AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid ul-adha 2023: ಈದ್-ಅಲ್-ಅಧಾ ಹಬ್ಬವನ್ನು ಬಕ್ರೀದ್ ಎಂಬ ಹೆಸರಿನಿಂದ ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ

ಇಸ್ಲಾಂ ಧರ್ಮದಲ್ಲಿ ಬಕ್ರೀದ್ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಇಸ್ಲಾಮಿಕ್ ಕ್ಯಾಲೆಂಡರ್​ನ 12ನೇ ತಿಂಗಳಾದ ಜುಲ್-ಹಜ್ಜಾದ 10ನೇ ದಿನದಂದು ಈದ್-ಉಲ್-ಅಧಾ ಹಬ್ಬವನ್ನು ಆಚರಿಸಲಾಗುತ್ತದೆ. ತ್ಯಾಗದ ಸಂಕೇತವಾಗಿ ಆಚರಿಸಲಾಗುವ ಈ ಹಬ್ಬದಲ್ಲಿ ಕುರಿಗಳನ್ನು ಏಕೆ ಬಲಿಕೊಡಲಾಗುತ್ತದೆ ಹಾಗೂ ಈ ಹಬ್ಬವನ್ನು ಭಾರತದಲ್ಲಿ ಬಕ್ರೀದ್ ಎಂಬ ಹೆಸರಿನಿಂದ ಏಕೆ ಕರೆಯಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

Eid ul-adha 2023: ಈದ್-ಅಲ್-ಅಧಾ ಹಬ್ಬವನ್ನು ಬಕ್ರೀದ್ ಎಂಬ ಹೆಸರಿನಿಂದ ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Jun 28, 2023 | 3:41 PM

Share

ಬಕ್ರೀದ್ ಅಥವಾ ಈದ್ ಉಲ್ ಅಧಾ ಇಸ್ಲಾಂ ಧರ್ಮದ ಪವಿತ್ರ ಹಬ್ಬವಾಗಿದ್ದು, ಈದ್-ಉಲ್-ಫಿತರ್ ಹಬ್ಬ ಆಚರಿಸಿದ ಸುಮಾರು ಎರಡು ತಿಂಗಳುಗಳ ನಂತರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಉಳ್ಳವರು ಬಡವರಿಗೆ ದಾನ ಮಾಡುತ್ತಾರೆ ಹಾಗೂ ಈ ದಿನ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ ಒಂದು ಮೇಕೆಯನ್ನು ಬಲಿ ನೀಡಲಾಗುತ್ತದೆ. ಮುಸ್ಲಿಮರಿಗೆ ಮಾರ್ಗದರ್ಶನ ನೀಡಲು ಅಲ್ಲಾಹನು ಕಳುಹಿಸಿದ ಪ್ರವಾದಿಗಳಲ್ಲಿ ಒಬ್ಬರಾದ ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸವ ಹಬ್ಬ ಇದಾಗಿದೆ.

ಈದ್-ಉಲ್-ಅಝಾ ಹಬ್ಬದಲ್ಲಿ ಮೇಕೆಯನ್ನು ಏಕೆ ಬಲಿ ಕೊಡಲಾಗುತ್ತದೆ:

ಇಸ್ಲಾಮಿಕ್ ನಂಬಿಕೆಯ ಪ್ರಕಾರ, ಹಜರತ್ ಇಬ್ರಾಹಿಂ ಅವರು ಅಲ್ಲಾಹನ ಪ್ರವಾದಿ. ಒಮ್ಮೆ ಅಲ್ಲಾಹನು ಹಜರತ್ ಇಬ್ರಾಹಿಂ ಅವರನ್ನು ಪರೀಕ್ಷಿಸುವ ಸಲುವಾಗಿ, ಅವರ ಕನಸಿನಲ್ಲಿ ನಿನ್ನ ಅತ್ಯಂತ ಪ್ರೀತಿಯ ವಸ್ತುವನ್ನು ತ್ಯಾಗ ಮಾಡುವಂತೆ ಕೇಳಿದರು. ಈ ಕನಸನ್ನು ಅಲ್ಲಾಹನ ಸಂದೇಶವೆಂದು ಪರಿಗಣಿಸಿ, ಅವರು ತಮ್ಮ ಪ್ರೀತಿಯ ಏಕೈಕ ಪುತ್ರನಾದ 10 ವರ್ಷದ ಇಸ್ಲಾಯಿಲ್​​​ನನ್ನು ಬಲಿಕೊಡಲು ನಿರ್ಧರಿಸಿದರು. ಇವರ ತ್ಯಾಗ ಮತ್ತು ಭಕ್ತಿಗೆ ಮೆಚ್ಚಿದ ಅಲ್ಲಾಹನು ಮಗನ ಬದಲು ಪ್ರಾಣಿಯ ಬಲಿಕೊಡುವಂತೆ ಸಂದೇಶ ನೀಡಿದರು. ನಂತರ ಮಗನ ಬದಲಿಗೆ ತಾನು ಸಾಕಿದ ಅತ್ಯಂತ ಪ್ರೀತಿಯ ಕುರಿಮರಿಯನ್ನು ಬಲಿ ಕೊಟ್ಟರು. ನಂಬಿಕೆಗಳ ಪ್ರಕಾರ ಈದ್-ಉಲ್-ಅದಾ ದಲ್ಲಿ ಬಲಿ ನೀಡುವ ಸಂಪ್ರದಾಯ ಅಂದಿನಿಂದ ಪ್ರಾರಂಭವಾಯಿತು.

ಹಜರತ್ ಇಬ್ರಾಹಿಂ ಅವರ ತ್ಯಾಗದ ನೆನಪಿಗಾಗಿ ಪ್ರತಿವರ್ಷ ಈದ್ ಉಲ್ ಅಧಾ ಹಬ್ಬದ ದಿನದಂದು ಮನೆಯಲ್ಲಿ ಪ್ರೀತಿಯಿಂದ ಸಾಕಿದ ಗಂಡು ಕುರಿ, ಮೇಕೆಯನು ಬಲಿ ನೀಡಲಾಗುತ್ತದೆ. ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಿ ಒಂದನೇ ಭಾಗವನ್ನು ನಿರ್ಗತಿಕರಿಗೆ ಅಥವಾ ಬಡವರಿಗೆ, ಎರಡನೇ ಭಾಗವನ್ನು ಕುಟುಂಬ ಹಾಗೂ ಮೂರನೇ ಭಾಗವನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಂಚಲಾಗುತ್ತದೆ. ಜತೆಗೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂತೋಷ ಹಾಗೂ ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:Eid-ul-Adha 2023: ಈದ್-ಉಲ್-ಅಧಾ ಹಬ್ಬದ ದಿನಾಂಕ ಮತ್ತು ವಿಶೇಷತೆಗಳ ಕುರಿತು ಮಾಹಿತಿ ಇಲ್ಲಿದೆ

ಈದ್-ಉಲ್-ಅಧಾ ಹಬ್ಬವನ್ನು ಬಕ್ರೀದ್ ಹಬ್ಬವೆಂದು ಏಕೆ ಕರೆಯುತ್ತಾರೆ?

ಹಜರತ್ ಇಬ್ರಾಹಿಂ ಅವರ ತ್ಯಾಗವನ್ನು ಸ್ಮರಿಸುವ ಈ ಪವಿತ್ರ ಹಬ್ಬವನ್ನು ವಿಶ್ವಾದ್ಯಂತ ಈದ್-ಉಲ್-ಅಧಾ, ಈದ್-ಉಲ್-ಜುಹಾ, ಬಕ್ರೀದ್ ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತದೆ. ಈದ್-ಉಲ್-ಅಧಾ, ಈದ್-ಉಲ್-ಜುಹಾ ಇವೆರಡು ಅರೆಬಿಕ್ ಪದವಾಗಿದ್ದು, ತ್ಯಾಗದ ಹಬ್ಬ ಎಂಬ ಅರ್ಥವನ್ನು ಸೂಚಿಸುತ್ತದೆ. ಭಾರತದಲ್ಲಿ ಹೆಚ್ಚಾಗಿ ಈ ಪವಿತ್ರ ಹಬ್ಬವನ್ನು ಬಕ್ರೀದ್ ಅಥವಾ ಬಕ್ರ್-ಇದ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ. ಬಕ್ರ್ ಅಥವಾ ಬಕ್ರಿ ಎಂಬುದು ಮೇಕೆಯ ಉರ್ದ ಪದವಾಗಿದ್ದು, ಈ ಹಬ್ಬದಂದು ತ್ಯಾಗದ ಸಂಕೇತವಾಗಿ ಅಲ್ಲಾಹನಿಗೆ ಮೇಕೆ ಮತ್ತು ಕುರಿಗಳನ್ನು ಬಲಿ ನೀಡುವುದರಿಂದ ಬಕ್ರೀದ್ ಅಥವಾ ಬಕ್ರ-ಈದ್ ಎಂಬ ಹೆಸರು ಬಂದಿದೆ. ತ್ಯಾಗದ ಸಂಕೇತವಾಗಿ ಮೇಕೆ ಅಥವಾ ಕುರಿಯನ್ನು ಬಲಿ ನೀಡುವುದರಿಂದ ಈ ಹಬ್ಬವನ್ನು ಬಕ್ರೀದ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:40 pm, Wed, 28 June 23

Follow Us
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ದೆಹಲಿಯಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದ ಕೆನಡಾ ಪಿಎಂ ಮಾರ್ಕ್ ಕಾರ್ನಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಯುದ್ಧ ಪೀಡಿತ ಪ್ರದೇಶದಲ್ಲಿರೋ ಕನ್ನಡಿಗರ ಬಗ್ಗೆ ಕುಮಾರಸ್ವಾಮಿ ಶಾಕಿಂಗ್ ಹೇಳಿ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ: ಇರಾನ್ ಮೂಲದ ಪೈಲ್ವಾನ್ ಮಿರ್ಜಾ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸತೀಶ್​​ ಜಾರಕಿಹೊಳಿ
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಸಿಲಿಂಡರ್​​ ಸ್ಫೋಟಗೊಂಡು ಮನೆಗೆ ಮನೆಯೇ ಸರ್ವನಾಶ!
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಕುವೈತ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಆವರಣದಲ್ಲಿ ಇರಾನ್ ಡ್ರೋನ್ ದಾಳಿ
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು
ಬೆಂಗಳೂರಿನಿಂದ ವಿದೇಶಕ್ಕೆ ಹೋಗಬೇಕಾದ, ಬರಬೇಕಾದ ಒಟ್ಟು 24 ವಿಮಾನ ರದ್ದು