Father’s Role In Parenting: ತಂದೆ ಹಾಗೂ ಮಗುವಿನ ನಡುವೆ ಬಾಂಧವ್ಯ ಶುರುವಾಗುವುದು ಯಾವಾಗ?

ತಮಗೊಂದು ಮುದ್ದಾದ ಮಗು ಬೇಕು ಎಂಬುದು ಪ್ರತಿಯೊಬ್ಬ ದಂಪತಿಯ ಕನಸಾಗಿರುತ್ತದೆ. ಮಗುವನ್ನು ಪಡೆಯುವ ನಿರ್ಧಾರದ ಕುರಿತು ಪತಿ,ಪತ್ನಿ ಇಬ್ಬರೂ ಕುಳಿತು ಮಾತನಾಡಬೇಕು.

Father's Role In Parenting: ತಂದೆ ಹಾಗೂ ಮಗುವಿನ ನಡುವೆ ಬಾಂಧವ್ಯ ಶುರುವಾಗುವುದು ಯಾವಾಗ?
Father's Role In Parenting
Follow us
TV9 Web
| Updated By: ನಯನಾ ರಾಜೀವ್

Updated on:Jul 20, 2022 | 3:14 PM

ತಮಗೊಂದು ಮುದ್ದಾದ ಮಗು ಬೇಕು ಎಂಬುದು ಪ್ರತಿಯೊಬ್ಬ ದಂಪತಿಯ ಕನಸಾಗಿರುತ್ತದೆ. ಮಗುವನ್ನು ಪಡೆಯುವ ನಿರ್ಧಾರದ ಕುರಿತು ಪತಿ,ಪತ್ನಿ ಇಬ್ಬರೂ ಕುಳಿತು ಮಾತನಾಡಬೇಕು. ತಂದೆ ಹಾಗೂ ಮಗುವಿನ ಬಾಂಧವ್ಯದ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್  ನೀಡಿರುವ ಮಾಹಿತಿ ಇಲ್ಲಿದೆ. ಕೇವಲ ಮಗುವನ್ನು ಪಡೆಯುವ ಬಗ್ಗೆ ಮಾತ್ರವಲ್ಲ, ನಿಮ್ಮ ಪತ್ನಿಗೆ ಯಾವ ರೀತಿ ಹೆರಿಗೆ ಮಾಡಿಸಿಕೊಳ್ಳುವುದು ಇಷ್ಟ, ಹೆರಿಗೆಯ ಬಗ್ಗೆ ಯಾವ ರೀತಿ ಭಯ ಆಕೆಯ ಮನಸ್ಸಿನಲ್ಲಿದೆ ಎಂಬುದನ್ನು ತಿಳಿದುಕೊಳ್ಳಿ, ಹಾಗೆಯೇ ಆಕೆಯ ನಂಬಿಕೆಯನ್ನೂ ಗೌರವಿಸುವುದು ಮುಖ್ಯವಾಗುತ್ತದೆ.

ಹಾಗೆಯೇ ಯಾವ ರೀತಿಯ ಹೆರಿಗೆಯಿಂದ ಯಾವ ಪ್ರಯೋಜನವಾಗುತ್ತದೆ, ಯಾವ ರೀತಿಯ ಸಮಸ್ಯೆಗಳು ಕಾಡಬಹುದು ಎಂಬುದನ್ನು ಮೊದಲೇ ನಿರ್ಧರಿಸಿ. ಹಾಗೆಯೇ ಮಗು ಹಾಗೂ ತಾಯಿಯ ನಡುವೆ ಇದ್ದಂತೆಯೇ ಮಗು ಹಾಗೂ ತಂದೆಯ ನಡುವೆಯೂ ಬಾಂಧವ್ಯ ಇರುತ್ತದೆ. ಹೆರಿಗೆಯಾದ ತಕ್ಷಣವೇ ಮಗುವನ್ನು ಎತ್ತಿಕೊಳ್ಳಿ.

ಇದು ಕೇವಲ ಕರ್ತವ್ಯವಲ್ಲ ಜೀವನಪೂರ್ತಿ ಹಸಿರಾಗಿ ಉಳಿಯುವ ನೆನಪುಗಳ ಜತೆಗೆ ನಿಮ್ಮ ಹಾಗೂ ನಿಮ್ಮ ಮಗುವಿನ ಬಾಂಧವ್ಯ ಅಲ್ಲಿಂದಲೇ ಗಟ್ಟಿಯಾಗುತ್ತಾ ಹೋಗುತ್ತದೆ.

ಮತ್ತಷ್ಟು ಓದಿ

ಮಗುವನ್ನು ಮೊದಲು ಎತ್ತಿಕೊಂಡಾಗ ಆಗುವ ಖುಷಿಯೇ ಬೇರೆ, ಆದರೆ ಕೆಲವು ತಂದೆಯಂದಿರಿಗೆ ಭಯ, ಮಗುವನ್ನು  ಎತ್ತಿಕೊಳ್ಳುವುದು ಸರಿಯಾಗದಿದ್ದರೆ ಮಗುವಿಗೇನಾದರೂ ತೊಂದರೆಯಾದರೆ ಎಂಬುದು, ಆದರೆ ಆ ಭಯದಲ್ಲಿ ನಿಮಗೆ ಸಿಗುವ ಅವಕಾಶವನ್ನು ಮಿಸ್​ ಮಾಡಿಕೊಳ್ಳಬೇಡಿ. ಧೈರ್ಯವಿರಲಿ, ಒಮ್ಮೆ ನಿಮ್ಮ ಕೈಯಲ್ಲಿ ಮಗುವನ್ನು ಎತ್ತಿಕೊಂಡು ನೋಡಿ ಆಗ ನಿಮಗಾಗುವ ಖುಷಿಯೇ ಬೇರೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.

Published On - 11:02 am, Mon, 18 July 22

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ