AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್ ಮಾಡಿದ್ರೆ ಹಸಿವಿನಿಂದಲೇ ಸಾಯುತ್ತೇವೆ, ನಮ್ಮ ಕುಟುಂಬ ಬೀದಿಗೆ ಬರುತ್ತೆ; ಅಳಲು ತೋಡಿಕೊಂಡ ವ್ಯಾಪಾರಿಗಳು

ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಹೂವಿನ ವ್ಯಾಪಾರಿ, ವರ್ಷಕ್ಕೊಮ್ಮೆ ಲಾಕ್​ಡೌನ್ ಮಾಡುತ್ತಾರೆ. ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದೇವೆ. ಈಗ ಮತ್ತೆ ಲಾಕ್​ಡೌನ್ ಮಾಡಿದ್ರೆ ನಮ್ಮ ಇಡೀ ಕುಟುಂಬ ಬೀದಿಗೆ ಬೀಳುತ್ತೆ.

ಲಾಕ್​ಡೌನ್ ಮಾಡಿದ್ರೆ ಹಸಿವಿನಿಂದಲೇ ಸಾಯುತ್ತೇವೆ, ನಮ್ಮ ಕುಟುಂಬ ಬೀದಿಗೆ ಬರುತ್ತೆ; ಅಳಲು ತೋಡಿಕೊಂಡ ವ್ಯಾಪಾರಿಗಳು
ಹೂವಿನ ವ್ಯಾಪಾರಿ
TV9 Web
| Updated By: sandhya thejappa|

Updated on:Jan 12, 2022 | 9:27 AM

Share

ಬೆಳಗಾವಿ: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೊನಾ ಮೂರನೇ ಅಲೆ ನಿಯಂತ್ರಿಸಲು ತಜ್ಞರು ಈ ಹಿಂದೆ ಲಾಕ್​ಡೌನ್ ಅನಿವಾರ್ಯ ಎಂದಿದ್ದಾರೆ. ಹೀಗೆ ಕೊರೊನಾ ಹೆಚ್ಚಾಗುತ್ತಿದ್ದರೆ ಸರ್ಕಾರ ಕೂಡಾ ಲಾಕ್​ಡೌನ್ ಬಗ್ಗೆ ಚಿಂತನೆ ನಡೆಸುತ್ತಿದೆ. ಲಾಕ್​ಡೌನ್ ಜಾರಿಯಾದರೆ ಇಡೀ ಕರ್ನಾಟಕ ಆರ್ಥಿಕ ಪರಿಸ್ಥಿತಿಯಲ್ಲಿ ಸಿಲುಕುತ್ತದೆ. ಈ ಬಗ್ಗೆ ಟಿವಿ9 ಜೊಜೆ ಮಾತನಾಡಿದ ಬೆಳಗಾವಿಯ ಹೂ ವ್ಯಾಪಾರಿ, ಲಾಕ್​ಡೌನ್ ಮಾಡಿದ್ರೆ ಕೊರೊನಾ ಬಂದು ಸಾಯುವುದಕ್ಕಿಂತ, ಹಸಿವಿನಿಂದ ಸಾಯುವ ಪರಿಸ್ಥಿತಿ ಬರುತ್ತದೆ ಅಂತ ಹೇಳಿದರು.

ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಹೂವಿನ ವ್ಯಾಪಾರಿ, ವರ್ಷಕ್ಕೊಮ್ಮೆ ಲಾಕ್​ಡೌನ್ ಮಾಡುತ್ತಾರೆ. ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದೇವೆ. ಈಗ ಮತ್ತೆ ಲಾಕ್​ಡೌನ್ ಮಾಡಿದ್ರೆ ನಮ್ಮ ಇಡೀ ಕುಟುಂಬ ಬೀದಿಗೆ ಬೀಳುತ್ತೆ. ಸಾಕಷ್ಟು ಹೂವಿನ ವ್ಯಾಪಾರಿಗಳು ವ್ಯಾಪಾರ ಬಿಟ್ಟು ಈಗಾಗಲೇ ಕೂಲಿ ಮಾಡುತ್ತಿದ್ದಾರೆ. ದಯವಿಟ್ಟು ಲಾಕ್​ಡೌನ್ ಮಾಡಬೇಡಿ ಅಂತಾ ಸರ್ಕಾರಕ್ಕೆ ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ಲಾಕ್​ಡೌನ್ ಬೇಡವೇ ಬೇಡ. ಮೊದಲೇ ಎರಡು ವರ್ಷ ಲಾಕ್​ಡೌನ್​ನಿಂದ ಜಿಮ್ ಉದ್ಯಮ ಸಂಕಷ್ಟದಲ್ಲಿದೆ ಅಂತ ಜಿಮ್ ಉದ್ಯಮಿ ಗದಗದಲ್ಲಿ ಟಿವಿ9 ಬಳಿ ಅಳಕು ತೋಡಿಕೊಂಡರು. ನಮ್ಮ ಬದುಕೇ ಜಿಮ್ ಉದ್ಯಮದ ಮೇಲಿದೆ. ಲಕ್ಷಾಂತರ ಸಾಲಮಾಡಿ ಉದ್ಯಮ ಆರಂಭ ಮಾಡಿದ್ದೇನೆ. ಕಳೆದ ಲಾಕ್​ಡೌನ್​ನಿಂದ ಆದ‌ ಹಾನಿ, ಬ್ಯಾಂಕ್ ಇಎಂಐ ತುಂಬಲು ಮತ್ತೆ ಸಾಲ ಮಾಡಿದ್ದೇನೆ. ನಮ್ಮ ಬದುಕು ಈಗ ಸಂಕಷ್ಟದಲ್ಲಿದೆ. ಮತ್ತೆ ಲಾಕ್​ಡೌನ್ ಮಾಡಿ ಸರ್ಕಾರ ನಮ್ಮ ಹೊಟ್ಟೆ ಮೇಲೆ ಹೊಡೆಯಬಾರದು. ನಾವು ಸರ್ಕಾರದ ನಿಯಮ ಪಾಲನೆ ಮಾಡಿಯೇ ಬ್ಯಾಚ್​ಗಳ ಮಾಡಿ ಜಿಮ್ ನಡೆಸುತ್ತಿದ್ದೇವೆ ಅಂತ ಅಭಿಪ್ರಾಯಪಟ್ಟರು.

ಕಠಿಣ ನಿಯಮ ಮಾಡಿ ಇನ್ನು ಮೈಸೂರಿನಲ್ಲಿ ಹೋಟೆಲ್ ಮಾಲೀಕರು ಲಾಕ್‌ಡೌನ್ ಯಾವುದೇ ಕಾರಣಕ್ಕೂ ಬೇಡ ಅಂತ  ಲಾಕ್‌ಡೌನ್ ಬದಲು ಕಠಿಣ ನಿಯಮ ಮಾಡಿ. ಈಗಾಗಲೇ ಸಾಕಷ್ಟು ಹೋಟೆಲ್‌ಗಳು ಬಂದ್ ಆಗಿವೆ. ನಮ್ಮನ್ನು ನಂಬಿಕೊಂಡು ಲಕ್ಷಾಂತರ ಜನರು ಇದ್ದಾರೆ. ಲಾಕ್‌ಡೌನ್ ಮಾಡಿದರೆ ಎಲ್ಲರಿಗೂ ಸಮಸ್ಯೆಯಾಗುತ್ತದೆ. ಲಾಕ್‌ಡೌನ್ ವೇಳೆ ಪಾರ್ಸೆಲ್‌ಗೆ ಅವಕಾಶ ಪರಿಹಾರವಲ್ಲ. ಪಾರ್ಸೆಲ್‌ಗೆ ಅವಕಾಶ ಕೊಟ್ಟರು ಜನರು ಬರುವುದಿಲ್ಲ. ಇದರ ಅನುಭವ ವೀಕೆಂಡ್ ಕರ್ಪ್ಯೂವಿನಲ್ಲಿ ಆಗಿದೆ. ಆದ್ದರಿಂದ ಲಾಕ್‌ಡೌನ್ ಬೇಡವೇ ಬೇಡ ಅಂತ ಹೇಳಿದರು.

ಲಾಕ್​ಡೌನ್ ಮಾಡಿ ಇರೋ ಜೀವನ ಕಿತ್ತುಕೊಳ್ಳುತ್ತಿದ್ದಾರೆ‌. ರಸ್ತೆ ಅಪಘಾತ ಆಗುತ್ತೆ ಅಂತಾ ರಸ್ತೆಯನ್ನೇ ಬಂದ್ ಮಾಡಲಾಗುತ್ತಾ? ರಸ್ತೆಯಲ್ಲಿ ಎಚ್ಚರಿಕೆ ವಹಿಸುತ್ತಾರೆ‌. ಅದೇ ರೀತಿ ಕೊರೊನಾ ನಿಯಂತ್ರಣದ ಬಗ್ಗೆ ಯೋಚನೆ ಮಾಡಲಿ. ಪಾದಯಾತ್ರೆ, ಮೆರವಣಿಗೆಗಳಿಗೆ ಅವಕಾಶ ಕೊಟ್ಟು ಜನಸಾಮಾನ್ಯರ ಮೇಲೆ ದೌರ್ಜನ್ಯ ಎಸಗಲು ಹೊರಟಿದ್ದಾರೆ. ಸರ್ಕಾರವನ್ನು ಕೈ ಮುಗಿದು ಕೇಳುತ್ತೇನೆ ಲಾಕ್​ಡೌನ್ ಮಾಡಬೇಡಿ‌ ಅಂತ ಮಂಗಳೂರಿನಲ್ಲಿ ವ್ಯಾಪರಸ್ಥರು ಅಭಿಪ್ರಾಯಪಟ್ಟರು.

ಇನ್ನು ಬೆಂಗಳೂರಿನಲ್ಲಿ ಲಾಕ್​ಡೌನ್ ಮಾತು ಕೇಳುತ್ತಿದ್ದಂತೆ ಜನ ಕೆರಳಿ ಕೆಂಡವಾಗುತ್ತಿದ್ದಾರೆ. ದಿನ ಬೆಳಗ್ಗೆ ಬಂದು ವ್ಯಾಪಾರ ಮಾಡಿದ್ರು ಜೀವನ ನಿರ್ವಹಣೆ ಕಷ್ಟ. ಲಾಕ್​ಡೌನ್ ಮಾಡಿದ್ರೆ ಹೊಟ್ಟೆಗೆ ತಣ್ಣೀರು ಬಟ್ಟೇನೇ ಗತಿ. ವಿಷ ಕುಡಿಯೋದೊಂದೇ ಬಾಕಿ. ನಾವೇ ವ್ಯಾಪಾರ ಇಲ್ಲ ಅಂತಾ ಸಾಯ್ತಾ ಇದ್ದೀವಿ. ಅದ್ರಲ್ಲಿ ಈ ಕೊರೊನಾ, ಲಾಕ್​ಡೌನ್ ಬೇರೆ. ಈಗಾಗಲೇ ಮನೆ ಬಾಡಿಗೆ, ಮಕ್ಕಳ ಶಾಲಾ- ಕಾಲೇಜು ಫೀಸ್ ಕಟ್ಟದೇ ಒದ್ದಾಡುತ್ತಿದ್ದೀವಿ. ಮೈ ತುಂಬ ಸಾಲ ಆಗಿದೆ. ಲಾಕ್​ಡೌನ್ ಮಾಡಿದ್ರೆ ಮನೆ ಬಾಡಿಗೆ ಹೇಗೆ ಕಟ್ಟೋದು? ಅಂತ ವ್ಯಾಪಾಸ್ಥರು ಪ್ರಶ್ನಿಸಿದ್ದಾರೆ.

ಪರ್ಯಾಯ ವ್ಯವಸ್ಥೆಗೆ ಮನವಿ ಸರಕಾರದ ಲಾಕ್​ಡೌನ್​ ಚಿಂತನೆಗೆ ಬೀದರ್​ನಲ್ಲಿ ಹೋಟೆಲ್‌ ಮಾಲೀಕ ಅಸಮಾಧಾನ ಹೊರಹಾಕಿದ್ದಾರೆ. ಈಗಷ್ಟೇ ಹೊಟೇಲ್ ಉದ್ಯಮ ಚೇತರಿಕೆ ‌ಕಾಣುತ್ತಿದೆ. ಸರಕಾರ ‌ಲಾಕ್​ಡೌನ್ ಮಾಡಿದರೆ ಕಷ್ಟ. ಹೊಟೇಲ್ ಬಾಡಿಗೆ, ಕೆಲಸಗಾರರಿಗೆ ಸಂಬಳ ಕೊಡೊದು‌ ಕಷ್ಟವಾಗುತ್ತೆ. ಲಾಕ್​ಡೌನ್ ಬದಲು ಪರ್ಯಾಯ ವ್ಯವಸ್ಥೆ ‌ಮಾಡಿ ಅಂತ ಮನವಿ ಮಾಡಿದರು.

ಇದನ್ನೂ ಓದಿ

ಕೊವಿಡ್​: ಲತಾ ಮಂಗೇಶ್ಕರ್​ ನೋಡಲು ಮನೆಯವರಿಗೂ ಅನುಮತಿ ಇಲ್ಲ; ಖ್ಯಾತ ಗಾಯಕಿಯ ಹೆಲ್ತ್​ ಅಪ್​ಡೇಟ್​​

ಭಗವದ್ಗೀತೆ ಹಿಡಿದು ಬಂದ ಮುಸ್ಲಿಂ ನಟಿ ಉರ್ಫಿ; ‘​ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ’ ಎಂದಿದ್ದೇಕೆ?

Published On - 9:16 am, Wed, 12 January 22