AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಸನೆ ಹರಡುವ ಈ ಪದಾರ್ಥಗಳನ್ನು ಫ್ರಿಜ್​ನಲ್ಲಿ ಇಡಲೇಬೇಡಿ

ಫ್ರಿಜ್ ಎಂದಾಕ್ಷಣ ನೆನಪಿಗೆ ಬರುವುದು ಹಾಲು, ಮೊಸರು, ಹಣ್ಣುಗಳು, ತರಕಾರಿ, ಚಾಕೊಲೇಟ್​ಗಳು ಐಸ್​ಕ್ರೀಂಗಳು ಹಾಗೂ ಒಂದಿಷ್ಟು ಜ್ಯೂಸ್ ಬಾಟಲಿಗಳು. ಆದರೆ ಇವುಗಳಲ್ಲೇ ಕೆಲವನ್ನು ಫ್ರಿಜ್​ನಲ್ಲಿ ಇಡಲೇಬಾರದು, ಇವುಗಳಿಂದ ಹರಡುವ ಗಬ್ಬು ವಾಸನೆಯು ಇಡೀ ಫ್ರಿಜ್​ನ್ನೇ ಆವರಿಸುತ್ತದೆ.

ವಾಸನೆ ಹರಡುವ ಈ ಪದಾರ್ಥಗಳನ್ನು ಫ್ರಿಜ್​ನಲ್ಲಿ ಇಡಲೇಬೇಡಿ
Fridge
TV9 Web
| Updated By: ನಯನಾ ರಾಜೀವ್|

Updated on:Jul 18, 2022 | 3:47 PM

Share

ಫ್ರಿಜ್ ಎಂದಾಕ್ಷಣ ನೆನಪಿಗೆ ಬರುವುದು ಹಾಲು, ಮೊಸರು, ಹಣ್ಣುಗಳು, ತರಕಾರಿ, ಚಾಕೊಲೇಟ್​ಗಳು ಐಸ್​ಕ್ರೀಂಗಳು ಹಾಗೂ ಒಂದಿಷ್ಟು ಜ್ಯೂಸ್ ಬಾಟಲಿಗಳು. ಆದರೆ ಇವುಗಳಲ್ಲೇ ಕೆಲವನ್ನು ಫ್ರಿಜ್​ನಲ್ಲಿ ಇಡಲೇಬಾರದು, ಇವುಗಳಿಂದ ಹರಡುವ ಗಬ್ಬು ವಾಸನೆಯು ಇಡೀ ಫ್ರಿಜ್​ನ್ನೇ ಆವರಿಸುತ್ತದೆ. ಸಾಮಾನ್ಯವಾಗಿ ಜನರು ತಮ್ಮ ಫ್ರಿಜ್ ಅನ್ನು ವಾಡಿಕೆಯಂತೆ ಸ್ವಚ್ಛಗೊಳಿಸುತ್ತಾರೆ. ಫ್ರಿಜ್ ಸರಿಯಾಗಿ ಕಾರ್ಯನಿರ್ವಹಿಸಲು ಇಷ್ಟು ಸಾಕು ಎಂದು ಭಾವಿಸುತ್ತಾರೆ.

ಆದರೆ ಇದು ತಪ್ಪು. ಫ್ರಿಜ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಲೀನ್‌ಗಿಂತ ಕಾಳಜಿವಹಿಸುವುದು ಮುಖ್ಯವಾಗುತ್ತದೆ.

ಫ್ರಿಜ್​ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ ಪೇರಲೆ ಹಣ್ಣು: ಇದನ್ನು ಸೀಬೆ ಹಣ್ಣು ಎಂದೂ ಕರೆಯುತ್ತಾರೆ, ಪೇರಲೆ ಹಣ್ಣನ್ನು ಹೆಚ್ಚು ದಿನ ಫ್ರಿಜ್​ನಲ್ಲಿಡುವುದರಿಂದ ಅದರಿಂದ ಕೆಟ್ಟ ವಾಸನೆಯು ಉತ್ಪತ್ತಿಯಾಗಿ, ಇಡೀ ಫ್ರಿಜ್​ ಗಬ್ಬುವಾಸನೆ ತುಂಬಿಕೊಳ್ಳುತ್ತದೆ.

ಕತ್ತರಿಸಿದ ಮೊಸರಿನ ಪ್ಯಾಕೇಟ್: ಮೊಸರಿನ ಪ್ಯಾಕೇಟ್​ ಅನ್ನು ಕತ್ತರಿಸಿ, ಸ್ವಲ್ಪ ಬಳಸಿ ಇನ್ನೂ ಸ್ವಲ್ಪ ಮೊಸರಿರುವ ಪ್ಯಾಕೇಟ್​ ಅನ್ನು ಹಾಗೆಯೇ ಫ್ರಿಜ್​ನಲ್ಲಿಡಬೇಡಿ, ಬರುದಿನವೇ ಅದನ್ನು ಬಳಕೆ ಮಾಡಿದರೆ ಓಕೆ ಆದರೆ ಒಂದೊಮ್ಮೆ ಮರೆತರೆ ಅಥವಾ ಅದರ ಹನಿಗಳು ಫ್ರಿಜ್​ ಒಳಗೆ ಬಿದ್ದಿದ್ದರೆ ದುರ್ಗಂಧ ಬರುತ್ತದೆ.

ಹಸಿ ಈರುಳ್ಳಿ ಹಾಕಿ ಮಾಡಿದ ಮೊಸರಿನ ಪದಾರ್ಥ: ಹಸಿ ಈರುಳ್ಳಿಯನ್ನು ಬಳಸಿ ತಯಾರಿಸಿದ ಮೊದರಿನ ಪದಾರ್ಥವನ್ನು ಕೂಡ ಫ್ರಿಜ್​ನಲ್ಲಿಡಬೇಡಿ, ಫ್ರಿಜ್​ ಒಳಗೆ ಗಾಳಿಯಾಡದ ಕಾರಣ ಕೆಟ್ಟ ವಾಸನೆಯನ್ನುಂಟು ಮಾಡುತ್ತದೆ.

ಕೊಳೆತ ತರಕಾರಿಗಳು: ಫ್ರಿಜ್​ನಲ್ಲಿಟ್ಟರೆ ತರಕಾರಿಗಳು ಕೊಳೆಯುವುದಿಲ್ಲ ಎನ್ನುವ ಭ್ರಮೆಯಲ್ಲಿರಬೇಡಿ, ತರಕಾರಿಗಳು ಹೊರಗಡೆ ಇಟ್ಟಾಗ ಬಾಲಿಕೆ ಬರುವುದಕ್ಕಿಂತ ಹೆಚ್ಚು ದಿನ ಬಾಳಿಕೆ ಬರುತ್ತದೆ ಆದರೆ ಫ್ರಿಜ್​ನಲ್ಲಿಯೂ ತರಕಾರಿಗಳು ಕೊಳೆಯುತ್ತವೆ. ಟೊಮೆಟೊ, ಬೀನ್ಸ್, ಬೆಂಡೆಕಾಯಿ ಸೇರಿದಂತೆ ಇತರೆ ತರಕಾರಿಗಳು ಕೊಳೆತಾಗಲೂ ಕೆಟ್ಟ ವಾಸನೆ ಬರುತ್ತದೆ. ಹೀಗಾಗಿ ಪದೇ ಪದೇ ತರಕಾರಿಗಳನ್ನು ಚೆಕ್ ಮಾಡುತ್ತಿರಿ.

ಫ್ರಿಜ್​ನಿಂದ ವಾಸನೆ ಬಾರದಂತೆ ತಡೆಯುವುದು ಹೇಗೆ? ಕ್ಲೀನಿಂಗ್ : ನಿಮ್ಮ ಫ್ರಿಜ್​ ಅನ್ನು ಪದೇ ಪದೇ ಕ್ಲೀನ್ ಮಾಡುವುದು ಪ್ರಮುಖವಾಗುತ್ತದೆ. ಬೇಡದ ಪದಾರ್ಥಗಳನ್ನು ಎಸೆಯಬೇಕು. ಕೊಳೆತ ಹಣ್ಣುಗಳನ್ನು ಅಲ್ಲಿಯೇ ಇಡಬಾರದು.

ಕಾಫಿ : ಒಂದೊಮ್ಮೆ ಫ್ರಿಜ್​ನಿಂದ ವಾಸನೆ ಬರುತ್ತಿದ್ದರೆ ನೀವು ಕಾಫಿಪುಡಿಯನ್ನು ಫ್ರಿಜ್​ ಒಳಗಿರಿಸಿ, ಆ ಪರಿಮಳವು ವಾಸನೆಯನ್ನು ದೂರ ಮಾಡುತ್ತದೆ.

ಅಡುಗೆ ಸೋಡಾ: ಫ್ರಿಜ್ ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ನಿಮಗೆ ಅಡುಗೆ ಸೋಡಾ ಕೂಡ ಸಹಾಯ ಮಾಡುತ್ತದೆ. ಒಂದು ಬೌಲ್ ನಲ್ಲಿ ಅಡುಗೆ ಸೋಡಾವನ್ನು ಹಾಕಿ. ಅಡುಗೆ ಸೋಡಾ ಹಾಕಿದ ಬೌಲನ್ನು ನೀವು ಫ್ರಿಜ್ ನಲ್ಲಿ ಇಡಬೇಕು.

ಆಪಲ್ ಸೈಡರ್ ವಿನೆಗರ್ : ಫ್ರಿಜ್​ನಿಂದ ಬರುವ ವಾಸನೆಯನ್ನು ಹೋಗಲಾಡಿಸಲು ಆ್ಯಪಲ್ ಸೈಡರ್ ವಿನೆಗರ್ ಬಳಕೆ ಮಾಡಬಹುದು. ಆಪಲ್ ಸೈಡರ್ ವಿನೆಗರ್ ಅನ್ನು ನೀರಿಗೆ ಸೇರಿಸಿ ಮತ್ತು ಅದನ್ನು ಕುದಿಸಿ. ಅದು ಕುದಿಯಲು ಪ್ರಾರಂಭಿಸಿದ ತಕ್ಷಣ ಗ್ಯಾಸ್ ಆಫ್ ಮಾಡಿ. ನಂತರ ಕುದಿಸಿದ ಆಪಲ್ ಸೈಡ್ ವಿನೆಗರನ್ನು ಒಂದು ಗಾಜಿನ ಬೌಲ್ ಗೆ ಹಾಕಿ.

ನಿಂಬೆ ಹಣ್ಣು : ಕತ್ತರಿಸಿದ ನಿಂಬೆಹಣ್ಣಿಗೆ ಲವಂಗವನ್ನು ಚುಚ್ಚಿ, ಫ್ರಿಜ್​ನ ನಾಲ್ಕು ಮೂಲೆಗಳಲ್ಲಿ ಇಡಿ ಆಗ ವಾಸನೆ ದೂರವಾಗುವುದು.

Published On - 3:43 pm, Mon, 18 July 22

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!