AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವಾಗಲೂ ಆಯಾಸ ಎನ್ನುತ್ತೀರಾ, ದಣಿವು ನೀಗಿಸಲು ಈ ಮನೆ ಮದ್ದು ಟ್ರೈ ಮಾಡಿ

ಬೆಳಗ್ಗೆಯಿಂದ ಸಂಜೆ ತನಕ ಕೆಲಸ ಮಾಡಿದವರು ಆಯಾಸ ಸುಸ್ತು ಎನ್ನುವುದು ಸಾಮಾನ್ಯ. ಆದರೆ ಸಣ್ಣ ಪುಟ್ಟ ಕೆಲಸ ಮಾಡಿದ ಕೂಡಲೇ ಆಯಾಸ ಸುಸ್ತು ಎನ್ನುವವರಿದ್ದಾರೆ. ಪದೇ ಪದೇ ಆಯಾಸವಾಗಲು ಜೀವನ ಶೈಲಿ ಹಾಗೂ ಆಹಾರ ಶೈಲಿಯು ಎರಡು ಕೂಡ ಕಾರಣವಾಗಿರಬಹುದು. ಈ ಒತ್ತಡದಿಂದ ಜೀವನವು ಕೂಡ ಆಯಾಸಕ್ಕೆ ಕಾರಣವಾಗಬಹುದು. ಆಯಾಸವಾದರೆ ಮನೆಯಲ್ಲೇ ಕೆಲವು ಮನೆ ಮದ್ದುಗಳನ್ನು ಮಾಡಿ ಆಯಾಸವನ್ನು ಪರಿಹರಿಸಿಕೊಳ್ಳಬಹುದು.

ಯಾವಾಗಲೂ ಆಯಾಸ ಎನ್ನುತ್ತೀರಾ, ದಣಿವು ನೀಗಿಸಲು ಈ ಮನೆ ಮದ್ದು ಟ್ರೈ ಮಾಡಿ
ಸಾಯಿನಂದಾ
| Edited By: |

Updated on: Jan 26, 2024 | 5:29 PM

Share

ಆರೋಗ್ಯ ಭಾಗ್ಯ ಎನ್ನುವ ಮಾತಿನಂತೆ ಆರೋಗ್ಯವಿದ್ದರೆ ಎಲ್ಲವೂ ಇದ್ದಂತೆ. ಪೌಷ್ಟಿಕಾಂಶಯುಕ್ತ ಆಹಾರ, ಸರಿಯಾದ ನಿದ್ದೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಎಷ್ಟೇ ಆರೋಗ್ಯವಂತ ವ್ಯಕ್ತಿಯಾದರೂ ಆತನಿಗೆ ಆಯಾಸ ಹಾಗೂ ಸುಸ್ತು ಆಗುವುದು ಸರ್ವೇ ಸಾಮಾನ್ಯ. ಆದರೆ, ಕೆಲವರಿಗೆ ಅತಿಯಾದ ಆಯಾಸವಾಗುವುದಿದೆ. ಅಂತಹವರು ಈ ಮನೆ ಮದ್ದನ್ನು ಒಮ್ಮೆ ಟ್ರೈ ಮಾಡಬಹುದು.

ಆಯಾಸ ಕಡಿಮೆ ಮಾಡಲು ಇಲ್ಲಿದೆ ಸುಲಭ ಪರಿಹಾರ

* ಆಯಾಸವಾದಾಗ ಸಕ್ಕರೆ ನೀರು ಕುಡಿದರೆ ಬಹುಬೇಗನೆ ಆಯಾಸವು ಕಡಿಮೆಯಾಗುತ್ತದೆ.

* ಕಬ್ಬಿನ ರಸವನ್ನು ಹಿತ-ಮಿತವಾಗಿ ಕುಡಿದರೆ ಆಯಾಸ ಪರಿಹಾರವಾಗಿ ಲವಲವಿಕೆಯಿಂದ ಇರಲು ಸಾಧ್ಯ.

* ಮೂಸಂಬಿ ಹಣ್ಣಿನ ಜ್ಯೂಸ್ ಮಾಡಿಕುಡಿದರೆ ಆಯಾಸವು ದೂರವಾಗುತ್ತದೆ.

* ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದರ ರಕ್ತವೃದ್ಧಿ ಆಗುವುದರೊಂದಿಗೆ ದಣಿವು ನಿವಾರಣೆಯಾಗುತ್ತದೆ.

* ಕೆಂಪು ಮೂಲಂಗಿಯನ್ನು ತುರಿದು, ಕೋಸುಂಬರಿ ಮಾಡಿ ಸೇವಿಸುವುದ ರಿಂದ ಆಯಾಸವು ದೂರವಾಗುತ್ತದೆ.

* ಹಸಿಯ ಅಳಸುಂಡೆ ಕಾಳನ್ನು ಬೆಲ್ಲದೊಂದಿಗೆ ಚೆನ್ನಾಗಿ ಅಗಿದು ತಿಂದರೆ ಆಯಾಸ ಪರಿಹಾರ ಆಗುವುದು.

* ಗರಿಕೆ ಹುಲ್ಲಿನ ರಸವನ್ನು ಕುಡಿದರೆ ದಣಿವು ನಿವಾರಣೆಯಾಗುತ್ತದೆ.

* ಆಯಾಸ ಎನ್ನುವವರು ಕಲ್ಲಂಗಡಿ ಹಾಗೂ ಖರ್ಬೂಜದ ಹಣ್ಣಿನ ಜ್ಯೂಸ್ ಕುಡಿಯುವುದು ಸೂಕ್ತ.

* ಒಂದು ಬಟ್ಟಲು ಮಾವಿನ ಹಣ್ಣಿನ ರಸಕ್ಕೆ ಅಷ್ಟೇ ಪ್ರಮಾಣದ ಹಾಲನ್ನು ಬೆರೆಸಿ, ಒಂದು ಟೀ ಸ್ಪೂನಿನಷ್ಟು ದಿನವೂ ಜೇನುತುಪ್ಪ ದೊಂದಿಗೆ ಸೇವಿಸುತ್ತಿದ್ದರೆ ಆಯಾಸದಿಂದ ಮುಕ್ತಿ ಹೊಂದಬಹುದು.

ಇದನ್ನೂ ಓದಿ: ತ್ರಾಮದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ಆರೋಗ್ಯಕ್ಕೆ ಎಷ್ಟು ಉತ್ತಮ?

* ಆಯಾಸವಾಗುವವರು ಬೆಲ್ಲದ ನೀರಿಗೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಕುಡಿಯುವುದು ಒಳ್ಳೆಯದು.

* ಒಂದು ಲೋಟ ಹಾಲಿಗೆ ಎರಡು ಚಮಚ ಮುಸುಕಿನ ಜೋಳದ ಎಲೆಗಳನ್ನು ಹಾಕಿ ಕುದಿಸಿ, ಇದನ್ನು ಕುಡಿದರೆ ಆಯಾಸ ನಿವಾರಣೆಯಾಗುತ್ತದೆ.

* ಅರ್ಧ ಚಮಚ ಅಲೋವೆರಾ ಜೆಲ್ ಗೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಬೆರೆಸಿ ಸೇವಿಸಿದರೆ ಉತ್ತಮ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ