ನಕಾರಾತ್ಮಕ ಜನರನ್ನು ಗುರುತಿಸುವುದು ಹೇಗೆ? ಈ ಗುಣಗಳಿವೆಯೇ ಒಮ್ಮೆ ನೋಡಿ

ಜೀವನದಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಮುಖ್ಯವಾಗುತ್ತಾರೆ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯಿಂದಲೂ ಹೊಸದ್ದನ್ನು ಕಲಿಯುತ್ತೇವೆ. ಕೆಲವರು ಜೀವನದಲ್ಲಿ ಒಳ್ಳೆಯದನ್ನು ಕಲಿಸಿದರೆ ಇನ್ನು ಕೆಲ ಜನರು ತಮ್ಮಲ್ಲಿರುವ ನಕಾರಾತ್ಮಕ ಯೋಚಿಸುವ ಗುಣವನ್ನೇ ಇತರರಿಗೂ ಹಂಚುತ್ತಾರೆ. ಆದರೆ ಈ ಜನರನ್ನು ಕಂಡುಹಿಡಿಯುವುದು ಕಷ್ಟವೇನಲ್ಲ, ಈ ಗುಣಗಳಿವೆಯೇ ಎಂದು ಒಮ್ಮೆ ಗಮನಿಸಿ, ಹಾಗಿದ್ದರೆ ಈ ಜನರೊಂದಿಗೆ ಜಾಗರೂಕರಾಗಿರಿ.

ನಕಾರಾತ್ಮಕ ಜನರನ್ನು ಗುರುತಿಸುವುದು ಹೇಗೆ? ಈ ಗುಣಗಳಿವೆಯೇ ಒಮ್ಮೆ ನೋಡಿ
ಸಾಂದರ್ಭಿಕ ಚಿತ್ರ
Edited By:

Updated on: Feb 14, 2025 | 2:38 PM

ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಕೆಲವರು ತಮ್ಮ ಜೀವನವನ್ನು ಧನಾತ್ಮಕವಾಗಿ ತೆಗೆದುಕೊಂಡು ಹೋಗುವ ಮೂಲಕ ಯಶಸ್ಸು ಗಳಿಸುತ್ತಾರೆ. ಇನ್ನು ಕೆಲವರಲ್ಲಿ ಹಲವಾರು ರೀತಿಯ ಯೋಚನೆಗಳು ಮನಸ್ಸಿನಲ್ಲಿ ಹರಿದಾಡುತ್ತಿರುತ್ತವೆ, ಕೆಲವರಿಗಂತೂ ಬಿಟ್ಟು ಬಿಡದೆ ಮನಸ್ಸಿನಲ್ಲಿ ನಾನಾ ರೀತಿಯ ಯೋಚನೆಗಳು, ಗೊಂದಲಗಳು, ಅಸ್ಪಷ್ಟತೆ ಕಾಡುತ್ತಿರುತ್ತವೆ. ಏನೇ ಮಾಡಲು ಹೋದರೂ ಕೆಲಸವು ಪೂರ್ಣಗೊಳ್ಳದೇ ಹೋದರೆ ಏನು ಮಾಡೋದು ಹೀಗೆ ಕೆಟ್ಟ ಅಲೋಚನೆಗಳೇ ತುಂಬಿರುತ್ತದೆ. ಈ ರೀತಿ ನಕಾರಾತ್ಮಕ ವ್ಯಕ್ತಿಗಳನ್ನು ಗುರುತಿಸುವುದು ಹೇಗೆ? ಈ ಗುಣಗಳಿದ್ದರೆ ಅಂತಹ ಜನರಿಂದ ದೂರವಿರುವುದು ಉತ್ತಮ.

  • ಇತರರ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ : ನಕಾರಾತ್ಮಕ ವ್ಯಕ್ತಿಗಳು ಯಾವಾಗಲೂ ಇತರರ ಮೇಲೆ ಪ್ರಾಬಲ್ಯ ಸಾಧಿಸಲು ಬಯಸುತ್ತಾರೆ. ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಇಚ್ಛೆಗೆ ವಿರುದ್ಧವಾಗಿ ವಿವಿಧ ಕೆಲಸಗಳನ್ನು ಮಾಡಲು ಒತ್ತಾಯಿಸುತ್ತಾರೆ. ಈ ಜನರು ಇತರರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಲ್ಲೇ ಖುಷಿ ಕಾಣುತ್ತಾರೆ. ಹೀಗಾಗಿ ಈ ಜನರು ನಿಮ್ಮ ಸುತ್ತಮುತ್ತಲಿನದ್ದರೆ ನಿಮ್ಮತನ ಹಾಗೂ ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಅಂತಹ ವ್ಯಕ್ತಿಗಳಿಂದ ದೂರ ವಿರುವುದು ಒಳ್ಳೆಯದು.
  • ಈ ಜನರಿಗೆ ಸುಳ್ಳೇ ಬಂಡವಾಳ : ನಕಾರಾತ್ಮಕವಾಗಿರುವ ಜನರ ಅಸ್ತ್ರವೇ ಸುಳ್ಳೇ ಬಂಡವಾಳವಾಗಿರುತ್ತದೆ. ಈ ವ್ಯಕ್ತಿಗಳು ತಮ್ಮ ಕೆಟ್ಟ ಗುಣಗಳನ್ನು ಮುಚ್ಚಿಡಲು ನಿರಂತರವಾಗಿ ಸುಳ್ಳು ಹೇಳಿ ಇತರರನ್ನು ನಂಬಿಸುತ್ತಾರೆ. ಆದರೆ ಈ ಜನರು ನಂಬಿಕೆಯನ್ನು ಕಳೆದುಕೊಳ್ಳುವುದರ ಜೊತೆಗೆ ಇತರರ ಮನಸ್ಸಿನ ಶಾಂತಿಯನ್ನು ಹಾಳು ಮಾಡುತ್ತಾರೆ. ಈ ಗುಣಗಳಿರುವ ವ್ಯಕ್ತಿಗಳಿಂದ ಗುರುತಿಸಿ ದೂರವಿರುವುದು ಉತ್ತಮ.
  • ದುರಹಂಕಾರಿಗಳಾಗಿರುತ್ತಾರೆ : ನಕಾರಾತ್ಮಕ ವ್ಯಕ್ತಿಗಳು ದುರಹಂಕಾರಿಗಳಾಗಿರುತ್ತಾರೆ. ತಾವು ಹೇಳಿದ್ದು ಮಾಡಿದ್ದು ಸರಿಯೆನ್ನುವ ಭಾವದೊಂದಿಗೆ ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಎಲ್ಲರ ಮುಂದೆ ತಮ್ಮ ಬಗ್ಗೆ ಹೊಗಳಿಕೊಳ್ಳುತ್ತಾ ಅದರಲ್ಲೇ ಖುಷಿ ಕಾಣುತ್ತಾರೆ. ಇತರರ ಬಗ್ಗೆ ಯಾವುದೇ ಸಹಾನುಭೂತಿಯನ್ನು ತೋರಿಸುವುದಿಲ್ಲ. ಈ ವ್ಯಕ್ತಿಗಳು ಭಾವನೆಗಳಿಗೆ ಪೆಟ್ಟು ನೀಡುವ ಮೂಲಕ ನೋಯಿಸುತ್ತಾರೆ.
  • ನಿರಾಶೆ, ವೈಫಲ್ಯದ ಬಗ್ಗೆ ಮಾತನಾಡುವುದು : ತಮ್ಮ ಸುತ್ತಮುತ್ತಲಿನ ಜನರಲ್ಲಿ ನಿರಾಶೆ, ವೈಫಲ್ಯದ ಬಗ್ಗೆ ಸದಾ ಮಾತನಾಡುತ್ತಿದ್ದರೆ ಅವರನ್ನು ನಕಾರಾತ್ಮಕ ವ್ಯಕ್ತಿಗಳೆಂದು ಅರ್ಥ ಮಾಡಿಕೊಳ್ಳಿ. ಈ ವ್ಯಕ್ತಿಗಳಿಗೆ ಇತರರ ಯಶಸ್ಸನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇತರರು ಗೆಲುವನ್ನು ಸಂಭ್ರಮಿಸುತ್ತಿದ್ದರೂ ನಿರಾಶೆ ಹಾಗೂ ವೈಫಲ್ಯದ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಅವರ ಮಾತುಗಳೇ ಇತರರ ಪಾಸಿಟಿವ್ ಆಗಿ ಆಲೋಚಿಸಿದಾಗೆ ಮಾಡುತ್ತದೆ. ಅವರು ತಮ್ಮ ಆಲೋಚನೆಗಳಿಂದ ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ಜೀವನದಲ್ಲಿ ಧನಾತ್ಮಕವಾಗಿರಲು ಬಯಸಿದರೆ ಈ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದು ಉತ್ತಮ.
  • ನಾಟಕೀಯವಾಗಿ ಗಮನ ಸೆಳೆಯುವ ಸ್ವಭಾವ : ನಕಾರಾತ್ಮಕ ಸ್ವಭಾವ ಹೊಂದಿರುವ ಜನರು ಸಣ್ಣಪುಟ್ಟ ವಿಷಯಗಳನ್ನು ಹೇಳುವಾಗಲೂ ನಾಟಕೀಯವಾಗಿ ವರ್ತಿಸುತ್ತಾರೆ. ಈ ಮೂಲಕ ಎಲ್ಲರ ಗಮನ ಸೆಳೆಯಲು ಇಷ್ಟ ಪಡುತ್ತಾರೆ. ಹೀಗಾಗಿ ಇಂತಹ ಜನರ ಸಹವಾಸವು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಾರೆ. ಅದಕ್ಕಾಗಿಯೇ ಅಂತಹ ಜನರ ಸಹವಾಸದಿಂದ ದೂರವಿದ್ದರೆ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ