಾಸ್ಟ್ ಮಾಡಿದ್ದು, ಭಾರಿ ಅನಾಹುತ ತಪ್ಪಿದೆ. ಬ್ಲಾಸ್ಟ್ ಮಾಡುವುದನ್ನು ವಿರೋಧಿಸಿದ ರೈತರು ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಪಕ್ಕದ ಜಮೀನಿನಲ್ಲಿ ಕೆಲಸದಲ್ಲಿ ನಿರತವಾಗಿದ್ದ ರೈತರಿಗೆ ಕಲ್ಲು ತಗುಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಭಾರಿ ಅನಾಹುತ ತಪ್ಪಿದೆ. ವಿರೋಧದ ನಡುವೆ ಬ್ಲಾಸ್ಟ್ ಮಾಡಿದ್ದರಿಂದ ರೈತರು, ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ಲ್ವಾರಿ ಮಾಲೀಕ ಡಿ.ಮಲ್ಲಣ್ಣ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಘಟನೆ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆಯೇ ಸ್ಟೋನ್ ಕ್ರಷರ್ ಪ್ಲಾಂಟ್ ಗೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಅಮರೇಶ ಬಿರಾದಾರ, ಸಿಪಿಐ ವಿಶ್ವನಾಥ ಹಿರೇಗೌಡರ ಸೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಸುತ್ತಲಿನ ಜಮೀನುಗಳಿಗೂ ಅಧಿಕಾರಿಗಳು ಭೇಟಿ ನೀಡಿ, ಸ್ಥಿತಿ ಗತಿ ಪರಿಶೀಲಿಸಿದರು. ಅಧಿಕಾರಿಗಳ ಮುಂದೆ ಬ್ಲಾಸ್ಟ್ ನಿಂದ ಆಗುವ ಸಮಸ್ಯೆ ಬಗ್ಗೆ ಮಾಹಿತಿ ನೀಡಿದ ರೈತರು, ಕಣ್ಣೀರಿಟ್ಟು ಕ್ವಾರಿಗೆ ನೀಡಿದ ಪರವಾನಗಿ ರದ್ದು ಮಾಡುವಂತೆ ಮನವಿ ಮಾಡಿದರು.
ಕಳೆದ 2016ರಿಂದಲೂ ಇಲ್ಲಿನ ರೈತರು ಹೋರಾಟ ಮಾಡುತ್ತಿದ್ದಾರೆ. ಆಗಿನ ಉಪ ವಿಭಾಗಾಧಿಕಾರಿ ಗುರುದತ್ತ ಹೆಗಡೆ ನೀಡಿದ ವರದಿ ರೈತರಿಗೆ ವರದಾನವಾಗಿದೆ. ಆದ್ರೆ,ರೈತರ ವಿರೋಧಕ್ಕೆ ಕಲ್ಲು ಗಣಿಗಾರಿಕೆ ಮಾಡುವ ಮಾಲೀಕರು ಹೇಳುವುದು ಹೀಗೆ. ಕಲ್ಲು ಗಣಿಗಾರಿಕೆ ಮಾಡುವ ಈ ಸ್ಥಳದ ಸುತ್ತಲೂ ಸುಮಾರು 50 ರೈತರು ತೋಟಗಾರಿಕೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ನಾವು ಯಾವುದೇ ಕಾರಣಕ್ಕೂ ಇಲ್ಲಿ ಬ್ಲಾಸ್ಟ್ ಮಾಡಲು ಅವಕಾಶ ನೀಡುವುದಿಲ್ಲ ಎಂಬುದು ರೈತರ ನಿಲುವಾಗಿದ್ದು, ಕೊಪ್ಪಳ ಜಿಲ್ಲಾಡಳಿತ ಯಾವ ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕಿದೆ.
ಇದನ್ನೂ ಓದಿ: Skin Care Tips: ಚಳಿಗಾಲದಲ್ಲಿ ಕಿರಿಕಿರಿ ಉಂಟು ಮಾಡುವ ತ್ವಚೆಯ ಸಮಸ್ಯೆಗಳಿಗೆ ರೋಸ್ ವಾಟರ್ ಬಳಸಿ
Mekedatu Padayatra Live: ನಾಲ್ಕನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್ ಪಾದಯಾತ್ರೆ; ಇಂದು ಚಿಕ್ಕೇನಹಳ್ಳಿಯಿಂದ ಆರಂಭ
Published On - 8:40 am, Wed, 12 January 22