ಆರೋಗ್ಯಕ್ಕೆ ಸಂಜೀವಿನಿ ಈ ಕಹಿಬೇವಿನ ಎಲೆ, ಏನಿದರ ಆರೋಗ್ಯ ಪ್ರಯೋಜನಗಳು?

ಕಹಿ ಬೇವನ್ನು ಯಾರು ಕೂಡ ಇಷ್ಟ ಪಡುವುದಿಲ್ಲ. ಕಹಿ ಬೇವಿನ ಹೆಸರು ಕೇಳಿದ ಕೂಡಲೇ ಎಲ್ಲರೂ ಕೂಡ ಮುಖವನ್ನು ಸಿಂಡರಿಸಿಕೊಳ್ಳುತ್ತಾರೆ. ಆದರೆ ಆರೋಗ್ಯದಲ್ಲಿ ಏನೇ ಸಮಸ್ಯೆ ಇದ್ದರೂ, ನೈಸರ್ಗಿಕವಾಗಿ ಗುಣ ಪಡಿಸುವ ಏಕೈಕ ಸಸ್ಯವು ಇದಾಗಿದ್ದು, ಸೌಂದರ್ಯ ವರ್ಧಕ ಉತ್ಪನ್ನಗಳಲ್ಲಿ ಈ ಕಹಿಬೇವನ್ನು ಬಳಸಲಾಗುತ್ತದೆ. ಆಂಟಿ ಬ್ಯಾಕ್ಟೀರಿಯಲ್‌, ಆಂಟಿ ವೈರಲ್‌ ಗುಣಗಳನ್ನು ಹೊಂದಿರುವ ಕಹಿಬೇವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ನಿವಾರಕವಾಗಿ ಕೆಲಸ ಮಾಡುತ್ತದೆ.

ಆರೋಗ್ಯಕ್ಕೆ ಸಂಜೀವಿನಿ ಈ ಕಹಿಬೇವಿನ ಎಲೆ, ಏನಿದರ ಆರೋಗ್ಯ ಪ್ರಯೋಜನಗಳು?
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2024 | 6:18 PM

ಕಹಿ ಬೇವಿನ ಎಲೆ, ಬೇರು ತೊಗಟೆ ಎಲ್ಲದರಲ್ಲಿಯೂ ಔಷಧೀಯ ಗುಣವನ್ನು ಹೊಂದಿದೆ. ಈ ಬೇವಿನ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಹಲವು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ಹಲವಾರು ಔಷಧೀಯ ಉತ್ಪನ್ನ ತಯಾರಿಕಾ ಕಂಪನಿಗಳು ಈ ಕಹಿಬೇವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಹೀಗಾಗಿ ಈ ಕಹಿ ಬೇವು ಗುಣದಲ್ಲಿ ಕಹಿಯಾಗಿದ್ದರೂ ಆರೋಗ್ಯದ ವಿಚಾರದಲ್ಲಿ ಸಿಹಿಯಾಗಿದೆ

ಕಹಿಬೇವು ಸೊಪ್ಪಿನ ಆರೋಗ್ಯ ಪ್ರಯೋಜನಗಳು

* ಚರ್ಮದ ರೋಗದಿಂದ ಬಳಲುತ್ತಿರುವವರು ಬೇವಿನ ಸೊಪ್ಪನ್ನು ಹಾಕಿ ಕಾಯಿಸಿದ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆಗಳು ದೂರವಾಗುತ್ತದೆ.

* ಬೇವು ಮತ್ತು ಅರಶಿನ ಹಾಕಿ ಕಾಯಿಸಿದ ನೀರಿನಲ್ಲಿ ಸಿಡುಬು ರೋಗಿಗಳು ಸ್ನಾನ ಮಾಡಿದರೆ ರೋಗವು ಗುಣಮುಖವಾಗುತ್ತದೆ.

* ಒಣಗಿದ ಬೇವಿನೆಲೆಯ ಪುಡಿ ಮತ್ತು ತುಳಸಿ ಎಲೆಯ ಪುಡಿಗಳನ್ನು ಸೇರಿಸಿ, ನೀರು ಹಾಕಿ ಪೇಸ್ಟ್ ತಯಾರಿಸಿಕೊಂಡು, ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಕೂದಲಿನ ಹೊಟ್ಟು ಕಡಿಮೆಯಾಗುತ್ತದೆ.

* ಜಂತುಹುಳುವಿನ ಸಮಸ್ಯೆಯಿದ್ದವರು 10 ಗ್ರಾಮ್ ಬೇವಿನ ಚಿಗುರೆಲೆ ಹಾಗೂ 10 ಗ್ರಾಮ್ ಓಮವನ್ನು ಅರೆದು ಅದನ್ನು ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದು ಒಳ್ಳೆಯದು.

* ಮೊಡವೆಯ ನಿವಾರಣೆಗಾಗಿ ಬೇವು, ಲೋದ್ರ, ಅರಿಶಿನ, ಕೆಂಪು ಶ್ರೀಗಂಧ, ಸುಗಂಧಿ ಬೇರು, ಅತಿಮಧುರ, ಬಜೆ, ಮಂಜಿಷ್ಟಗಳನ್ನು ತಲಾ 10 ಗ್ರಾಮಿನಂತೆ ತೆಗೆದುಕೊಂಡು, ನುಣ್ಣಗೆ ಪುಡಿ ಮಾಡಿ ಮೊಸರಿನಲ್ಲಿ ಕಲಸಿ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಮುಖ ತೊಳೆಯಬೇಕು.

ಇದನ್ನೂ ಓದಿ: ನೀವು ಪ್ರತಿದಿನವು ಖುಷಿ ಖುಷಿಯಿಂದ ಇರಬೇಕೇ ಈ ಟಿಪ್ಸ್​​​ಗಳನ್ನು ಪಾಲಿಸಿ

* ಕಹಿಬೇವಿನ ಎಲೆ ಹಾಗೂ ಗೋರಂಟಿ ಎಲೆಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಹಾಕಿ ನೀರೆಲ್ಲ ಇಂಗುವವರೆಗೆ ಕುದಿಸಬೇಕು. ಈ ನೀರಿಗೆ ಹೊಂಗೆ ಎಣ್ಣೆ ಹಾಕಿ ಇಸುಬಿಗೆ ಹಚ್ಚಿದರೆ ಇಸುಬುವಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.

* ಕಣ್ಣಿನ ಉರಿ, ಕಣ್ಣು ಕೆಂಪಗಾಗುವ ಸಮಸ್ಯೆಯಿದ್ದರೆ ಕಹಿಬೇವಿನ ಎಲೆಯ ಕಷಾಯವನ್ನು ಮಾಡಿ ಸೇವಿಸಿದರೆ ಶಮನವಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ