ಈ ಸಿಂಪಲ್ ಮನೆ ಮದ್ದಿನಿಂದ ಮುಖದ ಮೇಲಿನ ಬೇಡದ ಕೂದಲನ್ನು ಹೋಗಲಾಡಿಸಿ!

ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡುವ ಮಹಿಳೆಯರಲ್ಲಿ ಹಾರ್ಮೋನ್ ಗಳ ಬದಲಾವಣೆಯಿಂದ ಮುಖದ ಮೇಲೆ ಬೇಡವಾದ ಕೂದಲು ಬೆಳೆಯುತ್ತವೆ. ಈ ಕೂದಲು ಮುಖದ ಸೌಂದರ್ಯವನ್ನು ಹಾಳು ಮಾಡುವುದಿದೆ. ಹೆಚ್ಚಿನ ಮಹಿಳೆಯರು ವ್ಯಾಕ್ಸಿಂಗ್ ಮಾಡುವ ಮೂಲಕ ಈ ಕೂದಲನ್ನು ತೆಗೆಯುತ್ತಾರೆ. ಆದರೆ ಮುಖದ ಮೇಲಿನ ಕೂದಲನ್ನು ಮನೆಯಲ್ಲೇ ಇರುವ ಸಾಮಗ್ರಿಗಳಿಂದ ಫೇಸ್ ಮಾಸ್ಕ್ ತಯಾರಿಸಿ ತೆಗೆದುಹಾಕಬಹುದು.

ಈ ಸಿಂಪಲ್ ಮನೆ ಮದ್ದಿನಿಂದ ಮುಖದ ಮೇಲಿನ ಬೇಡದ ಕೂದಲನ್ನು ಹೋಗಲಾಡಿಸಿ!
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 26, 2024 | 6:34 PM

ಮಹಿಳೆಯರು ಸೌಂದರ್ಯ ಪ್ರಿಯರು. ಮುಖದ ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವುದು ಸಹಜ. ಆದರೆ ಕೆಲವರ ಮುಖದಲ್ಲಿ ಪುರುಷರಂತೆ ಬೇಡದ ಕೂದಲು ಬೆಳೆಯುತ್ತವೆ. ಇದು ಮುಖದ ಅಂದವನ್ನು ಹಾಳು ಮಾಡುವುದಲ್ಲದೆ, ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಹೀಗಾಗಿ ಹೆಚ್ಚಿನವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಉತ್ಪನ್ನಗಳಿಂದ ಮುಖದಲ್ಲಿ ಬೆಳೆದಿರುವ ಕೂದಲನ್ನು ತೆಗೆಯಲು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ಕೆಲವು ನೈಸರ್ಗಿಕವಾಗಿ ಮುಖದಲ್ಲಿರುವ ಈ ಬೇಡದ ಕೂದಲನ್ನು ತೆಗೆಯಬಹುದು.

ಅರಿಶಿನ ಪೇಸ್ಟ್

ದಪ್ಪ ಪೇಸ್ಟ್ ಅನ್ನು ರೂಪಿಸಲು ಅರಿಶಿನ ಪುಡಿಯನ್ನು ನೀರು ಅಥವಾ ಹಾಲಿನೊಂದಿಗೆ ಬೆರೆಸಿ. ಈ ಪೇಸ್ಟ್ ಅನ್ನು ಮುಖದ ಮೇಲೆ ಕೂದಲಿರುವಲ್ಲಿ ಹಾಕಿ, ಸುಮಾರು 15-20 ನಿಮಿಷಗಳ ಕಾಲ ಒಣಗಲು ಬಿಡಿ. ಆ ಬಳಿಕ ಬೆರಳನ್ನು ಒದ್ದೆಯಾಗಿಸಿಕೊಂಡು ಸ್ಕ್ರಬ್ ಮಾಡಿ, ಮುಖವನ್ನು ನೀರಿನಿಂದ ತೊಳೆಯಿರಿ.

ಪಪ್ಪಾಯಿ ಮತ್ತು ಅರಿಶಿನ ಮಾಸ್ಕ್

ಮಾಗಿದ ಪಪ್ಪಾಯಿಯನ್ನು ಮ್ಯಾಶ್ ಮಾಡಿ, ಅದಕ್ಕೆ ಒಂದು ಚಮಚ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. 15-20 ನಿಮಿಷಗಳ ಕಾಲ ಹಾಗೆಯೇ ಬಿಟ್ಟು, ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ.

ಸಕ್ಕರೆ ಮತ್ತು ನಿಂಬೆ ಪೇಸ್ಟ್

ಒಂದು ಚಮಚ ಸಕ್ಕರೆ, ಒಂದು ಚಮಚ ಜೇನುತುಪ್ಪ ಮತ್ತು ಕೆಲ ಹನಿಯಷ್ಟು ನಿಂಬೆ ರಸವನ್ನು ಬೆರೆಸಿ ಜಿಗುಟಾದ ಪೇಸ್ಟ್ ಮಾಡಿಕೊಳ್ಳಿ.ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ನಿಮಿಷಗಳ ಕಾಲ ಒಣಗಲು ಬಿಡಿ. ವಿರುದ್ಧ ದಿಕ್ಕಿನಲ್ಲಿ ನಿಧಾನವಾಗಿ ಸ್ಕ್ರಬ್ ಮಾಡಿ ಬಳಿಕ ಮುಖವನ್ನು ತಣ್ಣಗಿನ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ: ಯಾವಾಗಲೂ ಆಯಾಸ ಎನ್ನುತ್ತೀರಾ, ದಣಿವು ನೀಗಿಸಲು ಈ ಮನೆ ಮದ್ದು ಟ್ರೈ ಮಾಡಿ

ಕಡಲೆ ಹಿಟ್ಟಿನ ಮಾಸ್ಕ್

ಒಂದು ಚಮಚ ಅರಿಶಿನಕ್ಕೆ, ಸ್ವಲ್ಪ ನೀರಿನೊಂದಿಗೆ ಎರಡು ಚಮಚ ಕಡಲೆ ಹಿಟ್ಟನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಸ್ವಲ್ಪ ಸಮಯದವರೆಗೆ ಒಣಗಲು ಬಿಡಿ. ಒದ್ದೆಯಾದ ಬೆರಳುಗಳನ್ನು ಬಳಸಿ ಅದನ್ನು ನಿಧಾನವಾಗಿ ಮಸಾಜ್ ಮಾಡಿ ನೀರಿನಿಂದ ಮುಖ ತೊಳೆದುಕೊಳ್ಳಿ.

*ಮಸೂರ ಬೇಳೆ ಮತ್ತು ಆಲೂಗಡ್ಡೆ ಮಾಸ್ಕ್ *

ಮಸೂರ ಬೇಳೆಯನ್ನು ರಾತ್ರಿಯಿಡೀ ನೆನೆಸಿಟ್ಟು, ಬೆಳಗ್ಗೆ ಪೇಸ್ಟ್ ಮಾಡಿ. ಇದಕ್ಕೆ ಸ್ವಲ್ಪ ಆಲೂಗಡ್ಡೆ ರಸವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಒಣಗಲು ಬಿಡಿ. ಆ ಬಳಿಕ ನಿಧಾನವಾಗಿ ಸ್ಕ್ರಬ್ ಮಾಡಿ ತಣ್ಣಗಿನ ನೀರಿನಿಂದ ಮುಖ ತೊಳೆಯಿರಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’