ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತಪ್ಪದೆ ಸ್ವಚ್ಛಗೊಳಿಸಬೇಕಂತೆ; ಏಕೆ ಗೊತ್ತಾ?

ನಾವು ಆರೋಗ್ಯಕರವಾಗಿರಬೇಕೆಂದರೆ ಉತ್ತಮ, ಆರೋಗ್ಯಕರ ಆಹಾರವನ್ನು ಸೇವನೆ ಮಾಡುವಂತೆ, ನೈರ್ಮಲ್ಯದ ಬಗ್ಗೆಯೂ ಅಷ್ಟೇ ಗಮನಹರಿಸಬೇಕು. ಅದರಲ್ಲೂ ಮುಖ್ಯವಾಗಿ ಸ್ನಾನ ಮಾಡುವಾಗ ದೇಹದ ಕೆಲವೊಂದು ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಅದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಿದ್ದರೆ ಸ್ನಾನ ಮಾಡುವಾಗ ದೇಹದ ಯಾವ ಭಾಗಗಳನ್ನು ಸ್ವಚ್ಛಗೊಳಿಸಬೇಕು, ಅವುಗಳನ್ನು ಸ್ವಚ್ಛಗೊಳಿಸದಿದ್ದರೆ ಯಾವ ಸಮಸ್ಯೆ ಉಂಟಾಗಬಹುದದು ಎಂಬುದನ್ನು ತಿಳಿಯಿರಿ.

ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತಪ್ಪದೆ ಸ್ವಚ್ಛಗೊಳಿಸಬೇಕಂತೆ; ಏಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 21, 2025 | 6:19 PM

ಆರೋಗ್ಯಕರ ಆಹಾರವನ್ನು ಸೇವಿಸುವಂತೆ, ವ್ಯಾಯಮದಂತಹ ದೈಹಿಕ ಚಟುವಟಿಕೆಗಳನ್ನು ಅಭ್ಯಾಸ ಮಾಡುವಂತೆ ಆರೋಗ್ಯದ ದೃಷ್ಟಿಯಿಂದ ಸ್ನಾನ ಮಾಡುವುದು (bathing) ಕೂಡ ಅಷ್ಟೇ ಮುಖ್ಯವಾಗಿದೆ. ಪ್ರತಿಯೊಬ್ಬರೂ ಪ್ರತಿದಿನ ಸ್ನಾನ ಮಾಡಲೇಬೇಕು. ಏಕೆಂದರೆ ದೇಹದಲ್ಲಿ ಉತ್ಪತ್ತಿಯಾಗುವ ಬೆವರು ಮತ್ತು ಕೊಳೆಗಳಲ್ಲಿ ಬ್ಯಾಕ್ಟೀರಿಯಾಗಳು ರೂಪುಗೊಂಡು ಅವು ಚರ್ಮಕ್ಕೆ ಆರೋಗ್ಯಕ್ಕೆ ಎರಡಕ್ಕೂ ಹಾನಿಯನ್ನು ಉಂಟು ಮಾಡುತ್ತವೆ. ಹೀಗೆ ಪ್ರತಿನಿತ್ಯ ಸ್ನಾನ ಮಾಡುವುದು ಎಷ್ಟು ಮುಖ್ಯವೋ, ಸ್ನಾನ ಮಾಡುವ ಸಂದರ್ಭದಲ್ಲಿ ದೇಹದ ಈ ಒಂದಷ್ಟು ಭಾಗಗಳನ್ನು ತಪ್ಪದೆ ಸ್ವಚ್ಛಗೊಳಿಸುವುದು (Clean these parts of the body while bathing) ಕೂಡ ಅಷ್ಟೇ ಮುಖ್ಯ. ಆದರೆ ಕೆಲವರು ಸ್ನಾನ ಮಾಡುವಾಗ ದೇಹದ ಸೂಕ್ಷ್ಮ ಪ್ರದೇಶಗಳನ್ನು ಸ್ವಚ್ಛಗೊಳಿಸುವುದಿಲ್ಲ. ಹೀಗೆ ಮಾಡುವುದರಿಂದ ಸೋಂಕು ಮತ್ತು ಇತರ ಸಮಸ್ಯೆಗಳು ಕಾಣಿಸಬಹುದು.  ಹಾಗಾದರೆ ಸ್ನಾನ ಮಾಡುವಾಗ ವಿಶೇಷವಾಗಿ ದೇಹದ ಯಾವ ಭಾಗಗಳನ್ನು ಸ್ವಚ್ಛಗೊಳಿಸಬೇಕು ಎಂಬುದನ್ನು ತಿಳಿಯಿರಿ.

ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ತಪ್ಪದೆ ಸ್ವಚ್ಛಗೊಳಿಸಿ:

ಕಂಕುಳ: ನಮ್ಮ ದೇಹದಲ್ಲಿ ಹೆಚ್ಚು ಬೆವರು ಸಂಗ್ರಹವಾಗುವ ಜಾಗವೆಂದರೆ ಅದು ಕಂಕುಳ. ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಬೆವರು ಸಂಗ್ರಹವಾಗಿ ಕೆಟ್ಟ ವಾಸನೆ ಉಂಟಾಗುವುದಲ್ಲದೆ, ಇದು ಚರ್ಮದ ಮೇಲೆ ಬ್ಯಾಕ್ಟೀರಿಯಾಗಳು ಸಂಗ್ರಹವಾಗಲು,  ಸೋಂಕುಗಳು ಉಂಟಾಗಲು ಕಾರಣವಾಗುತ್ತದೆ. ಅದಕ್ಕಾಗಿಯೇ ಸ್ನಾನ ಮಾಡುವಾಗ ಈ ಭಾಗವನ್ನು ಸೋಪ್‌ ಅಥವಾ ಬಾಡಿ ವಾಶ್‌ನಿಂದ ಸ್ವಚ್ಛಗೊಳಿಸುವುದು ಅತೀ ಮುಖ್ಯವಾಗಿದೆ.

ತೊಡೆಯ ಭಾಗ: ತೊಡೆ ಭಾಗ ಹಾಗೂ ಅದರ  ಸುತ್ತಮುತ್ತಲಿನ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಪ್ರದೇಶಗಳನ್ನು ಪ್ರತಿನಿತ್ಯ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಕೊಳಕು ಸಂಗ್ರಹವಾಗಬಹುದು ಮತ್ತು  ಇದು ತುರಿಕೆ, ಅಲರ್ಜಿ ಮತ್ತು ಕಿರಿಕಿರಿಯಂತಹ ಸಮಸ್ಯೆಗಳು  ಉಂಟಾಗಲು ಕಾರಣವಾಗಬಹುದು. ಹಾಗಾಗಿ ತೊಡೆ ಭಾಗವನ್ನು ತಪ್ಪದೆ ಸ್ವಚ್ಛಗೊಳಿಸಬೇಕು ಮತ್ತು ಈ ಭಾಗವನ್ನು ಸ್ವಚ್ಛಗೊಳಿಸುವಾಗ ನಿಧಾನವಾಗಿ ಉಜ್ಜುವುದು ಉತ್ತಮ.

ಇದನ್ನೂ ಓದಿ
ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ?
ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು
ಅಕ್ಕಿಯನ್ನು ತೊಳೆಯದೆ ಅನ್ನ ಮಾಡಿದ್ರೆ ಏನಾಗುತ್ತೆ ಗೊತ್ತಾ?
ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?

ಮೊಣಕೈ ಮತ್ತು ಮೊಣಕಾಲುಗಳು: ಅನೇಕ ಜನರು ತಮ್ಮ ಮೊಣಕೈ ಮತ್ತು ಮೊಣಕಾಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಹೀಗೆ  ನಿರ್ಲಕ್ಷ್ಯ ವಹಿಸಿದರೆ, ಈ ಭಾಗದ ಚರ್ಮವು ಒಣಗಿ, ಒರಟಾಗಬಹದು ಮಾತ್ರವಲ್ಲದೆ ಇದು ಚರ್ಮ ಕಪ್ಪಾಗಲು ಕಾರಣವಾಗುತ್ತದೆ.  ಅಲ್ಲದೆ ಈ ಎರಡು ಭಾಗಗಳಲ್ಲಿ ಅತಿಯಾದ ಕೊಳಕು ಸಂಗ್ರಹವಾಗುವುದರಿಂದ ಸೋಂಕಿನ ಅಪಾಯವೂ ಹೆಚ್ಚಿರುತ್ತದೆ. ಹಾಗಾಗಿ ಸ್ನಾನ ಮಾಡುವಾಗ ಮೊಣಕೈ ಸ್ವಚ್ಛಗೊಳಿಸಲು ಮರೆಯದಿರಿ.

ಪಾದಗಳು: ಪಾದಗಳ ಸ್ವಚ್ಛತೆಯ ಬಗ್ಗೆ ಹೆಚ್ಚಾಗಿ ಅನೇಕರು ಗಮನ ಕೊಡುವುದಿಲ್ಲ. ಆದರೆ ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತುಂಬಾನೇ ಮುಖ್ಯ. ಏಕೆಂದರೆ ಪಾದಗಳು ನಿರಂತರವಾಗಿ ಧೂಳು, ಕೊಳಕು ಮತ್ತು ಕೊಳೆಗೆ ಒಡ್ಡಿಕೊಳ್ಳುತ್ತವೆ. ಇದರಿಂದ ಸೋಂಕು ಉಂಟಾಗುವುದು ಮಾತ್ರವಲ್ಲದೆ ಪಾದಗಳಲ್ಲಿ ದುರ್ವಾಸನೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪಾದಗಳ ಜೊತೆಗೆ ಕಾಲ್ಬೆರಳುಗಳನ್ನು ಸ್ವಚ್ಛಗೊಳಿಸಲು ಮರೆಯಬೇಡಿ.

ಇದನ್ನೂ ಓದಿ: ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು; ಯಾಕೆ ಗೊತ್ತಾ?

ಹೊಕ್ಕುಳ: ಹೊಕ್ಕುಳ ದೇಹದ ಪ್ರಮುಖ ಭಾಗವಾಗಿದ್ದು, ಹೆಚ್ಚಿನ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಜೊತೆಗೆ  ಸ್ನಾನ ಮಾಡುವಾಗ  ಹೊಕ್ಕುಳ ಸ್ವಚ್ಛತೆ ಕಡೆಗೆ ಗಮನ ಹರಿಸುವುದಿಲ್ಲ. ಆದರೆ ಈ ಭಾಗದಲ್ಲಿಯೂ ಬಹಳಷ್ಟು ಬ್ಯಾಕ್ಟೀರಿಯಾಗಳು ವಾಸಿಸುವ ಕಾರಣದಿಂದ ಈ ಸೂಕ್ಷ್ಮ ಭಾಗವನ್ನು ಪ್ರತಿನಿತ್ಯ ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ.

ಬೆನ್ನು:  ಹೆಚ್ಚಿನವರು ಸ್ನಾನ ಮಾಡುವಾಗ ಬೆನ್ನನ್ನು ಸ್ವಚ್ಛಗೊಳಿಸುವುದಿಲ್ಲ. ಬೆನ್ನನ್ನು ಯಾರು ನೋಡ್ತಾರೆ ಎಂದು ಇದರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಾರೆ. ಆದರೆ ಬೆನ್ನನ್ನು ಸ್ವಚ್ಛಗೊಳಿಸುವುದು ತುಂಬಾನೇ ಮುಖ್ಯ. ಏಕೆಂದರೆ ಬೆನ್ನಿನ ಮೇಲೆ ಸಂಗ್ರಹವಾಗಿವ  ಕೊಳೆಯು ಚರ್ಮದ ಅಲರ್ಜಿ ಮತ್ತು ಚರ್ಮ ರೋಗಗಳಿಗೆ ಕಾರಣವಾಗಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ