ಕಹಿ ಬೇವಿನ ಎಲೆ, ಬೇರು ತೊಗಟೆ ಎಲ್ಲದರಲ್ಲಿಯೂ ಔಷಧೀಯ ಗುಣವನ್ನು ಹೊಂದಿದೆ. ಈ ಬೇವಿನ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಹಲವು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಹಲವಾರು ಔಷಧೀಯ ಉತ್ಪನ್ನ ತಯಾರಿಕಾ ಕಂಪನಿಗಳು ಈ ಕಹಿಬೇವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಹೀಗಾಗಿ ಈ ಕಹಿ ಬೇವು ಗುಣದಲ್ಲಿ ಕಹಿಯಾಗಿದ್ದರೂ ಆರೋಗ್ಯದ ವಿಚಾರದಲ್ಲಿ ಸಿಹಿಯಾಗಿದೆ
* ಚರ್ಮದ ರೋಗದಿಂದ ಬಳಲುತ್ತಿರುವವರು ಬೇವಿನ ಸೊಪ್ಪನ್ನು ಹಾಕಿ ಕಾಯಿಸಿದ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆಗಳು ದೂರವಾಗುತ್ತದೆ.
* ಬೇವು ಮತ್ತು ಅರಶಿನ ಹಾಕಿ ಕಾಯಿಸಿದ ನೀರಿನಲ್ಲಿ ಸಿಡುಬು ರೋಗಿಗಳು ಸ್ನಾನ ಮಾಡಿದರೆ ರೋಗವು ಗುಣಮುಖವಾಗುತ್ತದೆ.
* ಒಣಗಿದ ಬೇವಿನೆಲೆಯ ಪುಡಿ ಮತ್ತು ತುಳಸಿ ಎಲೆಯ ಪುಡಿಗಳನ್ನು ಸೇರಿಸಿ, ನೀರು ಹಾಕಿ ಪೇಸ್ಟ್ ತಯಾರಿಸಿಕೊಂಡು, ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಕೂದಲಿನ ಹೊಟ್ಟು ಕಡಿಮೆಯಾಗುತ್ತದೆ.
* ಜಂತುಹುಳುವಿನ ಸಮಸ್ಯೆಯಿದ್ದವರು 10 ಗ್ರಾಮ್ ಬೇವಿನ ಚಿಗುರೆಲೆ ಹಾಗೂ 10 ಗ್ರಾಮ್ ಓಮವನ್ನು ಅರೆದು ಅದನ್ನು ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದು ಒಳ್ಳೆಯದು.
* ಮೊಡವೆಯ ನಿವಾರಣೆಗಾಗಿ ಬೇವು, ಲೋದ್ರ, ಅರಿಶಿನ, ಕೆಂಪು ಶ್ರೀಗಂಧ, ಸುಗಂಧಿ ಬೇರು, ಅತಿಮಧುರ, ಬಜೆ, ಮಂಜಿಷ್ಟಗಳನ್ನು ತಲಾ 10 ಗ್ರಾಮಿನಂತೆ ತೆಗೆದುಕೊಂಡು, ನುಣ್ಣಗೆ ಪುಡಿ ಮಾಡಿ ಮೊಸರಿನಲ್ಲಿ ಕಲಸಿ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಮುಖ ತೊಳೆಯಬೇಕು.
ಇದನ್ನೂ ಓದಿ: ನೀವು ಪ್ರತಿದಿನವು ಖುಷಿ ಖುಷಿಯಿಂದ ಇರಬೇಕೇ ಈ ಟಿಪ್ಸ್ಗಳನ್ನು ಪಾಲಿಸಿ
* ಕಹಿಬೇವಿನ ಎಲೆ ಹಾಗೂ ಗೋರಂಟಿ ಎಲೆಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಹಾಕಿ ನೀರೆಲ್ಲ ಇಂಗುವವರೆಗೆ ಕುದಿಸಬೇಕು. ಈ ನೀರಿಗೆ ಹೊಂಗೆ ಎಣ್ಣೆ ಹಾಕಿ ಇಸುಬಿಗೆ ಹಚ್ಚಿದರೆ ಇಸುಬುವಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.
* ಕಣ್ಣಿನ ಉರಿ, ಕಣ್ಣು ಕೆಂಪಗಾಗುವ ಸಮಸ್ಯೆಯಿದ್ದರೆ ಕಹಿಬೇವಿನ ಎಲೆಯ ಕಷಾಯವನ್ನು ಮಾಡಿ ಸೇವಿಸಿದರೆ ಶಮನವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ