ಫ್ರಿಜ್ ಎಂದಾಕ್ಷಣ ನೆನಪಿಗೆ ಬರುವುದು ಹಾಲು, ಮೊಸರು, ಹಣ್ಣುಗಳು, ತರಕಾರಿ, ಚಾಕೊಲೇಟ್ಗಳು ಐಸ್ಕ್ರೀಂಗಳು ಹಾಗೂ ಒಂದಿಷ್ಟು ಜ್ಯೂಸ್ ಬಾಟಲಿಗಳು. ಆದರೆ ಇವುಗಳಲ್ಲೇ ಕೆಲವನ್ನು ಫ್ರಿಜ್ನಲ್ಲಿ ಇಡಲೇಬಾರದು, ಇವುಗಳಿಂದ ಹರಡುವ ಗಬ್ಬು ವಾಸನೆಯು ಇಡೀ ಫ್ರಿಜ್ನ್ನೇ ಆವರಿಸುತ್ತದೆ.
ಸಾಮಾನ್ಯವಾಗಿ ಜನರು ತಮ್ಮ ಫ್ರಿಜ್ ಅನ್ನು ವಾಡಿಕೆಯಂತೆ ಸ್ವಚ್ಛಗೊಳಿಸುತ್ತಾರೆ. ಫ್ರಿಜ್ ಸರಿಯಾಗಿ ಕಾರ್ಯನಿರ್ವಹಿಸಲು ಇಷ್ಟು ಸಾಕು ಎಂದು ಭಾವಿಸುತ್ತಾರೆ.
ಆದರೆ ಇದು ತಪ್ಪು. ಫ್ರಿಜ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಲೀನ್‌ಗಿಂತ ಕಾಳಜಿವಹಿಸುವುದು ಮುಖ್ಯವಾಗುತ್ತದೆ.
ಫ್ರಿಜ್ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ
ಪೇರಲೆ ಹಣ್ಣು: ಇದನ್ನು ಸೀಬೆ ಹಣ್ಣು ಎಂದೂ ಕರೆಯುತ್ತಾರೆ, ಪೇರಲೆ ಹಣ್ಣನ್ನು ಹೆಚ್ಚು ದಿನ ಫ್ರಿಜ್ನಲ್ಲಿಡುವುದರಿಂದ ಅದರಿಂದ ಕೆಟ್ಟ ವಾಸನೆಯು ಉತ್ಪತ್ತಿಯಾಗಿ, ಇಡೀ ಫ್ರಿಜ್ ಗಬ್ಬುವಾಸನೆ ತುಂಬಿಕೊಳ್ಳುತ್ತದೆ.
ಕತ್ತರಿಸಿದ ಮೊಸರಿನ ಪ್ಯಾಕೇಟ್: ಮೊಸರಿನ ಪ್ಯಾಕೇಟ್ ಅನ್ನು ಕತ್ತರಿಸಿ, ಸ್ವಲ್ಪ ಬಳಸಿ ಇನ್ನೂ ಸ್ವಲ್ಪ ಮೊಸರಿರುವ ಪ್ಯಾಕೇಟ್ ಅನ್ನು ಹಾಗೆಯೇ ಫ್ರಿಜ್ನಲ್ಲಿಡಬೇಡಿ, ಬರುದಿನವೇ ಅದನ್ನು ಬಳಕೆ ಮಾಡಿದರೆ ಓಕೆ ಆದರೆ ಒಂದೊಮ್ಮೆ ಮರೆತರೆ ಅಥವಾ ಅದರ ಹನಿಗಳು ಫ್ರಿಜ್ ಒಳಗೆ ಬಿದ್ದಿದ್ದರೆ ದುರ್ಗಂಧ ಬರುತ್ತದೆ.
ಹಸಿ ಈರುಳ್ಳಿ ಹಾಕಿ ಮಾಡಿದ ಮೊಸರಿನ ಪದಾರ್ಥ: ಹಸಿ ಈರುಳ್ಳಿಯನ್ನು ಬಳಸಿ ತಯಾರಿಸಿದ ಮೊದರಿನ ಪದಾರ್ಥವನ್ನು ಕೂಡ ಫ್ರಿಜ್ನಲ್ಲಿಡಬೇಡಿ, ಫ್ರಿಜ್ ಒಳಗೆ ಗಾಳಿಯಾಡದ ಕಾರಣ ಕೆಟ್ಟ ವಾಸನೆಯನ್ನುಂಟು ಮಾಡುತ್ತದೆ.
ಕೊಳೆತ ತರಕಾರಿಗಳು: ಫ್ರಿಜ್ನಲ್ಲಿಟ್ಟರೆ ತರಕಾರಿಗಳು ಕೊಳೆಯುವುದಿಲ್ಲ ಎನ್ನುವ ಭ್ರಮೆಯಲ್ಲಿರಬೇಡಿ, ತರಕಾರಿಗಳು ಹೊರಗಡೆ ಇಟ್ಟಾಗ ಬಾಲಿಕೆ ಬರುವುದಕ್ಕಿಂತ ಹೆಚ್ಚು ದಿನ ಬಾಳಿಕೆ ಬರುತ್ತದೆ ಆದರೆ ಫ್ರಿಜ್ನಲ್ಲಿಯೂ ತರಕಾರಿಗಳು ಕೊಳೆಯುತ್ತವೆ. ಟೊಮೆಟೊ, ಬೀನ್ಸ್, ಬೆಂಡೆಕಾಯಿ ಸೇರಿದಂತೆ ಇತರೆ ತರಕಾರಿಗಳು ಕೊಳೆತಾಗಲೂ ಕೆಟ್ಟ ವಾಸನೆ ಬರುತ್ತದೆ. ಹೀಗಾಗಿ ಪದೇ ಪದೇ ತರಕಾರಿಗಳನ್ನು ಚೆಕ್ ಮಾಡುತ್ತಿರಿ.
ಫ್ರಿಜ್ನಿಂದ ವಾಸನೆ ಬಾರದಂತೆ ತಡೆಯುವುದು ಹೇಗೆ?
ಕ್ಲೀನಿಂಗ್ : ನಿಮ್ಮ ಫ್ರಿಜ್ ಅನ್ನು ಪದೇ ಪದೇ ಕ್ಲೀನ್ ಮಾಡುವುದು ಪ್ರಮುಖವಾಗುತ್ತದೆ. ಬೇಡದ ಪದಾರ್ಥಗಳನ್ನು ಎಸೆಯಬೇಕು. ಕೊಳೆತ ಹಣ್ಣುಗಳನ್ನು ಅಲ್ಲಿಯೇ ಇಡಬಾರದು.
ಕಾಫಿ : ಒಂದೊಮ್ಮೆ ಫ್ರಿಜ್ನಿಂದ ವಾಸನೆ ಬರುತ್ತಿದ್ದರೆ ನೀವು ಕಾಫಿಪುಡಿಯನ್ನು ಫ್ರಿಜ್ ಒಳಗಿರಿಸಿ, ಆ ಪರಿಮಳವು ವಾಸನೆಯನ್ನು ದೂರ ಮಾಡುತ್ತದೆ.
ಅಡುಗೆ ಸೋಡಾ: ಫ್ರಿಜ್ ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ನಿಮಗೆ ಅಡುಗೆ ಸೋಡಾ ಕೂಡ ಸಹಾಯ ಮಾಡುತ್ತದೆ. ಒಂದು ಬೌಲ್ ನಲ್ಲಿ ಅಡುಗೆ ಸೋಡಾವನ್ನು ಹಾಕಿ. ಅಡುಗೆ ಸೋಡಾ ಹಾಕಿದ ಬೌಲನ್ನು ನೀವು ಫ್ರಿಜ್ ನಲ್ಲಿ ಇಡಬೇಕು.
ಆಪಲ್ ಸೈಡರ್ ವಿನೆಗರ್ : ಫ್ರಿಜ್ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ಆ್ಯಪಲ್ ಸೈಡರ್ ವಿನೆಗರ್ ಬಳಕೆ ಮಾಡಬಹುದು. ಆಪಲ್ ಸೈಡರ್ ವಿನೆಗರ್ ಅನ್ನು ನೀರಿಗೆ ಸೇರಿಸಿ ಮತ್ತು ಅದನ್ನು ಕುದಿಸಿ. ಅದು ಕುದಿಯಲು ಪ್ರಾರಂಭಿಸಿದ ತಕ್ಷಣ ಗ್ಯಾಸ್ ಆಫ್ ಮಾಡಿ. ನಂತರ ಕುದಿಸಿದ ಆಪಲ್ ಸೈಡ್ ವಿನೆಗರನ್ನು ಒಂದು ಗಾಜಿನ ಬೌಲ್ ಗೆ ಹಾಕಿ.
ನಿಂಬೆ ಹಣ್ಣು : ಕತ್ತರಿಸಿದ ನಿಂಬೆಹಣ್ಣಿಗೆ ಲವಂಗವನ್ನು ಚುಚ್ಚಿ, ಫ್ರಿಜ್ನ ನಾಲ್ಕು ಮೂಲೆಗಳಲ್ಲಿ ಇಡಿ ಆಗ ವಾಸನೆ ದೂರವಾಗುವುದು.
Published On - 3:43 pm, Mon, 18 July 22