Mekedatu Padayatra: ಪಾದಯಾತ್ರೆಗೆ ಸರ್ಕಾರದ ಬ್ರೇಕ್​ ಬೆನ್ನಲ್ಲೇ ಬೆಂಗಳೂರಿನತ್ತ ತೆರಳಿದ ಡಿಕೆ ಶಿವಕುಮಾರ್

ಮೇಕೆದಾಟು ಪಾದಯಾತ್ರೆ: ನಾಲ್ಕನೇ ದಿನವಾದ ಇಂದು (ಜನವರಿ 12) ಸರ್ಕಾರ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದಕ್ಕೆ ತಲೆಕೆಡಿಸಿಕೊಳ್ಳದ ನಾಯಕರು ಪಾದಯಾತ್ರೆ ಮುಂದುವರಿಸುವುದಾಗಿ ಹೇಳಿಕೆ ನೀಡಿದ್ದಾರೆ.

Mekedatu Padayatra: ಪಾದಯಾತ್ರೆಗೆ ಸರ್ಕಾರದ ಬ್ರೇಕ್​ ಬೆನ್ನಲ್ಲೇ ಬೆಂಗಳೂರಿನತ್ತ ತೆರಳಿದ ಡಿಕೆ ಶಿವಕುಮಾರ್
ಮೇಕೆದಾಟು ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ

ಮೇಕೆದಾಟು ಯೋಜನೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಇಂದು ನಾಲ್ಕನೇ ದಿನದ ಪಾದಯಾತ್ರೆ ನಡೆಯುತ್ತಿದೆ. ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್ ವರೆಗೂ ಪಾದಯಾತ್ರೆ ನಡೆಯುತ್ತದೆ. ಮೂರು ಎಫ್ಐಆರ್ ದಾಖಲಾಗಿದ್ರು ಕ್ಯಾರೆ ಎನ್ನದ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರಿಸಿದ್ದಾರೆ. ಎಫ್ಐಆರ್, ಸರ್ಕಾರದ ಎಚ್ಚರಿಗೂ ಬಗ್ಗದೇ ಕಾಂಗ್ರೆಸ್ ಪಾದಯಾತ್ರೆ ಸಾಗುತ್ತಿದೆ. ಈಗಾಗಲೇ ಸಾತನೂರು ಠಾಣೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಗೃಹ ಸಚಿವರು ಕೂಡ ಎಚ್ಚರಿಕೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಪಾದಯಾತ್ರೆ ಬಳಿಕ ಕಾದು ನೋಡಿ ಏನು ಮಾಡುತ್ತೇವೆ ಅಂತ ಸಚಿವ ಡಾ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಈ ಮಧ್ಯೆ, ನಾಲ್ಕನೇ ದಿನವಾದ ಇಂದು (ಜನವರಿ 12) ಸರ್ಕಾರ ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಇದಕ್ಕೆ ತಲೆಕೆಡಿಸಿಕೊಳ್ಳದ ನಾಯಕರು ಪಾದಯಾತ್ರೆ ಮುಂದುವರಿಸುವುದಾಗಿ ಹೇಳಿಕೆ ನೀಡಿದ್ದಾರೆ. ನಾಲ್ಕನೇ ದಿನದ ಮೇಕೆದಾಟು ಪಾದಯಾತ್ರೆ ಸಂಪೂರ್ಣ ಅಪ್ಡೇಟ್ಸ್ ಈ ಕೆಳಗೆ ಲಭ್ಯವಿದೆ.

LIVE NEWS & UPDATES

The liveblog has ended.
 • 12 Jan 2022 22:34 PM (IST)

  ನಿಮ್ಮದು ಮಹಾಭಾರತದ ದುರ್ಯೋಧನನ ರೀತಿಯ ಕೆಟ್ಟ ಹಠ: ಆರ್ ಅಶೋಕ್ ಟ್ವೀಟ್

  ಮಾನ್ಯ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರೇ, ನಿಮ್ಮದು ಮಹಾಭಾರತದ ದುರ್ಯೋಧನನ ರೀತಿಯ ಕೆಟ್ಟ ಹಠ. ಇದರಿಂದ ಯಾರಿಗೂ ಒಳ್ಳೆಯದಾಗುವದಿಲ್ಲ. ದುರ್ಯೋಧನನಿಗೆ ಆದಂತೆ, ನೀವೂ, ನಿಮ್ಮ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತದೆ. ನಮಗೆ ವಿರೋಧ ಪಕ್ಷವೂ ಇರುವುದಿಲ್ಲ. ದಯವಿಟ್ಟು ಹಠ ಬಿಡಿ ಎಂದು ಕಂದಾಯ ಸಚಿವ ಆರ್. ಅಶೋಕ್ ಟ್ವೀಟ್ ಮಾಡಿದ್ದಾರೆ.

 • 12 Jan 2022 22:33 PM (IST)

  ನಿಮ್ಮ ಖುಣ ಯಾವರೀತಿ ತೀರಿಸಬೇಕು ಗೊತ್ತಾಗ್ತಿಲ್ಲ: ಡಿಕೆ ಶಿವಕುಮಾರ್ ಮಾತು

  ನಾನು ಮಾಧ್ಯಮದ ಮುಂದೆ ಮಾತನಾಡೋದು ಬೇಡ ಅಂತಾ ತೀರ್ಮಾನ ಮಾಡಿದ್ದೇನೆ. ಡಿಕೆ ಡಿಕೆ ಅಂತಾ ಕೂಗಿದ್ರೆ ಭಾಷಣ ನಿಲ್ಲಿಸ್ತೀನಿ. ಸ್ವಲ್ಪ ಸುಮ್ನಿರಿ. ಯಾರ್ಯಾರು ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಭಾಗವಹಿಸಿದ್ದೀರಿ ಅಂತಾ ಬೇಕಾದ್ರೆ ಆನ್ ಲೈನ್ ರಿಜಿಸ್ಟರ್ ಮಾಡಿಕೊಳ್ಳಿ. ಇಲ್ಲ ಈ ಪಾದಯಾತ್ರೆಯ ಒಂದು ಫೋಟೋ ಕಳುಹಿಸಿ. ಇವತ್ತು ನಿಮ್ಮ ಪ್ರೀತಿ ವಿಶ್ವಾಸ ಮರೆಯಲಿಕ್ಕೆ ಸಾಧ್ಯವಿಲ್ಲ. ನಿಮ್ಮ ಖುಣ ಯಾವರೀತಿ ತೀರಿಸಬೇಕು ಗೊತ್ತಾಗ್ತಿಲ್ಲ. ಇವತ್ತು ರಾಮನಗರ ಜನ ನೀವಿದ್ದೀರಿ. ಕನಕಪುರದ ಜನ ನಾವೂ ಕೆಳಗಡೆ ಇದ್ದೀವಿ. ನಾವೂ ಅರ್ಕಾವತಿಯಿಂದ ಬರುವ ಬೆಂಗಳೂರಿನ ಕಚಡಾ ನೀರು ಕುಡಿಯುತ್ತಿದ್ದೇವೆ. ನಾನು ಇರಿಗೇಶನ್ ಮಿನಿಸ್ಟರ್ ಆಗಿದ್ದಾಗ ದೆಹಲಿ ಮುಂದೆ ಹೋಗಿ ಇದೇ ಬಿಜೆಪಿಯ ಶಾಸಕರು ಮೇಕೆದಾಟು ಯೋಜನೆ ಬೇಕು ಅಂತಾ ಧರಣಿ ಮಾಡಿದ್ದರು ಎಂದು ಡಿ.ಕೆ. ಶಿವಕುಮಾರ್ ಭಾಷಣ ಮಾಡಿದ್ದಾರೆ.

 • 12 Jan 2022 22:33 PM (IST)

  ಈ ಹೋರಾಟ ನಮ್ಮ ನೀರು ನಮ್ಮ ಜಲ ನಮ್ಮ ನೆಲಕ್ಕಾಗಿ: ಡಿಕೆ ಸುರೇಶ್

  ಬೆಳಗ್ಗೆ 9 ಗಂಟೆಗೆ ರಾಮನಗರದಿಂದ ಬಿಡದಿಗಾಗಿ ಪಾದಯಾತ್ರೆ ಸಾಗಲಿದೆ. ನೀರಿಗಾಗಿ ಹೆಜ್ಜೆ ಮೇಕೆದಾಟು ಯೋಜನೆಗಾಗಿ ಕೆಆರ್ ಎಸ್, ಹಾರಂಗಿ, ಕಬಿನಿ, ಹೇಮಾವತಿ ನೀರಿಗಾಗಿ ಹೆಜ್ಜೆ, ರಾಮನಗರ, ಬೆಂಗಳೂರಿನ ನೀರಿಗಾಗಿ ಹೆಜ್ಜೆ ಹಾಕಬೇಕು. ಕೇಂದ್ರ, ರಾಜ್ಯ ಸರ್ಕಾದ ವಿಳಂಬ ಮಾಡ್ತಿವಿ. ರಾಜಕೀಯ ಬಿಟ್ಟು ಯೋಜನೆ ಅನುಷ್ಠಾನ ಮಾಡಲಿ. ಈ ಹೋರಾಟ ನಮ್ಮ ನೀರು ನಮ್ಮ ಜಲ ನಮ್ಮ ನೆಲಕ್ಕಾಗಿ. ಸನ್ಮಾನ್ಯ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪಾದಯಾತ್ರೆ ಮಾಡ್ತಾರೆ. ಯಾವುದೇ ಅಡ್ಡಿ ಬಂದರು ಆರೂವರೆಕೋಟಿ ಜನರು ಶಕ್ತಿ ಕೊಡ್ತಾರೆ. ಇವತ್ತಿನ ಪಾದಯಾತ್ರೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ರಾಜ್ಯದ ಮೂಲೆಗಳಿಂದ ಬಂದವರಿಗೂ ಧನ್ಯವಾದಗಳು. ನೈತಿಕ ಬೆಂಬಲ ಸೂಚಿಸಿದವರಿಗೆ ಪರಮ ಪೂಜ್ಯರಿಗೆ ಧನ್ಯವಾದ ಎಂದು ಡಿ.ಕೆ. ಸುರೇಶ್ ಭಾಷಣ ಮಾಡಿದ್ದಾರೆ.

 • 12 Jan 2022 22:32 PM (IST)

  ಪಾದಯಾತ್ರೆಗೆ ಸಂಬಂಧಿಸಿದಂತೆ ವಾಹನ- ಜನಸಂಚಾರಕ್ಕೆ ನಿರ್ಬಂಧ

  ಕಾಂಗ್ರೆಸ್ ಪಾದಯಾತ್ರೆ ತಡೆಗೆ ರಾಜ್ಯಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಪಾದಯಾತ್ರೆಗೆ ಸಂಬಂಧಿಸಿದಂತೆ ವಾಹನ- ಜನಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಪಾದಯಾತ್ರೆ ಉದ್ದೇಶಕ್ಕೆ ಬರುವ ಯಾರಿಗೂ ನೋ ಎಂಟ್ರಿ ಎಂದು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ತರಾಟೆಗೆ ತೆಗೆದುಕೊಳ್ತಿದ್ದಂತೆ ಸರ್ಕಾರ ಚುರುಕಾಗಿದೆ. ಶತಾಯಗತಾಯ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಲು ಪ್ರಯತ್ನ ನಡೆದಿದೆ. ಜಿಲ್ಲೆಯೊಳಗೂ ಯಾತ್ರೆಗೆ ಸಂಬಂಧಸಿದವರ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಬೇರೆ ಜಿಲ್ಲೆಗಳಿಂದಲೂ ಪಾದಯಾತ್ರೆಗೆ ಬರುವವರಿಗೆ ಬ್ರೇಕ್ ಹಾಕಲಾಗಿದೆ. ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ ಸರ್ಕಾರದ ಆದೇಶ ಹೊರಡಿಸಲಾಗಿದೆ.

 • 12 Jan 2022 22:32 PM (IST)

  ಪಾದಯಾತ್ರೆ ಮುಂದುವರಿಸುವುದು ಪಕ್ಕಾ ಎಂದ ಡಿಕೆ ಶಿವಕುಮಾರ್, ಡಿಕೆ ಸುರೇಶ್

  ರಾಮನಗರ ತಲುಪುತ್ತಿದ್ದಂತೆ ಕಾಂಗ್ರೆಸ್ ನಾಯಕರು ರಣೋತ್ಸಾಹದಲ್ಲಿ ಕಂಡುಬಂದಿದ್ದಾರೆ. ಪಾದಯಾತ್ರೆಗೆ ಬ್ರೇಕ್ ಹಾಕಲು ಸರ್ಕಾರದ ಆದೇಶಕ್ಕೂ ಡೋಂಟ್​ಕೇರ್ ಎಂದಿದ್ದಾರೆ. ಪಾದಯಾತ್ರೆ ಮಾಡೇ ಮಾಡ್ತೇವೆ ಎನ್ನುತ್ತಿದ್ದಾರೆ. ಕನಕಪುರ ತಾಲೂಕಿನಿಂದ ರಾಮನಗರ ತಲುಪಿರುವ ಪಾದಯಾತ್ರೆ, ನಾಳೆ (ಜನವರಿ 13) ರಾಮನಗರದಿಂದ ಬಿಡದಿವರೆಗೂ ಪಾದಯಾತ್ರೆ ನಡೆಸಲಿದೆ. ಯಾವುದೇ ಆದೇಶಕ್ಕೂ ಕಿವಿಗೊಡಬೇಡಿ. ಪಾದಯಾತ್ರೆ ಮುಂದುವರಿಸುವುದು ಪಕ್ಕಾ ಎಂದು ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹೇಳಿದ್ದಾರೆ.

 • 12 Jan 2022 22:31 PM (IST)

  ಪಾದಯಾತ್ರೆ ತಡೆಯುವ ಬಗ್ಗೆ ರಾಮನಗರ ಎಸ್​ಪಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ

  ಸರ್ಕಾರ ಏನೇ ಆದೇಶ ಹೊರಡಿಸಿದ್ರೂ ಪಾದಯಾತ್ರೆ ನಿಲ್ಲಲ್ಲ ಎಂದು ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೇಳಿಕೆ ನೀಡಿದ್ದಾರೆ. ಪಾದಯಾತ್ರೆಗೆ ಬ್ರೇಕ್​ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಬೆಂಗಳೂರಿನತ್ತ ತೆರಳಿದ್ದಾರೆ. ರಾಮನಗರದಿಂದ ಬೆಂಗಳೂರಿನತ್ತ ಡಿ.ಕೆ. ಶಿವಕುಮಾರ್ ಹೊರಟಿದ್ದಾರೆ. ನಾಳೆ ಮತ್ತೆ ರಾಮನಗರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಕಾಂಗ್ರೆಸ್​ ಪಾದಯಾತ್ರೆ ಹೇಗೆ ತಡೆಯಬೇಕೆಂದು ರಾಮನಗರದ ಎಸ್​ಪಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಎಡಿಜಿಪಿ ಪ್ರತಾಪ್​ ರೆಡ್ಡಿ, ಐಜಿಪಿ, ಎಸ್​ಪಿ ಸಮ್ಮಖದಲ್ಲಿ ಸಭೆ ನಡೆಸಲಾಗಿದೆ. ಬಂದೋಬಸ್ತ್​​, ಪಾದಯಾತ್ರೆ ಹೇಗೆ ತಡೆಯಬೇಕೆಂದು ಚರ್ಚೆ ನಡೆಸಲಾಗಿದೆ.

 • 12 Jan 2022 22:07 PM (IST)

  ಪಾದಯಾತ್ರೆಗೆ ಸರ್ಕಾರದ ತಡೆ; ಬೆಂಗಳೂರಿನತ್ತ ಹೊರಟ ಡಿಕೆ ಶಿವಕುಮಾರ್

  ಪಾದಯಾತ್ರೆಗೆ ಬ್ರೇಕ್​ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರಿನತ್ತ ತೆರಳಿದ್ದಾರೆ. ರಾಮನಗರದಿಂದ ಬೆಂಗಳೂರಿನತ್ತ ಹೊರಟಿದ್ದಾರೆ. ನಾಳೆ ಮತ್ತೆ ರಾಮನಗರಕ್ಕೆ ಡಿ.ಕೆ.ಶಿವಕುಮಾರ್​ ತೆರಳಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕರ್ನಾಟಕ ಸರ್ಕಾರ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿದೆ. ತಕ್ಷಣದಿಂದ ಪಾದಯಾತ್ರೆ ನಿಲ್ಲಿಸಬೇಕು ಎಂದು ಹೇಳಿದೆ. ಮತ್ತೊಂದೆಡೆ ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ. ಈ ಮಧ್ಯ, ಈ ಸಂದರ್ಭದಲ್ಲಿ ಪಾದಯಾತ್ರೆ ಸೂಕ್ತವಲ್ಲ. ಪಾದಯಾತ್ರೆ ನಿಲ್ಲಿಸುವಂತೆ ಎಸ್.ಎಂ. ಕೃಷ್ಣ ಡಿ.ಕೆ. ಶಿವಕುಮಾರ್​ಗೆ ಪತ್ರ ಬರೆದಿದ್ದಾರೆ.

 • 12 Jan 2022 20:42 PM (IST)

  ನಮ್ಮ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಡಿಕೆ ಸುರೇಶ್

  ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕೋರ್ಟ್ ಆಕ್ಷೇಪ ಹಿನ್ನೆಲೆ ವರ್ಚುವಲ್​ ಮೂಲಕ ಹಿರಿಯ ಪೊಲೀಸ್​ ಅಧಿಕಾರಿಗಳು ಸಭೆ ನಡಸಿದ್ದಾರೆ. ರಾಮನಗರ SP ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಭಾಗಿ ಆಗಿದ್ದಾರೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್​ನಿಂದ ಪಾದಯಾತ್ರೆ ನಡೆಯುತ್ತಿದೆ. ನಮ್ಮ ಪಾದಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ರಾಮನಗರದಲ್ಲಿ ಕಾಂಗ್ರೆಸ್​​​ ಸಂಸದ ಡಿ.ಕೆ.ಸುರೇಶ್​ ಹೇಳಿಕೆ ನೀಡಿದ್ದಾರೆ.

 • 12 Jan 2022 19:42 PM (IST)

  ರಾಮನಗರ ತಲುಪಿದ ಕಾಂಗ್ರೆಸ್ ಪಾದಯಾತ್ರೆ; ಡಿಕೆ ಶಿವಕುಮಾರ್ ಮೇಲೆ ಹೂವಿನ ಸುರಿಮಳೆ

  ಕಾಂಗ್ರೆಸ್ ಪಾದಯಾತ್ರೆ ರಾಮನಗರ ಸರ್ಕಲ್​ ತಲುಪಿದೆ. ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ರಾಮನಗರದ ಐಜೂರು ವೃತ್ತದಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಪಾದಯಾತ್ರೆ ಬರುವ ಸ್ಥಳದಲ್ಲಿ ಮುಂಜಾಗ್ರತೆಯಾಗಿ ಭದ್ರತೆ ನೀಡಲಾಗಿದೆ. ಜಿಲ್ಲಾಡಳಿತ 6 ಕೆಎಸ್​ಆರ್​ಪಿ ತುಕಡಿ ನಿಯೋಜಿಸಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಅಲರ್ಟ್​ ಆಗಿದ್ದಾರೆ. ಹೈಕೋರ್ಟ್​ ತರಾಟೆ ಬಗ್ಗೆ ಪೊಲೀಸರು ಚರ್ಚಿಸುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಜತೆ ಚರ್ಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

  ರಾಮನಗರ ಸರ್ಕಲ್​ ತಲುಪಿದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೆಸಿಬಿ ಮೇಲಿಂದ ಡಿ.ಕೆ.ಶಿವಕುಮಾರ್​ಗೆ ಹೂವಿನ ಸುರಿಮಳೆ ಸುರಿಸಲಾಗಿದೆ. ಕೆಪಿಸಿಸಿ ವ್ಯಾನ್ ಮೇಲೇರಿ ಡಿ.ಕೆ.ಶಿವಕುಮಾರ್​ ನಮಸ್ಕರಿಸಿದ್ದಾರೆ.

 • 12 Jan 2022 17:22 PM (IST)

  ಡ್ರೋನ್ ಕ್ಯಾಮರಾ ಕಣ್ಣಲ್ಲಿ ಮೇಕೆದಾಟು ಪಾದಯಾತ್ರೆ ನೋಟ

 • 12 Jan 2022 17:21 PM (IST)

  ಕೆ.ಪಿ.ದೊಡ್ಡಿ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್​ಗೆ ಭರ್ಜರಿ ಸ್ವಾಗತ

  ಕೆ.ಪಿ.ದೊಡ್ಡಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ಗೆ ಭರ್ಜರಿ ಸ್ವಾಗತ ಲಭಿಸಿದೆ. ಶಿವಕುಮಾರ್​ಗೆ ಸೇಬಿನ ಹಾರ ಹಾಕಿ ಗ್ರಾಮಸ್ಥರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಸೇಬಿನ ಹಾರ, ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ.

 • 12 Jan 2022 17:14 PM (IST)

  ಕೋರ್ಟ್​ ಏನು ತೀರ್ಪು ಕೊಡುತ್ತೋ ಅದಕ್ಕೆ ತಲೆಬಾಗ್ತೇವೆ: ಕೆಪಿಸಿಸಿ ಲೀಗಲ್​ ಸೆಲ್​ ಅಧ್ಯಕ್ಷ ಪೊನ್ನಣ್ಣ

  ಪಾದಯಾತ್ರೆ ಬಗ್ಗೆ ಹೈಕೋರ್ಟ್‌ ವರದಿ ಕೇಳಿದ ಹಿನ್ನೆಲೆ ಕೋರ್ಟ್​ ಏನು ತೀರ್ಪು ಕೊಡುತ್ತೋ ಅದಕ್ಕೆ ತಲೆಬಾಗ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಚರ್ಚಿಸುತ್ತೇನೆ. ಬಳಿಕ ನಾವು ನ್ಯಾಯಾಲಯಕ್ಕೆ ಉತ್ತರವನ್ನು ಕೊಡುತ್ತೇವೆ. ಕೋರ್ಟ್ ಏನೇ ತೀರ್ಮಾನ ಮಾಡಿದ್ರು ಪಾಲಿಸುತ್ತೇವೆ ಎಂದು ಟಿವಿ9ಗೆ ಕೆಪಿಸಿಸಿ ಲೀಗಲ್​ ಸೆಲ್​ ಅಧ್ಯಕ್ಷ ಪೊನ್ನಣ್ಣ ಹೇಳಿಕೆ ನೀಡಿದ್ದಾರೆ.

 • 12 Jan 2022 17:12 PM (IST)

  ಹಾಲಿ ಕೊರೊನಾ ರೂಲ್ಸ್ ಜಾರಿಗೆ ಬಂದ ಕಾರಣ ಬಿಬಿಎಂಪಿ ಅನುಮತಿ ರದ್ದು?

  ಬಿಬಿಎಂಪಿಯಿಂದ ಅನುಮತಿ ವಿಚಾರವಾಗಿ ಮತ್ತೊಂದು ಮಾತು ಕೇಳಿಬಂದಿದೆ. ಕಾಂಗ್ರೆಸ್, ಕೊರೊನಾ ರೂಲ್ಸ್ ಜಾರಿಗೆ ಬರುವ ಮುನ್ನ ಅನುಮತಿ ಪಡೆದಿತ್ತು. ಜನವರಿ 18- 19 ರಂದು ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾವೇಶ ನಡೆಸಲು ಅನುಮತಿ ಪಡೆದಿತ್ತು. ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ, ದಕ್ಷಿಣ ವಲಯ ಜಂಟಿ ಆಯುಕ್ತರ ಸೂಚನೆ ಮೇರೆಗೆ ಅನುಮತಿ ನೀಡಲಾಗಿತ್ತು. ಆದರೆ ಹಾಲಿ ಕೊರೊನಾ ರೂಲ್ಸ್ ಜಾರಿಗೆ ಬಂದ ಕಾರಣ, ಅನುಮತಿ ರದ್ದುಪಡಿಸಲು ಬಿಬಿಎಂಪಿ ಮುಂದಾಗಿದೆ ಎಂದೂ ಮಾಹಿತಿ ಕೇಳಿಬಂದಿದೆ.

 • 12 Jan 2022 17:12 PM (IST)

  ಬೆಂಗಳೂರಿನಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಬಿಬಿಎಂಪಿ ಅನುಮತಿ?

  ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದ್ದು ಬೆಂಗಳೂರಿನಲ್ಲಿ ಪಾದಯಾತ್ರೆ ಸಮಾರೋಪ ಸಮಾರಂಭಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅನುಮತಿ ನೀಡಿದೆ. ಪಾಲಿಕೆ ಆಟದ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಬಗ್ಗೆ ಪತ್ರ ಬರೆಯಲಾಗಿದೆ. ಬಿಬಿಎಂಪಿ ಸಮಾರಂಭಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ. ಕೊವಿಡ್-19​ ನಿಯಮಗಳನ್ನು ಉಲ್ಲಂಘಿಸದಂತೆ ಸೂಚನೆ ಕೊಡಲಾಗಿದೆ.

  ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್​​ಗೆ ಪತ್ರ ಬರೆದಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಪಕ್ಕದಲ್ಲಿರುವ ಮೈದಾನದಲ್ಲಿ ಜನವರಿ 18 ಹಾಗೂ 19 ಎರಡು ದಿನ ಕಾರ್ಯಕ್ರಮಕ್ಕೆ BBMP ಅನುಮತಿ ನೀಡಿದೆ. ದಕ್ಷಿಣ ವಲಯ ಜಂಟಿ ಆಯುಕ್ತರ ಸೂಚನೆ ಮೇರೆಗೆ ಒಪ್ಪಿಗೆ ನೀಡಲಾಗಿದೆ.

 • 12 Jan 2022 17:09 PM (IST)

  ಕೊವಿಡ್ ನಿಯಮ ಪಾಲಿಸುವ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ವಹಿಸಿದೆ

  ನಿಯಮ ಪಾಲಿಸುವ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ವಹಿಸಿದೆ. ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಕ್ಷೇತ್ರದಲ್ಲೇ ಜಾತ್ರೆ ನಡೆಸಲಾಗಿದೆ. ಬಿಜೆಪಿಯವರೇ ನಿಯಮ ಸರಿಯಾಗಿ ಪಾಲಿಸುತ್ತಿಲ್ಲ. ಕೊವಿಡ್ ಹೆಚ್ಚಾಗಲು ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರ ಕಾರಣ. ಸೋಂಕು ಹೆಚ್ಚಿರುವ ರಾಜ್ಯಗಳಲ್ಲಿ ಪ್ರಧಾನಿ ರಾಲಿ ನಡೆಸಿದ್ರು ಎಂದು ಟಿವಿ9ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

 • 12 Jan 2022 17:09 PM (IST)

  ಹೈಕೋರ್ಟ್‌ ಆದೇಶ ನೀಡಿದ್ರೆ ಪಾದಯಾತ್ರೆ ನಿಲ್ಲಿಸುತ್ತೇವೆ: ಸಿದ್ದರಾಮಯ್ಯ ಹೇಳಿಕೆ

  ಪಾದಯಾತ್ರೆ ನಿಲ್ಲಿಸಲು ಹೈಕೋರ್ಟ್‌ ಸೂಚಿಸಿದ್ರೆ ಪಾಲಿಸ್ತೇವೆ. ಹೈಕೋರ್ಟ್‌ ಆದೇಶದ ವಿರುದ್ಧವಾಗಿ ನಾವು ನಡೆದುಕೊಳ್ಳಲ್ಲ. ಹೈಕೋರ್ಟ್‌ ಆದೇಶ ನೀಡಿದ್ರೆ ಪಾದಯಾತ್ರೆ (Mekedatu Padayatre) ನಿಲ್ಲಿಸುತ್ತೇವೆ ಎಂದು ಟಿವಿ9ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಬುಧವಾರ ಹೇಳಿಕೆ ನೀಡಿದ್ದಾರೆ. ನೆಲದ ಕಾನೂನು ಬಗ್ಗೆ ನಮಗೆ ಗೌರವವಿದೆ. ನೆಲದ ಕಾನೂನು ಬಗ್ಗೆ ಬಿಜೆಪಿಯವರಿಗೇ ನಂಬಿಕೆ ಇಲ್ಲ. ಬಿಜೆಪಿ ಶಾಸಕರೇ ಕೊವಿಡ್ (Covid19) ನಿಯಮ ಉಲ್ಲಂಘಿಸಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

 • 12 Jan 2022 16:49 PM (IST)

  ಊಟದ ಬಳಿಕ ಪಾದಯಾತ್ರೆ ಆರಂಭ

  ಮುದ್ದೆ ಊಟ ಸವಿದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾದಯಾತ್ರೆ ಆರಂಭಿಸಿದ್ದಾರೆ.

 • 12 Jan 2022 14:55 PM (IST)

  ಸಿದ್ದರಾಮಯ್ಯ ಇಂದು ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಸಾಧ್ಯತೆ

  ನಾಲ್ಕನೇ ದಿನದ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯಯೆ ಇದೆ.

 • 12 Jan 2022 14:46 PM (IST)

  ಪಾದಯಾತ್ರೆ ನಿಲ್ಲಬೇಕು ಎಂಬುದು ಒಂದೇ ನಮ್ಮ ಒತ್ತಡ; ಅರವಿಂದ ಲಿಂಬಾವಳಿ

  ಪಾದಯಾತ್ರೆ ನಿಲ್ಲಬೇಕು ಎಂಬುದು ಒಂದೇ ನಮ್ಮ ಒತ್ತಡ. ಕೊroನಾ ಸನ್ನಿವೇಶ ಇರುವ ಕಾರಣ ನಿಲ್ಲಿಸಬೇಕು. ಪಾದಯಾತ್ರೆ ಮುನ್ನಡೆಸುವ ನಾಯಕರು ವ್ಯವಹಾರ ಜ್ಞಾನ ಇದ್ದು ನಿಯಮ ಪಾಲಿಸುತ್ತಾರೆ ಅಂತಾ ಅಂದುಕೊಂಡಿದ್ದೆವು. ಕೊroನಾ‌ ಜಾಸ್ತಿಯಾದರೆ ಇಬ್ಬರೇ ಪಾದಯಾತ್ರೆ ಮಾಡ್ತೇವೆ ಅಂತಾ ಹೇಳಿ ಈಗ ರಾಜಕೀಯ ಜಾತ್ರೆ ಮಾಡ್ತಿದ್ದಾರೆ. ಅವರು ಬುದ್ದಿವಂತರು ಅಂತಾ ಅಂದುಕೊಂಡು ಸುಮ್ಮನೇ ಇದ್ದೆವು. ಪಾದಯಾತ್ರೆ ತಡೆಯುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ. ಸರ್ಕಾರಕ್ಕೆ ಮನವಿ ಮಾಡಿದ್ದೇವೆ, ಕೋರ್ಟ್ ಕೂಡಾ ಕಾಂಗ್ರೆಸ್ ಗೆ ಛೀಮಾರಿ ಹಾಕಿದೆ. ಈಗಲಾದರೂ ಸರ್ಕಾರ ಕ್ರಮ ಕೈಗೊಳ್ಳಬೇಕು ಅಂತಾ ಕೋರ್ಟ್ ನೋಟೀಸ್ ಕೊಟ್ಟಿದೆ. ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸದಿದ್ದರೆ ಅನಿವಾರ್ಯವಾಗಿ ಏನೆಲ್ಲಾ ಮಾಡಬೇಕೋ ಅದನ್ನು ಬಿಜೆಪಿ ಮಾಡುತ್ತದೆ. ಕಾಂಗ್ರೆಸ್ ಹಠ ಹಿಡಿದು ಬೆಂಗಳೂರು ಪ್ರವೇಶ ಮಾಡಿದರೆ ಬಂಧಿಸುವಂತೆ ಅನಿವಾರ್ಯವಾಗಿ ನಾವು ಸರ್ಕಾರಕ್ಕೆ ಹೇಳಬೇಕಾಗುತ್ತದೆ. ತಡೆಯಲು ಅನೇಕ ಮಾರ್ಗಗಳಿವೆ. ಕಾಂಗ್ರೆಸ್ ಕೊರೊನಾ ಹರಡುವುದನ್ನು ತಡೆಯಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಅಂತ ಟಿವಿ9 ಗೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ.

 • 12 Jan 2022 14:39 PM (IST)

  ಕೃಷ್ಣಪುರದೊಡ್ಡಿ ಗ್ರಾಮ ತಲುಪಿದ ಕಾಂಗ್ರೆಸ್ ಪಾದಯಾತ್ರೆ

  ಕಾಂಗ್ರೆಸ್ ಪಾದಯಾತ್ರೆ ರಾಮನಗರ ತಾಲೂಕಿನ ಕೆಪಿದೊಡ್ಡಿ ಗ್ರಾಮ ತಲುಪಿದೆ.

 • 12 Jan 2022 14:12 PM (IST)

  ಒಕ್ಕಲಿಗರ ಹುಲಿ ಡಿಕೆಶಿ ಎಂದು ಜೈಕಾರ

  ಮೇಕೆದಾಟು ಪಾದಯಾತ್ರೆ ವೇಳೆ ಕಾಂಗ್ರೆಸ್​ ಕಾರ್ಯಕರ್ತರು. ಡಿ.ಕೆ.ಶಿವಕುಮಾರ್​ ಪರ ಜೈಕಾರ ಕೂಗಿದ್ದಾರೆ. ಒಕ್ಕಲಿಗರ ಹುಲಿ ಡಿಕೆಶಿ ಎಂದು ಜೈಕಾರ ಕೂಗಿದ್ದಾರೆ. ಅಲ್ಲದೇ ಮುಂದಿನ ಸಿಎಂ ಡಿ.ಕೆ.ಶಿವಕುಮಾರ್​ ಎಂದು ಜೈಕಾರ ಹಾಕಿದ್ದಾರೆ.

 • 12 Jan 2022 14:08 PM (IST)

  ಪಾದಯಾತ್ರೆ ಮಾಡುತ್ತಿರುವುದು ಮೂರ್ಖತನವಾಗಿದೆ: ಬಿ.ಸಿ. ಪಾಟೀಲ್

  ಧೈರ್ಯವಿದ್ದರೆ ಕಾಂಗ್ರೆಸ್​ನವರು ತಮಿಳುನಾಡು ವಿರುದ್ಧ ಪ್ರತಿಭಟನೆ ನಡೆಸಲಿ. ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಜಾರಿಗೊಳಿಸಲು ಸಿದ್ದವಿರೋದಾಗಿ ಹೇಳಿದೆ. ಆದರೂ ಪಾದಯಾತ್ರೆ ಮಾಡುತ್ತಿರುವುದು ಮೂರ್ಖತನವಾಗಿದೆ. ಕಾಂಗ್ರೆಸ್​ನವರು ಮಹದಾಯಿ ಬಗ್ಗೆ ಯಾಕೆ ಮಾತನಾಡುತ್ತಿಲ್ಲ. ಇದೇ ಸೋನಿಯಾ ಗಾಂಧಿಯವರು ಹನಿ ನೀರು ಕೊಡೋದಿಲ್ಲಾ ಅಂತ ಹೇಳಿದ್ದರು. ಗೋವಾ ಪರವಾಗಿ ಮಾತನಾಡಿ,  ಮಹದಾಯಿ ನೀರಿನ ಬಗ್ಗೆ ಮಾತನಾಡಿದ್ದರು. ಅದರ ಬಗ್ಗೆ ಕಾಂಗ್ರೆಸ್​ನವರು ಮಾತನಾಡಲಿ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದ್ದಾರೆ.

 • 12 Jan 2022 14:04 PM (IST)

  ಬೆಂಗಳೂರಿಗರ ಮನೋಭಾವವನ್ನು ಕೋರ್ಟ್ ವ್ಯಕ್ತಪಡಿಸಿದೆ: ಶಾಸಕ ಸತೀಶ್ ರೆಡ್ಡಿ

  ಬೆಂಗಳೂರಿಗೆ ಬರುವ ಪಾದಯಾತ್ರೆಯನ್ನು ಜನ ವಿರೋಧಿಸುತ್ತಾರೆ. ಉದ್ದೇಶಪೂರ್ವಕ ಪಾದಯಾತ್ರೆ ನಡೆಸಿ ವೈರಸ್​ ಹರಡುತ್ತಿದ್ದಾರೆ. ಬೆಂಗಳೂರಿಗರ ಮನೋಭಾವವನ್ನು ಕೋರ್ಟ್ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನರು ವಾಸಿಸುತ್ತಿದ್ದಾರೆ. ಇವರಿಗೆ ಕೊರೊನಾ ಸೋಂಕು ಹರಡುವ ಕೆಲಸ ಮಾಡಬೇಡಿ. ನಾವು ಕೂಡ ನಿಮ್ಮ ಪಾದಯಾತ್ರೆ ವಿರೋಧಿಸಿ ಪ್ರತಿಭಟಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

 • 12 Jan 2022 13:47 PM (IST)

  ನಾಳೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಬಂದ್

  ಮೇಕೆದಾಟು ಯೋಜನೆಗಾಗಿ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ನಾಳೆ ವಾಹನ ಸವಾರರು ಮಾರ್ಗ ಬದಲಿಸಲು ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ವಾಹನ ಸವಾರರು ಕಗ್ಗಲೀಪುರ, ಹಾರೋಹಳ್ಳಿ, ಕನಕಪುರ, ಬನ್ನೂರು, ಮಳವಳ್ಳಿ, ಶ್ರೀರಂಗಪಟ್ಟಣ, ಮಂಡ್ಯ,‌ ಮದ್ದೂರು, ಕುಣಿಗಲ್ ನೆಲಮಂಗಲ ಮಾರ್ಗವಾಗಿ ಸಂಚರಿಸುವಂತೆ ಮನವಿ ಮಾಡಲಾಗಿದೆ.

 • 12 Jan 2022 13:44 PM (IST)

  ರಾಜ್ಯದಲ್ಲಿ ಕೊವಿಡ್ ಹೆಚ್ಚಲು 2 ರಾಷ್ಟ್ರೀಯ ಪಕ್ಷ ಕಾರಣ: ಟಿ.ಎ.ಶರವಣ

  ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ರಾಜ್ಯದಲ್ಲಿ ಕೊವಿಡ್ ಹೆಚ್ಚಲು 2 ರಾಷ್ಟ್ರೀಯ ಪಕ್ಷ ಕಾರಣ. ಒಂದು ಕಡೆ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಬಿಜೆಪಿ ನಾಯಕರು ಸಭೆ, ಸಮಾರಂಭ ಮಾಡುತ್ತಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ಯಾವುದೇ ಬೆನ್ನುಮೂಳೆ ಇಲ್ಲ ಎಂದು ಟಿವಿ9ಗೆ ಮಾಜಿ ಎಂಎಲ್‌ಸಿ ಟಿ.ಎ.ಶರವಣ ಹೇಳಿಕೆ ನೀಡಿದ್ದಾರೆ.

 • 12 Jan 2022 13:41 PM (IST)

  ಪಾದಯಾತ್ರೆಗೂ ಕಾವೇರಿ ಜಲವಿವಾದಕ್ಕೂ ಸಂಬಂಧವಿಲ್ಲ: ಸಚಿವ ಎಂ.ಬಿ.ಪಾಟೀಲ್

  ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತಿದ್ದೇವೆ. ಪ್ರತಿಭಟನೆ ಮಾಡುವುದು ಪ್ರಜೆಗಳ ಸಾಂವಿಧಾನಿಕ ಹಕ್ಕು. ಕೆಪಿಸಿಸಿ ಕಾನೂನು ಘಟಕ ಕೋರ್ಟ್​ಗೆ ಉತ್ತರ ನೀಡುತ್ತದೆ. ಹೈಕೋರ್ಟ್​ ಆಕ್ಷೇಪದ ಬಗ್ಗೆ ನಾನು ಮಾತನಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯನವರು ಈ ಬಗ್ಗೆ ತಿಳಿಸಿದ್ದಾರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್​ ಹೇಳಿಕೆ ನೀಡಿದ್ದಾರೆ.

 • 12 Jan 2022 13:36 PM (IST)

  ಸಿಎಂ ಆಗುವ ದೃಷ್ಠಿಯಿಂದ ಡಿಕೆಶಿ ಪಾದಯಾತ್ರೆ; ಶ್ರೀರಾಮುಲು

  ಸಿಎಂ ಆಗುವ ದೃಷ್ಠಿಯಿಂದ ಡಿಕೆಶಿ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ಧರಾಮಯ್ಯ ವರ್ಚಸ್ಸು ಕಡಿಮೆಗೊಳಿಸಲು ಡಿಕೆಶಿ ಪ್ಲಾನ್. ಪಾದಯಾತ್ರೆಯಲ್ಲಿ ಭಾಗಿಯಾಗಿ ವರ್ಚಸ್ಸು ಉಳಿಸಿಕೊಳ್ಳಲು ಸಿದ್ಧರಾಮಯ್ಯ ಯತ್ನಿಸುತ್ತಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್​ನಿಂದ ಸ್ವಾರ್ಥ ರಾಜಕಾರಣ ನಡೆಯುತ್ತಿದೆ. ಸಂದಿಗ್ಧ ಸ್ಥಿತಿಯಲ್ಲಿ ಪಾದಯಾತ್ರೆ ಸರಿಯಲ್ಲ ಎಂದು ಹೇಳಿದ್ದೇವೆ. ಕೊವಿಡ್ ಟೆಸ್ಟ್​ಗೆ ಅಧಿಕಾರಿಗಳು ತೆರಳಿದಾಗ ಡಿಕೆಶಿ ಬೇಜವಬ್ದಾರಿ ತೋರಿದ್ದಾರೆ. ಕೊವಿಡ್ ಹೆಚ್ಚಾಗುವ ಬಗ್ಗೆ ತಜ್ಞರು ಈಗಾಗಲೇ ವರದಿ ನೀಡಿದ್ದಾರೆ. ಸಂದಿಗ್ಧತೆ ವೇಳೆ ಪ್ರತಿಪಕ್ಷ ನಾಯಕರು ಸ್ಪಂದಿಸದೇ ಇರುವುದು ದುರ್ದೈವ ಅಂತ ಚಿತ್ರದುರ್ಗದಲ್ಲಿ ಸಚಿವ ಶ್ರೀರಾಮುಲು ಹೇಳಿದರು.

 • 12 Jan 2022 13:33 PM (IST)

  ಇಲ್ಲಿವರೆಗೂ ಕಾಂಗ್ರೆಸ್​ನವರು ಮೇಕೆದಾಟು ಬಗ್ಗೆ ಉಸಿರು ಎತ್ತಿಲ್ಲ; ಬಿ.ಸಿ.ಪಾಟೀಲ್ ಹೇಳಿಕೆ

  ಇಲ್ಲಿವರೆಗೂ ಕಾಂಗ್ರೆಸ್​ನವರು ಮೇಕೆದಾಟು ಬಗ್ಗೆ ಉಸಿರು ಎತ್ತಿಲ್ಲ. 2013 ರಿಂದ 18 ರ ವರೆಗೆ ಕಾಂಗ್ರೆಸ್ ಸರ್ಕಾರವಿತ್ತು. ನಂತರವೂ ಕೂಡ  ಸಮ್ಮಿಶ್ರ ಸರ್ಕಾರವಿತ್ತು ಡಿಕೆ ಶಿವಕುಮಾರ್ ನೀರಾವರಿ ಸಚಿವರಾಗಿದ್ರು. ಡಿಕೆಶಿ ಎಂದು ಕೂಡ ಮೇಕೆದಾಟು ಬಗ್ಗೆ ಚಕಾರ ಎತ್ತಿಲ್ಲ. ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಬೇಕು ಸಿದ್ದರಾಮಯ್ಯನವರ ಕಡಿಮೆ ಮಾಡಬೇಕು ಅಂತ ಅವರವರೇ ತಿಕ್ಕಾಟ‌ ನಡೆಸುತ್ತಿದ್ದಾರೆ. ಸಿಎಂ‌ ರೇಸ್​ಲ್ಲಿ ನಾನು ಮುಂದಾಗಬೇಕು ಅಂತ ಡಿಕೆಶಿ ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಸಿದಂತೆ ಮಾಡ್ತಾಯಿದ್ದಾರೆ‌. ಇನ್ನು ಚುನಾವಣೆಗೆ ಒಂದುವರೆ ವರ್ಷವಿರುವ ಸಮಯದಲ್ಲಿ ಸಿಎಂ ಕುರ್ಚಿಗಾಗಿ ಕಿತ್ತಾಟ ಮಾಡ್ತಾಯಿದ್ದಾರೆ. ಡಿಕೆಶಿ ಜೊತೆಗಿದ್ದ ಶಾಸಕರಿಗೆ ಕೊವಿಡ್ ‌ಬಂದಿದೆ. ಇಂತಹ ಸಂದರ್ಭದಲ್ಲಿ ಸಾವಿರಾರು ಜನ ಸೇರಿಸೋದು ದೇಶಕ್ಕೆ‌ ಹಾಗೂ ರಾಜ್ಯಕ್ಕೆ‌ ಕೊರೊನಾ ಮಾರಕವಾಗುತ್ತೆ. ಪಾದಯಾತ್ರೆ ತಡೆಯುವಲ್ಲಿ ಸರ್ಕಾರ ಫೇಲ್‌ ಆಗಿಲ್ಲ. ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಬಾರದು ಅಂತ‌ ಕಾದಿದ್ದೆವೆ. ಅತೀಯಾದ್ರೆ ಕಾನೂನು ರೀತಿಯಲ್ಲಿ ‌ಕ್ರಮ ಜರುಗಿಸುತ್ತೆವೆ. ಪಾದಯಾತ್ರೆಯಲ್ಲಿ ಭಾಗಿಯಾದವರ ಮೇಲೆ ಎಫ್ಐಆರ್ ದಾಖಲಿಸಿದ್ದೆವೆ. ಕೇಸ್​ಗೆ ಹೆದರಲ್ಲ, ಸರ್ಕಾರದ ವಿರುದ್ಧ ಸೆಡ್ಡು ಹೊಡೆಯೋದಲ್ಲ‌ ಕಾನೂನಿಗೆ ಎಲ್ಲರು ಗೌರವ ಕೊಡಬೇಕು. ಕಾನೂನಿಗೆ ಗೌವರವಿಸದಿದ್ರೆ ರಾಜ್ಯದ ಜನ‌ ಅದಕ್ಕೆ ಉತ್ತರ ಕೊಡ್ತಾರೆ ಅಂತ ಸಚಿವ ಬಿಸಿ ಪಾಟೀಲ್ ಹೇಳಿದರು.

 • 12 Jan 2022 13:28 PM (IST)

  ಪಾದಯಾತ್ರೆ ತಡೆಯುವಲ್ಲಿ ಸರ್ಕಾರದ ಅಸಮರ್ಥತೆ ಪ್ರಶ್ನೆಯಿಲ್ಲ; ಆರಗ ಜ್ಞಾನೇಂದ್ರ

  ಪಾದಯಾತ್ರೆ ತಡೆಯುವಲ್ಲಿ ಸರ್ಕಾರದ ಅಸಮರ್ಥತೆ ಪ್ರಶ್ನೆಯಿಲ್ಲ ಅಂತ  ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ನಾವು ಸಾಕಷ್ಟು ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ. ಆದ್ರೆ ಅವರು ಬೇಕಷ್ಟು ಎಫ್​ಐಆರ್ ದಾಖಲಿಸಿ ಎಂದು ಹೇಳುತ್ತಿದ್ದಾರೆ. ಪಾದಯಾತ್ರೆ ತಡೆಯಬೇಕೆಂಬುದು ಜನಾಭಿಪ್ರಾಯ ಸಹ ಹೌದು. ನಾವು ಪಾದಯಾತ್ರೆಗೆ ಯಾವುದೇ ಅನುಮತಿಯನ್ನು ನೀಡಿಲ್ಲ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಾವು ಚರ್ಚೆ ಮಾಡುತ್ತೇವೆ. ಕೋರ್ಟ್ ಆದೇಶವನ್ನು ನಾವು ಪಾಲಿಸುತ್ತೇವೆ ಅಂತ ತಿಳಿಸಿದರು.

 • 12 Jan 2022 13:27 PM (IST)

  ನಾಳೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಬಂದ್

  ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ನಾಳೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಲಿದೆ. ಮಾರ್ಗ ಬದಲಾಯಿಸಿ ಪೋಲಿಸ್ ಪ್ರಕಟಣೆ ಹೊರಡಿಸಿದ್ದಾರೆ. ನಾಳೆಯಿಂದ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ ನಡೆಯುತ್ತಿರುವ ಹಿನ್ನಲೆ ವಾಹನ ಸವಾರರು ಮಾರ್ಗ ಬದಲಿಸುವಂತೆ ಪೋಲಿಸ್ ಪ್ರಕಟಣೆ ಹೊರಡಿಸಿದ್ದಾರೆ. ಕಗ್ಗಲೀಪುರ, ಹಾರೋಹಳ್ಳಿ, ಕನಕಪುರ, ‌ಬನ್ನೂರು, ಮಳವಳ್ಳಿ ಮಾರ್ಗವಾಗಿ ಮತ್ತು ಶ್ರೀರಂಗಪಟ್ಟಣ, ಮಂಡ್ಯ,‌ ಮದ್ದೂರು, ಕುಣಿಗಲ್, ನೆಲಮಂಗಲ ಮಾರ್ಗವಾಗಿ ಸಂಚಾರಿಸುವಂತೆ ಮನವಿ ಮಾಡಿದ್ದಾರೆ.

 • 12 Jan 2022 13:24 PM (IST)

  ಹೈಕೋರ್ಟ್ ನಮಗೆ 1 ದಿನ ಕಾಲಾವಕಾಶ ಕೊಟ್ಟಿದೆ; ಆರಗ ಜ್ಞಾನೇಂದ್ರ

  ಹೈಕೋರ್ಟ್ ನಮಗೆ 1 ದಿನ ಕಾಲಾವಕಾಶ ಕೊಟ್ಟಿದೆ. ಹೈಕೋರ್ಟ್‌ಗೆ ಏನು ಉತ್ತರಿಸಬೇಕೆಂದು ಚರ್ಚಿಸುತ್ತಿದ್ದೇವೆ. ವಿರೋಧ ಪಕ್ಷಕ್ಕೂ ಹೈಕೋರ್ಟ್‌ ನೋಟಿಸ್ ನೀಡಿದೆ. ವಿಪಕ್ಷದ ಬಗ್ಗೆಯೂ ಕೋರ್ಟ್ ಅಷ್ಟೇ ಜೋರಾಗಿ ಮಾತಾಡಿದೆ. ಕಾಂಗ್ರೆಸ್‌ನವರೇ ಇಂದು ಪಾದಯಾತ್ರೆ ನಿಲ್ಲಿಸಬಹುದು. ಇಲ್ಲದಿದ್ದರೆ ನಾವು ಕ್ರಮಕೈಗೊಳ್ಳುತ್ತೇವೆ. ಲಾಕ್‌ಡೌನ್ ಮಾಡುತ್ತೇವೆ ಎಂದು ನಾನು ಹೇಳಿಲ್ಲ. ಅನಿವಾರ್ಯವಾದ್ರೆ ಮಾತ್ರ ಲಾಕ್‌ಡೌನ್ ಎಂದು ಹೇಳಿದ್ದೇನೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

 • 12 Jan 2022 13:23 PM (IST)

  ಇಂದು ನಾಳೆಯೊಳಗಾಗಿ ಅವರನ್ನು ಸರ್ಕಾರ ಬಂಧಿಸಬೇಕು; ಶಾಸಕ ಅರವಿಂದ ಲಿಂಬಾವಳಿ

  ಇಂದು ನಾಳೆಯೊಳಗಾಗಿ ಅವರನ್ನು ಸರ್ಕಾರ ಬಂಧಿಸಬೇಕು. ಡಿ.ಕೆ. ಶಿವಕುಮಾರ್ ಯಾಕೆ ಹಿಂದೇಟು ಹಾಕ್ತೀರಾ, ಟೆಸ್ಟ್ ‌ಮಾಡಿಸಿ, ನಿಮಗೆ ಕೊರೋನಾ ಇದೆಯೋ ಇಲ್ಲವೋ‌ ಅಂತಾ ಗೊತ್ತಾಗಲಿ. ರಾಜ್ಯದಲ್ಲಿ ಬಲಿ ಜಾಸ್ತಿ ಮಾಡಬೇಕು ಅಂತಾ ಇದ್ದೀರಾ? ದಂಡೆತ್ತಿ ಬರುವವರ ತರ ಬೆಂಗಳೂರಿಗೆ ನುಗ್ಗಲು ಬರ್ತಿದ್ದೀರಾ. ಬೆಂಗಳೂರನ್ನು ರಕ್ಷಣೆ ಮಾಡಲು ನಾವು ಇದ್ದೇವೆ. ಸರ್ಕಾರದ ಮೇಲೆ ನಾವು ಒತ್ತಡ ಹಾಕುತ್ತೇವೆ. ಅಂತಹ ಸಂದರ್ಭ ಬಂದರೆ ಪಕ್ಷ ಯೋಚನೆ ಮಾಡುತ್ತದೆ. ಸರ್ಕಾರ ಸೂಚನೆ ಕೊಟ್ಟರೆ ಅದನ್ನು ಪಾಲಿಸಲು ಕೂಡಾ ಸಿದ್ಧ ಅಂತ ಸುದ್ದಿಗೋಷ್ಠಿಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.

 • 12 Jan 2022 13:21 PM (IST)

  ಪ್ರತಿಭಟನೆ ಮಾಡುವುದು ಪ್ರಜೆಗಳ ಸಾಂವಿಧಾನಿಕ ಹಕ್ಕು; ಮಾಜಿ ಸಚಿವ ಎಂ ಬಿ ಪಾಟೀಲ್

  ಪ್ರತಿಭಟನೆ ಮಾಡುವುದು ಪ್ರಜೆಗಳ ಸಾಂವಿಧಾನಿಕ ಹಕ್ಕು ಅಂತ ಬೆಂಗಳೂರಿನಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್​ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ಕಾನೂನು ಘಟಕ ಕೋರ್ಟ್​ಗೆ ಉತ್ತರ ನೀಡುತ್ತೆ. ಹೈಕೋರ್ಟ್​ ಆಕ್ಷೇಪದ ಬಗ್ಗೆ ನಾನು ಮಾತನಾಡುವುದಿಲ್ಲ. ಪಾದಯಾತ್ರೆಗೂ ಕಾವೇರಿ ಜಲವಿವಾದಕ್ಕೂ ಸಂಬಂಧವಿಲ್ಲ. ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತಿದ್ದೇವೆ.ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿದ್ದರಾಮಯ್ಯನವರು ತಿಳಿಸಿದ್ದಾರೆ ಅಂತ  ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್​ ಹೇಳಿದರು.

 • 12 Jan 2022 13:17 PM (IST)

  ಬೆಂಗಳೂರಿಗೆ ಬರುವ ಪಾದಯಾತ್ರೆಯನ್ನು ಜನ ವಿರೋಧಿಸುತ್ತಿದ್ದಾರೆ; ಶಾಸಕ ಸತೀಶ್ ರೆಡ್ಡಿ

  ಬೆಂಗಳೂರಿಗೆ ಬರುವ ಪಾದಯಾತ್ರೆಯನ್ನು ಜನ ವಿರೋಧಿಸುತ್ತಿದ್ದಾರೆ ಅಂತ ಸುದ್ದಿಗೋಷ್ಠಿಯಲ್ಲಿ ಶಾಸಕ ಸತೀಶ್ ರೆಡ್ಡಿ ಹೇಳಿದರು. ಉದ್ದೇಶ ಪೂರಕವಾಗಿ ಪಾದಯಾತ್ರೆ ನಡೆಸಿ ಕೊರೊನಾ ಹರಡುತ್ತಿದ್ದಾರೆ. ಬೆಂಗಳೂರು ಜನರ ಮನೋಭಾವನೆಯನ್ನು ಕೋರ್ಟ್ ಕೂಡ ಪ್ರಶ್ನಿಸಿದೆ. ನಮಗೂ ಜನ ಕರೆಸಲು ಬರುತ್ತದೆ. ಆದ್ರೆ ಬೆಂಗಳೂರು ಜನರ ಪ್ರಾಣ ಮುಖ್ಯ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಕೂಡ ಇದೆ. ಬೆಂಗಳೂರಿನಲ್ಲಿ ಒಂದುವರೆ ಕೋಟಿ ಜನ ಇದ್ದಾರೆ. ಅವರಿಗೆ ಹರಡಿಸುವ ಕೆಲಸ ಮಾಡಬೇಡಿ.  ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಬೆಂಗಳೂರು ಡೇಂಜರ್ ಅಂತ ಎಚ್ಚರಿಕೆ ನೀಡಿದೆ. ಪಾದಯಾತ್ರೆಯನ್ನ ತಡೆಯದಿದ್ರೆ ಬೆಂಗಳೂರಿನ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ. ನಾವು ಕೂಡಾ ನಿಮ್ಮ ಪಾದಯಾತ್ರೆ ವಿರೋಧಿಸಿ ಪ್ರತಿಭಟನೆ ನಡೆಸುತ್ತೇವೆ ಅಂತ ತಿಳಿಸಿದರು.

 • 12 Jan 2022 13:12 PM (IST)

  ನಮ್ಮನ್ನು 6ನೇ ಪ್ರತಿವಾದಿಯಾಗಿ ಮಾಡಿದ್ದಾರೆ-ಪೊನ್ನಣ್ಣ

  ನಮ್ಮನ್ನು 6ನೇ ಪ್ರತಿವಾದಿಯಾಗಿ ಮಾಡಿದ್ದಾರೆ ಅಂತ ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಪೊನ್ನಣ್ಣ ಹೇಳಿಕೆ ನೀಡಿದ್ದಾರೆ. ನಾಳೆ ನಾವು ಕೋರ್ಟ್ ಮುಂದೆ ಹಾಜರಾಗುತ್ತೇವೆ. ಯಾವ ತರಹ ನಡೆದುಕೊಳ್ಳಬೇಕೆಂದು ನಾಯಕರು ನಿರ್ಧರಿಸ್ತಾರೆ. ನಮಗೆ ಕೋರ್ಟ್ ಆದೇಶದ ಕಾಪಿ ಸಿಕ್ಕಿಲ್ಲ ಅಂತ ಹೇಳಿದರು.

 • 12 Jan 2022 13:09 PM (IST)

  ನಮಗೆ ಕೋರ್ಟ್ ಆದೇಶದ ಕಾಪಿ ಸಿಕ್ಕಿಲ್ಲ; ಪೊನ್ನಣ್ಣ

  ನಮಗೆ ಕೋರ್ಟ್ ಆದೇಶದ ಕಾಪಿ ಸಿಕ್ಕಿಲ್ಲ. ಈಗಾಗಲೇ ಮಾಧ್ಯಮಗಳಲ್ಲಿ ಬಂದಿರೋದು ಗೊತ್ತಿದೆ ಅಂತ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಹೇಳಿಕೆ ನೀಡಿದ್ದಾರೆ. ಕೆಪಿಸಿಸಿ ನೋಟೀಸ್ ಗೆ ಕೋರ್ಟ್​ನಲ್ಲಿ ಉತ್ತರ ಕೊಡಲು ನಾನು ಪ್ರತಿನಿಧಿಸುತ್ತೇನೆ. ಅನುಮತಿ ಕೇಳಿದ್ದೇವಾ ಇಲ್ಲವಾ ಎಂಬುದನ್ನ ಕೋರ್ಟ್​ಗೆ ಹೇಳ್ತೀವಿ, ನಿಮ್ಮ‌ ಮುಂದೆ ಹೇಳಲ್ಲ ಅಂತ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರು ಉಢಾಪೆ ಉತ್ತರಗಳನ್ನ ನಿಡಿದ್ದಾರೆ.

 • 12 Jan 2022 13:07 PM (IST)

  ಸಿದ್ದರಾಮಯ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಮಹಿಳೆಯರು

  ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಜೊತೆ ಫೋಟೋ ತೆಗೆಸಿಕೊಳ್ಳಲು ಮಹಿಳೆಯರು, ಯುವತಿಯರು ಮುಗಿಬೀಳುತ್ತಿದ್ದಾರೆ.

 • 12 Jan 2022 12:57 PM (IST)

  ಕಾಂಗ್ರೆಸ್ ಪಾದಯಾತ್ರೆಗೆ ಮಾಜಿ ಪರಿಷತ್ತು ಸದಸ್ಯ ಶರವಣ ಆಕ್ರೋಶ

  ಕಾಂಗ್ರೆಸ್ ಪಾದಯಾತ್ರೆ ಹಾಗೂ ಸರ್ಕಾರದ ನಡೆಗೆ ಮಾಜಿ ಪರಿಷತ್ತು ಸದಸ್ಯ ಶರವಣ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದಲ್ಲಿ ಕೋವಿಡ್ ಹೆಚ್ಚಾಗಿದೆ ಇದಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಕಾರಣ. ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

 • 12 Jan 2022 12:54 PM (IST)

  ಬಿಜೆಪಿ ಸಚಿವರು, ಶಾಸಕರು ಗೊಂದಲ ಸೃಷ್ಟಿ ಮಾಡಿದ್ದಾರೆ -ಮಾಜಿ ಸಚಿವ ಎಂ.ಬಿ.ಪಾಟೀಲ್​

  ಬಿಜೆಪಿ ಸಚಿವರು, ಶಾಸಕರು ಗೊಂದಲ ಸೃಷ್ಟಿ ಮಾಡಿದ್ದಾರೆ. 2019ರ ಜನವರಿ 18ರಂದು ಡಿಪಿಆರ್​ ಸಲ್ಲಿಕೆ ಮಾಡಲಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ 9600 ಕೋಟಿ ಡಿಪಿಆರ್ ಸಲ್ಲಿಸಿದ್ದೆವು. ಕೇವಲ 18 ದಿನದಲ್ಲಿ ಪರಿಷ್ಕೃತ ಡಿಪಿಆರ್​ ಸಲ್ಲಿಸಿದ್ದೆವು. ಹೆಚ್.ಡಿ.ಕುಮಾರಸ್ವಾಮಿ ಡಿಪಿಆರ್​ ಮಾಡಿದ್ದು ನಾವೇ ಅಂತಾರೆ. ಆದರೆ ಪರಿಷ್ಕೃತ ಡಿಪಿಆರ್ ಮಾಡಿದ್ದು ಡಿ.ಕೆ.ಶಿವಕುಮಾರ್​. ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಕೇಂದ್ರ ಜಲ ಆಯೋಗ ಪರಿಷ್ಕೃತ ಡಿಪಿಆರ್​ ಕಳಿಸಿತ್ತು. ಯಾವುದೇ ಚರ್ಚೆಯಿಲ್ಲದೆ 5 ಸಭೆಗಳನ್ನು ಮುಂದೂಡಿದ್ದಾರೆ. 2019ರ ಜೂನ್​ 17ರಂದು ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವರನ್ನು ಭೇಟಿಯಾಗಿದ್ದರು. ​ಕೇಂದ್ರ ಸರ್ಕಾರದ ಮೇಲೆ ಡಿ.ಕೆ.ಶಿವಕುಮಾರ್​ ಒತ್ತಡ ಹೇರಿದ್ದರು. ಗೆಜೆಟ್​ ನೋಟಿಫಿಕೇಷನ್​ ಆಗಿದ್ದು ಎಲ್ಲೂ ವಿಳಂಬ ಮಾಡಿರಲಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್​ ತಿಳಿಸಿದ್ದಾರೆ.

 • 12 Jan 2022 12:48 PM (IST)

  ನಮ್ಮ ಹೋರಾಟ ಕುಡಿಯುವ ನೀರಿಗಾಗಿ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

  ನಮ್ಮ ಮೇಲೆ ಎಷ್ಟೇ ಎಫ್​ಐಆರ್ ಹಾಕಿದರೂ ನಾವೂ ಜಗ್ಗಲ್ಲ ಹೆದರೋದಿಲ್ಲ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಟಾಂಗ್ ಕೊಟ್ಟಿದ್ದಾರೆ. ಅವರ ದೂರುಗಳಿಗೆ ನಾವೂ ಹೆದರೋದಿಲ್ಲ. ಮೊದಲು ಅವರ ಡಬಲ್ ಇಂಜಿನ್ ಸರ್ಕಾರ ಮೇಕೆದಾಟು ಯೋಜನೆ ಜಾರಿತರಲಿ. ಗಂಡಸ್ತನದ ಬಗ್ಗೆ ಕೆಲಸ ಮಾಡಿ ತೋರಿಸಲಿ. ಯೋಜನೆ ಅನುಷ್ಠಾನಕ್ಕೆ ತಂದು ಅವರೇ ಕ್ರೆಡಿಟ್ ತೆಗೆದುಕೊಳ್ಳಲಿ. ನಮ್ಮ ಹೋರಾಟ ಕುಡಿಯುವ ನೀರಿಗಾಗಿ ಮಾಡ್ತಿರೋದು. ನಮ್ಮ ಪಾದಯಾತ್ರೆ ತಡೆಗಟ್ಟಲು ಮಾಡ್ತಿರೋ ಪ್ರಯತ್ನ ಇದು ಎಂದಿದ್ದಾರೆ.

 • 12 Jan 2022 12:43 PM (IST)

  ರಾಜ್ಯ ಸರ್ಕಾರದ ಮೇಲೆ ಹೈಕೋರ್ಟ್ ವಿಭಾಗೀಯ ಪೀಠ ಅಸಮಾಧಾನ

  ಕರ್ನಾಟಕ ಈಗಾಗಲೇ ಕೋವಿಡ್ ನಿಂದ ತತ್ತರಿಸುತ್ತಿದೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ. ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಅಸಮಾಧಾನ ಹೊರ ಹಾಕಿದೆ. ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದೆ.

 • 12 Jan 2022 12:40 PM (IST)

  ವಿಚಾರಣೆ ಜ.14 ಕ್ಕೆ ಮುಂದೂಡಿದ ಹೈಕೋರ್ಟ್

  ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿ ಈ ಬಗ್ಗೆಯೂ ಮಾಹಿತಿ ನೀಡಲು ಕೆಪಿಸಿಸಿಗೆ ಹೈಕೋರ್ಟ್ ಸೂಚನೆ ನೀಡಿದ್ದು ವಿಚಾರಣೆ ಜ.14 ಕ್ಕೆ ಮುಂದೂಡಿದೆ. ರಾಜ್ಯ ಸರ್ಕಾರಕ್ಕೆ ಒಂದು ದಿನ ಕಾಲಾವಕಾಶ ನೀಡಿದ್ದೇವೆ. ಎಸ್ಒಪಿ ಜಾರಿಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಬಿಗಡಾಯಿಸಿರುವ ವೇಳೆ ಪಾದಯಾತ್ರೆಗೆ ಅವಕಾಶ ಏಕೆ? ಎಂದು ಈ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ತಾಕೀತು ಮಾಡಿದೆ.

 • 12 Jan 2022 12:32 PM (IST)

  ಅಶ್ವತ್ಥ್ ನಾರಾಯಣ ಗಂಡಸ್ತನ ಕೇಂದ್ರದ ಮೇಲೆ ತೋರಿಸಲಿ -ಸಿದ್ದರಾಮಯ್ಯ

  ಅಶ್ವತ್ಥ್ ನಾರಾಯಣ ಗಂಡಸ್ತನ ಕೇಂದ್ರದ ಮೇಲೆ ತೋರಿಸಲಿ. ಅವರು ಕೆಲಸ ಮಾಡದ್ದಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಟಿವಿ9ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೋರ್ಟ್ ಆದೇಶ ಏನು ಬರುತ್ತೆ ಎಂದು ಗೊತ್ತಿಲ್ಲ. ಆದರೆ ನಮ್ಮ ಪಾದಯಾತ್ರೆ ಮುಂದುವರೆಯುತ್ತೆ ಎಂದರು.

 • 12 Jan 2022 12:23 PM (IST)

  ಪಾದಯಾತ್ರೆ ಮಧ್ಯೆ ಎತ್ತಿನಗಾಡಿ ಓಡಿಸಿದ ಡಿಕೆಶಿ

  ಪಾದಯಾತ್ರೆ ಮಧ್ಯೆ ಡಿಕೆ ಶಿವಕುಮಾರ್ ಎತ್ತಿನಗಾಡಿ ಓಡಿಸಿದ್ರು. ಅವ್ವೇರಹಳ್ಳಿ‌ ಗ್ರಾಮದ ಬಳಿ ಎತ್ತಿನ ಗಾಡಿ ಓಡಿಸಿದ್ದಾರೆ.

 • 12 Jan 2022 12:16 PM (IST)

  ನಮ್ಮ ಪಾದಯಾತ್ರೆಯಿಂದ ಕೊರೊನಾ ಕೇಸ್​ ಜಾಸ್ತಿ ಆಗ್ತಿಲ್ಲ -ಸಿದ್ದರಾಮಯ್ಯ

  ನಮ್ಮ ಪಾದಯಾತ್ರೆಯಿಂದ ಕೊರೊನಾ ಕೇಸ್​ ಜಾಸ್ತಿ ಆಗ್ತಿಲ್ಲ. ಸರ್ಕಾರದ ಬೇಜವಾಬ್ದಾರಿಯಿಂದ ಕೊರೊನಾ ಹೆಚ್ಚಾಗುತ್ತಿದೆ. ಹೈಕೋರ್ಟ್‌ನಲ್ಲಿ ಏನು ಆದೇಶ ಬರುತ್ತದೋ ನೋಡೋಣ ಎಂದು ಟಿವಿ9ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಸಿದ್ದಾರೆ.

 • 12 Jan 2022 11:59 AM (IST)

  ಮೇಕೆದಾಟು ಯೋಜನೆಗೆ 1954ರ ಹಿನ್ನೆಲೆ ಇದೆ

  ನಮ್ಮ ರಾಜ್ಯದ ಜಲ ವಿವಾದ ಮೇಕೆದಾಟು ಯೋಜನೆ ನಮ್ಮ ಮಹತ್ವಾಕಾಂಕ್ಷಿ ಯೋಜನೆ. 1996-97 ರಿಂದ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. 1954ರಿಂದ ಇದಕ್ಕೆ ಹಿನ್ನೆಲೆ ಇದೆ. ನಿರ್ಣಾಯಕ ಹೆಜ್ಜೆಇಟ್ಟಿರುವಂಥದ್ದು 1997-97 ರಲ್ಲಿ. ಕೆಪಿಸಿಯಿಂದ 731.21 ಕೋಟಿಗೆ ಮೇಕೆದಾಟು ಜಲ ವಿದ್ಯುತ್ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ 53.8 ಟಿಎಂಸಿ ಸ್ಟೋರೇಜ್, 524 ಮೆಗಾ ವ್ಯಾಟ್ ಪವರ್ ಉತ್ಪಾದನೆ, 16.10 ಟಿಎಂಸಿ ನೀರು ಕುಡಿಯುವ ನೀರಿನ ಯೋಜನೆ ಮಾಡಲಾಗಿತ್ತು ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.

 • 12 Jan 2022 11:55 AM (IST)

  ನೋಡಿ ನಾನು ಫಿಟ್ & ಫೈನ್ ಆಗಿದ್ದೇನೆ -ಡಿಕೆ ಶಿವಕುಮಾರ್

  ಡಿಕೆಶಿ ಆರೋಗ್ಯ ತಪಾಸಣೆ ಬಗ್ಗೆ ಸಚಿವರ ಸಲಹೆ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳ ಪ್ರಶ್ನೆಗೆ ಡಿ.ಕೆ.ಶಿವಕುಮಾರ್​ ಉತ್ತರಿಸಿದ್ದಾರೆ. ಈ ವೇಳೆ ಅವರು, ನೋಡಿ ನಾನು ಫಿಟ್ & ಫೈನ್ ಆಗಿದ್ದೇನೆ. 3 ದಿನಗಳ ಕಾಲ ಮೌನ ಪಾದಯಾತ್ರೆಗೆ ನಿರ್ಧರಿಸಿರುವ ಎಂದು ಹೆಚ್ಚು ಮಾತನಾಡಲು ನಿರಾಕರಿಸಿ ಮುಂದೆ ಸಾಗಿದ್ರು.

 • 12 Jan 2022 11:53 AM (IST)

  ಸರ್ಕಾರ ಏನೇ ಕ್ರಮ ಕೈಗೊಂಡರೂ ನಾವು ಎದುರಿಸಲು ಸಿದ್ದ -ಸಿದ್ದರಾಮಯ್ಯ

  ರಾಮನಗರದಲ್ಲಿ ಪಾದಯಾತ್ರೆ ತಡೆಯುವ ಬಗ್ಗೆ ಸರ್ಕಾರ ಪ್ಲಾನ್ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನೋಡೋಣ ಅವ್ರು ಏನು ಕ್ರಮ ತೆಗೆದುಕೊಳ್ಳುತ್ತಾರೆ ಅಂತಾ?ಅವ್ರು ಏನು ಮಾಡಿದ್ರು, ಅದನ್ನು ಎದುರಿಸಲು ನಾವೆಲ್ಲ ಎಲ್ಲ ರೀತಿಯಿಂದಲೂ ರೆಡಿ ಇದ್ದೇವೆ. ಸರ್ಕಾರ ಅವರದ್ದು ಇದೆ, ಅವ್ರು ಏನಾದರೂ ಕ್ರಮ ತಗೊಂಡ್ರೆ ಲೀಗಲ್ ಆಗಿ ನಾವು ಅದನ್ನು ಎದುರಿಸುತ್ತೇವೆ ಎಂದರು. ಅಲ್ಲದೆ ತಮ್ಮ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಹಾಕ್ಲಿ‌… ಹಾಕ್ಲಿ ..ಎಫ್ ಐ ಆರ್ ಹಾಕಿ ಎದರಿಸೋಕೆ ಆಗುತ್ತೇನು? ಇಂತಹ ಎಫ್ಐಆರ್ ಗಳನ್ನು ನಾವು ಎಷ್ಟು ನೋಡಿಲ್ಲ. ನಿನ್ನೆ ಯೂ ಹಾಕಿದ್ದಾರೆ ಇವತ್ತು ಹಾಕಿದ್ದಾರೆ ಎಂದರು.

 • 12 Jan 2022 11:47 AM (IST)

  ಕಾಂಗ್ರೆಸ್ ನಾಯಕರದ್ದು ಮೇಲಾಟದ ಪಾದಯಾತ್ರೆ – ಸಚಿವ ವಿ.ಸುನಿಲ್ ಕುಮಾರ್

  ಕಾಂಗ್ರೆಸ್ ನಾಯಕರದ್ದು ಮೇಲಾಟದ ಪಾದಯಾತ್ರೆ. ಮೊದಲ ಬಾರಿ ತಬ್ಲೀಗ್​ಗಳು ಕೊರೊನಾ ಹರಡಲು ಕಾರಣವಾದ್ರು. 3ನೇ ಅಲೆ ಬರಲು ಕಾಂಗ್ರೆಸ್​ನವರು ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರದ್ದು ಪಾದಯಾತ್ರೆ ಅಲ್ಲ, ಕೊರೊನಾ ಯಾತ್ರೆ. ಕೊರೊನಾ ಸೋಂಕು ಹರಡಲು ಪಾದಯಾತ್ರೆ ಮಾಡುತ್ತಿದ್ದಾರೆ. ಕಾನೂನನ್ನು ಗೌರವಿಸದ ಕಾಂಗ್ರೆಸ್​ ನಾಯಕರಿಗೆ ನೈತಿಕತೆ ಇಲ್ಲ. ಕಾಂಗ್ರೆಸ್​ ನಾಯಕರು ಎಚ್ಚೆತ್ತುಕೊಳ್ಳಬೇಕೆಂದು ವಿಧಾನಸೌಧದಲ್ಲಿ ಸಚಿವ ವಿ.ಸುನಿಲ್ ಕುಮಾರ್ ಎಚ್ಚರಿಸಿದ್ದಾರೆ.

 • 12 Jan 2022 11:33 AM (IST)

  ಕಾಂಗ್ರೆಸ್​ನವರು ಮೇಕೆದಾಟು ಪಾದಯಾತ್ರೆ ಕೈ ಬಿಡಬೇಕು -ಶಾಸಕ ಮಾಡಾಳ್ ವಿರೂಪಾಕ್ಷಪ್ಪ

  ರಾಜ್ಯದಲ್ಲಿ ಕೋವಿಡ್, ಒಮಿಕ್ರಾನ್ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್​ನವರು ಮೇಕೆದಾಟು ಪಾದಯಾತ್ರೆ ಕೈ ಬಿಡಬೇಕು. ಅಗತ್ಯವಿದ್ರೆ ‌ಕೇವಲ ಕೆಲ ನಾಯಕರು ಮಾತ್ರ ಪಾದಯಾತ್ರೆ ಮಾಡಲಿ ಎಂದು ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆಗ್ರಹಿಸಿದ್ದಾರೆ. ಈ ಹಿಂದೆ ತಮಿಳು ನಾಡಿನವರೇ ಮೇಕೆದಾಟು ಯೋಜನೆಗೆ ಒಪ್ಪಿಗೆ ನೀಡಿದ್ದರು. ಆಗ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು‌. ಆಗ ತಾವೇ ಮಾಡಿಲ್ಲ. ಈಗ ತಮಿಳು ನಾಡು ಸರ್ಕಾರ ಮೇಕೆದಾಟು ಬಗ್ಗೆ ಕೋರ್ಟ್ ಮೊರೆ ಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾದಯಾತ್ರೆ ನಡೆಸುವುದು ಸೂಕ್ತವಲ್ಲ. ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈ ಕಾರಣಕ್ಕೆ ಪಾದಯಾತ್ರೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್​ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

 • 12 Jan 2022 11:30 AM (IST)

  ಪಾದಯಾತ್ರೆ ಬಳಿಕ ರಾಮನಗರ ಭಾಗದಲ್ಲಿ ಕೊರೊನಾ ಹೆಚ್ಚಳ -ಆರಗ ಜ್ಞಾನೇಂದ್ರ

  ಪಾದಯಾತ್ರೆ ಬಳಿಕ ರಾಮನಗರ ಭಾಗದಲ್ಲಿ ಕೊರೊನಾ ಹೆಚ್ಚಳ ಎಂದು ಬೆಂಗಳೂರಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇನ್ನಾದರೂ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಎಚ್ಚರಿಸಿದ್ದಾರೆ.

 • 12 Jan 2022 11:16 AM (IST)

  ಚಿಕ್ಕೇನಹಳ್ಳಿಯಿಂದ ನಾಲ್ಕನೇ ದಿನದ ಪಾದಯಾತ್ರೆ ಆರಂಭ

  ನಾಲ್ಕನೇ ದಿನದ ಪಾದಯಾತ್ರೆ ಚಿಕ್ಕೇನಹಳ್ಳಿಯಿಂದ ಆರಂಭವಾಗಿದೆ. ಸದ್ಯ ಚಿಕ್ಕೇನಹಳ್ಳಿಗೆ ಸಿದ್ದರಾಮಯ್ಯ ಆಗಮಿಸಿದರು.

 • 12 Jan 2022 10:45 AM (IST)

  ಮೇಕೆದಾಟು ಪಾದಯಾತ್ರೆ ವಿರುದ್ಧ ಹೈಕೋರ್ಟ್ ಗೆ ಪಿಐಎಲ್

  ಮೇಕೆದಾಟು ಪಾದಯಾತ್ರೆ ವಿರುದ್ಧ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆಯಾಗಿದೆ. ತುರ್ತು ವಿಚಾರಣೆಗೆ ವಕೀಲ ಶ್ರೀಧರ್ ಪ್ರಭು ಮನವಿ  ಮಾಡಿದ್ದಾರೆ. ಕೆಪಿಸಿಸಿ ಪಾದಯಾತ್ರೆಯಿಂದ ಕೊವಿಡ್ ಹಬ್ಬಲಿದೆ. ಸರ್ಕಾರ ಪಾದಯಾತ್ರೆ ತಡೆಗೆ ಕ್ರಮ ಕೈಗೊಂಡಿಲ್ಲ. ಮಾಸ್ಕ್ ಇಲ್ಲದೇ ನಾಯಕರು ಮಕ್ಕಳನ್ನು ಭೇಟಿ ಮಾಡಿದ್ದಾರೆ . ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆ ಇದೆ. ಹೀಗಾಗಿ ಪಿಐಎಲ್ ತುರ್ತು ವಿಚಾರಣೆಗೆ ಮನವಿ ಮಾಡಿದ್ದಾರೆ.

 • 12 Jan 2022 10:43 AM (IST)

  ಕಾಂಗ್ರೆಸ್ ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ; ಆರಗ ಜ್ಞಾನೇಂದ್ರ ಮನವಿ

  ಕಾಂಗ್ರೆಸ್ ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ ಅಂತ ಮಾಧ್ಯಮ ಪ್ರಕಟಣೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ. ದಯವಿಟ್ಟು ರಾಜಕೀಯ ಉದ್ದೇಶದ ನಡಿಗೆ ಕಾರ್ಯಕ್ರಮ ಕೈಬಿಡಿ. ಕೊರೊನಾ ಬಗ್ಗೆ ಕಾಂಗ್ರೆಸ್​ನವರಿಂದ ಅಪಪ್ರಚಾರ, ವಿತಂಡ ವಾದ ನಡೆಯುತ್ತಿದೆ. ಪಾದಯಾತ್ರೆಗೆ ತೆರಳಿದ್ದ ಕೆಲವು ನಾಯಕರಿಗೆ ಕೊರೊನಾ ಬಂದಿದೆ. ಆ ಕಾರಣದಿಂದ ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತಿದ್ದೇನೆ. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಪಾದಯಾತ್ರೆ ಕೈಬಿಡಿ. ಈಗಾಗಲೇ ನೀವು ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದೀರಿ. ಕಾಂಗ್ರೆಸ್ ಪಕ್ಷದ ನಾಯಕರು ಜನರ ಕ್ಷಮೆ ಕೇಳಬೇಕಾಗಿದೆ ಅಂತ ಮಾಧ್ಯಮ ಪ್ರಕಟಣೆಯಲ್ಲಿ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

 • 12 Jan 2022 10:41 AM (IST)

  ಕಾಂಗ್ರೆಸ್ ಪಾದಯಾತ್ರೆ ವಿರುದ್ಧ 3ನೇ FIR ದಾಖಲು

  ಕಾಂಗ್ರೆಸ್ ಪಾದಯಾತ್ರೆ ವಿರುದ್ಧ 3ನೇ ಎಫ್​ಐಆರ್ ದಾಖಲಾಗಿದೆ. ಕನಕಪುರ ಪೊಲೀಸ್ ಠಾಣೆಯಲ್ಲಿ 3ನೇ ಎಫ್​ಐಆರ್ ದಾಖಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸೇರಿದಂತೆ 64 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಎ1 ಡಿ.ಕೆ.ಶಿವಕುಮಾರ್, ಎ2 ಡಿ.ಕೆ.ಸುರೇಶ್, ಎ3 ಸಿದ್ದರಾಮಯ್ಯ, ಎ4 S.ರವಿ, ಎ5 ಧ್ರುವನಾರಾಯಣ, ಎ6 ಪ್ರಿಯಾಂಕ್ ಖರ್ಗೆ, ಎ7 ಈಶ್ವರ ಖಂಡ್ರೆ, ಎ8 ತನ್ವೀರ್ ಸೇಠ್, ಎ9 ಅನಿಲ್ ಚಿಕ್ಕಮಾಧು ಸೇರಿದಂತೆ 64 ಜನರ ವಿರುದ್ಧ ಕನಕಪುರ ಠಾಣೆಯಲ್ಲಿಎಫ್​ಐಆರ್ ದಾಖಲಾಗಿದೆ.

 • 12 Jan 2022 10:40 AM (IST)

  ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್​ ನಾಯಕಿಗೆ ಕೊರೊನಾ!

  ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಶಾಸಕಿ, ಕಾಂಗ್ರೆಸ್ ನಾಯಕಿ ಮಲ್ಲಾಜಮ್ಮಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬೊಪ್ಪಸಮುದ್ರ  ಗ್ರಾಮದ ಮನೆಯಲ್ಲಿ ಐಸೋಲೇಷನ್​​ ಆಗಿದ್ದಾರೆ.

 • 12 Jan 2022 10:36 AM (IST)

  ಸಿದ್ದರಾಮಯ್ಯಗೆ ಕರೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

  ಸಿದ್ದರಾಮಯ್ಯಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸಚಿವ ಆರಗ ಜ್ಞಾನೇಂದ್ರ ಕರೆ ಮಾಡಿದ್ದರು. ಕರೆ ಮಾಡಿ ಸಿದ್ದರಾಮಯ್ಯ ಆರೋಗ್ಯವನ್ನು ವಿಚಾರಿಸಿದರು. ಈ ವೇಳೆ ಆರಗ ಜ್ಞಾನೇಂದ್ರ ಆರೋಗ್ಯದ ಬಗ್ಗೆಯೂ ಸಿದ್ದರಾಮಯ್ಯ ಕೇಳಿದರು.  ಇಬ್ಬರು ನಾಯಕರು ಉಭಯ ಕುಶಲೋಪರಿ ವಿಚಾರಿಸಿಕೊಂಡರು.

 • 12 Jan 2022 10:18 AM (IST)

  ಗೌರಿಬಿದನೂರು ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಪಾಸಿಟಿವ್!

  ಕಾಂಗ್ರೆಸ್‌ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಗೌರಿಬಿದನೂರು ಶಾಸಕ ಎನ್ ಎಚ್ ಶಿವಶಂಕರರೆಡ್ಡಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

 • 12 Jan 2022 10:04 AM (IST)

  ಪಾದಯಾತ್ರೆ ಅಗತ್ಯ ಇಲ್ಲ ಅನ್ನೋದು ರಾಜ್ಯದ ಜನರಿಗೆ ತಿಳಿದಿದೆ -ಸಚಿವ ನಾರಾಯಣಗೌಡ

  ರಾಜ್ಯದಲ್ಲಿ ಗೊಂದಲ ಸೃಷ್ಟಿಸಲು ಕಾಂಗ್ರೆಸಿಗರು ಹಠ ಮಾಡ್ತಿದ್ದಾರೆ. ಪಾದಯಾತ್ರೆಗೆ ಹೊರಟ್ಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡ ಹೇಳಿಕೆ ನೀಡಿದ್ದಾರೆ. ಅರೆಸ್ಟ್ ಮಾಡಿದ್ರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಿಸೋದಕ್ಕೆ ಪ್ಲಾನ್ ಮಾಡಿದ್ದಾರೆ. ಗೊಂದಲ ಸೃಷ್ಟಿ ಸರ್ಕಾರಕ್ಕೆ ಟೆನ್ಷನ್ ಕೊಡೋಣ ಅಂತ ಅಂದುಕೊಂಡಿದ್ದಾರೆ. ಅದಕ್ಕಾಗಿ ಸಿಎಂ ಬುದ್ದಿವಂತಿಗೆಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಪಾದಯಾತ್ರೆಯಿಂದ ನಮ್ಮ ಪಾರ್ಟಿ, ಸರ್ಕಾರಕ್ಕೆ ಏನೂ ಎಫೆಕ್ಟ್ ಆಗಲ್ಲ. ಪಾದಯಾತ್ರೆ ಅಗತ್ಯ ಇಲ್ಲ ಅನ್ನೋದು ರಾಜ್ಯದ ಜನರಿಗೆ ತಿಳಿದಿದೆ ಎಂದು ಕಾಂಗ್ರೆಸ್​ ವಿರುದ್ಧ ಗರಂ ಆಗಿದ್ದಾರೆ.

 • 12 Jan 2022 09:00 AM (IST)

  ಜೆಡಿಎಸ್​ನವರೇ ನಮ್ಮ ಎದುರಾಳಿಗಳು; ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ

  ಈ ಪಾದಯಾತ್ರೆ ಬಗ್ಗೆ ನಮ್ಮ ಜಿಲ್ಲೆಯ ನಾಯಕರಿಗೆ ಜಾಸ್ತಿ ತಳಮಳ ಆಗಿದೆ. ಅವರು ಮುಂದೆ ಅತಂತ್ರ ಸರ್ಕಾರ ಬರಬೇಕು ಎಂದು ಬಯಸಿದ್ದಾರೆ. ಜೆಡಿಎಸ್​ನವರೇ ನಮ್ಮ ಎದುರಾಳಿಗಳು ಅಂತ ಹಿರಿಸಾವೆ ಬಳಿ ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ ಹೇಳಿಕೆ ನೀಡಿದ್ದಾರೆ. ಯಾವುದೆ ಕಾರಣದಿಂದ ಮುಂದೆ ಅತಂತ್ರ ಸರ್ಕಾರ ಬರಲ್ಲ. ಮುಂದೆ 140 ಕ್ಕಿಂತ ಹೆಚ್ಚಿನ ಸ್ಥಾನ ಡಿಕೆಶಿ ಸಿದ್ದರಾಮಯ್ಯ, ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಗೆ ಬರುತ್ತದೆ ಅಂತ ಅಭಿಪ್ರಾಯಪಟ್ಟರು.

 • 12 Jan 2022 08:52 AM (IST)

  ಹಾಸನದಿಂದ ಏಳುವರೆ ಸಾವಿರ ಜನರು ಹೊರಟಿದ್ದೇವೆ; ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ

  ಪಾದಯಾತ್ರೆಗೆ ಹಾಸನದಿಂದ ಏಳುವರೆ ಸಾವಿರ ಜನರು ಹೊರಟಿದ್ದೇವೆ ಅಂತ ಮಾಜಿ ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ತಿಳಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನಾಯತ್ವದ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ಕೊಟ್ಟು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಿದ್ದೇವೆ. ಈ ಯೋಜನೆಯಿಂದ ಕೋಟ್ಯಾಂತರ ಜನರಿಗೆ ಅನುಕೂಲ ಇದೆ. ಬಿಜೆಪಿ ಸರ್ಕಾರದ ಗೊಡ್ಡು ಬೆದರಿಕೆಗೆ ಹೆದರೋದಿಲ್ಲ. ಇಷ್ಡು ದಿನ ಇಲ್ಲದ ಕೊರೊನಾವನ್ನು ಈಗ ಇದೆ ಎಂದು ಹೆದರಿಸುತ್ತಿದ್ದಾರೆ. ಕೊರೊನಾ ನಿಯಮ ಪಾಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ನಾವು ರಾಮನನಗರದ ಚಿಕ್ಕನಹಳ್ಳಿ ಗೆ ನಾವು ಹೋಗಿ ಸೇರಿ 13 ಕಿಲೋಮೀಟರ್ ಪಾದಯಾತ್ರೆ ಮಾಡುತ್ತೇವೆ. 125. ಬಸ್, 100 ಮಿನಿಬಸ್ ಸಾವಿರಾರು ಕಾರುಗಳಲ್ಲಿ ಕಾರ್ಯಕರ್ತರು ನಾಯಕರು ಹೊರಡುತ್ತೇವೆ ಅಂತ ಹೇಳಿದರು.

 • 12 Jan 2022 08:41 AM (IST)

  9.30 ಕ್ಕೆ 4ನೇ ದಿನದ ಪಾದಯಾತ್ರೆ ಆರಂಭ

  ಇಂದು ಬೆಳಿಗ್ಗೆ 9.30 ಕ್ಕೆ 4ನೇ ದಿನದ ಪಾದಯಾತ್ರೆ ಆರಂಭವಾಗಲಿದ್ದು, ಚಿಕ್ಕೇನಹಳ್ಳಿಯಿಂದ ಕೃಷ್ಣಾಪುರ ದೊಡ್ಡಿಗೆ ಮಧ್ಯಾಹ್ನದ ಬೆಳಗಿನ ಪಾದಯಾತ್ರೆ ತಲುಪಲಿದೆ. ಬಳಿಕ ಅಲ್ಲಿ ವಿಶ್ರಾಂತಿ ಪಡೆದು ಅಲ್ಲಿಂದ ಮಧ್ಯಾಹ್ನದ ನಂತರ ರಾಮನಗರಕ್ಕೆ ತಲುಪುತ್ತದೆ. ನಂತರ ರಾಮನಗರದಲ್ಲಿ ಡಿಕೆ ಶಿವಕುಮಾರ್ ಜನರನ್ನದ್ದುದ್ದೇಶಿಸಿ ಮಾತನಾಡಲಿದ್ದಾರೆ.

 • 12 Jan 2022 08:39 AM (IST)

  ರಾಮನಗರದಲ್ಲಿ ವಾಸ್ತವ್ಯ ಹೂಡಲಿರುವ ಕಾಂಗ್ರೆಸ್ ನಾಯಕರು

  ಕಾಂಗ್ರೆಸ್ ನಾಯಕರು ಇಂದು ರಾಮನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಜೆಡಿಎಸ್ ಭದ್ರಕೋಟೆಯಲ್ಲಿ ಬಲಿಷ್ಠವಾಗುತ್ತಿರುವ ಕಾಂಗ್ರೆಸ್,  ಪಾದಯಾತ್ರೆ ಮೂಲಕ ಮತ್ತಷ್ಟು ಬಲ ತುಂಬಲು ಯೋಜನೆ ರೂಪಿಸಿದೆ.

 • 12 Jan 2022 08:38 AM (IST)

  ಮೊದಲಿಗೆ 6.5 ಕಿಲೋ ಮೀಟರ್ ಪಾದಯಾತ್ರೆ

  ಮೊದಲಿಗೆ ಚಿಕ್ಕೇನಹಳ್ಳಿ ಗ್ರಾಮದಿಂದ ರಾಮನಗರ ತಾಲೂಕಿನ ಕೃಷ್ಣಪುರದೊಡ್ಡಿ ಗ್ರಾಮದವರೆಗೂ ಪಾದಯಾತ್ರೆ ನಡೆಯಲಿದೆ. ಒಟ್ಟು 6.5 ಕಿಲೋಮೀಟರ್ ಪಾದಯಾತ್ರೆ ನಡೆಯುತ್ತದೆ. ನಂತರ ಮಧ್ಯಾಹ್ನದ ಭೋಜನ ಹಾಗೂ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ. ವಿಶ್ರಾಂತಿ ಮುಗಿಸಿ ಕೃಷ್ಣಪುರದೊಡ್ಡಿಯಿಂದ ರಾಮನಗರ ಟೌನ್ ವರೆಗೂ ಪಾದಯಾತ್ರೆ ನಡೆಯಲಿದೆ.

 • 12 Jan 2022 08:37 AM (IST)

  ನಾಲ್ಕನೇ ದಿನದ ಕಾಲಿಟ್ಟ ಕಾಂಗ್ರೆಸ್ ಪಾದಯಾತ್ರೆ

  ಕಾಂಗ್ರೆಸ್ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇಂದು ಜೆಡಿಎಸ್ ಭದ್ರಕೋಟೆಗೆ ಕಾಂಗ್ರೆಸ್ ಪಾದಯಾತ್ರೆ ಲಗ್ಗೆ ಇಡಲಿದೆ. ಚಿಕ್ಕೇನಹಳ್ಳಿ ಗ್ರಾಮದಿಂದ ರಾಮನಗರ ಟೌನ್ ವರೆಗೂ ಪಾದಯಾತ್ರೆ ನಡೆಯಲಿದೆ. ನಿನ್ನೆ ಚಿಕ್ಕೇನಹಳ್ಳಿ ಗ್ರಾಮದಲ್ಲಿ ಮೂರನೇ ದಿನ ಪಾದಯಾತ್ರೆ ಮುಕ್ತಾಯವಾಗಿತ್ತು. ಇಂದು ಒಟ್ಟು 15 ಕಿಲೋಮೀಟರ್ ಪಾದಯಾತ್ರೆ ‌ನಡೆಯಲಿದೆ.

 • 12 Jan 2022 08:35 AM (IST)

  ಎಫ್​ಐಆರ್​ಗೆ ಡೋಂಟ್​ ಕೇರ್​ ಎಂದ ಕಾಂಗ್ರೆಸ್ ನಾಯಕರು

  ಕೊರೊನಾ ನಿಯಮಗಳನ್ನ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮುಂದುವರಿಸಿದ್ದಾರೆ. ಎರೆಡೆರಡೂ ಎಫ್​ಐಆರ್ ದಾಖಲಾದರೂ ತಲೆ ಕೆಡಿಕೊಳ್ಳುತ್ತಿಲ್ಲ.

Published On - 8:28 am, Wed, 12 January 22

Click on your DTH Provider to Add TV9 Kannada