Toilet plume: ಕಮೋಡ್ ಬಳಸಿದ ಮೇಲೆ ಈ ತಪ್ಪು ಮಾಡಬೇಡಿ, ಇಲ್ಲದಿದ್ದರೆ ವ್ಯಾಧಿಗಳಿಗೆ ಆಹ್ವಾನ ನೀಡಿದಂತೆ
Commode Flushing: ಶೌಚಾಲಯದಲ್ಲಿ ಕಮೋಡ್ ಬಳಸಿದ ನಂತರ ಅದರ ಮುಚ್ಚಳವನ್ನು ಮುಚ್ಚದೆಯೇ ಫ್ಲಶ್ ಮಾಡಿದರೆ ಏನಾಗುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯೋಗ ನಡೆಸಿದ್ದಾರೆ. ಟಾಯ್ಲೆಟ್ ಪ್ಲ್ಯೂಮ್‌ಗಳು ಆ ಮಹತ್ವದ ಎಂಟು ಸೆಕೆಂಡುಗಳಲ್ಲಿ 4 ಅಡಿ ಎತ್ತರಕ್ಕೆ ಹರಡಿರುವುದು ಕಂಡುಬಂದಿದೆ.
ನಮ್ಮ ದಿನನಿತ್ಯದ ಕೆಲ ಅಭ್ಯಾಸಗಳು ಅಥವಾ ಸಣ್ಣ ಪ್ರಮಾದಗಳು ನಮ್ಮನ್ನು ರೋಗಗಳಿಗೆ ಗುರಿಪಡಿಸುತ್ತವೆ (Health Problems ) ಎಂಬುದು ಅನೇಕರಿಗೆ ತಿಳಿದಿಲ್ಲ. ಹತ್ತಾರು ದಶಕಗಳಿಂದಲೂ ಪ್ರಪಂಚದಾದ್ಯಂತ ಅನೇಕ ಜನರು ಶೌಚಾಲಯದಲ್ಲಿ ಕಮೋಡ್ ಫ್ಲಶ್ (Commode Flushing) ಮಾಡುವಾಗ ಅಲ್ಲಿನ ಶೌಚದ ನೀರಿನಲ್ಲಿರುವ ಮಾರಣಾಂತಿಕ ಸೂಕ್ಷ್ಮಜೀವಿಗಳು ವ್ಯಾಪಕವಾಗಿ ಹೊರ ಭಾಗದಲ್ಲೂ ಹರಡುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ನಮ್ಮಲ್ಲಿ ಅನೇಕರು ಫ್ಲಶ್ ಮಾಡುವ ಮೊದಲು ಮುಚ್ಚಳವನ್ನು ಮುಚ್ಚಲು ಮರೆಯುತ್ತಾರೆ. ಆದರೆ ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂಬುದು ಗಮನದಲ್ಲಿರಲಿ.
ಕೊಲೊರಾಡೋ ವಿಶ್ವವಿದ್ಯಾಲಯದ ಸಂಶೋಧಕರು ಈ ವಿಷಯದ ಬಗ್ಗೆ ಮಹತ್ವದ ಮಾಹಿತಿ ಹೊರಹಾಕಿದ್ದಾರೆ. ಶೌಚಾಲಯದಲ್ಲಿ ಕಮೋಡ್ ಬಳಸಿದ ನಂತರ ಅದರ ಮುಚ್ಚಳವನ್ನು ಮುಚ್ಚದೆಯೇ ಫ್ಲಶ್ ಮಾಡಿದರೆ ಏನಾಗುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯೋಗ ನಡೆಸಿದ್ದಾರೆ. ಟಾಯ್ಲೆಟ್ ಪ್ಲ್ಯೂಮ್‌ಗಳು (Toilet plume) ಆ ಮಹತ್ವದ ಎಂಟು ಸೆಕೆಂಡುಗಳಲ್ಲಿ 4 ಅಡಿ ಎತ್ತರಕ್ಕೆ ಹರಡಿರುವುದು ಕಂಡುಬಂದಿದೆ.
ಆದರೆ ಅವು ಕಣ್ಣಿಗೆ ಕಾಣುವುದಿಲ್ಲ. ಈ ಟಾಯ್ಲೆಟ್ ಪ್ಲ್ಯೂಮ್‌ಗಳು ಬಹಳ ಸೂಕ್ಷ್ಮ ಕ್ರಿಮಿಗಳಾಗಿವೆ. ಹೆಚ್ಚು ಆತಂಕಕಾರಿ ಸಂಗತಿಯೆಂದರೆ, ಸ್ನಾನಗೃಹವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಹರಡಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲ.. ಬಾತ್ರೂಮ್ನಲ್ಲಿರುವ ಇತರ ವಸ್ತುಗಳು ಬ್ರಷ್, ಟೂರ್ಪೇಸ್ಟ್, ಸಾಬೂನುಗಳು ಮತ್ತು ಇತರ ಕ್ರೀಮ್ಗಳು ಸೂಕ್ಷ್ಮ ಕ್ರಿಮಿಗಳು ಹರಡುವುದಕ್ಕೆ ಪ್ರಶಸ್ತ ತಾಣಗಳಾಗಿವೆ. ಅದಕ್ಕಾಗಿಯೇ ಕಮೋಡ್ ಬಳಸಿದ ನಂತರ ಅದನ್ನು ಫ್ಲಶ್ ಮಾಡುವ ಮೊದಲು ನೀವು ಶೌಚ ಗುಂಡಿಯ ಮುಚ್ಚಳವನ್ನು ಮುಚ್ಚಬೇಕು ಎಂದು ಸಂಶೋಧಕರು ಹೇಳುತ್ತಾರೆ.
Also Read: ವಿವಿಧ ರಾಶಿಯವರಿಗೆ ಸರಿಹೊಂದುವ ಉದ್ಯೋಗಾವಕಾಶಗಳು ಹೀಗಿವೆ ನೋಡಿ
ವಿಜ್ಞಾನಿಗಳ ಪ್ರಕಾರ ಟಾಯ್ಲೆಟ್ ಪ್ಲ್ಯೂಮ್‌ಗಳು ಫ್ಲಶ್ ಮಾಡಿದ ನಂತರ ಗಾಳಿಯ ಮೂಲಕ ಸ್ನಾನಗೃಹದಲ್ಲಿ ಹರಡುವ ಸಣ್ಣ ಸಣ್ಣ ಹನಿಗಳು. ಇದನ್ನು ತಪ್ಪಿಸಲು, ಮುಚ್ಚಳವನ್ನು ಮುಚ್ಚಿದ ಬಳಿಕವೇ ಕಮೋಡ್ ಫ್ಲಶ್ ಮಾಡುವುದು ಉತ್ತಮ. ಇದು ಟಾಯ್ಲೆಟ್ ನೈರ್ಮಲ್ಯಕ್ಕೆ ಸಹಾಯ ಮಾಡುತ್ತದೆ. ಸೂಕ್ಷ್ಮಜೀವಿಗಳು ಮತ್ತು ಕೆಟ್ಟ ವಾಸನೆ ಹರಡುವಿಕೆಯನ್ನು ತಡೆಯುತ್ತದೆ.
ಆದಾಗ್ಯೂ, ಫ್ಲಶಿಂಗ್ ಮಾಡುವ ಮೊದಲು ಮುಚ್ಚಳವನ್ನು ಮುಚ್ಚುವುದರಿಂದ ನೊರೊವೈರಸ್ ನಿಂದ ಸೃಷ್ಟಿಯಾಗುವ ರೋಗಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ. ನೊರೊವೈರಸ್ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಸಾಂಕ್ರಾಮಿಕ ವೈರಸ್ ಆಗಿದ್ದು ಅದು ವಾಂತಿ ಮತ್ತು ಭೇದಿಗೆ ಕಾರಣವಾಗುತ್ತದೆ (Norovirus -Norovirus is a very contagious virus that causes vomiting and diarrhea)
Also Read: ಸ್ನಾನಗೃಹದಲ್ಲಿಯೂ ವಾಸ್ತು ದೋಷಗಳಿವೆಯೇ? ಈ ಸರಳ ಸಲಹೆಗಳನ್ನು ಪಾಲಿಸಿ
ಮುಚ್ಚಳಗಳ ಕೊರತೆಯಿಂದಾಗಿ, ಸಾರ್ವಜನಿಕ ಶೌಚಾಲಯಗಳು ಮನೆಯ ಶೌಚಾಲಯಗಳಿಗಿಂತ ಹೆಚ್ಚು ಕಲುಷಿತಗೊಳ್ಳುತ್ತವೆ. ಪರಿಣಾಮವಾಗಿ, ಗಾಳಿಯಲ್ಲಿರುವ ಸಣ್ಣ ಕಣಗಳು ಜನರನ್ನು ಉಸಿರಾಟದ ಕಾಯಿಲೆಗಳಿಗೆ ಒಡ್ಡುತ್ತದೆ. ಆದ್ದರಿಂದ ಶೌಚಾಲಯ ಬಳಸುವಾಗ ಕನಿಷ್ಠ ಕಮೋಡ್ ಮುಚ್ಚುವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ