Father’s Role in Parenting: ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆಯ ಪಾತ್ರವೇನು?
ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆಯ ಪಾತ್ರವೇನು?, ತಂದೆ ಅನುಭವಿಸುವ ಸಂಕಟಗಳೇನು? ಎಲ್ಲದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ.
ಮಕ್ಕಳ ಲಾಲನೆ ಪಾಲನೆಯಲ್ಲಿ ತಂದೆಯ ಪಾತ್ರವೇನು?, ತಂದೆ ಅನುಭವಿಸುವ ಸಂಕಟಗಳೇನು? ಎಲ್ಲದರ ಕುರಿತು ಯೋಗ ತಜ್ಞೆ ಕಮಲಾ ಭಾರದ್ವಾಜ್ ನೀಡಿರುವ ಮಾಹಿತಿ ಇಲ್ಲಿದೆ. ಯಾರು ಕೂಡ ಹುಟ್ಟುತ್ತಲೇ ತಂದೆ-ತಾಯಿಯಾಗಿರುವುದಿಲ್ಲ, ತಾಯಿಯಷ್ಟೇ ತಂದೆ ಕೂಡ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬಲ್ಲ, ಲಾಲನೆ ಪಾಲನೆ ಮಾಡಬಲ್ಲ, ಪ್ರೀತಿಸಬಲ್ಲ.
ಇತ್ತೀಚಿನ ವರ್ಷಗಳಲ್ಲಿ ಜೀವನ ಬದಲಾಗಿದೆ, ಜನರು ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಹೆತ್ತವರ ಪಾತ್ರ ಅಂತ ಬಂದಾಗ , ತಂದೆ ತಾಯಿ ಇವರಿಬ್ಬರ ಪಾತ್ರ , ವ್ಯಕ್ತಿತ್ವ ಯಾವಾಗಲೂ ಮಗುವಿನ ಜೀವಿನದಲ್ಲಿ ಸಮಾನ ಇರುತ್ತೆ. ಹಾಗೂ ತಂದೆ ಪಾತ್ರ ಬಂದಾಗ ಅದೊಂದು , ಧೈರ್ಯ , ಗತ್ತು ಹೆಚ್ಚು ಎಂದೇ ಹೇಳಬಹುದು.
ಮಕ್ಕಳ ಆರೈಕೆಯಲ್ಲಿ ತಾಯಿಯಷ್ಟೇ ತಂದೆಯು ಕೂಡ ಇನ್ವಾಲ್ವ್ ಆಗಿರುತ್ತಾರೆ. ಸಾಮಾನ್ಯವಾಗಿ ಗಂಡ, ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರಾಗಿರುತ್ತಾರೆ, ಮಕ್ಕಳು, ಕುಟುಂಬ, ಕಚೇರಿ ಹೀಗೆ ಎಲ್ಲಾ ಕಡೆಯೂ ಜವಾಬ್ದಾರಿಯನ್ನು ಒಂದೇ ರೀತಿ ನಿರ್ವಹಿಸುತ್ತಿರುತ್ತಾರೆ.
ಇನ್ನೂ ಸಾಕಷ್ಟು ಮನೆಗಳಲ್ಲಿ ಮಕ್ಕಳನ್ನು ಚೈಲ್ಡ್ ಕೇರ್ನಲ್ಲಿ ಬಿಡುವ ಮಾತೇ ಇಲ್ಲ ಒಂದು ದಿನ ತಂದೆ ಮನೆಯಲ್ಲಿದ್ದರೆ ಇನ್ನೊಂದು ದಿನ ತಾಯಿ ಮನೆಯಲ್ಲಿದ್ದು ಮಗುವನ್ನು ನೋಡಿಕೊಳ್ಳುತ್ತಾಳೆ.
ತಂದೆಯಂದಿರುವ ಕೂಡ ತಾಯಿಯಂತೆಯೇ ಮಗುವಿನ ಪಾಲನೆಯನ್ನು ಮಾಡುತ್ತಾ ಜೀವನವನ್ನು ಎಂಜಾಯ್ ಮಾಡುತ್ತಿರುತ್ತಾರೆ.
ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.
ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.
Published On - 4:43 pm, Fri, 15 July 22