Updated on:Nov 25, 2022 | 11:24 AM
ಚಳಿಗಾಲ ಆರಂಭವಾಗಿದೆ. ಈ ಚಳಿಗಾಲದಲ್ಲಿ ನಿಮ್ಮವರೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಸುಂದರ ತಾಣಗಳ ಮಾಹಿತಿ ಇಲ್ಲಿದೆ. ಈ ಹವಾಮಾನವು ಹೊರಗೆ ಹೆಜ್ಜೆ ಹಾಕಲು ಮತ್ತು ಸ್ವಲ್ಪ ಸೂರ್ಯನ ಶಾಖವನ್ನು ಪಡೆಯಲು ಪರಿಪೂರ್ಣವಾಗಿದೆ. ನೀವು ಬೀಚ್ ವಿಹಾರಕ್ಕೆ ಉತ್ಸುಕರಾಗಿದ್ದರೆ, ಭಾರತದಲ್ಲಿನ ಕೆಲವು ಸುಂದರವಾದ ಬೀಚ್ ತಾಣಗಳ ಕುರಿತು ಮಾಹಿತಿ ಇಲ್ಲಿವೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಭಾರತದ ಅತ್ಯಂತ ಜನಪ್ರಿಯ ಕಡಲ ತೀರಗಳಲ್ಲಿ ಒಂದಾಗಿದೆ. ಅತ್ಯಂತ ಸುಂದರವಾದ ಕಡಲತೀರಗಳು ಮತ್ತು ಸಮುದ್ರ ಜೀವಿಗಳನ್ನು ಇಲ್ಲಿ ಕಾಣಬಹುದು. ಈ ಚಳಿಗಾಲದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಲ್ಲಿನ ಸೌಂದರ್ಯವನ್ನು ಸೂರ್ಯನ ಶಾಖದೊಂದಿಗೆ ಆನಂದಿಸಿ.
ಅಲಿಬಾಗ್: ಮುಂಬೈಗೆ ಸಮೀಪವಿರುವ ಅಲಿಬಾಗ್ ರಜಾದಿನಗಳಲ್ಲಿ ಭೇಟಿ ನೀಡಬಹುದಾದ ಸುಂದರ ತಾಣವಾಗಿದೆ. ಮುಂಬೈನ ಸಾಕಷ್ಟು ಧೂಳು, ಮಾಲಿನ್ಯಗಳಿಂದ ನೀವು ಮುಕ್ತಿ ಪಡೆಯಬೇಕೆಂದು ಬಯಸಿದರೆ ಮುಂಬೈಯಿಂದ ದೋಣಿ ಪ್ರಯಾಣದ ಮೂಲಕ ಸುಂದರವಾದ ಸ್ವರ್ಗದಂತಹ ಅಲಿಬಾಗ್ ತಲುಪಬಹುದು. ಅಲ್ಲದೆ, ಇಲ್ಲಿ ಕೆಲವು ಸುಂದರವಾದ ಖಾಸಗಿ ವಿಲ್ಲಾಗಳು ಮತ್ತು ನೀವು ಇಲ್ಲಿ ರಾತ್ರಿ ತಂಗುವಿಕೆಗೆ ಯೋಗ್ಯವಾಗುವಂತೆ ಎಲ್ಲಾ ರೀತಿಯ ಸೌಕರ್ಯಗಳಿವೆ.
ದಿಯು: ಗುಜರಾತಿನ ಗಡಿಭಾಗದಲ್ಲಿರುವ ಈ ಸುಂದರ ದಿಯು ಬೀಚ್, ತನ್ನ ಸೌಂದರ್ಯದ ಮೂಲಕ ಜನರನ್ನು ತನ್ನತ್ತ ಸೆಳೆಯುತ್ತಿದೆ. ಇಲ್ಲಿನ ಆಹಾರಗಳಲ್ಲಿ ಪೋರ್ಚುಗೀಸ್ ಶೈಲಿಯ ಆಹಾರಗಳನ್ನು ಕಾಣಬಹುದು. ಜೊತೆಗೆ ಇಲ್ಲಿ ಸಾಕಷ್ಟು ವಾಸ್ತು ಶಿಲ್ಪ ಶೈಲಿಗಳನ್ನು ನೀವು ಕಣ್ತುಂಬಿಸಬಹುದು.
ವರ್ಕಲಾ: ಕೇರಳದ ತಿರುವನಂತಪುರದಲ್ಲಿರುವ ಈ ವರ್ಕಲಾ ಬೀಚ್ ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿದೆ. ಇಲ್ಲಿಗೆ ಪಾಪನಾಶನಂ ಎಂದು ಕೂಡ ಹೆಸರಿದೆ. ಅಕ್ಟೋಬರ್ ನಿಂದ ಫೆಬ್ರವರಿಯ ವರೆಗೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. ಇಲ್ಲಿ ಎಲ್ಲಾ ರೀತಿಯ ಸಾಕಷ್ಟು ಐಷಾರಾಮಿ ಅವಕಾಶಗಳನ್ನು ಪ್ರವಾಸಿಗರಿಗೆ ಒದಗಿಸಲಾಗುತ್ತದೆ.
ಪುದುಚೇರಿ: ಇದು ಆಹಾರ ಪ್ರಿಯರಿಗೆ ಅತ್ಯಂತ ಆಕರ್ಷಕ ತಾಣವಾಗಿದೆ. ಫ್ರೆಂಚ್ ಮತ್ತು ಕೊಂಕಣ ಆಹಾರದ ಮಿಶ್ರಣವು ಇಲ್ಲಿನ ವಿಶೇಷವಾಗಿದೆ. ಇಲ್ಲಿ ಸಾಕಷ್ಟು ಜನದಟ್ಟನೆ ಇಲ್ಲದಿರುವ ಕಾರಣ ಈ ಕಡಲತೀರವು ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ನೀಡುತ್ತದೆ. ನೀವು ಇಲ್ಲಿ ಸಾಕಷ್ಟು ಕಡಲ ತೀರದ ಮೋಜಿನ ಅನುಭವಗಳನ್ನು ಪಡೆಯಬಹುದು.
ದಕ್ಷಿಣದ ಗೋವಾ: ಅತ್ಯಂತ ಸುಂದರ ಕಡಲ ತೀರಗಳಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ. ಇಲ್ಲಿಗೆ ನೀವು ಬೇಟಿ ನೀಡಿದರೆ ಪ್ರತಿ ದಿನ ಬೆಳಗ್ಗೆ ಡಾಲ್ಫಿನ್ ವೀಕ್ಷಿಸಬಹುದು. ಇಲ್ಲಿನ ಖಾಸಗಿ ತಂಗುದಾಣಗಳ ಮೂಲಕ ಕಡಲ ತೀರಗಳನ್ನು ಹತ್ತಿರದಿಂದ ಕಣ್ತುಂಬಿಸಬಹುದು.
ತರ್ಕರ್ಲಿ ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದ ಒಂದು ಹಳ್ಳಿಯಾಗಿದೆ. ಇಲ್ಲಿನ ಶುದ್ಧ ನೀಲಿ ನೀರು ಹಾಗೂ ಬಿಳಿ ಮರಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇದು ಪ್ರಸಿದ್ಧ ಸಿಂಧುದುರ್ಗ ಕೋಟೆ ಮತ್ತು ಕಾರ್ಲಿ ನದಿಯ ಪ್ರಾಚೀನ ಹಿನ್ನೀರಿನ ನೆಲೆಯಾಗಿದೆ. ಇಲ್ಲಿ ನೀವು ಡಾಲ್ಫಿನ್‌ಗಳನ್ನು ಕಾಣಬಹುದು.
Published On - 11:24 am, Fri, 25 November 22