ತೆಂಗಿನಕಾಯಿ ಚಟ್ನಿಯನ್ನು ಅತ್ಯಂತ ತ್ವರಿತವಾಗಿ ಹಾಗೂ ಸುಲಭವಾಗಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಪ್ರತಿ ಮನೆಗಳಲ್ಲಿ ಬೆಳಗಿನ ತಿಂಡಿಗಳ ಜೊತೆಗೆ ತೆಂಗಿನಕಾಯಿ ಚಟ್ನಿಯನ್ನು ಮಾಡಲಾಗುತ್ತದೆ. ಆದರೆ ಪ್ರತಿ ದಿನ ಆದೇ ರುಚಿಯನ್ನು ತಿಂದು ನಿಮಗೆ ಬೇಜಾರಾಗಿದ್ದರೆ, ವಿಭಿನ್ನ ಬಗೆಯ ತೆಂಗಿನಕಾಯಿ ಬಳಸಿ ಮಾಡುವ ಚಟ್ನಿ ರೆಸಿಪಿ ಇಲ್ಲಿದೆ. ನೀವೂ ಪ್ರಯತ್ನಿಸಿ.
ತೆಂಗಿನಕಾಯಿ ಚಟ್ನಿಯು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಕೂಡ ಸಹಾಯ ಮಾಡುತ್ತದೆ. ತೆಂಗಿನಕಾಯಿಯಲ್ಲಿ ಫೈಬರ್ ಅಧಿಕವಾಗಿರುವುದ್ದರಿಂದ, ಇದು ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ. ತೆಂಗಿನಕಾಯಿ ಚಟ್ನಿ ತಿನ್ನುವುದರಿಂದ ನಿಮ್ಮ ಕರುಳಿನ ಚಲನೆ ಸುಧಾರಿಸುತ್ತದೆ.
ತೆಂಗಿನಕಾಯಿ ಚಟ್ನಿ ಮಾಡಲು 5 ಸುಲಭ ಮತ್ತು ಆಸಕ್ತಿದಾಯಕ ವಿಧಾನಗಳು ಇಲ್ಲಿವೆ
1.ತೆಂಗಿನಕಾಯಿ ಸಾದಾ ಚಟ್ನಿ:
ಈ ತೆಂಗಿನಕಾಯಿ ಚಟ್ನಿ ತಯಾರಿಸಲು ಅತ್ಯಂತ ಸುಲಭ ಪಾಕವಿಧಾನ ಇಲ್ಲಿದೆ. ಇದನ್ನು ಮಾಡಲು, ನಿಮಗೆ ಬೇಕಾಗಿರುವುದು ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಶುಂಠಿ, ಉಪ್ಪು ಮತ್ತು ಹುಣಸೆ ಹಣ್ಣಿನ ತಿರುಳು. ಅಷ್ಟೇ! ಇದಲ್ಲದೆ, ಇದು ತುಂಬಾ ಸುಲಭ ಮತ್ತು ತ್ವರಿತವಾಗಿ ತಯಾರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಪ್ರತಿ ದಿನದ ಬೆಳಗಿನ ತಿಂಡಿಗೆ ಮಾಡಲಾಗುತ್ತದೆ.
2. ಮಾವು-ತೆಂಗಿನಕಾಯಿ ಚಟ್ನಿ:
ನೀವು ಪ್ರತಿ ದಿನ ಬೆಳಗಿನ ತಿಂಡಿ ದೋಸೆ, ಇಡ್ಲಿ ಮುಂತಾದ ಹಲವು ಬಗೆಯ ತಿಂಡಿಗಳನ್ನು ಸವಿಯುವ ಚಟ್ನಿಯ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಮಾವು-ತೆಂಗಿನಕಾಯಿ ಚಟ್ನಿಯನ್ನು ಪ್ರಯತ್ನಿಸಿ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಸಾಮಾನ್ಯವಾಗಿ ಪ್ರತಿ ದಿನ ಮಾಡುವ ತೆಂಗಿನ ಕಾಯಿ ಚಟ್ನಿ ಮಾಡುವಾಗ ಅದರೊಂದಿಗೆ ಮಾವಿನಕಾಯಿಯನ್ನು ಸೇರಿಸಿ. ಇದು ಅನ್ನ, ದೋಸೆ, ಇಡ್ಲಿ, ಚಪಾತಿ ಮತ್ತು ಪಕೋಡಗಳಿಗೆ ಒಂದು ಒಳ್ಳೆಯ ಜೋಡಿಯಾಗಿದೆ. ಆದ್ದರಿಂದ ನೀವೂ ನಿಮ್ಮ ಮನೆಯಲ್ಲಿ ಪ್ರಯತ್ನಿಸಿ.
3. ಕಡಲೇ ಬೀಜ/ ಶೇಂಗಾ ಚಟ್ನಿ:
ತೆಂಗಿನಕಾಯಿ ಮತ್ತು ಕರಿಬೇವಿನ ಎಲೆಗಳ ರುಚಿಯ ರುಚಿಕರವಾದ ಸಂಯೋಜನೆಯಾಗಿದೆ. ನಿಮ್ಮ ಸಾಮಾನ್ಯ ಆಹಾರದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುತ್ತದೆ. ಕಡಲೆಕಾಯಿ, ತೆಂಗಿನಕಾಯಿ ಮತ್ತು ಕರಿಬೇವಿನ ರುಚಿಗಳ ರುಚಿಕರವಾದ ಮಿಶ್ರಣವಾಗಿದೆ. ಈ ಚಟ್ನಿಯನ್ನು ಮಾಡಲು ನೀವು ಮಾಡಬೇಕಾಗಿರುವುದು ಇಷ್ಟೇ. ನೀವು ಸಾಮಾನ್ಯವಾಗಿ ಮಾಡುವ ತೆಂಗಿನಕಾಯಿಯ ಚಟ್ನಿಯನ್ನು ಮಾಡುವ ರೀತಿಯೇ ಮಾಡಿ. ಆದರೆ ಆದರ ಜೊತೆಗೆ ಹುರಿದ ಕಡಲೇ ಬೀಜವನ್ನು ಸೇರಿಸಿ ಚಟ್ನಿಯನ್ನು ರುಬ್ಬಿಕೊಳ್ಳಿ.
4. ತೆಂಗಿನಕಾಯಿ-ಶುಂಠಿ ಚಟ್ನಿ:
ಈ ಚಟ್ನಿಯು ಸಾಮಾನ್ಯ ತೆಂಗಿನ ಕಾಯಿಯ ಚಟ್ನಿಗಿಂತ ಹೆಚ್ಚಿನ ಶುಂಠಿಯ ರುಚಿ ಹಾಗೂ ಸುವಾಸನೆಯನ್ನು ನೀಡುತ್ತದೆ. ಶುಂಠಿಯ ಸೇವನೆಯು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದೆ. ನೀವು ಸಾಮಾನ್ಯವಾಗಿ ತೆಂಗಿನ ಕಾಯಿ ಚಟ್ನಿ ಮಾಡುವಾಗ ಹುಣಸೆ ರಸ, ಮೆಣಸಿನ ಕಾಯಿಯೊಂದಿಗೆ ಶುಂಠಿಯನ್ನು ಜೊತೆಗೂಡಿಸಿ ಈ ವಿಶೇಷ ರುಚಿ ನೀಡುವ ತೆಂಗಿನಕಾಯಿ-ಶುಂಠಿ ಚಟ್ನಿಯನ್ನು ತಯಾರಿಸಿ.
ಇದನ್ನು ಓದಿ: ತಡರಾತ್ರಿ ತಿನ್ನುವ ಅಭ್ಯಾಸವಿದ್ದರೆ ಈಗಲೇ ಬಿಟ್ಟು ಬಿಡಿ, ಆರೋಗ್ಯಕ್ಕಾಗುವ ಅಪಾಯಗಳ ಬಗ್ಗೆ ಅರಿವಿರಲಿ
5. ಟೊಮೆಟೋ ತೆಂಗಿನಕಾಯಿ ಚಟ್ನಿ:
ಈ ಚಟ್ನಿಯನ್ನು ಈರುಳ್ಳಿ, ಟೊಮೆಟೋ ತುರಿದ ತೆಂಗಿನಕಾಯಿ, ಸಂಪೂರ್ಣ ಕೆಂಪು ಮೆಣಸಿನಕಾಯಿಗಳು, ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆ ರಸದಿಂದ ತಯಾರಿಸಲಾಗುತ್ತದೆ. ಈ ಚಟ್ನಿಯಲ್ಲಿ ಟೊಮೆಟೋವನ್ನು ಬಳಸುವುದರಿಂದ ಸಾಮಾನ್ಯ ಚಟ್ನಿಗಿಂತ ವಿಭಿನ್ನ ರೀತಿಯನ್ನು ನೀಡುತ್ತದೆ. ಇದು ಅನ್ನ, ದೋಸೆ, ಚಪಾತಿ, ಇಡ್ಲಿಗೆ ಒಂದು ಉತ್ತಮ ಜೋಡಿಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:54 pm, Fri, 25 November 22