AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dating Apps: ಸಂಗಾತಿಯ ಹುಡುಕಾಟದಲ್ಲಿದ್ದೀರಾ? ನಿಮಗಾಗಿ ಇಲ್ಲಿದೆ ಪ್ರಮುಖ ಡೇಟಿಂಗ್ ಆ್ಯಪ್​ಗಳ ಮಾಹಿತಿ

ನಿಮ್ಮಗಾಗಿ ನೀವು ಬಯಸುವಂತಹ ವ್ಯಕ್ತಿಗಳನ್ನು ಸುಲಭವಾಗಿ ವ್ಯವಹರಿಸಲು, ಭೇಟಿ ಮಾಡಲು ಪ್ರಮುಖ 5 ಡೇಟಿಂಗ್ ಅಪ್ಲಿಕೇಶನ್‌ಗಳು ಇಲ್ಲಿವೆ.

Dating Apps: ಸಂಗಾತಿಯ ಹುಡುಕಾಟದಲ್ಲಿದ್ದೀರಾ? ನಿಮಗಾಗಿ ಇಲ್ಲಿದೆ ಪ್ರಮುಖ ಡೇಟಿಂಗ್ ಆ್ಯಪ್​ಗಳ ಮಾಹಿತಿ
Dating app Kannada newsImage Credit source: Bonobology.com
TV9 Web
| Updated By: ಅಕ್ಷತಾ ವರ್ಕಾಡಿ|

Updated on: Nov 25, 2022 | 6:45 PM

Share

ನೀವು ನಿಮ್ಮ ಒತ್ತಡದ ಜೀವನಶೈಲಿಯಲ್ಲಿ, ನಿಮ್ಮ ಜೀವನಕ್ಕೆ ಹೊಂದಿಕೊಳ್ಳುವ ಅಥವಾ ನಿಮ್ಮಂತೆಯೇ ಅಭಿರುಚಿಯನ್ನು ಹೊಂದಿರುವ ಸಂಗಾತಿಯನ್ನು ಬಯಸುತ್ತಿದ್ದೀರೇ? ಆದರೆ ಇದು ಸಾಧ್ಯವಾಗುತ್ತಿಲ್ಲವೇ? ಆದ್ದರಿಂದ ಇನ್ನೂ ಮುಂದೆ ಇಂತಹ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ನಿಮ್ಮಗಾಗಿ ನಿಮ್ಮ ಅಭಿರುಚಿಗೆ ತಕ್ಕಂತಹ ವ್ಯಕ್ತಿಗಳನ್ನು ಸುಲಭವಾಗಿ ವ್ಯವಹರಿಸಲು, ಭೇಟಿ ಮಾಡಲು ಪ್ರಮುಖ 5 ಡೇಟಿಂಗ್ ಅಪ್ಲಿಕೇಶನ್‌ಗಳು ಇಲ್ಲಿವೆ.

ನೀವು ಪ್ರತಿದಿನ ಸಾಕಷ್ಟು ಜನರನ್ನು ಭೇಟಿಯಾಗುತ್ತೀರಿ ಹಾಗೂ ಅವರೊಂದಿಗೆ ವ್ಯವಹರಿಸುತ್ತೀರಿ. ಆದರೆ ನೀವು ನಿಮ್ಮ ವೈಯಕ್ತಿಕ ಸಮಯವನ್ನು ಕಳೆಯಲು ಬಯಸುವ ಒಬ್ಬ ವ್ಯಕ್ತಿಯನ್ನು ಕಂಡುಹಿಡಿಯುವುದು ಅಷ್ಟೋಂದು ಸುಲಭವಲ್ಲ. ನಿಮ್ಮ ಉದ್ದೇಶ, ಆದ್ಯತೆ ಮತ್ತು ಸಂಬಂಧದ ಗುರಿಯನ್ನು ಅವಲಂಬಿಸಿ, ನಿಮ್ಮ ಅವಶ್ಯಕತೆಗೆ ಸರಿಹೊಂದುವ ಡೇಟಿಂಗ್ ಅಪ್ಲಿಕೇಶನ್ ಅನ್ನು ನೀವು ಆಯ್ಕೆ ಮಾಡಬಹುದು.

ನೀವು ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಲು 5 ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳು ಇಲ್ಲಿವೆ:

1. ಬಂಬಲ್(Bumble): ಇದು ಭಾರತದ ಅತ್ಯಂತ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಅಪ್ಲಿಕೇಶನ್‌ನ ಯುಎಸ್‌ಪಿ ಎಂದರೆ ಅದು ನಕಲಿ ಪ್ರೊಫೈಲ್‌ಗಳ ರಚನೆಯನ್ನು ತಡೆಯುತ್ತದೆ. ಆ್ಯಪ್‌ನಲ್ಲಿ ಖಾತೆಯನ್ನು ರಚಿಸಿದಾಗ ಅದರ ಮೂಲಕ ಪ್ರೊಫೈಲ್ ಫೋಟೋಗಳನ್ನು ಪರಿಶೀಲಿಸಲಾಗುತ್ತದೆ. ಈ ಅಪ್ಲಿಕೇಶನ್ ಉಚಿತವಾಗಿದ್ದರೂ, ಬಂಬಲ್ ಪ್ರೀಮಿಯಂನೊಂದಿಗೆ ಸಾಕಷ್ಟು ಹೆಚ್ಚುವರಿ ವೈಶಿಷ್ಟ್ಯಗಳು ಲಭ್ಯವಿದೆ. ನೀವು ನಿಜವಾದ ಪ್ರೀತಿ ಪಾತ್ರರನ್ನು ಹುಡುಕುತ್ತಿದ್ದರೆ ಈ ಅಪ್ಲಿಕೇಶನ್‌ ಬಳಸಿಕೊಳ್ಳಿ.

2. ಟಿಂಡರ್(Tinder): ಟಿಂಡರ್ ಅಪ್ಲಿಕೇಶನ್ ಪ್ರಾರಂಭವಾದ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಆದರೆ ಇಂದು ನಕಲಿ ಪ್ರೊಫೈಲ್‌ಗಳಿಂದ ತನ್ನ ಬೇಡಿಕೆಯನ್ನು ಕಳೆದುಕೊಂಡಿದೆ. ಆದರೆ ಈ ಅಪ್ಲಿಕೇಶನ್ ಸಂಪೂರ್ಣ ಗೌಪ್ಯತೆ ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ ಕಡಿಮೆ ಅವಧಿಯಲ್ಲಿ ನಿಮ್ಮ ಅಭಿರುಚಿಗೆ ತಕ್ಕಂತಹ ಸಂಗಾತಿಯನ್ನು ಒದಗಿಸಲು ನಿಮಗೆ ಸಹಾಯಮಾಡುತ್ತದೆ. ಇದರ ಇನ್ನೊಂದು ವಿಶೇಷ ಫಿಚರ್ ಮೂಲಕ ಅಂದರೆ ಪ್ರೀಮಿಯಂ ಬಳಕೆದಾರರು ಹೆಚ್ಚಿನ ಡೇಟಿಂಗ್ ಆಯ್ಕೆಗಳನ್ನು ಆನಂದಿಸಬಹುದು.

3. ಹ್ಯಾಪ್ನ್(Happn): ಇದು ಯುನಿಕ್ ಅಪ್ಲಿಕೇಶನ್ ಆಗಿದ್ದು, ಇದರಲ್ಲಿನ ಬಳಕೆದಾರರ ಯಾವುದೇ ಪ್ರೊಫೈಲ್ ನೀವು ಇಷ್ಟಪಟ್ಟರೆ ಮತ್ತು ಅವರು ಆಸಕ್ತಿಯನ್ನು ತೋರಿಸಿದರೆ ಅದು ಹೊಂದಾಣಿಕೆಯಾಗಿದೆ ಎಂದರ್ಥ. ಇದಾದ ನಂತರ ನೀವೂ ಅವರೊಂದಿಗೆ ವೀಡಿಯೊ ಕರೆ ಅಥವಾ ಚಾಟ್ ಮಾಡಬಹುದು. ಇದರ ವಿಶೇಷತೆ ಎನೆಂದರೆ ಹೊಸ ಬಳಕೆದಾರರ ಪ್ರೊಫೈಲ್‌ ಎಲ್ಲಾ ಬಳಕೆದಾರರಿಗೆ ತಿಳಿಯುವಂತೆ(Notification)ಮಾಡುತ್ತದೆ.

4.  ಐಸ್ಲೆ  (Aisle): ಇದು ಇತರ ಡೇಟಿಂಗ್ ಅಪ್ಲಿಕೇಶನ್ ಗಿಂತ ಭಿನ್ನವಾಗಿದೆ. ಈ ಅಪ್ಲಿಕೇಶನ್ ವೆಬ್‌ಸೈಟ್‌ನಲ್ಲಿ ಬಳಕೆದಾರರ ಪ್ರಕಾರ ತಮ್ಮ ಭವಿಷ್ಯದ ಸಂಗಾತಿ ಅಥವಾ ಪ್ರೀತಿ ಪಾತ್ರರ ಬಗ್ಗೆ ನಿರೀಕ್ಷೆಗಳನ್ನು ಹೊಂದಿರುವವರಿಗೆ ಉತ್ತಮವಾಗಿದೆ. ಆದ್ದರಿಂದ ಈ ಅಪ್ಲಿಕೇಶನ್ ಕ್ಯಾಶುಯಲ್ ಡೇಟಿಂಗ್ ಬಗ್ಗೆ ಅಲ್ಲ, ಬದಲಾಗಿ ದೀರ್ಘಾವಧಿಯ ಸಂಬಂಧಗಳನ್ನು ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಸುತ್ತಮುತ್ತಲಿನ ಜನರಷ್ಟೇ ಅಲ್ಲ, ದೇಶ ವಿದೇಶಗಳಲ್ಲಿನ ಜನರೊಂದಿಗೆ ಕೂಡ ನಿಮಗೆ ಸಂಬಂಧ ಕಲ್ಪಿಸಲು ಅನುಮತಿ ನೀಡುತ್ತದೆ.

ಇದನ್ನು ಓದಿ: ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಲು ಇಲ್ಲಿದೆ ಸಲಹೆ

5. ಹಿಂಜ್ (Hinge): ಈ ಅಪ್ಲಿಕೇಶನ್‌ನಲ್ಲಿ, ನಿಮ್ಮ ಪ್ರೊಫೈಲ್ ಫೋಟೋ ಮತ್ತು ಸ್ವ ವಿವರಗಳನ್ನು ಯಾರೂ ನೋಡಬಹುದು ಮತ್ತು ಕಾಮೆಂಟ್‌ಗಳನ್ನು ಕೂಡ ಮಾಡಬಹುದು. ಬಳಕೆದಾರರ ಆಸಕ್ತಿಯ ಪ್ರಕಾರವನ್ನು ಆಧರಿಸಿ, ನೀವು ಇತರ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಬಹುದು ಮತ್ತು ನಂತರ ಅವರನ್ನು ಸಂಪರ್ಕಿಸಬಹುದು.

ಜೀವಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ