ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?

ಬೆಳಗ್ಗೆ ಬೇಗನೆ ಎದ್ದರೆ ದಿನವಿಡಿ ನಾವು ತಾಜಾತನದಿಂದ, ಉಲ್ಲಾಸದಾಯಕವಾಗಿ ಇರುತ್ತೇವೆ ಅದೇ ಬೆಳಗ್ಗೆ ಲೇಟ್‌ ಆಗಿ ಎದ್ದರೆ, ಆ ಇಡಿ ದಿನವೇ ಜಡತ್ವದಿಂದ ಕೂಡಿರುತ್ತದೆ ಎಂದು ಹೇಳುತ್ತಾರೆ. ನಿಜಕ್ಕೂ ಬೆಳಗ್ಗೆ ಬೇಗ ಎದ್ದರೆ ಪ್ರಯೋಜನಗಳು ಲಭಿಸುತ್ತಾ? ಅದರಲ್ಲೂ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಎದ್ದರೆ ಏನಾಗುತ್ತದೆ ಎಂಬುದನ್ನು ತಿಳಿಯಿರಿ.

ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 22, 2025 | 6:44 PM

ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳಬೇಕು ಎಂಬುದನ್ನು ಹಿರಿಯರು ಕೂಡ ಆಗಾಗ್ಗೆ ಹೇಳುತ್ತಿರುತ್ತಾರೆ. ಆದ್ರೆ ಹೆಚ್ಚಿನವರಿಗೆ ಬೆಳಗ್ಗೆ ಬೇಗ ಏಳುವುದೆಂದರೆಯೇ (early morning wake up) ಅಲರ್ಜಿ. ಅನೇಕರು ರಾತ್ರಿ ಲೇಟ್‌ ಆಗಿ ಮಲಗೋದು ಮಾತ್ರವಲ್ಲದೆ, ಬೆಳಗ್ಗೆ ಸೂರ್ಯ ನೆತ್ತಿ ಮೇಲೆ ಬಂದ್ರೂ ಎದ್ದೇಳುವುದಿಲ್ಲ. ಹೀಗೆ ಲೇಟ್‌ ಆಗಿ ಏಳುವ ಅಭ್ಯಾಸ ಒಳ್ಳೆಯದಲ್ಲ, ಸಾಧ್ಯವಾದಷ್ಟು ಬೆಳಗ್ಗೆ ಬೇಗನೆ ಏಳಬೇಕು. ಇದರಿಂದ ಇಡೀ ದಿನವೇ ಚೆನ್ನಾಗಿರುತ್ತದೆ, ಅದರಲ್ಲೂ ಬೆಳಗ್ಗೆ 5 ಗಂಟೆಗೆ ಏಳುವುದು ತುಂಬಾನೇ ಒಳ್ಳೆಯದು ಎಂದು ಹೇಳುವ ಮಾತೊಂದಿದೆ. ಹಾಗಿರುವಾಗ ಪ್ರತಿದಿನ ಮುಂಜಾನೆ 5 ಗಂಟೆಗೆ ಏಳುವುದರಿಂದ (habit of waking up at 5 am every morning) ಏನಾಗುತ್ತೆ, ಇದರಿಂದ ಲಭಿಸುವ ಪ್ರಯೋಜನವಾದರೂ ಏನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.

ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಲಭಿಸುವ ಪ್ರಯೋಜನ:

ನಿದ್ರೆಯ ಗುಣಮಟ್ಟ: ಬೆಳಗ್ಗೆ ಬೇಗನೆ ಏಳುವುದರಿಂದ ಸಿರ್ಕಾಡಿಯನ್‌ ಲಯವು (ದಿನಚರ್ಯೆಯ ಲಯ) ಸಕ್ರಿಯಗೊಳ್ಳುತ್ತದೆ, ಇದು ರಾತ್ರಿಯಲ್ಲಿ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಈ ಎರಡೂ ಅಭ್ಯಾಸಗಳು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ.

ಒತ್ತಡ, ಆತಂಕ ನಿವಾರಣೆ: ಬೆಳಗ್ಗೆ ಬೇಗ ಏಳುವುದರಿಂದ ಕಾರ್ಟಿಸೋಲ್‌ ಮಟ್ಟ ಕಡಿಮೆಯಾಗುತ್ತದೆ. ಇದು ನಿಮಗೆ ಶಾಂತವಾಗಿ ಯೋಚಿಸಲು ಅನುವು ಮಾಡಿಕೊಡುತ್ತದೆ. ಬೆಳಗ್ಗೆ ಧ್ಯಾನ ಅಥವಾ ಮನಸ್ಸಿನ ನಿಯಂತ್ರಣದಂತಹ ಚಟುವಟಿಕೆಗಳನ್ನು ಅಭ್ಯಾಸ ಮಾಡುವುದರಿಂದ ಆತಂಕವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ಇದನ್ನೂ ಓದಿ
ಎಕ್ಸ್‌ಪೈರಿ ಡೇಟ್‌ ಇಲ್ಲದ ಆಹಾರಗಳಿವು
ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ
ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ?
ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು

ಚೈತನ್ಯಶೀಲತೆ: ಬೆಳಗ್ಗೆ 5 ಗಂಟೆಗೆ ಏಳುವುದರಿಂದ ದೇಹವು ಚೈತನ್ಯಶೀಲತೆಯಿಂದ ಕೂಡಿರುತ್ತದೆ. ಪ್ರತಿದಿನ ಒಂದೇ ಸಮಯದಲ್ಲಿ ಏಳುವುದರಿಂದ  ದೇಹದ ಸಿರ್ಕಾಡಿಯನ್‌ ಲಯ ಮರುಹೊಂದುತ್ತದೆ. ಇದು ದಿನವಿಡೀ ನಿಮ್ಮನ್ನು ಹೆಚ್ಚು ಚೈತನ್ಯಶೀಲವಾಗಿಡಲು ಸಹಾಯ ಮಾಡುತ್ತದೆ.

ತೂಕ ಇಳಿಕೆಗೆ ಸಹಕಾರಿ: ಬೆಳಗ್ಗೆ ಬೇಗ ಏಳುವುದರಿಂದ ವ್ಯಾಯಾಮ ಮಾಡಲು ಮತ್ತು ಆರೋಗ್ಯಕರ ಉಪಹಾರ ಸೇವಿಸಲು ಸಾಕಷ್ಟು ಸಮಯ ಸಿಗುತ್ತದೆ. ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ, ನೀವು ಬೇಗನೆ ಆಹಾರವನ್ನು ಸೇವಿಸುತ್ತೀರಿ, ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಮ್ಲೀಯತೆ, ಗ್ಯಾಸ್‌ನಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆಯಾಗುತ್ತದೆ.

ಶಕ್ತಿ ಲಭಿಸುತ್ತದೆ: ಬೆಳಗ್ಗೆ ಬೇಗ ಏಳುವುದರಿಂದ ದೇಹ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಲು ಅವಕಾಶ ಸಿಗುತ್ತದೆ. ಬೆಳಗಿನ ಸೂರ್ಯನ ಬೆಳಕು ವಿಟಮಿನ್‌ ಡಿ ಯ ಉತ್ತಮ ಮೂಲವಾಗಿದ್ದು, ಇದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ ದಿನವಿಡೀ ತಾಜಾತನದಿಂದ ಕೂಡಿರುತ್ತದೆ.

ಇದನ್ನೂ ಓದಿ: ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತಪ್ಪದೆ ಸ್ವಚ್ಛಗೊಳಿಸಬೇಕಂತೆ; ಏಕೆ ಗೊತ್ತಾ?

ರೋಗನಿರೋಧಕ ವ್ಯವಸ್ಥೆ ಬಲಗೊಳ್ಳುತ್ತದೆ: ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಾಕಷ್ಟು ನಿದ್ರೆ ಅಗತ್ಯ. ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ರಾತ್ರಿ ವೇಳೆ ಸಮಯಕ್ಕೆ ಸರಿಯಾಗಿ ಮಲಗಲು ನಿಮಗೆ ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹದ ಸಿರ್ಕಾಡಿಯನ್‌ ಲಯವೂ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಇದು ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ಇದಲ್ಲದೆ ಬೆಳಿಗ್ಗೆ ಬೇಗನೆ ಎದ್ದೇಳುವುದರಿಂದ, ನೀವು ನಿಮ್ಮ ಬಗ್ಗೆ ಹೆಚ್ಚಿನ ಗಮನವನ್ನು ನೀಡಲು, ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಯೋಚಿಸಲು ಸಾಧ್ಯವಾಗುತ್ತದೆ. ವ್ಯಾಯಾಮದಿಂದ ಹಿಡಿದು ಉಪಾಹಾರದವರೆಗೆ ಎಲ್ಲದಕ್ಕೂ ನೀವು ಸುಲಭವಾಗಿ ಸಮಯವನ್ನು ಹೊಂದಿಸಬಹುದು. ಮತ್ತು ಇದು ನಿಮ್ಮ ದೇಹವನ್ನು ದಿನವಿಡೀ ಸಕ್ರಿಯವಾಗಿರಿಸುತ್ತದೆ. ಅದರಲ್ಲೂ ಮುಖ್ಯವಾಗಿ ಸೂರ್ಯೋದಯಕ್ಕೆ ಮುನ್ನ ಎದ್ದು ಸೂರ್ಯನನ್ನು ನೋಡುವುದರಿಂದ ದಿನವಿಡೀ ಸಕಾರಾತ್ಮಕವಾಗಿವಾಗಿರುವುದಲ್ಲದೆ, ಇದರಿಂದ ನೀವು  ಚೈತನ್ಯಶೀಲರಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:15 pm, Tue, 22 July 25