ಎದೆ ನೋವು ಕಾಣಿಸಿಕೊಂಡರೆ ಗಾಬರಿಯಾಗಬೇಡಿ, ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 17, 2024 | 12:56 PM

ಕೆಲವರಲ್ಲಿ ಆಗಾಗ ಎದೆ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದು ಹೃದಯಾಘಾತದ ಎದೆ ನೋವು ಎಂದು ಭಯ ಪಟ್ಟುಕೊಳ್ಳುತ್ತಾರೆ. ಆದರೆ ಆಗಾಗ ಕಾಣಿಸಿಕೊಳ್ಳುವ ಎದೆ ನೋವು ಹೃದಯಾಘಾತದ ಲಕ್ಷಣವಾಗಿರುವುದಿಲ್ಲ. ಹಾಗಂತ ಎದೆಯಲ್ಲಿ ನೋವು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆ ತಕ್ಷಣವೇ ಮನೆ ಮದ್ದನ್ನು ಮಾಡಿ ಸೇವಿಸಿದರೆ ಗ್ಯಾಸ್ಟ್ರಿಕ್ ನಿಂದ ಶುರುವಾದ ಎದೆ ನೋವಾದರೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಅಗತ್ಯ.

ಎದೆ ನೋವು ಕಾಣಿಸಿಕೊಂಡರೆ ಗಾಬರಿಯಾಗಬೇಡಿ, ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗಿನ ದಿನಗಳಲ್ಲಿ ಎದೆ ನೋವು ಕಾಣಿಸಿಕೊಂಡರೆ ಭಯಭೀತರಾಗುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಹೃದಯಾಘಾತದಂತಹ ಸುದ್ದಿಗಳು. ಆದರೆ ಇನ್ನಿತ್ತರ ಕಾರಣದಿಂದಲೂ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಹೀಗಾದಾಗ ಅಡುಗೆ ಮನೆಯಲ್ಲಿರುವ ಈ ಕೆಲವು ವಸ್ತುಗಳನ್ನು ಬಳಸಿ ಎದೆ ನೋವಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

* ಎರಡು ಲೋಟ ನೀರಿಗೆ ನಿಂಬೆರಸವನ್ನು ಹಾಕಿ ಒಂದು ವಾರಗಳ ಕಾಲ ಸೇವಿಸುತ್ತಿದ್ದರೆ ಎದೆನೋವು ಕಡಿಮೆಯಾಗುತ್ತದೆ.

* ಕೊತ್ತುಂಬರಿ ಬೀಜವನ್ನು ಪುಡಿ ಮಾಡಿ, ಈ ಪುಡಿಯನ್ನು ನೀರಿನಲ್ಲಿ ನೆನೆಹಾಕಿ ಕಷಾಯ ಮಾಡಿ, ಹಾಲು ಸಕ್ಕರೆ ಬೆರೆಸಿ ಸೇವಿಸಿದರೆ ಎದೆನೋವು ಶಮನವಾಗುತ್ತದೆ.

* ಎಳೆಯ ಸೀಬೆಕಾಯಿಗಳ ಕಷಾಯವನ್ನು ಮಾಡಿ ಅದನ್ನು ಮಜ್ಜಿಗೆಯೊಂದಿಗೆ ಕುಡಿದರೆ ಎದೆ ನೋವು ಗುಣಮುಖವಾಗುತ್ತದೆ.

* ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿಕೊಂಡು ಈ ಮಿಶ್ರಣಕ್ಕೆ ಕಲ್ಲು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಪ್ರತಿದಿನವು ಸೇವಿಸಿದರೆ ಎದೆ ನೋವಿಗೆ ಉತ್ತಮವಾದ ಔಷಧಿ.

* ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಮ್ಮಿನಿಂದ ಉಂಟಾಗುವ ಎದೆನೋವು ಕಡಿಮೆಯಾಗುತ್ತದೆದೆ.

* ಊಟವಾದ ಬಳಿಕ ಒಂದು ಲೋಟ ನೀರಿನಲ್ಲಿ ಒಂದು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಬೆರೆಸಿ ಕುಡಿಯುವುದು ಎದೆ ನೋವಿನ ಸಮಸ್ಯೆಗೆ ಪರಿಹಾರವಾಗಿದೆ.

* ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಕುಡಿಯುವುದರಿಂದ ಎದೆಯುರಿಯಂತಹ ಸಮಸ್ಯೆ ನಿವಾರಣೆಯಾಗುತ್ತದೆ.

* ನಿಂಬೆಹಣ್ಣಿನ ರಸವನ್ನು ಒಂದು ವಾರಗಳ ಕಾಲ ಸೇವಿಸುವುದರಿಂದ ಎದೆನೋವು ಸಮಸ್ಯೆಗೆ ರಾಮಬಾಣವಾಗಿದೆ.

* ನಿಯಮಿತವಾಗಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಎದೆನೋವು ಕಡಿಮೆಯಾಗುತ್ತದೆ.

* ನೆನೆಸಿದ ಬಾದಾಮಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಂಡರೆ ಎದೆ ನೋವಿನ ಸಮಸ್ಯೆಯು ನಿವಾರಣೆಯಾಗುತ್ತದೆ.

* ಗ್ಯಾಸ್ಟ್ರಿಕ್ ನಿಂದ ಉಂಟಾಗುವ ಎದೆ ನೋವಿಗೆ ಬಿಸಿ ಪಾನೀಯವನ್ನು ಸೇವಿಸುವುದು ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ: ಹಾಲುಣಿಸುವ ತಾಯಂದಿರೇ ನಿಮ್ಮ ಮಗುವಿಗೆ ಎದೆ ಹಾಲು ಸಾಕಾಗುತ್ತಿಲ್ಲವೇ, ಇಲ್ಲಿದೆ ಸಿಂಪಲ್ ಮನೆ ಮದ್ದುಗಳು

* ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಾಲ್ಕರಿಂದ ಐದು ತುಳಸಿ ಎಲೆಗಳನ್ನು ತಿನ್ನುವುದರಿಂದ ಎದೆ ನೋವಿನ ಸಮಸ್ಯೆಯು ದೂರವಾಗುತ್ತದೆ.

* ಗ್ಯಾಸ್ಟ್ರಿಕ್ ನಿಂದ ಎದೆಯುರಿ ಅಥವಾ ಎದೆನೋವು ಕಾಣಿಸಿಕೊಂಡರೆ ಓಮದ ಕಾಳು ಜಗಿದು ನೀರು ಕುಡಿಯಬೇಕು.

* ವೀಳ್ಯದೆಲೆಯ ಜೊತೆಗೆ ಓಮದ ಕಾಳನ್ನು ಸೇವಿಸಿದರೆ ಎದೆಯುರಿ, ಎದೆ ನೋವಿನಂತಹ ಸಮಸ್ಯೆಯು ನಿವಾರಣೆಯಾಗುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ