ವಾಚನ್ನು ಎಡಗೈಗೆ ಧರಿಸುವುದರ ಹಿಂದಿನ ಕಾರಣವೇನು ಗೊತ್ತಾ?

ಟೈ ನೋಡುವುದಕ್ಕೆ ಮಾತ್ರವಲ್ಲದೆ, ಫ್ಯಾಷನ್‌ಗಾಗಿಯೂ ಕೈಗೆ ವಾಚ್‌ ಧರಿಸುತ್ತಾರೆ. ಆದ್ರೆ ವಿಷಯ ಏನಪ್ಪಾ ಅಂದ್ರೆ ಸಾಮಾನ್ಯವಾಗಿ ಎಲ್ಲರೂ ಎಡಗೈಗೆ ವಾಚನ್ನು ಧರಿಸುತ್ತಾರೆ. ಹೀಗೆ ಎಡಗೈಗೆ ಮಾತ್ರ ಏಕೆ ವಾಚ್‌ ಧರಿಸಲಾಗುತ್ತದೆ, ಬಲಗೈಗೆ ಏಕೆ ಯಾರು ವಾಚ್‌ ಧರಿಸೋಲ್ಲ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿದೆಯೇ? ಈ ಕುರಿತ ಇಂಟರೆಸ್ಟಿಂಗ್‌ ಮಾಹಿತಿಯನ್ನು ತಿಳಿಯಿರಿ.

ವಾಚನ್ನು ಎಡಗೈಗೆ ಧರಿಸುವುದರ ಹಿಂದಿನ ಕಾರಣವೇನು ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Google

Updated on: Jul 13, 2025 | 9:34 PM

ಕಳೆದು ಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ. ಅದಕ್ಕೆ ಹೇಳುವುದು ಟೈಮ್‌ (Time) ಎನ್ನುವಂತಹದ್ದು ತುಂಬಾನೇ ಅಮೂಲ್ಯವಾದದ್ದು ಎಂದು. ಟೈಮ್‌ ನೋಡ್ಬೇಕು, ಟೈಮ್‌ ಸೇವ್‌ ಮಾಡ್ಬೇಕು ಎನ್ನುವುದಕ್ಕಾಗಿಯೇ ಜನ ಆಗಾಗ್ಗೆ ಸಮಯ ನೋಡುತ್ತಿರುತ್ತಾರೆ. ಸಾಮಾನ್ಯವಾಗಿ ಸಮಯ ನೋಡುವುದಕ್ಕಾಗಿ ವಾಚ್‌  ಕೈಗೆ ಕಟ್ಟಿಕೊಳ್ಳುತ್ತಾರೆ. ಈಗಂತೂ ವಾಚ್‌ ಸಮಯ ನೋಡಲು ಮಾತ್ರವಲ್ಲದೆ ಇದೊಂದು ಫ್ಯಾಶನ್‌ನ ಭಾಗವಾಗಿವೆ. ಫ್ಯಾಶನ್‌ಗಾಗಿ ವಾಚ್‌ ಧರಿಸಿದರೂ ಎಲ್ಲರೂ ಎಡಗೈಗೆಯೇ (Why We Wear Watch Always On The Left Hand) ವಾಚನ್ನು ಧರಿಸುತ್ತಾರೆ. ಹೀಗೆ ಎಡಗೈಗೆ ಮಾತ್ರ ಏಕೆ ಕೈ ಗಡಿಯಾರವನ್ನು ಧರಿಸುವುದೇಕೆ ಗೊತ್ತಾ? ಇದರ ಹಿಂದಿನ ಕಾರಣವನ್ನು ತಿಳಿಯಿರಿ.

ವಾಚನ್ನು ಎಡಗೈಗೆ ಧರಿಸುವುದರ ಹಿಂದಿನ ಕಾರಣವೇನು ಗೊತ್ತಾ?

ಕೆಲವರು ವಾಚನ್ನು ಬಲಗೈಗೆ ಧರಿಸಿದರೆ ಬಹುತೇಕ ಹೆಚ್ಚಿನವರು ಎಡಗೈಗೆ ಧರಿಸುತ್ತಾರೆ. ಇದರ ಹಿಂದೆಯೂ ಇಂಟರೆಸ್ಟಿಂಗ್‌ ಕಾರಣವಿದೆಯಂತೆ ಅದೇನೆಂದರೆ, ಜನರು ಹೆಚ್ಚಾಗಿ ಕೆಲಸಕ್ಕೆ ಬಲಗೈಯನ್ನೇ ಉಪಯೋಗ ಮಾಡ್ತಾರೆ. ಹೀಗೆ ಬಲಗೈ ಹೆಚ್ಚಾಗಿ ಕಾರ್ಯನಿರತವಾಗಿರುವುದರಿಂದ, ಎಡಗೈಯಲ್ಲಿ ವಾಚ್‌ ಧರಿಸುವುದರಿಂದ ಇದರಿಂದ  ನಿಮ್ಮ ದೈನಂದಿನ ದಿನಚರಿಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ.ಮಾತ್ರವಲ್ಲದೆ ಇದರಿಂದ  ವಾಚ್‌ ಕೂಡ ಸುರಕ್ಷಿತವಾಗಿರಿಸುತ್ತದೆ ಮತ್ತು ಇದು ಬೀಳುವ ಅಪಾಯವೂ ಕಡಿಮೆ ಇರುತ್ತದೆ.  ಉದಾಹರಣೆಗೆ, ಬರೆಯುವುದು, ಟೈಪ್ ಮಾಡುವಂತಹ ಎಲ್ಲಾ ಕೆಲಸಗಳನ್ನು ಮಾಡಲು ಬಲಗೈಯನ್ನು ಬಳಸಿದಾಗ, ವಾಚನ್ನು ಎಡಗೈಗೆ ಧರಿಸುವುದರಿಂದ ಸಮಯ ನೋಡಲು ಸುಲಭವಾಗುತ್ತದೆ.

ಇದನ್ನೂ ಓದಿ: ಚಾಣಕ್ಯರು ಹೇಳ್ತಾರೆ ಯಾವತ್ತಿಗೂ ಇಂತಹ ಜನರಿಗೆ ಸಹಾಯ ಮಾಡಬಾರದೆಂದು

ಇದನ್ನೂ ಓದಿ
ಈ ನಾಲ್ಕು ಜನರನ್ನು ತಂದೆಯಂತೆಯೇ ಗೌರವಿಸಬೇಕು ಎನ್ನುತ್ತಾರೆ ಚಾಣಕ್ಯರು
“ಇಲ್ಲ” ಎಂದು ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಏಕೆ ಮುಖ್ಯ ಗೊತ್ತಾ?
ನೋಡಿ… ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ
ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ

ಇನ್ನೊಂದು ವೈಜ್ಞಾನಿಕ ಕಾರಣವೆಂದರೆ, ಗೋಡೆ ಮೇಲೆ ನೇತು ಹಾಕುವ ಗಡಿಯಾರದಲ್ಲಿನ ನಂಬರ್‌ 12  ಮೇಲ್ಮುಖವಾಗಿರುತ್ತದೆ. ಅದೇ ರೀತಿ, ವಾಚನ್ನು ಎಡಗೈಗೆ ಧರಿಸಿದರೆ ಸಂಖ್ಯೆ 12 ಮೇಲ್ಮುಖವಾಗಿಯೇ ಇರುತ್ತದೆ. ಆದರೆ  ಬಲಗೈಗೆ ವಾಚ್‌ ಧರಿಸಿದರೆ ಸಂಖ್ಯೆಗಳ ಕ್ರಮವು ಹಿಮ್ಮುಖವಾಗುತ್ತದೆ ಮತ್ತು ಗಡಿಯಾರವನ್ನು ನೋಡಲು ನಿಮಗೆ ತೊಂದರೆಯಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ