ಚಳಿಗಾಲ ಆರಂಭವಾದರೆ ತಂಪು ಮಾತ್ರವಲ್ಲ ಬದಲಾಗಿ ವಿವಿಧ ಪೌಷ್ಟಿಕ ತರಕಾರಿಗಳು ಕೂಡ ಈ ಕಾಲದಲ್ಲಿಯೇ ನಮಗೆ ಕಾಣಸಿಗುತ್ತದೆ. ಪಾಲಕ್, ಮೆಂತ್ಯ, ಕ್ಯಾರೆಟ್ ಮತ್ತು ಬೀಟ್ರೂಟ್ನಿಂದ ಹಿಡಿದು ಹೂಕೋಸು, ಎಲೆಕೋಸು ಮತ್ತು ಬಟಾಣಿಗಳವರೆಗೆ, ಈ ಶೀತವಿರುವ ತಿಂಗಳು ನೀವು ಆನಂದಿಸಬಹುದಾದ ಅನೇಕ ತರಕಾರಿಗಳನ್ನು ಹೊತ್ತು ತರುತ್ತದೆ. ಅವುಗಳನ್ನು ನೀವು ಅನೇಕ ಭಕ್ಷ್ಯಗಳನ್ನು ತಯಾರಿಸಲು ಬಳಸಬಹುದು, ಅದರ ಜೊತೆಗೆ ಮುಖ್ಯವಾಗಿ ಬಿಸಿ ಬಿಸಿ ಆಹಾರಗಳನ್ನು, ಅದರಲ್ಲಿಯೂ ಆರೋಗ್ಯಕ್ಕೆ ಹಿತವಾಗುವಂತ ಆಹಾರಗಳನ್ನು ಮಾಡಿಕೊಂಡು ಸವಿಯಬಹುದು. ಇಂತಹ ಆಯ್ಕೆಗಳಲ್ಲಿ ಮೊದಲು ಬರುವುದು ಸೂಪ್ ಇವುಗಳನ್ನು ನೀವು ಬಿಸಿ ಬಿಸಿಯಾಗಿ ಕುಡಿಯಬಹುದು ಜೊತೆಗೆ ಇದು ಉತ್ತಮ ರುಚಿಯನ್ನು ಸಹ ಹೊಂದಿರುತ್ತವೆ. ಶೀತ ವಾತಾವರಣದಲ್ಲಿ ನೀವು ಬೆಚ್ಚಗಿರಲು ಬಯಸುತ್ತಿದ್ದರೇ, ಇಲ್ಲಿ ನೀಡಿರುವ ಚಳಿಗಾಲಕ್ಕೆ ಹೇಳಿ ಮಾಡಿಸುವಂತ ತರಕಾರಿ ಸೂಪ್ ಗಳ ಕೆಲವು ಪಾಕವಿಧಾನಗಳನ್ನು ಮನೆಯಲ್ಲಿ ಮಾಡಿ ನೋಡಿ.
• 2 ಚಮಚ ಆಲಿವ್ ಎಣ್ಣೆ
• 1 ಈರುಳ್ಳಿ (ಕತ್ತರಿಸಿದ್ದು)
• ಬೆಳ್ಳುಳ್ಳಿಯ 2 ಎಸಳುಗಳು (ಕತ್ತರಿಸಿದ್ದು)
• 4 ಆಲೂಗಡ್ಡೆ (ಸಿಪ್ಪೆ ಸುಲಿದು ಕತ್ತರಿಸಿದ)
• 4 ಕಪ್ ತರಕಾರಿ ಬ್ರೋತ್ (ಮಾರುಕಟ್ಟೆಗಳಲ್ಲಿ ಲಭ್ಯವಿರುತ್ತದೆ)
• 1 ಟೀ ಸ್ಪೂನ್ ಒಣಗಿದ ಥೈಮ್ (ಥೈಮ್ ಪುದೀನಾ ಕುಟುಂಬಕ್ಕೆ ಸೇರಿದ ಪರಿಮಳಯುಕ್ತ ಗಿಡಮೂಲಿಕೆ)
• ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು
• 6 ಕಪ್ ತಾಜಾ ಪಾಲಕ್ (ಕತ್ತರಿಸಿದ್ದು)
• 1 ಕಪ್ ಹಾಲು (ಐಚ್ಛಿಕ)
• ಒಂದು ದೊಡ್ಡ ಪಾತ್ರೆಯಲ್ಲಿ ಆಲಿವ್ ಎಣ್ಣೆಯನ್ನು ಮಧ್ಯಮ ಶಾಖದಲ್ಲಿ ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಮೃದುವಾಗುವವರೆಗೆ ಹುರಿಯಿರಿ.
• ಕತ್ತರಿಸಿದ ಆಲೂಗಡ್ಡೆಯನ್ನು ಅದಕ್ಕೆ ಹಾಕಿ ಕಲಕಿ.
• ಅದಕ್ಕೆ ತರಕಾರಿ ಬ್ರೋತ್ ಹಾಕಿ, ಒಣಗಿದ ಥೈಮ್ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಸೇರಿಸಿ.
• ಮಿಶ್ರಣವನ್ನು ಕುದಿಸಿ, ನಂತರ ಶಾಖವನ್ನು ಕಡಿಮೆ ಮಾಡಿ ಮತ್ತು ಆಲೂಗಡ್ಡೆ ಮೃದುವಾಗುವವರೆಗೆ ಕುದಿಯಲು ಬಿಡಿ.
• ಕತ್ತರಿಸಿದ ಪಾಲಕ್ ಅನ್ನು ಅದೇ ಪಾತ್ರೆಗೆ ಸೇರಿಸಿ ಚೆನ್ನಾಗಿ ಕಲಕಿ.
• ನೀವು ಕೆನೆಯುಕ್ತ ಸೂಪ್ ಅನ್ನು ಬಯಸಿದರೆ, ಈ ಹಂತದಲ್ಲಿ ನೀವು ಒಂದು ಕಪ್ ಹಾಲನ್ನು ಸೇರಿಸಬಹುದು ಎಂದು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಅಭಿಲಾಷಾ ವಿ ಸಲಹೆ ನೀಡುತ್ತಾರೆ.
• ಚೆನ್ನಾಗಿ ಕಲಕಿ ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ, ನಂತರ ಸೂಪ್ ಅನ್ನು ಸವಿಯಿರಿ ಮತ್ತು ಅಗತ್ಯವಿದ್ದರೆ ಮಸಾಲೆಗಳನ್ನು ಸೇರಿಸಿಕೊಳ್ಳಿ.
ಇದನ್ನೂ ಓದಿ:ಚಳಿಗಾಲದಲ್ಲಿ ನೆಲ್ಲಿಕಾಯಿ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು
• 1 ಟೇಬಲ್ ಚಮಚ ಆಲಿವ್ ಎಣ್ಣೆ
• 1 ಈರುಳ್ಳಿ
• 450 ಗ್ರಾಂ ಕ್ಯಾರೆಟ್ (ಸಿಪ್ಪೆ ಸುಲಿದು ಕತ್ತರಿಸಿದ)
• 1 ಚಮಚ ತಾಜಾ ಶುಂಠಿ (ತುರಿದದ್ದು)
• 3 ಕಪ್ ತರಕಾರಿ ಬ್ರೋತ್
• 1 ಟೀ ಚಮಚ ಜೀರಿಗೆ
• ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು
• 1 ಕಪ್ ತೆಂಗಿನ ಹಾಲು
• ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು, ಆಲಿವ್ ಎಣ್ಣೆಯನ್ನು ಮಧ್ಯಮ ಶಾಖದಲ್ಲಿ ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಹುರಿದುಕೊಳ್ಳಿ.
• ಹೆಚ್ಚಿಟ್ಟುಕೊಂಡ ಕ್ಯಾರೆಟ್ ಮತ್ತು ತುರಿದ ಶುಂಠಿಯನ್ನು ಪಾತ್ರೆಗೆ ಸೇರಿಸಿ. ಕ್ಯಾರೆಟ್ ಮೃದುವಾಗಲು ಪ್ರಾರಂಭಿಸುವವರೆಗೆ ಕೆಲವು ನಿಮಿಷಗಳ ಕಾಲ ಕಲಕಿ ಬೇಯಿಸಿಕೊಳ್ಳಿ.
• ಬ್ರೋತ್ ಹಾಕಿದ ನಂತರ, ರುಬ್ಬಿದ ಜೀರಿಗೆಯನ್ನು ಸೇರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು ಸೇರಿಸಿ. ಕುದಿಯಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ ಉರಿ ಕಡಿಮೆ ಮಾಡಿ ಮತ್ತು ಕ್ಯಾರೆಟ್ ಮೃದುವಾಗುವವರೆಗೆ ಕುದಿಯಲು ಬಿಡಿ.
• ಕ್ಯಾರೆಟ್ ಮೃದುವಾದ ನಂತರ, ಸೂಪ್ ಅನ್ನು ಪ್ಯೂರಿ ಮಾಡಲು ಬ್ಲೆಂಡರ್ ಬಳಸಿ.
• ನೀವು ಕೆನೆಯುಕ್ತ ಸೂಪ್ ಅನ್ನು ಬಯಸಿದರೆ, ಮಡಕೆಗೆ ತೆಂಗಿನ ಹಾಲನ್ನು ಸೇರಿಸಿ ಚೆನ್ನಾಗಿ ಕಲಕಿ. ಸೂಪ್ ಅನ್ನು ಕೆಲವು ನಿಮಿಷಗಳ ಕಾಲ ಕುದಿಯಲು ಬಿಟ್ಟರೆ ಸೂಪ್ ತಯಾರಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:05 pm, Wed, 29 November 23