ಪ್ರತಿನಿತ್ಯ ದೇಹಕ್ಕೆ ನೀರಿನ ಅಗತ್ಯವು ಬಹಳಷ್ಟು ಇವೆ. ಹೀಗಾಗಿ ಪ್ರತಿದಿನ ಕನಿಷ್ಠ 7ರಿಂದ 8 ಲೋಟಗಳಷ್ಟು ನೀರನ್ನು ಕುಡಿಯಲೇ ಬೇಕು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹದ ಎಲ್ಲಾ ಭಾಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ಕೆಲವರು ತ್ರಾಮದ ಬಾಟಲಿಯಲ್ಲಿ ಅಥವಾ ತ್ರಾಮದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುತ್ತಾರೆ. ಈ ಅಭ್ಯಾಸವು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.
* ಜೀರ್ಣ ಕ್ರಿಯೆಯನ್ನು ಸುಧಾರಿಸುತ್ತದೆ : ತ್ರಾಮದ ಬಾಟಲಿಯಲ್ಲಿನ ನೀರು ಮಾಲಿನ್ಯಕಾರಕಗಳು ಮತ್ತು ಹಾನಿಕಾರಕ ಸೂಕ್ಷ್ಮಜೀವಿಗಳನ್ನು ನಾಶಪಡಿಸಿ, ಚಯಾಪಚಯ ಕ್ರಿಯೆಯೂ ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ.
* ರಕ್ತಹೀನತೆಯನ್ನು ಕಡಿಮೆಮಾಡುತ್ತದೆ: ಹಿಮೋಗ್ಲೋಬಿನ್ ಉತ್ಪಾದನೆಗೆ ದೇಹದಲ್ಲಿ ತ್ರಾಮದ ಅಗತ್ಯವಿದೆ. ಹೀಗಾಗಿ ಆಹಾರದಲ್ಲಿನ ಕಬ್ಬಿಣದ ಅಂಶವನ್ನು ಹೀರಲು ಈ ತ್ರಾಮವು ಸಹಾಯ ಮಾಡಿ ರಕ್ತಹೀನತೆಯನ್ನು ನಿವಾರಿಸುತ್ತದೆ.
* ಥೈರಾಯ್ಡ್ ಗ್ರಂಥಿಯ ಕಾರ್ಯವನ್ನು ಸುಧಾರಿಸುತ್ತದೆ: ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸಲು ಪ್ರಮುಖ ಖನಿಜವಾದ ತ್ರಾಮವು ಅತ್ಯಗತ್ಯ. ತ್ರಾಮದ ನೀರನ್ನು ಸೇವನೆ ಮಾಡುವುದರಿಂದ ಥೈರಾಯ್ಡ್ ಗ್ರಂಥಿಯ ಕೆಲಸವನ್ನು ಇನ್ನಷ್ಟು ಚುರುಕುಗೊಳಿಸುತ್ತದೆ.
* ತೂಕ ನಷ್ಟಕ್ಕೆ ಸಹಾಯಕವಾಗಿದೆ : ತ್ರಾಮದ ಬಾಟಲಿಯಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದರಿಂದ ಕೊಬ್ಬನ್ನು ಕಡಿಮೆ ಮಾಡಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ತೂಕವನ್ನು ಕಡಿಮೆ ಮಾಡಿಕೊಳ್ಳಬೇಕೆನ್ನುವ ತ್ರಾಮದ ಪಾತ್ರೆಯಲ್ಲಿಟ್ಟ ನೀರನ್ನು ಕುಡಿಯುವುದು ಒಳ್ಳೆಯದು.
* ಕೀಲುಗಳು ಸಂಧಿವಾತದ ನೋವಿಗೆ ಪರಿಣಾಮಕಾರಿ: ತ್ರಾಮದ ನೀರು ಮೂಳೆಗಳನ್ನು ಬಲಪಡಿಸುತ್ತದೆ. ಹೀಗಾಗಿ ಸಂಧಿವಾತ ಸಮಸ್ಯೆ ಹೊಂದಿರುವವರು ತಾಮ್ರದ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಯಿಂದ ಮುಕ್ತರಾಗಬಹುದು.
ಇದನ್ನೂ ಓದಿ: ಒತ್ತಡವು ನಿಮ್ಮ ಚರ್ಮದ ಆರೋಗ್ಯವನ್ನು ಹೇಗೆಲ್ಲಾ ದುರ್ಬಲಗೊಳಿಸುತ್ತದೆ ಗೊತ್ತಾ?
* ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಈ ತಾಮ್ರದ ನೀರಿನಲ್ಲಿ ನೈಸರ್ಗಿಕ ಆಂಟಿಬ್ಯಾಕ್ಟೀರಿಯಲ್ ಗುಣವಿದ್ದು , ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಯಾವುದೇ ಸೋಂಕು ಬಾರದಂತೆ ನೋಡಿಕೊಳ್ಳುತ್ತದೆ.
* ಚರ್ಮದ ಆರೋಗ್ಯವನ್ನು ಕಾಪಾಡಲು ಸಹಾಯಕಾರಿ : ಈ ತ್ರಾಮದ ನೀರು ಚರ್ಮವನ್ನು ಆರೋಗ್ಯವಾಗಿ ಇಡುವುದರ ಜೊತೆಗೆ ವಯಸ್ಸಾಗ ಹಾಗೆ ಕಾಣುವಂತೆ ಮಾಡುತ್ತದೆ. ಚರ್ಮಗಳಿಗೆ ಬಣ್ಣವನ್ನು ನೀಡಿ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
* ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಮಾಡಿ, ಆಹಾರದಲ್ಲಿರುವ ಕಬ್ಬಿಣಾಂಶವನ್ನು ದೇಹವು ಹೀರಿಕೊಳ್ಳಲು ಸಹಾಯ ಮಾಡಿ, ರಕ್ತ ಪರಿಚಲನೆಯನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಈ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ