ಸೋಲಿನಿಂದ ಹತಾಶೆಗೊಂಡಿದ್ದೀರಾ ಈ 5 ಅಭ್ಯಾಸಗಳನ್ನು ಬದಲಾಯಿಸಿ, ಯಶಸ್ಸಿನತ್ತ ಸಾಗಿ

|

Updated on: Apr 04, 2023 | 9:00 AM

ಜೀವನದಲ್ಲಿ ಸೋಲು ಗೆಲುವು ಎಲ್ಲವೂ ಸಾಮಾನ್ಯ, ನೀವು ಸೋಲದಿದ್ದರೆ ಗೆಲುವಿನ ರುಚಿಯನ್ನು ಸವಿಯುವುದಾದರೂ ಹೇಗೆ?. ನೀವು ಸಾಕಷ್ಟು ಹಂತಗಳಲ್ಲಿ ಸೋತಿರಬಹುದು,

ಸೋಲಿನಿಂದ ಹತಾಶೆಗೊಂಡಿದ್ದೀರಾ ಈ 5 ಅಭ್ಯಾಸಗಳನ್ನು ಬದಲಾಯಿಸಿ, ಯಶಸ್ಸಿನತ್ತ ಸಾಗಿ
ಗೆಲುವು
Image Credit source: Healthshots.com
Follow us on

ಜೀವನದಲ್ಲಿ ಸೋಲು ಗೆಲುವು ಎಲ್ಲವೂ ಸಾಮಾನ್ಯ, ನೀವು ಸೋಲದಿದ್ದರೆ ಗೆಲುವಿನ ರುಚಿಯನ್ನು ಸವಿಯುವುದಾದರೂ ಹೇಗೆ?. ನೀವು ಸಾಕಷ್ಟು ಹಂತಗಳಲ್ಲಿ ಸೋತಿರಬಹುದು, ಎಷ್ಟು ಕಷ್ಟ ಪಟ್ಟರೂ ಅಷ್ಟೇ ಫಲ ದೊರಕದು ಎಂದು ಬೇಸರದಲ್ಲಿರಬಹುದು. ಆದರೆ ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಸಫಲತೆಯನ್ನು ಕಾಣಬಹುದು.

ಕೆಟ್ಟ ಕ್ಷಣವು ನಿಮ್ಮ ದಿನವನ್ನು ಹಾಳುಮಾಡಲು ಬಿಡಬೇಡಿ
ಒಂದು ಘಟನೆಯು ದಿನದ ಆರಂಭದಲ್ಲಿ ಸಂಭವಿಸಬಹುದು, ಆದರೆ ಅದರ ಬಗ್ಗೆ ನೀವು ಇಡೀ ದಿನ ಯೋಚಿಸುತ್ತಿರುತ್ತೀರಿ. ಕಚೇರಿಯಲ್ಲಿ ಎಷ್ಟೇ ಕೆಲಸ ಮಾಡಿದರೂ ಉತ್ತಮವಾಗಿ ಕೆಲಸ ಮಾಡುತ್ತೀರಿ ಎಂದು ಚಪ್ಪಾಳೆ ತಟ್ಟದಿರುವುದು ಕೂಡ ನಿಮ್ಮ ಮನಸ್ಸಿನಲ್ಲೆಲ್ಲೋ ಕುಳಿತಿರಬಹುದು.
ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಮೊದಲ ವಿಷಯವೆಂದರೆ ಇಡೀ ದಿನದಲ್ಲಿ ಉತ್ತಮ ಕ್ಷಣಗಳನ್ನು ನೆನಪಿಸಿಕೊಳ್ಳುವುದು.

ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ
ನಿಮ್ಮ ಆಂತರಿಕ ಭಾವನೆಗಳನ್ನು ವ್ಯಕ್ತಪಡಿಸಲು ಕಲಿಯಿರಿ. ಇದನ್ನು ಮಾಡದಿದ್ದರೆ ಮನಸ್ಸಿನಲ್ಲಿ ಹಲವಾರು ರೀತಿಯ ಭಾವನೆಗಳು ಶೇಖರಗೊಳ್ಳುತ್ತವೆ. ಈ ರೀತಿಯ ಅಭಿವ್ಯಕ್ತಿ ನಿಮಗೆ ಬಹಳಷ್ಟು ಹಾನಿ ಮಾಡುತ್ತದೆ. ನೀವು ಕಾಲಕಾಲಕ್ಕೆ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಬೇಕು.

ಮನಸ್ಸಿನ ಮಾತನ್ನು ನಿರ್ಲಕ್ಷಿಸಬೇಡಿ
ಸಾಮಾನ್ಯವಾಗಿ, ಹೆಚ್ಚಿನ ಜನರು ತಮ್ಮ ಮನಸ್ಸಿನ ಮಾತುಗಳನ್ನು ನಿರ್ಲಕ್ಷಿಸುತ್ತಾರೆ. ನಿಮ್ಮ ಆಸಕ್ತಿಯ ಯಾವುದೇ ಕೆಲಸವನ್ನು ನೀವು ಮಾಡಬೇಕಾದರೆ ಅಥವಾ ನಿಮ್ಮ ಆಯ್ಕೆಯ ಏನನ್ನಾದರೂ ಹೇಳಬೇಕಾದರೆ ಅಥವಾ ಆಹಾರವನ್ನು ಸೇವಿಸಬೇಕಾದರೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ. ಮೊದಲು ನಿಮ್ಮ ಮನಸ್ಸಿಗೆ ಪ್ರಾಮುಖ್ಯತೆ ನೀಡಬೇಕು.

ನೀವು ತಿನ್ನುವ ಆಹಾರವೂ ಮುಖ್ಯವಾಗುತ್ತದೆ
ದಿನವಿಡೀ ನೀವು ಏನು ತಿನ್ನುತ್ತೀರಿ ಮತ್ತು ಏನು ಬಳಸುತ್ತೀರಿ ಎಂಬುದರ ಬಗ್ಗೆ ಗಮನ ಕೊಡಿ. ಬಳಸಿದ ವಸ್ತುಗಳು ಅಥವಾ ಆಹಾರ ಪದಾರ್ಥಗಳು ಸಹ ನಿಮ್ಮ ಮೇಲೆ ಬಹಳಷ್ಟು ಪ್ರಭಾವ ಬೀರುತ್ತವೆ. ಸಂಭಾಷಣೆಯ ಸಮಯದಲ್ಲಿ ನೀವು ಯಾವ ಪದಗಳನ್ನು ಬಳಸುತ್ತೀರಿ ಎಂಬುದನ್ನು ಪರಿಶೀಲಿಸಲು ಪ್ರಯತ್ನಿಸಿ.

ಒಂದೇ ಬಾರಿಗೆ ಬದಲಾವಣೆ ಸಾಧ್ಯವಿಲ್ಲ
ಒಂದೇ ಬಾರಿಗೆ ದೊಡ್ಡ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ ನಿಜ. ಇದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕು. ನಿಧಾನವಾಗಿ ನಮ್ಮ ಕೆಟ್ಟ ಅಭ್ಯಾಸಗಳನ್ನು ಕೊನೆಗೊಳಿಸಬೇಕು ಆ ಜಾಗದಲ್ಲಿ ಒಳ್ಳೆಯ ಅಭ್ಯಾಸಗಳನ್ನು ಹುಟ್ಟುವಂತೆ ಮಾಡಬೇಕು. ಆದ್ದರಿಂದ ಗಾಬರಿಯಾಗುವ ಬದಲು ತಾಳ್ಮೆಯಿಂದಿರಿ. ಏಕೆಂದರೆ ಗುರಿಯೆಡೆಗೆ ಇಡುವ ಸಣ್ಣ ಹೆಜ್ಜೆಗಳೇ ದೊಡ್ಡ ಬದಲಾವಣೆಯನ್ನು ತರುತ್ತವೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ