AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಪ್ರತಿದಿನವು ಖುಷಿ ಖುಷಿಯಿಂದ ಇರಬೇಕೇ ಈ ಟಿಪ್ಸ್​​​ಗಳನ್ನು ಪಾಲಿಸಿ

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗಿನ ಸಮಯವು ಖುಷಿ ಖುಷಿಯಿಂದ ಇರಬೇಕು ಎಂದುಕೊಳ್ಳುತ್ತೇವೆ. ಆದರೆ ಎಲ್ಲಾ ದಿನವನ್ನು ಖುಷಿಯಾಗಿರಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವು ಸಮಯದಲ್ಲಿ ಉದ್ಯೋಗದಲ್ಲಿನ ಒತ್ತಡ, ಕೌಟುಂಬಿಕ ಜೀವನದಲ್ಲಿನ ಸಮಸ್ಯೆಗಳಿಂದ ನೆಮ್ಮದಿ ಹಾಳಾಗಿ ದಿನವು ದುಃಖದಿಂದಲೇ ಕೂಡಿರುತ್ತದೆ. ಹೀಗಾಗಿ ಮೂಡ್ ಚೆನ್ನಾಗಿದ್ದರೆ ಆ ದಿನವು ಚೆನ್ನಾಗಿ ಇದ್ದ ಹಾಗೆಯೇ. ಆದರೆ ಕೆಲವು ಒಳ್ಳೆಯ ಅಭ್ಯಾಸಗಳಿಂದ ಆ ದಿನವನ್ನು ಚೆನ್ನಾಗಿ ಇರಿಸಿಕೊಳ್ಳಬಹುದು.

ನೀವು ಪ್ರತಿದಿನವು ಖುಷಿ ಖುಷಿಯಿಂದ ಇರಬೇಕೇ ಈ ಟಿಪ್ಸ್​​​ಗಳನ್ನು ಪಾಲಿಸಿ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Jan 25, 2024 | 5:45 PM

Share

ಜೀವನ ಎನ್ನುವುದು ಸುಖ ದುಃಖಗಳ ಸಮ್ಮಿಲನ. ಎಲ್ಲರೂ ತಮ್ಮ ಜೀವನದಲ್ಲಿ ಸದಾ ಸಂತೋಷವನ್ನು ಕಾಣಲು ಸಾಧ್ಯವಿಲ್ಲ. ಹಾಗಂತ ದುಃಖ ಕೂಡ ಜೀವನದಲ್ಲಿ ಶಾಶ್ವತವಲ್ಲ. ಖುಷಿಯ ಹಿಂದೆ ದುಃಖ, ದುಃಖದ ಹಿಂದೆ ಖುಷಿ ಇವೆರೆಡು ಮನುಷ್ಯನ ಜೀವನದಲ್ಲಿ ಬರುತ್ತಲೇ ಇರುತ್ತದೆ. ಬೆಳಗ್ಗೆ ಹಾಸಿಗೆಯಿಂದ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಖುಷಿಖುಷಿಯಿಂದ ಕೂಡಿದ್ದರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ದಿನವನ್ನು ಖುಷಿಯಾಗಿ ಕಳೆಯಬೇಕು ಎನ್ನುವವರು ತಮ್ಮ ದೈನಂದಿನ ದಿನಚರಿಯನ್ನು ಬದಲಾಯಿಸಿಕೊಳ್ಳಬೇಕು.

ದಿನವನ್ನು ಖುಷಿಯಾಗಿಡಲು ಈ ಅಭ್ಯಾಸವನ್ನು ರೂಢಿಸಿಕೊಳ್ಳಿ

* ಬೆಳಗ್ಗೆ ಬೇಗನೇ ಎದ್ದೇಳಿ : ಬೆಳಗ್ಗೆ ಬೇಗನೇ ಎದ್ದೇಳುವುದು ಅಭ್ಯಾಸವು ದಿನವನ್ನು ಫ್ರೆಶ್ ಆಗಿ ಇರಿಸುತ್ತವೆ. ಹೆಚ್ಚಿನವರು ಲೇಟ್ ಆಗಿ ಎದ್ದು ತಮ್ಮ ದೈನಂದಿನ ದಿನಚರಿಯನ್ನು ಆರಂಭಿಸುತ್ತಾರೆ. ಬೆಳಗ್ಗೆ ಎದ್ದೇಳಲು ಆಗುವುದಿಲ್ಲ ಎನ್ನುವವರು ಅಲಾರಾಂ ಇಟ್ಟುಕೊಳ್ಳಿ. ಇಲ್ಲವಾದರೆ ರಾತ್ರಿ ಬೇಗನೇ ಮಲಗುವ ಅಭ್ಯಾಸವನ್ನು ಮಾಡಿಕೊಳ್ಳಿ.

* ಮುಂಜಾನೆ ಹಾಗೂ ಮುಸ್ಸಂಜೆ ಒಂದು ಕಾಲ್ನಡಿಗೆ ಇರಲಿ : ಹೆಚ್ಚಿನವರಿಗೆ ಬೆಳಗ್ಗೆ ಹಾಗೂ ಸಂಜೆಯ ವೇಳೆ ವಾಕಿಂಗ್ ಗೆ ಹೋಗುವ ಹವ್ಯಾಸವಿರುತ್ತದೆ. ಬೆಳಗ್ಗಿನ ವೇಳೆಯಲ್ಲಿ ವಾಕಿಂಗ್ ಹೋಗುವುದರಿಂದ ಶುದ್ಧವಾದ ಗಾಳಿಯನ್ನು ಸೇವಿಸುತ್ತೀರಿ. ಹೀಗಾಗಿ ಆ ದಿನವನ್ನು ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಕೆಲವರೂ ಸಂಜೆಯ ಸಮಯದಲ್ಲಿ ವಾಕಿಂಗ್ ಗೆ ಹೋಗುತ್ತಾರೆ ನಿಮ್ಮ ಜೊತೆಗೆ ನೀವು ಸಮಯ ಕಳೆಯಬೇಕು ಎನ್ನುವವರಿಗೆ ಈ ವಾಕಿಂಗ್ ಉತ್ತಮ ಆಯ್ಕೆಯಾಗಿದೆ.

* ಧ್ಯಾನ ಮಾಡುವ ಅಭ್ಯಾಸವಿರಲಿ : ಬೆಳಗ್ಗೆ ಎದ್ದ ಕೂಡಲೇ ಧ್ಯಾನ ಮಾಡಿದರೆ ಒತ್ತಡ ಹಾಗೂ ಆತಂಕಗಳಿಂದ ಮನಸ್ಸನ್ನು ಶಾಂತಗೊಳಿಸುತ್ತದೆ. ಅದಲ್ಲದೇ ಚಂಚಲ ಮನಸ್ಸನ್ನು ಏಕಾಗ್ರತೆಯತ್ತ ಕೊಂಡೊಯ್ಯಲು ಸಹಾಯಕವಾಗಿದೆ. ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಹಾಗೂ ದೇಹವನ್ನು ನಿಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯ.

ಇದನ್ನೂ ಓದಿ: ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿವೆ ವಿವಿಧ ತಿರಂಗಾ ದುಪಟ್ಟಾಗಳು

* ವ್ಯಾಯಾಮ ಮಾಡಿ: ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮ ಮಾಡಿ ದೇಹವನ್ನು ದಂಡಿಸಿದರೆ ಆರೋಗ್ಯಕ್ಕೂ ಒಳ್ಳೆಯದು. ಜಾಗಿಂಗ್, ಜಂಪಿಂಗ್, ಕಾರ್ಡಿಯೋ ವ್ಯಾಯಾಮಗಳನ್ನು ಮಾಡುವುದು, ಸಂಗೀತ ಕೇಳುವುದರಿಂದ ದಿನವು ಸಂತೋಷದಿಂದ ಕೂಡಿರುತ್ತದೆ.

* ಹಗಲು ನಿದ್ದೆ ಮಾಡುವುದನ್ನು ತಪ್ಪಿಸಿ : ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಎದ್ದೇಳುವ ಅಭ್ಯಾಸವಿದ್ದರೆ ಒಳ್ಳೆಯದು. ಆದರೆ ಹಗಲಿನಲ್ಲಿ ನಿದ್ದೆ ಮಾಡುವುದು ದೇಹ ಅಲಸ್ಯದಿಂದ ಕೂಡಿರುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸು ಹಾಗೂ ದೇಹವು ಸ್ಪಂದಿಸುವುದಿಲ್ಲ. ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ 10 ರಿಂದ 15 ನಿಮಿಷ ನಿದ್ರಿಸಿ. ಅದಕ್ಕಿಂತ ಹೆಚ್ಚಿನ ಸಮಯವು ನಿದ್ದೆ ಮಾಡುವುದರಿಂದ ತೂಕ ಹೆಚ್ಚಳ ಸೇರಿದಂತೆ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:44 pm, Thu, 25 January 24

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ