Solo Female Travelers: ಮಹಿಳೆಯರೇ ಸುರಕ್ಷಿತವಾಗಿ ಹಾಗೂ ಒಬ್ಬಂಟಿಯಾಗಿ ಭೇಟಿ ನೀಡಬಹುದಾದ ಕೆಲವೊಂದು ಪ್ರವಾಸಿ ತಾಣಗಳು ಇಲ್ಲಿವೆ

ಮಹಿಳೆಯರು ಸುರಕ್ಷಿತ ಹಾಗೂ ಒಬ್ಬಂಟಿಯಾಗಿ(Solo Female Travellers) ಭೇಟಿ ನೀಡಬಹುದಾದ ಕೆಲವೊಂದು ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ. ಆದ್ದರಿಂದ ನಿಮ್ಮ ಕನಸನ್ನು ನೆರವೇರಿಸುವ ಕಾಲ ಕೂಡಿ ಬಂದಿದೆ.

Solo Female Travelers: ಮಹಿಳೆಯರೇ ಸುರಕ್ಷಿತವಾಗಿ ಹಾಗೂ ಒಬ್ಬಂಟಿಯಾಗಿ ಭೇಟಿ ನೀಡಬಹುದಾದ ಕೆಲವೊಂದು ಪ್ರವಾಸಿ ತಾಣಗಳು ಇಲ್ಲಿವೆ
Solo Female TravelersImage Credit source: Donna Wanderer
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 25, 2022 | 2:48 PM

ಸಾಕಷ್ಟು ಮಹಿಳೆಯರಿಗೆ ಒಬ್ಬಂಟಿಯಾಗಿ ಇಡೀ ದೇಶವನ್ನು ಸುತ್ತಬೇಕು ಎಂಬ ಕನಸುಗಳಿರುತ್ತದೆ. ಆದರೆ ಅದು ಇಂದು ಎಷ್ಟು ಸುರಕ್ಷಿತ? ಎಂಬ ಪ್ರಶ್ನೆ ಕಾಡುವುದು ಸಹಜ. ಆದ್ದರಿಂದ ಚಿಂತೆಯನ್ನು ಬಿಟ್ಟು ಬಿಡಿ ಭಾರತದಲ್ಲಿಯೇ ಮಹಿಳೆಯರು ಸುರಕ್ಷಿತ ಹಾಗೂ ಒಬ್ಬಂಟಿಯಾಗಿ(Solo Female Travelers) ಭೇಟಿ ನೀಡಬಹುದಾದ ಕೆಲವೊಂದು ಪ್ರವಾಸಿ ತಾಣಗಳ ಮಾಹಿತಿ ಇಲ್ಲಿದೆ. ಆದ್ದರಿಂದ ನಿಮ್ಮ ಕನಸನ್ನು ನೆರವೇರಿಸುವ ಕಾಲ ಕೂಡಿ ಬಂದಿದೆ.

1. ಋಷಿಕೇಶ:

Rishikesh

Rishikesh

ಉತ್ತರಾಖಂಡದ ಋಷಿಕೇಶವು ಕೇವಲ ಯೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ನೀವು ಕೂಡ ಒಬ್ಬಂಟಿಯಾಗಿ, ವಿಶೇಷವಾಗಿ ಸೋಲೇ ಟ್ರಿಪ್ ಇಷ್ಟ ಪಡುವ ಮಹಿಳೆಯರು ಭೇಟಿ ನೀಡಬಹುದಾದ ಸುರಕ್ಷಿತ ತಾಣವಾಗಿದೆ. ಭಾರತದ ಯೋಗ ಭೂಮಿ , ಆದರೆ ಇದು ಏಕವ್ಯಕ್ತಿ ಮಹಿಳಾ ಅಲೆಮಾರಿಗಳಿಗೆ ಸ್ವಾಗತಾರ್ಹ ನಗರವಾಗಿದೆ. ದೇಶದಲ್ಲಿ ರಿವರ್ ರಾಫ್ಟಿಂಗ್‌ಗೆ ಸೂಕ್ತವಾದ ಸ್ಥಳವೆಂದು ಕರೆಯಲಾಗುತ್ತದೆ.

ಇಲ್ಲಿನ ಪ್ರಮುಖ ಆಕರ್ಷಣೆ: ಸ್ವರ್ಗ ಆಶ್ರಮ, ಶ್ರೀ ತ್ರಯಾನ್ಬಕ್ಷ್ವರ್ ದೇವಸ್ಥಾನ, ಮಹರ್ಷಿ ಮಹೇಶ್ ಯೋಗಿ ಆಶ್ರಮ, ನೀಲಕಂಠ ಮಹಾದೇವ ದೇವಸ್ಥಾನ, ನೀರ್ ಗಡ್ ಜಲಪಾತ.ಜೊತೆಗೆ ಇಲ್ಲಿ ನೀವು ಬಂಗೀ ಜಂಪಿಂಗ್, ಗಂಗಾ ಆರತಿ ವೀಕ್ಷಿಸಿ, ವೈಟ್ ವಾಟರ್ ರಾಫ್ಟಿಂಗ್ ಮುಂತಾದವುಗಳನ್ನು ಆನಂದಿಸಬಹುದಾಗಿದೆ.

2.ನೈನಿತಾಲ್:

Nainital

Nainital

ಉತ್ತರಾಖಂಡದ ಅತಿವಾಸ್ತವಿಕ ಪರ್ವತ ಶಿಖರಗಳ ನಡುವೆ ಇರುವ ಈ ಗಿರಿಧಾಮವು ಸೋಲೋ ಟ್ರಿಪ್ ಮಾಡುವ ಮಹಿಳೆಯರಿಗೆ ಸುರಕ್ಷಿತ ತಾಣವಾಗಿದೆ. ಇಲ್ಲಿನ ಸೌಂದರ್ಯವಷ್ಟೇ ಅಲ್ಲ, ಸ್ಥಳೀಯ ಜನರ ಆತ್ಮೀಯತೆ, ನಗುವೂ ಒಂಟಿಯಾಗಿ ಪ್ರಯಾಣಿಸುವ ನಿಮ್ಮ ಭಯವನ್ನು ದೂರ ಮಾಡುತ್ತದೆ. ಇಲ್ಲಿನ ವಾಸಿಸುವ ಟಿಬೆಟಿಯನ್ನರ ಜೀವನಶೈಲಿಯನ್ನು ಆನಂದಿಸುವುದರ ಜೊತೆಗೆ ಶಾಪಿಂಗ್ ಕೂಡ ಮಾಡಬಹುದು.

ಇಲ್ಲಿನ ಪ್ರಮುಖ ಆಕರ್ಷಣೆ: ನಂದಾ ದೇವಿ ದೇವಸ್ಥಾನ, ಜಾಮಾ ಮಸೀದಿ, ಭೀಮತಾಲ್, ನೌಕುಚಿಯಾತಲ್, ಚೀನಾ ಶಿಖರ, ಸ್ನೋ ವ್ಯೂ. ಜೊತೆಗೆ ನೀವು ಇಲ್ಲಿ ಟಿಬೆಟಿಯನ್ ಮಾರುಕಟ್ಟೆಯಲ್ಲಿ ಶಾಪಿಂಗ್, ಕೇಬಲ್ ಕಾರ್ ಸವಾರಿ, ದೋಣಿ ಸವಾರಿ, ಕುದುರೆ ಸವಾರಿ, ಚೈನಾ ಪೀಕ್‌ಗೆ ಟ್ರೇಕಿಂಗ್ ಕೂಡ ಆನಂದಿಸಬಹುದು.

3. ಉದಯಪುರ:

Udayapura

Udayapura

ಪ್ರವಾಸವನ್ನು ಇಷ್ಟ ಪಡುವವರಲ್ಲಿ ಸಾಕಷ್ಟು ಜನರಿಗೆ ರಾಜಸ್ಥಾನವನ್ನು ಕಣ್ತುಂಬಿಸುವುದು ಪ್ರಮುಖ ಗುರಿಯಾಗಿರುತ್ತದೆ. ಅದರಲ್ಲಿ ಉದಯಪುರ ಪ್ರಮುಖವಾದುದು. ಇಲ್ಲಿನ ರಾಜ ಮನೆತನಗಳ ಭವ್ಯ ಅರಮನೆಗಳು, ಅವರ ಸಂಸ್ಕ್ರತಿ, ಆಚಾರ ವಿಚಾರಗಳು, ಬಟ್ಟೆ ಬರೆ, ಆಹಾರ ಕ್ರಮಗಳು, ಸುಂದರವಾದ ಸರೋವರಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಪ್ರಮುಖ ಆಕರ್ಷಣೆ: ಲೇಕ್ ಪ್ಯಾಲೇಸ್, ಲೇಕ್ ಪಿಚೋಲಾ, ಅಹರ್ ಮ್ಯೂಸಿಯಂ, ಬಾಗೋರ್ ಕಿ ಹವೇಲಿ, ಜಗದೀಶ ದೇವಸ್ಥಾನ, ಜಗ್ ಮಂದಿರ. ಕುದುರೆ ಸವಾರಿ, ಸಾಧನಾ ಎಂಪೋರಿಯಂನಲ್ಲಿ ಶಾಪಿಂಗ್, ಹೆರಿಟೇಜ್ ವಾಕ್, ಬಡಾ ಬಜಾರ್ ಮುಂತಾದವುಗಳಿಂದ ನೀವು ಸುಂದರ ದಿನ ಕಳೆಯಬಹದಾಗಿದೆ.

4. ಶಿಮ್ಲಾ:

Shimla

Shimla

ಗಿರಿಧಾಮಗಳು ಭಾರತದಲ್ಲಿನ ಸುರಕ್ಷಿತ ಪ್ರಯಾಣದ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ಸುಂದರವಾದ ಪರ್ವತ ನಗರಗಳಲ್ಲಿ, ಶಿಮ್ಲಾ ಅನ್ವೇಷಿಸಲು ಸೂಕ್ತವಾದ ಸ್ಥಳಗಳಲ್ಲಿ ಒಂದಾಗಿದೆ. ಈ ರಾಜಧಾನಿಯು ಕೆಲವು ಅತ್ಯುತ್ತಮ ಮತ್ತು ರಮಣೀಯ ನೋಟಗಳ ಜೊತೆಗೆ ಆನಂದಿಸಲು ಹಿತವಾದ ವಾತಾವರಣವನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆ: ವೈಸೆರೆಗಲ್ ಲಾಡ್ಜ್, ಹಿಮಾಲಯನ್ ಬರ್ಡ್ ಪಾರ್ಕ್ ಮತ್ತು ಕುಫ್ರಿ, ಸ್ಟೇಟ್ ಮ್ಯೂಸಿಯಂ, ಗೈಟಿ ಮ್ಯೂಸಿಯಂ. ಜೊತೆಗೆ ಸ್ಥಳೀಯ ವೈನ್, ಚೈನೀಸ್ ರೆಸ್ಟೋರೆಂಟ್‌ನಲ್ಲಿ ಭೋಜನ, ಕುಫ್ರಿಯಲ್ಲಿ ಯಾಕ್ ಸವಾರಿ ಮುಂತಾದವುಗಳು ಇಲ್ಲಿನ ವಿಶೇಷ.

5.ಮುನ್ನಾರ್:

Munnar Tourism

Munnar Tourism

ಹಚ್ಚಹಸಿರು ಮತ್ತು ಮಸಾಲೆ ತೋಟಗಳಿಂದ ಸುತ್ತುವರೆದಿರುವ ಮುನ್ನಾರ್ ಪ್ರಕೃತಿ ಪ್ರಿಯರಿಗೆ ಸ್ವರ್ಗವಾಗಿದೆ. ಹಸಿರು ಚಹಾ ತೋಟಗಳು ಮತ್ತು ಪ್ರಾಚೀನ ಸರೋವರಗಳ ಸುಂದರ ನೋಟಕ್ಕೆ ಹೆಸರುವಾಸಿಯಾಗಿದೆ. ಹಸಿರು ಬೆಟ್ಟಗಳು ಮತ್ತು ಚಿಲಿಪಿಲಿ ಹಕ್ಕಿಗಳ ನೋಟವನ್ನು ಆನಂದಿಸುತ್ತಾ ಇಲ್ಲಿ ಸಮಯವನ್ನು ಕಳೆಯಬಹುದು. ಕೇರಳದಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಏಕಾಂಗಿ ಪ್ರಯಾಣಿಕರೂ ಸುರಕ್ಷಿತ ಸ್ಥಳವಾಗಿದೆ. ಮುನ್ನಾರ್ ಪ್ರಮುಖ ಆಕರ್ಷಣೆಗಳು: ಎರವಿಕುಲಂ ರಾಷ್ಟ್ರೀಯ ಉದ್ಯಾನವನ, ಮಟ್ಟುಪೆಟ್ಟಿ ಅಣೆಕಟ್ಟು, ವನ್ಯಜೀವಿ ಪ್ರವಾಸ.

6.ವಾರಾಣಸಿ

Varanasi

Varanasi

ವಾರಾಣಸಿಯು ಅನ್ವೇಷಣೆಗಳಿಗೆ ಯೋಗ್ಯವಾಗಿದೆ. ಅತ್ಯಂತ ಪುರಾತನ ಹಾಗೂ ಕಿಕ್ಕಿರಿದ ನಗರ ಇದಾಗಿದ್ದು, ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ತಾಣವು ಹೌದು. ವಾರಣಾಸಿ ವೈವಿಧ್ಯಮಯ ಸಂಸ್ಕೃತಿಗಳ ನಗರವಾಗಿದೆ.

ಇದನ್ನು ಓದಿ: ಈ ಚಳಿಗಾಲದಲ್ಲಿ ನೀವು ಭೇಟಿ ನೀಡಲು ಭಾರತದ ಪ್ರಮುಖ ಕಡಲ ತೀರಗಳು ಇಲ್ಲಿವೆ

ವಾರಾಣಸಿಯ ಪ್ರಮುಖ ಆಕರ್ಷಣೆಗಳು: ವಿಶ್ವನಾಥ ದೇವಸ್ಥಾನ, ದಶ್ವಮೇಧ ಘಾಟ್, ಮಣಿಕರ್ಣಿಕಾ ಘಾಟ್, ಹೊಸ ವಿಶ್ವನಾಥ ದೇವಸ್ಥಾನ, ದುರ್ಗಾ ದೇವಸ್ಥಾನ ಮತ್ತು ಅಸ್ಸಿ ಘಾಟ್. ಜೊತೆಗೆ ವಾಕಿಂಗ್ ಪ್ರವಾಸವನ್ನು ಆನಂದಿಸಿ, ಆಯುರ್ವೇದ ಮಸಾಜ್ ಮಾಡಿ, ಯೋಗದಲ್ಲಿ ತೊಡಗಿಸಿಕೊಳ್ಳಿ, ದೋಣಿ ವಿಹಾರ ಆನಂದಿಸಿ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 2:23 pm, Fri, 25 November 22