AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Papaya: ಪಪ್ಪಾಯಿ ಹಣ್ಣಾಗಿದೆಯೇ ಎಂದು ಕಂಡುಹಿಡಿಯುವ ಸುಲಭ ವಿಧಾನ ಇಲ್ಲಿದೆ

ಮಾರುಕಟ್ಟೆಯಲ್ಲಿ ಖರೀದಿಸುವ ಪಪ್ಪಾಯಿ ಹಣ್ಣಾಗಿದೆಯೇ ಅಥವಾ ಇಲ್ಲವೇ, ತಾಜಾತನದಿಂದ ಕೂಡಿದೆಯೇ ಎಂದು ಹೇಗೆ ಪರೀಕ್ಷಿಸುವುದು ಎಂಬ ಬಗ್ಗೆ ನಿಮಗೆ ತಿಳಿಯುವುದಿಲ್ಲವೇ ಚಿಂತಿಸಬೇಡಿ. ಈ ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಪಪ್ಪಾಯಿ ಹಣ್ಣಾಗಿದೆಯೇ ಎಂಬುದನ್ನು ತಿಳಿದುಕೊಳ್ಳಿ.

Papaya: ಪಪ್ಪಾಯಿ ಹಣ್ಣಾಗಿದೆಯೇ ಎಂದು ಕಂಡುಹಿಡಿಯುವ ಸುಲಭ ವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on:Apr 07, 2023 | 2:57 PM

Share

ಹೆಚ್ಚಿನ ಜನರು ಮಾರುಕಟ್ಟೆಯಲ್ಲಿ ಸಿಗುವ ಪಪ್ಪಾಯಿ ಹಣ್ಣುಗಳನ್ನು (Papaya) ಖರೀದಿಸುತ್ತಾರೆ. ಅಲ್ಲಿ ಹಣ್ಣುಗಳ ಗುಣಮಟ್ಟ ಮತ್ತು ತಾಜಾತನವನ್ನು ಪರೀಕ್ಷಿಸುವುದು ತುಂಬಾ ಮುಖ್ಯವಾಗಿರುತ್ತದೆ. ಎಲ್ಲರಿಗೂ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಇದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಸಂದರ್ಭಗಳಲ್ಲಿ ಹಣ್ಣುಗಳು ಉತ್ತಮವಾಗಿದೆ ಎಂದು ಅದನ್ನು ಖರೀದಿಸಿ, ಮನೆಯಲ್ಲಿ ಕತ್ತರಿಸಿ ನೋಡಿದಾಗ ಅದು ಹಾಳಾಗಿರುತ್ತದೆ. ಈ ರೀತಿಯ ಅನುಭವಗಳು ಹೆಚ್ಚಿನ ಜನರಿಗೆ ಆಗಿರುತ್ತದೆ. ಹಾಗಾಗಿ ಹಣ್ಣುಗಳ ಗುಣಮಟ್ಟವನ್ನು ಪರೀಕ್ಷಿಸಿ ಖರೀದಿಸುವುದು ಮುಖ್ಯವಾಗಿರುತ್ತದೆ. ನಿಮ್ಮ ಇಷ್ಟದ ಪಪ್ಪಾಯಿ ಹಣ್ಣುಗಳನ್ನು ಖರೀದಿಸುವಾಗ ಹಣ್ಣಾಗಿದೆಯೇ ಹಾಗೂ ಅದು ಉತ್ತಮ ಗುಣಮಟ್ಟವನ್ನು ಹೊಂದಿದೆಯೇ, ಅದು ತಿನ್ನಲು ಸಿದ್ಧವಾಗಿದೆಯೇ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳಬೇಕು ಎನ್ನುವ ನಿಮಗೆ ತಿಳುವಳಿಕೆ ಇಲ್ಲದಿದ್ದರೆ, ಮಾರುಕಟ್ಟೆಗೆ ಹೋಗುವ ಮೊದಲು ಈ ಸರಳ ಸಲಹೆಗಳನ್ನು ಪಾಲಿಸಿ.

ಪಪ್ಪಾಯಿಯು ಹಲವು ಪ್ರಯೋಜನಗಳನ್ನು ಹೊಂದಿರುವ ಕಾರಣ ಹೆಚ್ಚಿನ ಜನರು ಈ ಹಣ್ಣನ್ನು ಸೇವನೆ ಮಾಡುತ್ತಾರೆ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಇ ಇದೆ. ಹಾಗೂ ಈ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದೆ. ಮತ್ತು ಈ ಉತ್ಕರ್ಷಣ ನಿರೋಧಕ ಆಹಾರಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ಒಣಚರ್ಮವನ್ನು ಹೈಡ್ರೇಟ್ ಮಾಡಲು ಅನೇಕ ಜನರು ತಮ್ಮ ಚರ್ಮಕ್ಕೆ ಪಪ್ಪಾಯಿಯ ತಿರುಳನ್ನು ಅನ್ವಯಿಸುತ್ತಾರೆ.

ಇದನ್ನೂ ಓದಿ: Papaya Skin Benefits: ಪಪ್ಪಾಯ ಸೇವನೆ ಕೇವಲ ಹೊಟ್ಟೆಗೆ ಮಾತ್ರವಲ್ಲ ನಿಮ್ಮ ತ್ವಚೆಗೂ ಉತ್ತಮ

ಪಪ್ಪಾಯಿ ಹಣ್ಣಾಗಿದೆಯೇ ಎಂದು ಪರೀಕ್ಷಿಸುವ ಸುಲಭ ಸಲಹೆಗಳು:

ಬಣ್ಣ: ಪಪ್ಪಾಯಿ ಹಣ್ಣಾಗಿದೆಯೇ ಎಂದು ನಿರ್ಧರಿಸಲು ಅದರ ಬಣ್ಣವನ್ನು ಪರೀಕ್ಷಿಸುವುದು ಉತ್ತಮ ವಿಧಾನವಾಗಿದೆ. ಪಪ್ಪಾಯಿಯ ಹೊರ ಭಾಗದಲ್ಲಿ ಹಸಿರು ಬಣ್ಣದಾಗಿದ್ದರೆ, ಅದು ಇನ್ನು ಹಸಿ ಮತ್ತು ಹಣ್ಣಾಗಿಲ್ಲ ಎಂದು ಅರ್ಥ. ಅದರ ಮೇಲ್ಮೆ ಭಾಗದಲ್ಲಿöÊ ಬಣ್ಣ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿದ್ದರೆ, ಅದು ಹಣ್ಣಾಗುತ್ತಿದೆ ಎಂದು ಅರ್ಥ. ಪಪ್ಪಾಯಿ ಸಂಪೂರ್ಣವಾಗಿ ಕಿತ್ತಳೆ ಅಥವಾ ಗಾಢ ಹಳದಿ ಬಣ್ಣದ್ದಾಗಿದ್ದರೆ ಅದು ಮಾಗಿದ ಹಾಗೂ ತಿನ್ನಲು ಸಿದ್ಧವಾಗಿದೆ ಎಂದರ್ಥ.

ವಿನ್ಯಾಸ: ಪಪ್ಪಾಯಿಯ ಹೊರ ಮೇಲ್ಮೆಯ ವಿನ್ಯಾಸವನ್ನು ಪರೀಕ್ಷಿಸುವುದು ಇದು ಹಣ್ಣಾಗಿದೆಯೇ ಎಂದು ತಿಳಿದುಕೊಳ್ಳುವ ಇನ್ನೊಂದು ವಿಧಾನವಾಗಿದೆ. ಅದು ಗಟ್ಟಿಯಾದ ವಿನ್ಯಾಸವನ್ನು ಹೊಂದಿದ್ದರೆ ಅದು ಹಸಿಯಾಗಿರುತ್ತದೆ. ಪಪ್ಪಾಯಿಯನ್ನು ಕೈಯಲ್ಲಿ ಮುಟ್ಟುವಾಗ ಅದು ಮೃದುವಾಗಿದ್ದರೆ, ಅದು ಮಾಗಿದ ಹಾಗೂ ತಿನ್ನಲು ಸಿದ್ಧವಾಗಿರುವ ಹಣ್ಣು. ಹಾಗಾಗಿ ಪಪ್ಪಾಯಿಯನ್ನು ಖರೀದಿಸುವ ಮೊದಲು ಅದರ ಮೃದುತ್ವದ ವಿನ್ಯಾಸವನ್ನು ಪರೀಕ್ಷಿಸಿ.

ವಾಸನೆ: ವಾಸನೆಯನ್ನು ಗ್ರಹಿಸುವ ಮೂಲಕವು ಪಪ್ಪಾಯಿ ಹಣ್ಣಾಗಿದೆಯೇ ಎಂದು ಪರೀಕ್ಷಿಸಬಹುದು. ಪಪ್ಪಾಯಿ ಹಣ್ಣಾದಾಗ ಅವು ಒಂದು ರೀತಿಯ ಸಿಹಿಯಾದ ಪರಿಮಳವನ್ನು ಹೊಂದಿರುತ್ತವೆ. ಈ ಪರಿಮಳ ಹಸಿ ಪಪ್ಪಾಯಿ ಹೊಂದಿರುವುದಿಲ್ಲ. ಆದ್ದರಿಂದ ಪಪ್ಪಾಯಿಯ ಪಕ್ವತೆಯನ್ನು ನಿರ್ಧರಿಸಲು ಅದರ ವಾಸನೆಯನ್ನು ಗ್ರಹಿಸಿ.

Published On - 2:57 pm, Fri, 7 April 23