ಐಟಿ-ಬಿಟಿ ಹಬ್ಗಳೇ ಕೊವಿಡ್ಗೆ ಹಾಟ್ ಬೆಡ್ಗಳಾಗಿ ಮಾರ್ಪಾಡು, ಬೆಂಗಳೂರಿನಲ್ಲಿ ಮನೆ ಮಾಡಿದ ಕೊರೊನಾ ಆತಂಕ
ಐಟಿ ಉದ್ಯೋಗಿಗಳು ಹೊರ ರಾಜ್ಯ, ಅಂತರ ರಾಜ್ಯದಿಂದ ಪ್ರಯಾಣದಿಂದಲೇ ಸೋಂಕು ತಗುಲುತ್ತಿದೆ. ಬೆಂಗಳೂರಿನ ಉಳಿದ ಏರಿಯಾಗಳಿಗೂ ಈ ವಯಲದಿಂದಲೇ ಕಂಟಕ ಹೊತ್ತುತರಲಿದೆಯಾ ಎಂಬುದು ಸದ್ಯದ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು: ಬೆಂಗಳೂರಿನ ಶೇ. 50 ರಷ್ಟು ಕೊವಿಡ್ ಪ್ರಕರಣಗಳು ಐಟಿ-ಬಿಟಿ ವಯಲದಲ್ಲೇ ಪತ್ತೆಯಾಗಿವೆ! ಐಟಿ-ಬಿಟಿ ಹಬ್ಗಳೇ ಕೊವಿಡ್ಗೆ ಹಾಟ್ಬೆಡ್ಗಳಾಗಿ ಮಾರ್ಪಾಡು ಆಯಿತಾ ಎಂಬ ಆತಂಕ ಕಾಡತೊಡಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಪೂರ್ವ ವಯಲಗಳಲ್ಲಿ ಕೊವಿಡ್ ಕೇಸ್ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದೆ. ಈ ವಲಯಗಳಲ್ಲಿ ಹೊರ ರಾಜ್ಯಗಳ ಕೂಲಿ ಕಾರ್ಮಿಕರು ಹೆಚ್ಚು. ಜೊತೆಗೆ ಹೊರ ದೇಶ ಮತ್ತು ಅಂತರರಾಜ್ಯ ಪ್ರಯಾಣಿಕರೇ (ಪ್ಲೋಟಿಂಗ್ ಪಾಫುಲೇಶನ್) ಇಲ್ಲಿ ಹೆಚ್ಚಾಗಿ ಬೀಡುಬಿಡುವುದು. ಈ ಕಾರಣಕ್ಕಾಗಿ ಈ ವಲಯಗಳಲ್ಲಿ ನಿತ್ಯ ಡಬಲ್ ಕೇಸ್ಗಳು ದಾಖಲಾಗುತ್ತಿವೆ. ನಿತ್ಯ ಪರೀಕ್ಷೆ ಮಾಡಿದಾಗ ಶೇ. 60 ರಷ್ಟು ಮಂದಿಗೆ ಸೋಂಕು ಪತ್ತೆಯಾಗುತ್ತಿದೆ.
ಈ ವಯಲಗಳಲ್ಲಿ ಕಳೆದ ಒಂದು ವಾರದಿಂದ 27 ಸಾವಿರಕ್ಕೂ ಅಧಿಕ ಕೇಸ್ ಪತ್ತೆಯಾಗಿದೆ. ನಗರಕ್ಕೆ ಸಿಲಿಕಾನ್ ಸಿಟಿ ಎಂದು ಖ್ಯಾತಿ ತಂದು ಕೊಟ್ಟಿರೋ ಭಾಗಗಳಿಂದಲೇ ಕುತ್ತು ಬಂದಿದೆ. ಬೆಂಗಳೂರಿನ ಶೇ. 70 ರಷ್ಟು ಐಟಿ-ಬಿಟಿ ಕಂಪನಿಗಳು ಇದೇ ಭಾಗದಲ್ಲಿವೆ. ಪ್ರತಿಷ್ಠಿತ ಐಟಿ-ಬಿಟಿ ಕಂಪನಿಗಳಿಂದಲೇ ಸಿಟಿಗೆ ಕಂಟಕ ಫಿಕ್ಸ್ ಆಗಿದೆಯಾ ಎಂಬ ಆತಕ ಮನೆಮಾಡಿದೆ.
ಐಟಿ ಉದ್ಯೋಗಿಗಳು ಹೊರ ರಾಜ್ಯ, ಅಂತರ ರಾಜ್ಯದಿಂದ ಪ್ರಯಾಣದಿಂದಲೇ ಸೋಂಕು ತಗುಲುತ್ತಿದೆ. ಬೆಂಗಳೂರಿನ ಉಳಿದ ಏರಿಯಾಗಳಿಗೂ ಈ ವಯಲದಿಂದಲೇ ಕಂಟಕ ಹೊತ್ತುತರಲಿದೆಯಾ ಎಂಬುದು ಸದ್ಯದ ಆತಂಕಕ್ಕೆ ಕಾರಣವಾಗಿದೆ. ಉದ್ಯೋಗ ಅರಸಿ ಬಂದ ಹೊರ ರಾಜ್ಯದ ಕೂಲಿ ಕಾರ್ಮಿಕರಿಂದಲೂ ಹೆಚ್ಚು ಆಪತ್ತು ಒದಗುತ್ತಿದೆ. ಬೆಂಗಳೂರಿನಲ್ಲಿ ಮಹಾದೇವಪುರ ವಿಧಾನಸಭಾ ಕ್ಷೇತ್ರವೇ ಕೋವಿಡ್ ಟಾಪ್ ಒನ್ ಕ್ಷೇತ್ರವಾಗಿ ಮುಂದುವರಿದಿದೆ.
8 ವಲಯದಲ್ಲಿ ಜನವರಿ 11 ಪಾಸಿಟಿವಿಟಿ ರೇಟ್ ಮತ್ತು ಸೋಂಕಿತರ ಸಂಖ್ಯೆ ಹೀಗಿದೆ
ವಲಯ ಕೇಸ್ ಪಾಸಿಟಿವಿಟಿ ರೇಟ್
ಪೂರ್ವ ವಲಯ – 1257 – 9.51%
ದಕ್ಷಿಣ – 1173 – 9.13%
ಮಹದೇವಪುರ – 1250 – 7.97%
ದಾಸರಹಳ್ಳಿ – 144 – 7.46%
ಆರ್ ಆರ್ ನಗರ – 517 – 7.75%
ಪಶ್ಚಿಮ – 893 – 7.2%
ಯಲಹಂಕ – 470 – 6.31%
ಬೊಮ್ಮನಹಳ್ಳಿ – 786 – 5.88%