ದಕ್ಷಿಣ ಭಾರತದ ಪ್ರಸಿದ್ಧ ಉಪಹಾರಗಳಲ್ಲಿ ದೋಸೆ ಕೂಡ ಒಂದು. ತೆಂಗಿನಕಾಯಿ ಚಟ್ನಿ ಮತ್ತು ತರಕಾರಿ ಸಾಂಬರ್ ಜೊತೆಗೆ ದೋಸೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ. ಮಸಾಲ ದೋಸೆ, ನೀರು ದೋಸೆ, ಸೆಟ್ ದೋಸೆ, ರಾಗಿ ದೋಸೆ ಹೀಗೆ ಹಲವು ಬಗೆಯ ದೋಸೆಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಸವಿದಿರುತ್ತೇವೆ. ಆದರೆ ನೀವೆಂದಾದರೂ ಗುಲಾಬ್ ಜಾಮೂನ್ನಿಂದ ತಯಾರಿಸಿದ ದೋಸೆಯ ಬಗ್ಗೆ ಕೇಳಿದ್ದೀರಾ. ಅರೇ ಗುಲಾಬ್ ಜಾಮೂನ್ ಸಿಹಿ ತಿನಿಸು ಇದರಿಂದ ದೋಸೆ ಹೇಗೆ ತಯಾರಿಸಲು ಸಾಧ್ಯ ಎಂದು ನೀವು ಯೋಚಿಸುತ್ತಿದ್ದೀರಾ? ಈಗ ಆಹಾರದಲ್ಲಿ ಎಲ್ಲಾ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಈ ರೀತಿಯ ವಿಲಕ್ಷಣ ಸಂಯೋಜನೆಯ ಆಹಾರಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಈ ಗುಂಪಿಗೆ ಗುಲಾಬ್ ಜಾಮೂನ್ ದೋಸೆ ಕೂಡ ಸೇರ್ಪಡೆಯಾಗಿದೆ.
ಮಾಯಾ (@Sharanyashettyy) ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋದಲ್ಲಿ ಬೀದಿ ಬದಿ ವ್ಯಾಪಾರಿಯೊಬ್ಬರು ದೋಸೆ ತಯಾರಿಸಿ ಅದರ ಮೇಲೆ 4 ರಿಂದ 5 ಪುಟ್ಟ ಪುಟ್ಟ ಗುಲಾಬ್ ಜಾಮೂನ್ ಹಾಕಿ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ, ಅದನ್ನು ದೋಸೆಯ ಸುತ್ತಲೂ ಹರಡುತ್ತಾರೆ. ಮತ್ತು ಅದಕ್ಕೆ ಸಣ್ಣದಾಗಿ ಹೆಚ್ಚಿದ ಡ್ರೈ ನಟ್ಸ್ಗಳನ್ನು ಹಾಕುತ್ತಾರೆ. ಕೊನೆಯಲ್ಲಿ ದೋಸೆಯ ಮಧ್ಯೆ ಒಂದು ಸ್ಕೂಪ್ ವೆನಿಲ್ಲಾ ಐಸ್ ಹಾಕಿ ಅದರ ಮೇಲೆ ಒಂದು ಗುಲಾಬ್ ಜಾಮೂನ್ ಇಟ್ಟು ಗ್ರಾಹಕರಿಗೆ ನೀಡುವುದನ್ನು ಕಾಣಬಹುದು.
ಇದನ್ನೂ ಓದಿ: ನೀವು ಊಹಿಸಿದಷ್ಟು ಆರೋಗ್ಯಕರವಲ್ಲದ 5 ಆಹಾರ ಪದ್ಧತಿಗಳು
ಗುಲಾಬ್ ಜಾಮೂನ್ ದೋಸೆ ವಿಡಿಯೋ
Will you eat this? pic.twitter.com/UtNt935Hpd
— Maya (@Sharanyashettyy) August 10, 2023
ಸದ್ಯ ಟ್ವಿಟರ್ನಲ್ಲಿ ವೈರಲ್ ಆಗಿರುವ ಈ ವೀಡಿಯೋವನ್ನು ಕಂಡು ನೋಡುಗರು, ಜನರು ನಿಜವಾಗಿಯೂ ಇಂತಹ ವಿಲಕ್ಷಣ ಸಂಯೋಜನೆಯ ಆಹಾರಗಳನ್ನು ತಿನ್ನುತ್ತಾರೆಯೇ ಅಥವಾ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲು ಈ ವೀಡಿಯೋವನ್ನು ಮಾಡುತ್ತಾರೆಯೇ ಎಂದು ಅಚ್ಚರಿಪಟ್ಟಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:48 pm, Sat, 12 August 23