ಒತ್ತಡವು ನಿಮ್ಮ ಚರ್ಮದ ಆರೋಗ್ಯವನ್ನು ಹೇಗೆಲ್ಲಾ ದುರ್ಬಲಗೊಳಿಸುತ್ತದೆ ಗೊತ್ತಾ?
ಮನುಷ್ಯನು ಆಧುನಿಕತೆಗೆ ಹೆಚ್ಚು ತೆರೆದುಕೊಂಡಿದ್ದಾನೆ. ಆಧುನಿಕತೆಗೆ ಒಗ್ಗಿಕೊಂಡಿರುವ ಮನುಷ್ಯನ ಜೀವನವು ಒತ್ತಡದಿಂದ ಕೂಡಿದೆ. ಹೀಗಾಗಿ ಈ ಅಧಿಕ ಒತ್ತಡವು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಸಂಪೂರ್ಣ ಪರಿಣಾಮವನ್ನು ಬೀರುತ್ತಿದೆ. ಆದರೆ ಒತ್ತಡದಿಂದ ಕೂಡಿದ ಜೀವನ ಶೈಲಿಯೂ ಚರ್ಮದ ಸಮಸ್ಯೆಗಳಿಗೂ ದಾರಿ ಮಾಡಿಕೊಡಬಹುದು. ನೀವು ಅಧಿಕ ಒತ್ತಡ ಜೀವನವನ್ನು ಅನುಭವಿಸುತ್ತಿದ್ದರೆ ಚರ್ಮದಲ್ಲಿ ತುರಿಕೆ, ಮೊಡವೆ, ಶುಷ್ಕತೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಕಾಡುತ್ತವೆ. ಈ ಸಮಯದಲ್ಲಿ ಚರ್ಮದ ಆರೈಕೆಯನ್ನು ಮಾಡುವುದು ಬಹಳ ಮುಖ್ಯವಾಗುತ್ತದೆ.
ಪ್ರತಿಯೊಬ್ಬರು ತಮ್ಮ ಮುಖ ಯಾವುದೇ ಕಲೆಗಳು ಮೊಡವೆಗಳಿಲ್ಲದೇ ಫಳಫಳನೇ ಹೊಳೆಯುತ್ತಿರಬೇಕು ಎಂದುಕೊಳ್ಳುತ್ತಾರೆ. ಮುಖದ ಕಾಂತಿಯನ್ನು ಹೆಚ್ಚಿಸಲು ನಾನಾ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಒತ್ತಡ ಜೀವನ ಶೈಲಿಯೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಅನೇಕರಿಗೆ ತಿಳಿಯುವುದಿಲ್ಲ. ಒತ್ತಡವು ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತವೆ. ಹೀಗಾಗಿ ನಿಮ್ಮ ಚರ್ಮದಲ್ಲಿ ವ್ಯತ್ಯಾಸಗಳಾದಾಗ ನೀವು ಎಷ್ಟು ಒತ್ತಡದಲ್ಲಿ ಸಿಲುಕಿದ್ದೀರಿ ಎನ್ನುವುದು ಅರ್ಥವಾಗುತ್ತದೆ. ಹೀಗಾಗಿ ಈ ಸಮಯದಲ್ಲಿ ಚರ್ಮದ ಆರೈಕೆ ಮಾಡುವುದು ಅಗತ್ಯವಾಗಿದೆ.
ಒತ್ತಡದಿಂದಾಗಿ ಚರ್ಮದ ಮೇಲಾಗುವ ಪರಿಣಾಮಗಳು
* ಒತ್ತಡವು ನಿಮ್ಮ ಚರ್ಮದಿಂದ ನೈಸರ್ಗಿಕ ತೇವಾಂಶವನ್ನು ತೆಗೆದುಹಾಕಿ ಶುಷ್ಕತೆಯಿಂದ ಕೂಡಿರುವಂತೆ ಮಾಡುತ್ತವೆ.
* ಒತ್ತಡವು ಉರಿಯೂತವನ್ನು ಉಂಟು ಮಾಡಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ.
* ಒತ್ತಡಕ್ಕೊಳಗಾದಾಗ ಚರ್ಮದಲ್ಲಿ ತುರಿಕೆಯು ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು. ತುರಿಕೆಯೆಂದು ಪದೇ ಪದೇ ಚರ್ಮದ ಮೇಲೆ ಕೈಯಾಡಿಸುವುದರಿಂದ ಚರ್ಮ ಪದರವು ಒಡೆದುಕೊಳ್ಳುತ್ತದೆ.
* ಒತ್ತಡದಿಂದಾಗಿ ಚರ್ಮವು ಸೂಕ್ಷ್ಮವಾಗಿದ್ದು, ಕಿರಿಕಿರಿಯನ್ನು ಉಂಟು ಮಾಡುವುದರೊಂದಿಗೆ ಸಿಪ್ಪೆ ಸುಲಿಯಲು ಬಹುದು.
ಇದನ್ನೂ ಓದಿ: ಎಷ್ಟೇ ನೀರು ಕುಡಿದರೂ ದಾಹ ನೀಗುತ್ತಿಲ್ಲವೆ? ಬಾಯಾರಿಕೆ ನೀಗಲು ಇಲ್ಲಿದೆ ಸರಳ ಸಲಹೆ
ಒತ್ತಡದ ಸಮಯದಲ್ಲಿ ಚರ್ಮದ ಆರೈಕೆ ಹೀಗೆ ಇರಲಿ
* ಚರ್ಮವು ತೇವಾಂಶವನ್ನು ಕಳೆದುಕೊಂಡ ಸಂದರ್ಭದಲ್ಲಿ ಮಾಯಿಶ್ಚರೈಸರ್‌ನೊಂದಿಗೆ ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಿ, ತೇವಾಂಶಭರಿತವಾಗಿ ಇರಿಸಿಕೊಳ್ಳಿ.
* ಚರ್ಮದಲ್ಲಿ ಉರಿಯೂತ ಉಂಟಾದಾಗ 20 ಸೆಕೆಂಡುಗಳ ಕಾಲ ಐಸ್ ನೀರಿನಲ್ಲಿ ಮುಖವನ್ನು ಇಡುವ ಚರ್ಮವನ್ನು ಕಾಪಾಡಿಕೊಳ್ಳಿ.
* ಚರ್ಮದಲ್ಲಿ ತುರಿಕೆಯೂ ಕಂಡು ಬಂದರೆ ಸುಗಂಧ-ಮುಕ್ತ ಮಾಯಿಶ್ಚರೈಸರ್ ಅನ್ನು ಹಚ್ಚುವುದು ಉತ್ತಮ.
* ಸೂಕ್ಷ್ಮವಾಗಿರುವ ಚರ್ಮಕ್ಕೆ ಪ್ರತಿ ಮೂರರಿಂದ ನಾಲ್ಕು ಘಂಟೆಗಳಿಗೊಮ್ಮೆ ಮಾಯಿಶ್ಚರೈಸರ್ ಅನ್ನು ಅನ್ವಯಿಸುತ್ತ ಇರಿ.
* ಒತ್ತಡದ ಸಮಯದಲ್ಲಿ ಹೆಚ್ಚು ನೀರು ಕುಡಿಯುವ ಮೂಲಕ ಚರ್ಮದ ಆರೈಕೆಯನ್ನು ಮಾಡಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ