ಕ್ಯಾನ್ಸರ್ ಬಂದ ಮೇಲೆ ದುಃಖ ಪಡುವ ಅಭ್ಯಾಸ ಬಿಡಿ; ಸದಾ ಈ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಮನಹರಿಸಿ
Health Tips: ಧೂಮಪಾನ ಮತ್ತು ಮದ್ಯಪಾನ ಸೇವನೆಯು ಶ್ವಾಸಕೋಶ, ಅನ್ನನಾಳ, ಬಾಯಿ, ಗಂಟಲು, ಮೂತ್ರಪಿಂಡ, ಮೂತ್ರಕೋಶ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ ಗುದನಾಳದ ಕ್ಯಾನ್ಸರ್ಗೆ ಕಾರಣವಾಗುತ್ತದೆ.
ಕ್ಯಾನ್ಸರ್ ದೇಹದಲ್ಲಿ ಅಸಹಜ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಾಗಿದೆ. ಜೀವನಶೈಲಿಯಲ್ಲಿನ (Lifestyle) ಬದಲಾವಣೆ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಧೂಮಪಾನ ಮತ್ತು ಮದ್ಯಪಾನ ಸೇವನೆಯು ಶ್ವಾಸಕೋಶ, ಅನ್ನನಾಳ, ಗಂಟಲಕುಳಿ, ಬಾಯಿ, ಗಂಟಲು, ಮೂತ್ರಪಿಂಡ, ಮೂತ್ರಕೋಶ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ, ಕೊಲೊನ್ ಮತ್ತು ಗುದನಾಳದ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಸ್ಥೂಲಕಾಯತೆ ಮತ್ತು ಹೆಚ್ಚಿದ ಮದ್ಯಪಾನ ಸೇವನೆಯಿಂದಾಗಿ ಸ್ತನ ಕ್ಯಾನ್ಸರ್ (Cancer) ಕಂಡುಬರುತ್ತದೆ. ಇದಲ್ಲದೆ, ಸೂರ್ಯನ ನೇರಳಾತೀತ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಹೆಚ್ಚಿನ ಜನರಿಗೆ ಚರ್ಮದ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ.
ಏಷ್ಯನ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಕುಂಬಲ್ಲಾ ಹಿಲ್ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಸ್ಟ್ ಮತ್ತು ಹೆಮಟೋ ಆಂಕೊಲಾಜಿಸ್ಟ್ ಡಾ. ಸುಹಾಸ್ ಆಗ್ರೆ ಅವರು ಸಮತೋಲಿತ ಜೀವನಶೈಲಿಗೆ ಹೊಂದಿಕೊಳ್ಳುವುದು ಹೇಗೆ ಎಂದು ಸಮಗ್ರವಾದ ಮಾಹಿತಿ ನೀಡಿದ್ದಾರೆ. ಆರೋಗ್ಯಕರ ಜೀವನಶೈಲಿಯು ಕ್ಯಾನ್ಸರ್ನಿಂದ ಮತ್ತು ಇನ್ನಿತರ ಅಪಾಯಕಾರಿ ಕಾಯಿಲೆಗಳಿಂದ ನಮ್ಮನ್ನು ದೂರ ಇಡುತ್ತದೆ ಎಂದು ಡಾ. ಸುಹಾಸ್ ಹೇಳಿದ್ದಾರೆ.
ತಂಬಾಕು ಸೇವನೆ ತಪ್ಪಿಸಿ ತಂಬಾಕು ಸೇವನೆ ಬಾಯಿಯ ಕುಹರ ಮತ್ತು ಮೇದೋಜ್ಜೀರಕ ಗ್ರಂಥಿ ಸೇರಿದಂತೆ ವಿವಿಧ ಕ್ಯಾನ್ಸರ್ಗಳಿಗೆ ಕಾರಣವಾಗುತ್ತದೆ. ನೀವು ತಂಬಾಕು ಬಳಸದಿದ್ದರೂ, ಅವುಗಳಿಂದ ಹೊರ ಸೂಸುವ ಹೊಗೆಗೆ ಒಡ್ಡಿಕೊಳ್ಳುವುದು ಕೂಡ ಶ್ವಾಸಕೋಶದ ಕ್ಯಾನ್ಸರ್ ಅನ್ನು ಆಹ್ವಾನಿಸುತ್ತದೆ. ಹೀಗಾಗಿ, ಯಾವುದೇ ಕಾರಣಕ್ಕೂ ತಂಬಾಕನ್ನು ಸೇವಿಸಬೇಡಿ. ಹುಕ್ಕಾ, ಗುಟ್ಕಾ, ಸಿಗರೇಟ್‌ಗಳನ್ನು ತಪ್ಪಿಸಿ. ಧೂಮಪಾನವನ್ನು ತೊರೆಯಲು ಸರಿಯಾದ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ. ಆ ನಂತರ ನೀವು ಧೂಮಪಾನ ನಿಲ್ಲಿಸಬಹುದು. ಒಮ್ಮೆಲೆಗೆ ಇದು ಸಾಧ್ಯವಿಲ್ಲ. ಹೀಗಾಗಿ ವೈದ್ಯರ ಸಲಹೆ ಅಗತ್ಯ.
ಆರೋಗ್ಯಕರ ಆಹಾರ ನಿಮ್ಮ ಆರೋಗ್ಯವನ್ನು ಹೆಚ್ಚಿಸಲು ಎಲ್ಲಾ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಆಹಾರದಲ್ಲಿ ಸೇರಿಸುವ ಮೂಲಕ ಕ್ಯಾನ್ಸರ್ ಅನ್ನು ದೂರವಿಡುವುದು ಅವಶ್ಯಕತೆಯಾಗಿದೆ. ತಾಜಾ ಹಣ್ಣು, ತರಕಾರಿ, ಬೀಜಗಳು, ಧಾನ್ಯಗಳು ತಿನ್ನಲು ಪ್ರಯತ್ನಿಸಿ. ಟ್ರಾನ್ಸ್ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಸೇವನೆಯನ್ನು ತಪ್ಪಿಸಿ. ಕರಿದ ಆಹಾರಗಳನ್ನು ಆದಷ್ಟು ಕಡಿಮೆ ಮಾಡಿ. ಮದ್ಯಪಾನದ ಸೇವನೆಯನ್ನು ಮಿತಿಗೊಳಿಸುವುದು ಸಹ ನಿಮಗೆ ಪ್ರಯೋಜನಕಾರಿಯಾಗಿದೆ.
ವ್ಯಾಯಾಮ ಮಾಡಿ ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದೀರಾ? ಇದರಿಂದ ಸ್ತನ, ಶ್ವಾಸಕೋಶ, ಕೊಲೊನ್ ಮತ್ತು ಮೂತ್ರಪಿಂಡದ ಕ್ಯಾನ್ಸರ್ ಬರಬಹುದು. ಇದನ್ನು ತಪ್ಪಿಸಲು ವ್ಯಾಯಾಮವನ್ನು ಪ್ರಾರಂಭಿಸಬೇಕು. ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ವ್ಯಾಯಾಮ ಮಾಡಲು ಪ್ರಯತ್ನಿಸಿ. ನೀವು ಯೋಗ, ರನ್ನಿಂಗ್, ಈಜು, ಸೈಕ್ಲಿಂಗ್, ವಾಕಿಂಗ್ ಮತ್ತು ಏರೋಬಿಕ್ಸ್ ನಂತಹ ವಿವಿಧ ಚಟುವಟಿಕೆಗಳನ್ನು ಮಾಡಬಹುದು. ವಾರದಲ್ಲಿ 5 ದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ನಿಯಮಿತ ದೈಹಿಕ ಚಟುವಟಿಕೆಯು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ.
ಸೂರ್ಯನ ಬೆಳಕಿನಿಂದ ರಕ್ಷಣೆ ಸೂರ್ಯನಿಂದ ಬರುವ ನೇರಳಾತೀತ (UV) ಕಿರಣಗಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ತಪ್ಪಿಸಲು ವೈದ್ಯರು ಶಿಫಾರಸು ಮಾಡಿದ ಸನ್‌ಸ್ಕ್ರೀನ್ ಬಳಸಿ.
ಕ್ಯಾನಸರ್ ಪೀಡಿತರು ಕುಟುಂಬದಲ್ಲಿದ್ದರೆ ಮಾಹಿತಿ ಪಡೆಯಿರಿ ನಿಮ್ಮ ಮನೆಯಲ್ಲಿ ಕ್ಯಾನಸರ್ ಪೀಡಿತರು ಇದ್ದರೆ ಕ್ಯಾನ್ಸರ್ ಸ್ಕ್ರೀನಿಂಗ್ ಹೋಗಿ. ಕೆಲವು ಪರೀಕ್ಷೆಗಳು ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಇದರಿಂದ ಅಪಾಯವನ್ನು ತಪ್ಪಿಸಬಹುದು. ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡಲು ನೀವು ಯಾವ ರೀತಿಯ ಪರೀಕ್ಷೆಗಳನ್ನು ಮಾಡಬೇಕೆಂದು ವೈದ್ಯರ ಸಲಹೆ ಪಡೆಯಿರಿ.
Cashew: ಈ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಗೋಡಂಬಿಯನ್ನು ಸೇವಿಸಬಾರದು