Republic Day 2024: ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿವೆ ವಿವಿಧ ತಿರಂಗಾ ದುಪಟ್ಟಾಗಳು
ಜನವರಿ 26, 1950ರಂದು ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತ ಗಣರಾಜ್ಯವಾದ ದಿನವಾಗಿದೆ. ಈ ದಿನವನ್ನು ಪ್ರತಿಯೊಬ್ಬ ಭಾರತೀಯರು ನೆನಪಿಸಿಕೊಳ್ಳುವಂತಹದ್ದು. ಈ ಬಾರಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲು ಸಿದ್ಧತೆಗಳು ನಡೆಯುತ್ತಿದೆ. ಗಣರಾಜ್ಯೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ತಿರಂಗಾ ದುಪಟ್ಟಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಫ್ಯಾಷನ್ ಪ್ರಿಯರು ಈ ದಿನಕ್ಕೆ ಒಪ್ಪುವಂತಹ ಉಡುಗೆಗೆ ತಿರಂಗಾ ದುಪಟ್ಟಾಗಳನ್ನು ಧರಿಸಿ ಆಕರ್ಷಕವಾಗಿ ಕಂಗೊಳಿಸಬಹುದು.
ಗಣರಾಜ್ಯೋತ್ಸವ ದಿನಕ್ಕೆ ಒಂದೇ ಒಂದು ದಿನವಷ್ಟೇ ಬಾಕಿಯಿವೆ. ಈ ದಿನಕ್ಕೆ ಸರಿಹೊಂದುವಂತಹ ಉಡುಗೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿಯೂ ಈ ತ್ರಿವರ್ಣ ಬಣ್ಣದ ದುಪ್ಪಟ್ಟಾಗಳು ಮಾರುಕಟ್ಟೆಗೆ ಬಂದಿದ್ದು, ಇದನ್ನು ಸಲ್ವಾರ್, ಚೂಡಿದಾರ್ ಗಳೊಂದಿಗೆ ಧರಿಸಬಹುದಾಗಿದೆ. ಈ ತಿರಂಗಾ ಬಣ್ಣದ ದುಪಟ್ಟಾಗಳು ಸಖತ್ ಟ್ರೆಂಡಿಯಾಗಿದ್ದು, ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿವೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ದುಪಟ್ಟಾಗಳಿವು
*ಕಾಟನ್ ತಿರಂಗಾ ದುಪಟ್ಟಾ: ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ತಿರಂಗಾ ದುಪಟ್ಟಾಗಳಲ್ಲಿ ಕಾಟನ್ ತಿರಂಗಾ ದುಪಟ್ಟಾ ಕೂಡ ಒಂದು. ಈ ಹೆಸರೇ ಸೂಚಿಸುವಂತೆ ಕಾಟನ್ ದುಪಟ್ಟಾವಾಗಿರುವುದರಿಂದ ಬೆಲೆಯೂ ದುಬಾರಿಯಾಗಿದೆ. ಬಿಳಿ ಬಣ್ಣದ ಸದಾ ಚೂಡಿದಾರ್ ಹಾಗೂ ಸಲ್ವಾರ್ ಗೆ ಶಾಲ್ ನಂತೆಯೇ ಬಳಸಬಹುದಾಗಿದ್ದು, ಎಲ್ಲಾ ಅಂಗಡಿಗಳಲ್ಲಿ ಈ ದುಪಟ್ಟಾ ಲಭ್ಯವಿದೆ.
* ಸಾಫ್ಟ್ ಕ್ರೇಪ್ ತಿರಂಗಾ ದುಪಟ್ಟಾ : ಈ ಸಾಫ್ಟ್ ಫ್ಯಾಬ್ರಿಕ್‌ನ ಕ್ರೇಪ್‌ನ ತಿರಂಗಾ ದುಪಟ್ಟಾಗಳಿಗೆ ಬೇಡಿಕೆಯಿದ್ದು, ಈ ದುಪಟ್ಟಾಗಳು ಹುಡುಗಿಯರಿಗೆ ಮಾತ್ರವಲ್ಲದೇ ವಯಸ್ಸು ಆದವರಿಗೂ ಕೂಡ ಹೇಳಿಮಾಡಿಸಿದ್ದಾಗಿದೆ. ನಾನಾ ರೀತಿಯಲ್ಲಿ ಈ ದುಪಟ್ಟಾವನ್ನು ಧರಿಸಬಹುದಾಗಿದೆ.
* ರಾಣಿ ಸಾಹಿಬಾ ಮಹಿಳಾ ತಿರಂಗಾ ದುಪಟ್ಟಾ : ಈ ದುಪಟ್ಟಾವು ಶಿಫಾನ್ ಫ್ಯಾಬ್ರಿಕ್‌ನಿಂದ ತಯಾರಿಸಲಾಗಿದೆ. ಹಗುರವಾಗಿದ್ದು, ಆರಾಮದಾಯಕವಾಗಿರುವ ಕಾರಣ ಮಹಿಳೆಯರು ಈ ದುಪಟ್ಟಾವನ್ನು ಇಷ್ಟ ಪಡುತ್ತಾರೆ.
ಇದನ್ನೂ ಓದಿ: ನಿಮ್ಮದು ಆಕರ್ಷಣೀಯ ವ್ಯಕ್ತಿತ್ವವಾಗಬೇಕೇ? ಇತರರನ್ನು ನಿಮ್ಮತ್ತ ಸೆಳೆಯಲು ಈ ಗುಣಗಳನ್ನು ಅಳವಡಿಸಿಕೊಳ್ಳಿ
*ಕಾಟನ್ ಸಿಲ್ಕ್ ತಿರಂಗಾ ದುಪಟ್ಟಾ : ಇದು ಫ್ಯಾಬ್ರಿಕ್‌ನ ತಿರಂಗಾ ದುಪಟ್ಟಾವಾಗಿರುವುದರಿಂದ ಗ್ರ್ಯಾಂಡ್ ಲುಕ್ ನೀಡುತ್ತದೆ. ಹೀಗಾಗಿ ಲೆಹೆಂಗಾ, ಸಲ್ವಾರ್ ಉಡುಗೆಗಳಿಗೆ ಮ್ಯಾಚ್ ಮಾಡಿದರೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.
* ಜೈಪುರಿ ರಾಜಸ್ಥಾನಿ ರೇಷ್ಮೆ ಬಂಧನಿ ಬಂಧೇಜ್ ತಿರಂಗಾ ದುಪಟ್ಟಾ : ಭಾರತದ ರಾಜಸ್ಥಾನದ ಸಾಂಪ್ರದಾಯಿಕ ದುಪಟ್ಟಾ ಆಗಿದ್ದು, ಇದು ರೇಷ್ಮೆಯಿಂದ ಮಾಡಲ್ಪಟ್ಟಿದೆ. ಬಂಧನಿ ಹಾಗೂ ಬಂಧೇಜ್ ವಿನ್ಯಾಸಗಳೊಂದಿಗೆ ಇದು ತ್ರಿವರ್ಣ ಬಣ್ಣದೊಂದಿಗೆ ಆಕರ್ಷಕವಾಗಿದೆ. ಸಾದಾ ಸಲ್ವಾರ್ ಸೂಟ್ ಗೆ ಹೊಂದುವಂತೆ ಧರಿಸಿಕೊಳ್ಳಬಹುದು.