Ayurveda Tips: ನೀರು ಯಾವಾಗ, ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು, ಆಯುರ್ವೇದ ಸೂಕ್ತ ಸಲಹೆ ಇಲ್ಲಿದೆ

|

Updated on: Jan 22, 2023 | 5:09 PM

ನೀವು ಎಷ್ಟು ನೀರು ಕುಡಿಯಬೇಕೆಂದು ಎಂಬುದರ ಹೊರತಾಗಿ ಆಯುರ್ವೇದವು ನಿಮ್ಮ ಪ್ರಸ್ತುತ ಅಗತ್ಯಗಳನ್ನು ಅವಲಂಬಿಸಿ ನೀರಿನ ಸರಿಯಾದ ತಾಪಮಾನದ ಬಗ್ಗೆ ಶಿಫಾರಸ್ಸನ್ನು ಮಾಡಿದೆ.

Ayurveda Tips: ನೀರು ಯಾವಾಗ, ಎಷ್ಟು ಪ್ರಮಾಣದಲ್ಲಿ ಕುಡಿಯಬೇಕು, ಆಯುರ್ವೇದ ಸೂಕ್ತ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯದ ಅನೇಕ ಅಂಶಗಳು ಸುಧಾರಿಸಲು ಅದು ಸಹಾಯ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಣ, ತೂಕ ನಿರ್ವಹಣೆ, ಉತ್ತಮ ಶಕ್ತಿಯ ಮಟ್ಟ, ಚರ್ಮ ಮತ್ತು ಕೂದಲಿನ ಆರೋಗ್ಯ ಹೀಗೆ ನೀರು ನಿಮ್ಮ ಒಟಾರೆ ಯೋಗಕ್ಷೇಮದಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ. ನೀವು ಎಷ್ಟು ನೀರು ಕುಡಿಯಬೇಕು ಎಂಬುದು ಹೊರತಾಗಿ, ಆಯುರ್ವೇದವು ನಿಮ್ಮ ಪ್ರಸ್ತುತ ಅವಶ್ಯಕತೆಗೆ ಅನುಗುಣವಾಗಿ ನೀರಿನ ಸರಿಯಾದ ತಾಪಮಾನದ ಬಗ್ಗೆ ಶಿಫಾರಸ್ಸುಗಳನ್ನು ಹೊಂದಿದೆ.

ಆಯುರ್ವೇದ ತಜ್ಞೆ ಡಾ. ರೇಖಾ ರಾಧಾಮೋನಿ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್​​ನಲ್ಲಿ ಅಷ್ಟಾಂಗ ಹೃದಯ ಸೂತ್ರ ಸ್ಥಾನವನ್ನು ಉಲ್ಲೇಖಿಸಿ ಯಾರು ಯಾವ ರೀತಿಯ ನೀರನ್ನು ಕುಡಿಯಬೇಕು ಎಂಬುದರ ಕುರಿತು ವಿವರವಾಗಿ ಹೇಳಿದ್ದಾರೆ.
ತುಂಬಾ ಬಾಯಾರಿಕೆಯಾದಾಗ ಅಥವಾ ಫುಡ್ ಪಾಯಿಸನ್ ಆದಾಗ ಬೆಚ್ಚಗಿನ ನೀರಿಗಿಂತ, ನಿಮ್ಮ ಸಾಮಾನ್ಯ ಕೋಣೆಯ ಉಷ್ಣಾಂಶದ ಮೇಲೆ ಅವಲಂಬಿಸಿದ ನೀರನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಡಾ. ರಾಧಾಮೋನಿ ಹೇಳುತ್ತಾರೆ.

ಇದನ್ನೂ ಓದಿ: ನೀವು ಸಸ್ಯಾಹಾರಿಗಳೇ? ಮಾಂಸಕ್ಕೆ ಸಮಾನವಾದ ಪ್ರೋಟೀನ್ ಭರಿತ ಆಹಾರ ಮೂಲಗಳು ಇಲ್ಲಿವೆ

ಕೆಳಗಿನ ಸಂದರ್ಭಗಳಲ್ಲಿ ಸಾಮಾನ್ಯ ಕೋಣೆಯ ಉಷ್ಣಾಂಶದ ನೀರನ್ನು ಕುಡಿಯಿರಿ:

  • ಮಧ್ಯಪಾನ ಮಾಡಿದ ನಂತರ
  • ನೀವು ದಣಿದಿದ್ದರೆ ಅಥವಾ ತಲೆ ತಿರುಗುವಿಕೆ ಉಂಟಾದಾಗ
  • ತುಂಬಾ ಬಾಯಾರಿಕೆಯಾದಾಗ
  • ಬಿಸಿಲಿನಲ್ಲಿ ಹೊರಗೆ ಹೋಗಿ ಬಂದರೆ
  • ನೀವು ರಕ್ತಸ್ರಾವದ ಅಸ್ವಸ್ಥತೆಯನ್ನು ಹೊಂದಿದ್ದರೆ
  • ಫುಡ್ ಪಾಯಿಸನ್ ಆದಾಗ

ಬೆಚ್ಚಗಿನ ನೀರು ತನ್ನದೇ ಆದ ಪಾತ್ರವನ್ನು ಹೊಂದಿದೆ ಮತ್ತು ಕೆಲವು ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಆಯುರ್ವೇದದ ಪ್ರಕಾರ ಬೆಚ್ಚಗಿನ ನೀರನ್ನು ಕುಡಿಯುವುದು ಕಫ ದೋಷದ ಲಕ್ಷಣಗಳನ್ನು ನಿವಾರಿಸುತ್ತದೆ ಮತ್ತು ಆಹಾರದ ಕಡು ಬಯಕೆಯನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಹಾಗೂ ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ ಪರಿಹಾರವನ್ನು ಒದಗಿಸುತ್ತದೆ.

ಬೆಚ್ಚಗಿನ ನೀರನ್ನು ಕುಡಿಯುವುದು ಯಾವಾಗ ಉತ್ತಮ?

  • ನಿಮಗೆ ಕಡಿಮೆ ಹಸಿವಿದ್ದ ಸಮಯದಲ್ಲಿ
  • ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾದಾಗ
  • ಗಂಟಲು ನೋವು ಲಕ್ಷಣ ಕಂಡು ಬಂದಾಗ
  • ಶೀತ, ಜ್ವರ, ಕೆಮ್ಮು ಇದ್ದಾಗ
  • ಆಸಿಡಿಟಿ  ಉಂಟಾದ ಸಮಯದಲ್ಲಿ

ಇಂತಹ ಸಂದರ್ಭಗಳಲ್ಲಿ ಬಿಸಿ ನೀರನ್ನು ಕುಡಿಯಬೇಕು ಎಂದು ಡಾ. ರೇಖಾ ರಾಧಾಮೋನಿ ಹೇಳುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 5:09 pm, Sun, 22 January 23