ನೀವು ಸದಾ ಯಂಗ್ ಆಗಿ ಕಾಣಬೇಕೇ, ಹಾಗಾದ್ರೆ ನಿಮ್ಮ ದಿನನಿತ್ಯದ ದಿನಚರಿ ಹೀಗಿರಲಿ
ಈಗಿನ ಜನರ ಜೀವನಶೈಲಿ ಹಾಗೂ ಆಹಾರಕ್ರಮವು ಸಂಪೂರ್ಣ ಬದಲಾಗಿವೆ. ಒತ್ತಡ ತುಂಬಿದ ಜೀವನದಲ್ಲಿ ಮನೆ ಮಕ್ಕಳು, ಸಂಸಾರ ಹೀಗೆ ಜವಾಬ್ದಾರಿಗಳನ್ನು ನಿಭಾಯಿಸುವುದರಲ್ಲೇ ಅರ್ಧ ಜೀವನ ಕಳೆದು ಹೋಗುತ್ತದೆ. ಹೀಗಾದಾಗ ವಯಸ್ಸು ಐವತ್ತು ದಾಟಿದ್ದು ಅರಿವಿಗೆ ಬರುವುದೇ ಇಲ್ಲ. ಈ ಸಮಯದಲ್ಲಿಯು ತಾವು ಯಂಗ್ ಆಗಿ ಕಾಣಲು ನಾನಾ ರೀತಿಯ ಪ್ರಾಡಕ್ಟ್ ಗಳನ್ನು ಬಳಸುವವರು ಇದ್ದಾರೆ. ಆದರೆ ಕೆಲವು ಉತ್ತಮವಾದ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯನ್ನು ಬೆಳೆಸಿಕೊಂಡರೆ ನೋಡಲು ಯಂಗ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಡೌಟ್ ಇಲ್ಲ.
ಎಲ್ಲರಿಗೂ ಕೂಡ ತಾವು ಯಂಗ್ ಆಗಿರಬೇಕು, ತಮಗೆ ವಯಸ್ಸು ಆಗಿರುವುದು ಯಾರಿಗೂ ಗೊತ್ತಾಗಬಾರದು ಎನ್ನುವುದಿರುತ್ತದೆ. ಆದರೆ ಈಗಿನ ಆಹಾರ ಕ್ರಮದಲ್ಲಿನ ಬದಲಾವಣೆಗಳು ವಯಸ್ಸಾಗುವ ಲಕ್ಷಣಗಳು ಬಹುಬೇಗನೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನವರಲ್ಲಿ ಚರ್ಮ ಹಾಗೂ ಮುಖವು ಅಂದಗೆಡುತ್ತವೆ, ತಲೆಕೂದಲು ಬಿಳಿಯಾಗುತ್ತದೆ. ಸಹಜವಾಗಿ ಈ ಲಕ್ಷಣಗಳು ಕಂಡು ಬಂದರೆ ಮುಜುಗರಕ್ಕಿಡಾಗುವುದೇ ಹೆಚ್ಚು. ಈ ಸಮಯದಲ್ಲಿಯು ನಿಮ್ಮ ವಯಸ್ಸನ್ನು ಮರೆಮಾಚುವುದು ನಿಮ್ಮ ಕೈಯಲ್ಲಿದೆ ಎನ್ನುವುದನ್ನು ಮರೆಯಬಾರದು.
* ಆಹಾರದ ಬಗ್ಗೆ ಗಮನವಿರಲಿ : ವಯಸ್ಸು ಏರಿದಾಗಲು ತಮ್ಮ ಆರೋಗ್ಯ, ತ್ವಚೆ ಹಾಗೂ ಸೌಂದರ್ಯ ವನ್ನು ಕಾಪಾಡುವುದು ಮುಖ್ಯ. ಹೀಗಾಗಿ ಪೌಷ್ಟಿಕಾಂಶಯುಕ್ತ ಆಹಾರದ ಬಗ್ಗೆ ಹೆಚ್ಚು ಕೊಡುವುದು ಉತ್ತಮ. ಆಹಾರದಲ್ಲಿ ಸೊಪ್ಪು ತರಕಾರಿ, ಹಣ್ಣು ಹಂಪಲುಗಳು, ಧಾನ್ಯಗಳು ಬೇಳೆಕಾಳುಗಳು ಬಳಕೆ ಹೆಚ್ಚಿರಲಿ
* ನೀರು ಕುಡಿಯುವ ಅಭ್ಯಾಸವಿರಲಿ : ನಮ್ಮ ದೇಹಕ್ಕೆ ಆಹಾರದ ಜೊತೆಗೆ ನೀರು ಕೂಡ ಅಷ್ಟೇ ಮುಖ್ಯವಾಗುತ್ತದೆ. ಪ್ರತಿಯೊಬ್ಬರು ದಿನಕ್ಕೆ ಕನಿಷ್ಠ ಏಳರಿಂದ ಎಂಟು ಲೋಟದಷ್ಟದಾರೂ ನೀರು ಕುಡಿಯಲೇಬೇಕು. ನೀರಿನ ಅಂಶವು ಚರ್ಮವು ಸುಕ್ಕು, ನಿರಿಗೆಗಳು ಉಂಟಾಗಲು ಬಿಡುವುದಿಲ್ಲ.
* ವ್ಯಾಯಾಮ ಮಾಡುವ ಅಭ್ಯಾಸವಿರಲಿ : ಎಷ್ಟೇ ಬ್ಯುಸಿಯಾಗಿದ್ದರೂ ವ್ಯಾಯಾಮ ಮಾಡುವುದನ್ನು ತಪ್ಪಿಸಬೇಡಿ. ವ್ಯಾಯಾಮ, ಯೋಗ, ವಾಕಿಂಗ್ ಮಾಡುವುದರಿಂದ ಆ ದಿನವು ಲವಲವಿಕೆಯಿಂದ ಕೂಡಿರುತ್ತದೆ. ವ್ಯಾಯಾಮದಿಂದ ದೇಹದಲ್ಲಿರುವ ಕೆಟ್ಟ ಕೊಬ್ಬುಗಳು ದೂರವಾಗಿ ಯಂಗ್ ಆಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ.
* ಚರ್ಮದ ಆರೋಗ್ಯದ ಬಗ್ಗೆ ನಿಗಾವಿರಲಿ : ಒಬ್ಬ ವ್ಯಕ್ತಿಯು ಸುಂದರವಾಗಿ ಕಾಣಿಸುವಂತೆ ಮಾಡುವುದೇ ಈ ಚರ್ಮ. ಹೀಗಾಗಿ ಪ್ರತಿನಿತ್ಯ ಮುಖವನ್ನು ತಣ್ಣೀರಿನಿಂದಲೇ ತೊಳೆಯುವ ಅಭ್ಯಾಸವಿರಲಿ. ಮಾಯ್‌ಶ್ಚರೈಸರ್ ಹಾಗೂ ಸನ್‌ಸ್ಕ್ರೀನ್ ಲೋಶನ್ ಗಳ ಬಳಕೆಯನ್ನು ಮಾಡುವ ಅಭ್ಯಾಸವಿರಲಿ. ಈ ಉತ್ಪನ್ನಗಳನ್ನು ಬಳಸುವುದರಿಂದ ಸೂರ್ಯನ ಹಾನಿಕಾರಕ ಕಿರಣಗಳಿಂದ ತ್ವಚೆಯನ್ನು ರಕ್ಷಿಸುತ್ತದೆ.
ಇದನ್ನೂ ಓದಿ: ಎದೆ ನೋವು ಕಾಣಿಸಿಕೊಂಡರೆ ಗಾಬರಿಯಾಗಬೇಡಿ, ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ
* ಕೆಟ್ಟ ಅಭ್ಯಾಸಗಳಿದ್ದರೆ ಈಗಲೇ ನಿಲ್ಲಿಸಿ : ಕೆಲವರು ಧೂಮಪಾನ, ಮದ್ಯಪಾನದಂತಹತಹ ಕೆಟ್ಟ ಚಟಗಳಿಗೆ ದಾಸರಾಗುತ್ತಾರೆ. ಇದು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಹೀಗಾಗಿ ದುರಾಭ್ಯಾಸಗಳಿಂದ ದೂರವಿದ್ದರೆ ಆರೋಗ್ಯವನ್ನು ಕಾಯಿಲೆಗಳಿಂದ ರಕ್ಷಿಸಬಹುದು.
*ಕಣ್ಣ ತುಂಬಾ ನಿದ್ದೆ ಮಾಡಿ : ಮನುಷ್ಯಕ್ಕೆ ದೇಹಕ್ಕೆ ವಿಶ್ರಾಂತಿ ಅಗತ್ಯ. ಹೀಗಾಗಿ ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡಿ ರೆಸ್ಟ್ ಮಾಡುವುದು ಮುಖ್ಯ. ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ರೂಢಿಸಿಕೊಂಡರೆ ಆ ದಿನವು ಖುಷಿ ಖುಷಿಯಾಗಿರುತ್ತದೆ. ಉಲ್ಲಾಸದಿಂದ ಕೂಡಿದ ದಿನವು ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
* ಜಂಕ್ ಫುಡ್ ಸೇವನೆಯಿಂದ ದೂರವಿರಿ : ಹೆಚ್ಚಿನವರು ರುಚಿ ರುಚಿಯಾಗಿ ಜಂಕ್ ಫುಡ್ ಗಳನ್ನೇ ಹೆಚ್ಚು ಸೇವಿಸುತ್ತಾರೆ. ಇದು ಆರೋಗ್ಯಕರವಾದ ಆಹಾರವಲ್ಲ. ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುವುದಲ್ಲದೆ, ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆದಷ್ಟು ಈ ಕುರುಕುಲು ಹಾಗೂ ಜಂಕ್ ಫುಡ್ ನಂತಹ ಆಹಾರಗಳಿಂದ ದೂರವಿದ್ದರೇ ಆರೋಗ್ಯವಂತರು ಹಾಗೂ ಯಂಗ್ ಆಗಿರಲು ಸಾಧ್ಯ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ