ಸಾಮಾನ್ಯವಾಗಿ ನಾವು ಹೆಚ್ಚು ನೀರು ಕುಡಿಯಬೇಕು ಎಂದು ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯು ದಿನಕ್ಕೆ 7 ರಿಂದ 8 ಗ್ಲಾಸ್ ನೀರು ಕುಡಿಯಬೇಕು. ದೇಹವನ್ನು ಸದೃಢವಾಗಿಡಲು ನೀರಿನ ಸರಿಯಾದ ಸೇವನೆ ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ನೀರು ಕುಡಿಯುವುದರಿಂದ (Drinking water) ತೂಕ ಕಡಿಮೆಯಾಗುತ್ತದೆ. ನೀರು ನಮ್ಮನ್ನು ಇತರ ಅನೇಕ ಕಾಯಿಲೆಗಳಿಂದ ಕೂಡ ದೂರವಿಡುತ್ತದೆ.ಒಟ್ಟಾರೆ ನೀರು ನಿಮ್ಮ ಜೀವನವನ್ನು ಸಮತೋಲನಗೊಳಿಸುತ್ತದೆ. ಆದರೆ ಅದರ ಪ್ರಮಾಣವು ದೇಹದಲ್ಲಿ ಅಸಮತೋಲನಗೊಂಡರೆ ಜೀವನಕ್ಕೆ ಬಿಕ್ಕಟ್ಟನ್ನು ಉಂಟುಮಾಡಬಹುದು ಎಂಬುವುದರ ಬಗ್ಗೆ ಎಚ್ಚರಿಕೆ ಅಗತ್ಯ.
ಪದೇ ಪದೇ ಬಾಯಾರಿಕೆಯಾಗುವ ಮೂಲಕ ನಮ್ಮ ದೇಹವು ತನ್ನದೇ ಆದ ನೀರಿನ ಅಗತ್ಯತೆಯ ಸಂದೇಶವನ್ನು ನೀಡುತ್ತಲೇ ಇರುತ್ತದೆ. ಆದರೆ ಅಗತ್ಯಕ್ಕಿಂತ ಹೆಚ್ಚು ನೀರು ಸೇವಿಸುತ್ತಿರುವುದು ಹಲವು ಬಾರಿ ಕಂಡು ಬರುತ್ತದೆ. ಅನೇಕ ಬಾರಿ ಬಾಯಾರಿಕೆ ಇಲ್ಲದಿದ್ದರೂ ನಿರಂತರವಾಗಿ ನೀರು ಕುಡಿಯುತ್ತಲೇ ಇರುತ್ತಾರೆ. ಆದರೆ ಹಾಗೆ ಮಾಡುವುದು ಗಂಭೀರ ಅನಾರೋಗ್ಯದ ಸಂಕೇತವಾಗಿದೆ ಎಂದು ನೀವು ತಿಳಿಯುವುದು ಸೂಕ್ತ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ನೀರು ಕುಡಿದರೆ ಯಾವ ರೋಗ ಬರಬಹುದು ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಮಧುಮೇಹ
ಇತ್ತೀಚಿನ ದಿನಗಳಲ್ಲಿ ಮಧುಮೇಹ ರೋಗವು ಎಲ್ಲಾ ವಯೋಮಾನದವರಲ್ಲಿಯೂ ವೇಗವಾಗಿ ಹರಡುತ್ತಿದೆ. ಎಲ್ಲಾ ವಯೋಮಾನದವರೂ ಈ ರೋಗಕ್ಕೆ ತುತ್ತಾಗುತ್ತಿರುವುದಕ್ಕೆ ಕೆಟ್ಟ ಜೀವನಶೈಲಿಯೇ ಕಾರಣ. ಇದರೊಂದಿಗೆ ಆಗಾಗ್ಗೆ ಬಾಯಾರಿಕೆಯಾಗುವುದು ಮಧುಮೇಹದ ಪ್ರಮುಖ ಲಕ್ಷಣವಾಗಿದೆ. ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಆಗ ಮೂತ್ರಪಿಂಡವು ಸುಲಭವಾಗಿ ಫಿಲ್ಟರ್ ಆಗಲು ಸಾಧ್ಯವಿಲ್ಲ. ಇದರಿಂದಾಗಿ ನೀರಿನ ಕೊರತೆ ಉಂಟಾಗಿ ಪದೇ ಪದೇ ಬಾಯಾರಿಕೆಯಾದಂತೆ ಭಾಸವಾಗುತ್ತದೆ
ಅಜೀರ್ಣ
ಹಲವಾರು ಬಾರಿ ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ, ಅದು ಸುಲಭವಾಗಿ ಜೀರ್ಣವಾಗುವುದಿಲ್ಲ. ಸಮೃದ್ಧ ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ನೀರು ಕುಡಿಯಬೇಕು. ಈ ಕಾರಣದಿಂದಾಗಿ, ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಮತ್ತು ಅತಿಯಾದ ಬಾಯಾರಿಕೆಗೆ ಕಾರಣವಾಗುತ್ತದೆ.
ವಿಪರೀತವಾಗಿ ಬೆವರುವುದು
ನಿಮ್ಮ ದೇಹವು ಹೆಚ್ಚು ಬೆವರಲು ಪ್ರಾರಂಭಿಸಿದರೂ, ದೇಹದಲ್ಲಿ ನೀರಿನ ಕೊರತೆಯಿದೆ ಎಂದು ಅರ್ಥ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಹೆಚ್ಚು ನೀರಿನ ಅಗತ್ಯವಿರುತ್ತದೆ. ಇದರಿಂದಾಗಿ ನಾವು ಹೆಚ್ಚು ಬಾಯಾರಿಕೆಯನ್ನು ಅನುಭವಿಸುತ್ತೇವೆ.
ಆತಂಕ
ಚಡಪಡಿಕೆ ಮತ್ತು ಹೆದರಿಕೆಯ ಭಾವನೆಯನ್ನು ಆತಂಕ ಎಂದು ಕರೆಯಲಾಗುತ್ತದೆ. ಆತಂಕದಿಂದಾಗಿ ಬಾಯಿ ಒಣಗಲು ಪ್ರಾರಂಭವಾಗುತ್ತದೆ. ಇದರಿಂದಾಗಿ ವ್ಯಕ್ತಿಯು ಹೆಚ್ಚು ನೀರು ಕುಡಿಯುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕಿಣ್ವಗಳು ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಬಾಯಲ್ಲಿ ಹುಣ್ಣು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
ಇದನ್ನೂ ಓದಿ:
ಶುಂಠಿ ನೀರು ಕುಡಿಯುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ
ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರು ಕುಡಿಯುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಇರಲಿ ಎಚ್ಚರ