ಕೊವಿಡ್​ ಪರೀಕ್ಷಾ ವರದಿ ಪರಿಶೀಲನೆಗೆ​ ಇಲ್ಲಿದೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಯುಆರ್​ಎಲ್​ ಬಳಸಿ ನೀವು ನಿಮ್ಮ ಕೊವಿಡ್​ ಪರೀಕ್ಷಾ ವರದಿಯನ್ನು ಮನೆಗಳಲ್ಲಿ ಕುಳಿತೇ ನೋಡಬಹುದು.​ ಪರೀಕ್ಷಾ ವರದಿಯನ್ನು ಡೌನ್​ಲೋಡ್​ ಮಾಡಲು ಕೂಡ ಅವಕಾಶ ಇದೆ.

ಕೊವಿಡ್​ ಪರೀಕ್ಷಾ ವರದಿ ಪರಿಶೀಲನೆಗೆ​ ಇಲ್ಲಿದೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್
ಪ್ರಾತಿನಿಧಿಕ ಚಿತ್ರ

ದೆಹಲಿ: ಭಾರತದಲ್ಲಿ ಕೊರೊನಾ ಮೂರನೇ ಅಲೆ ತೀವ್ರತೆ ಪಡೆಯುತ್ತಿದೆ ಹಾಗೂ ಒಮಿಕ್ರಾನ್ (omicron)​ ರೂಪಾಂತರಿಯ ಅಪಾಯಕಾರಿ ವರ್ತನೆ ಬಗ್ಗೆ ತಜ್ಞರು ಎಚ್ಚರಿಸಿರುವುದರಿಂದ ಲಸಿಕೆ ವಿತರಣೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಅಲ್ಲದೇ ಕೊರೊನಾ ಮೂರನೇ ಅಲೆಯ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಜನವರಿ 3 ರಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುತ್ತಿದೆ. ಜತೆಗೆ ಮೂರನೇ ಡೋಸ್​ ಅಥವಾ ಬೂಸ್ಟರ್​ ಡೋಸ್ (Booster dose)  ಕೂಡ ಜನವರಿ 10ರಿಂದ ನೀಡಲಾಗುತ್ತಿದೆ. ಇದೀಗ ಕೊವಿಡ್​ ಪರೀಕ್ಷಾ ವರದಿಯನ್ನು ನೋಡಲು ಮತ್ತು ವರದಿಯನ್ನು ಮುದ್ರಿಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ವೆಬ್​ಸೈಟ್​ ಬಿಡುಗಡೆ ಮಾಡಿದೆ.

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಯುಆರ್​ಎಲ್​ ಬಳಸಿ ನೀವು ನಿಮ್ಮ ಕೊವಿಡ್​ ಪರೀಕ್ಷಾ ವರದಿಯನ್ನು ಮನೆಗಳಲ್ಲಿ ಕುಳಿತೇ ನೋಡಬಹುದು.​ ಪರೀಕ್ಷಾ ವರದಿಯನ್ನು ಡೌನ್​ಲೋಡ್​ ಮಾಡಲು ಕೂಡ ಅವಕಾಶ ಇದೆ.

ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಯುಆರ್​ಎಲ್​:

http://covid.karnataka.gov.in/service1

ಕರ್ನಾಟಕ ರಾಜ್ಯ ಕೊವಿಡ್ ವಾರ್ ರೂಮ್ ಹೆಸರಿನಲ್ಲಿ ಈ ವೆಬ್​ಸೈಟ್​ ಇದ್ದು, ನಿಮ್ಮ ಮೊಬೈಲ್​ ನಂಬರ್, 13 ಡಿಜಿಟ್​ನ ಎಸ್​ಆರ್​ಎಫ್ (SRF)​ ಐಡಿ ಹಾಕಿ. ನಿಮ್ಮನ್ನು ಪರೀಕ್ಷಿಸಿದ ಲ್ಯಾಬ್ ಫಲಿತಾಂಶವನ್ನು ಐಸಿಎಂಆರ್​ ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದ ನಂತರ ನಿಮ್ಮ ಕೊವಿಡ್​ ಪರೀಕ್ಷಾ ವರದಿಯು ಲಭ್ಯವಾಗುತ್ತದೆ. ಒಂದು ವೇಳೆ ನಿಮ್ಮ ಕೊವಿಡ್​ ಪರೀಕ್ಷಾ ವರದಿಯನ್ನು ತೋರಿಸದಿದ್ದರೆ ನಿಮ್ಮ ಫಲಿತಾಂಶವನ್ನು ಭಾರತ ಸರ್ಕಾರದ ಐಸಿಎಂಆರ್ (ICMR) ಪೋರ್ಟಲ್‌ಗೆ ಅಪ್‌ಲೋಡ್ ಮಾಡಲು ನೀವು ಪರೀಕ್ಷಿಸಿದ ಲ್ಯಾಬ್ ಅನ್ನು ಸಂಪರ್ಕಿಸಬಹುದು.

ಬೂಸ್ಟರ್​ ಡೋಸ್​ ಲಸಿಕೆ ಪಡೆಯುವ ಬಗ್ಗೆ ಗೊಂದಲ ಇದೆಯೇ?

ಜ. 10 ರಿಂದ 60 ವರ್ಷದ ಮೇಲ್ಪಟ್ಟವರಿಗೆ ಬೂಸ್ಟರ್​​ ಡೋಸ್​ ನೀಡಲಾಗುತ್ತದೆ. ಕೊವಿಡ್​ ವಾರಿಯರ್ಸ್, ಹೆಲ್ತ್ ವರ್ಕರ್ಸ್​ಗೆ ಬೂಸ್ಟರ್​ ಡೋಸ್​ ನೀಡಲಾಗುತ್ತಿದೆ. ಹಾಗಿದ್ದರೆ ಬೂಸ್ಟರ್​ ಡೋಸ್​ ಪಡೆಯಲು ನೀವು ಅರ್ಹರಾಗಿದ್ದು, ಈ ಬಗ್ಗೆ ಮಾಹಿತಿ ಕೊರತೆ ಇದ್ದರೆ ಸುಲಭವಾಗಿ ಈ ವೆಬ್​ಸೈಟ್​ ಮೂಲಕ ಬೂಸ್ಟರ್​ ಡೋಸ್​ ಬಗ್ಗೆ ಮಾಹಿತಿ ಪಡೆಯಿರಿ. ಈ ಕೆಳಕಂಡ ಯುಆರ್​ಎಲ್​ಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ನೀವು ಬೂಸ್ಟರ್ ಲಸಿಕೆ ಪಡೆಯಲು ಎಷ್ಟು ದಿನಗಳು ಉಳಿದಿವೆ ಎಂಬುದನ್ನು ಕಂಡುಕೊಳ್ಳಿ.

ಬೂಸ್ಟರ್​ ಡೋಸ್​ ಬಗೆಗಿನ ಮಾಹಿತಿಗಾಗಿ ಈ ಯುಆರ್​ಎಲ್​ ಚೆಕ್​ ಮಾಡಿ

https://selfregistration.cowin.gov.in/

ಇದನ್ನೂ ಓದಿ: ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ತಪಾಸಣೆ ಮಾಡುವ ಅಗತ್ಯವಿಲ್ಲ; ಹೊಸ ಮಾರ್ಗಸೂಚಿ ಪ್ರಕಟಿಸಿದ ಐಸಿಎಂಆರ್​

PM Modi: ದೇಶದಲ್ಲಿ ಏರಿಕೆಯಾಗುತ್ತಿರುವ ಕೊರೊನಾ, ಒಮಿಕ್ರಾನ್​; ಜ.13ರಂದು ಎಲ್ಲ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ಮೋದಿ ಸಭೆ

Published On - 11:20 am, Wed, 12 January 22

Click on your DTH Provider to Add TV9 Kannada