
ತುಳಸಿ ಗಿಡ (Tulsi) ಸರ್ವರೋಗಕ್ಕೆ ಔಷಧಿಯಾಗಿದೆ. ಇದರಲ್ಲಿ ದೈಹಿಕ ಹಾಗೂ ಆರೋಗ್ಯ ಗುಣಗಳು ಇರುತ್ತದೆ. ಧರ್ಮ ಮತ್ತು ವಿಜ್ಞಾನ ಎರಡರ ದೃಷ್ಟಿಕೋನದಿಂದ ಒಳ್ಳೆಯದು. ತುಳಸಿಯ ಪೂಜೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ, ಸಂತೋಷ ಎಲ್ಲವೂ ನೆಲೆಸಿರುತ್ತದೆ. ಜತೆಗೆ ಇದರ ಎಲೆಯಿಂದ ಆರೋಗ್ಯ ಪ್ರಯೋಜನಗಳು ಕೂಡ ಇದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಹಾಗೂ ಈ ಮಕ್ಕಳಲ್ಲಿ ಶೀತ ಮತ್ತು ಜ್ವರ ಬಂದ ಸಂದರ್ಭದಲ್ಲಿ ಅವರಿಗೆ ಕಷಾಯದ ರೂಪದಲ್ಲಿ ನೀಡುತ್ತಾರೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಹಾಗಾಗಿ ಇದರ ಎಲೆಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಾರೆ. ಆದರೆ ಈ ಅಭ್ಯಾಸ ಹಾನಿಕಾರಕ ಎಂದು ಹೇಳಲಾಗಿದೆ. ತುಳಸಿಯಲ್ಲಿ ಆರೋಗ್ಯ ಪ್ರಯೋಜನಗಳು ಇದೆ. ತುಳಸಿ ತಿನ್ನಬಾರದು ಎಂದು ಹೇಳುತ್ತಿಲ್ಲ. ಆದರೆ ಅದನ್ನು ಅಗಿದು ತಿನ್ನುವುದರಿಂದ ಅನೇಕ ಅಪಾಯಗಳು ಇವೆ. ಒಂದು ವೇಳೆ ಅದನ್ನು ಅಗಿದರು ತಿಂದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಕೆಲವೊಂದು ಅಂಶಗಳನ್ನು ಇಲ್ಲಿ ತಿಳಿಸಲಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ