- Kannada News Photo gallery Gadag: Bird lovers are in awe of the exotic birds and the panoramic view of the beautiful birds
ಗದಗ: ವಿದೇಶಿ ಹಕ್ಕಿಗಳ ಕಲರವ, ಸುಂದರ ಹಕ್ಕಿಗಳ ವಿಹಂಗ ನೋಟಕ್ಕೆ ಪಕ್ಷಿಪ್ರಿಯರು ಫಿದಾ
ಮಾಗಡಿ ಗ್ರಾಮದ 136 ಎಕರೆ ವಿಶಾಲವಾದ ಕೆರೆಯಲ್ಲಿ ಬೆಳಗ್ಗೆ 9 ಗಂಟೆಯಾದರೆ ಸಾಕು ವಿದೇಶಿ ಹಕ್ಕಿಗಳ ಚಿಲಿಪಿಲಿ ಕಲವರ ನೋಡೋದೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಶಾಂತಿ ನೀಡುತ್ತಿವೆ.
Updated on:Nov 26, 2022 | 2:38 PM

ಗದಗಿನಿಂದ ಲಕ್ಷ್ಮೇಶ್ವರಕ್ಕೆ ಹೋಗುವ ದಾರಿಯಲ್ಲಿ 30 ಕಿಲೋ ಮೀಟರ್ ದೂರದ ಮಾಗಡಿ ಗ್ರಾಮದ ಕೆರೆಯಲ್ಲಿ ಈಗ ವಿದೇಶಿ ಹಕ್ಕಿಗಳ ಲೋಕವೇ ಸೃಷ್ಠಿಯಾಗಿದೆ. ಬೆಳಗ್ಗೆ 9 ಗಂಟೆಯಾದರೆ ಸಾಕು ಪಕ್ಷಿ ಪ್ರೀಯರು ಮಾಗಡಿ ಕೆರೆಯತ್ತ ಓಡೋಡಿ ಬರುತ್ತಾರೆ.

ಪ್ರತಿ ವರ್ಷ ಲಡಾಕ್, ಪಾಕಿಸ್ತಾನ ಸೇರಿ ವಿವಿಧ ದೇಶಗಳ ಸಾವಿರಾರು ಹಕ್ಕಿಗಳು ಹಿಮಾಲಯ ದಾಟಿ ಆಗಮಿಸುತ್ತವೆ. ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಇಂತಹ ಅದ್ಭುತ ದೃಶ್ಯ ನೋಡಲು ಗದಗ ಜಿಲ್ಲೆಯ ಜನರಿಗೆ ದೊರೆಯತ್ತದೆ.

ಹಿಂಡು ಹಿಂಡಾಗಿ ಬಾನಾಡಿನಲ್ಲಿ ವಿದೇಶಿ ಹಕ್ಕಿಗಳು ಚಿತ್ತಾರ ಹಾಕುತ್ತಿವೆ. ಬಾನಾಡಿನಲ್ಲಿ ರಂಗೋಲಿ ಚಿತ್ತಾರ ಮೂಡಿಸುತ್ತ ಕೆರೆಯಲ್ಲಿ ಲ್ಯಾಂಡಿಂಗ್ ಆಗುತ್ತಿರುವ ವಿದೇಶಿ ಅತಿಥಿಗಳು.

ಇಲ್ಲಿ ಸ್ಥಳೀಯರು ಮಾತ್ರವಲ್ಲ ದೂರದ ಊರುಗಳಿಂದ ಕೂಡ ಸಾಕಷ್ಟು ಪ್ರವಾಸಿಗರು ಈ ಹಕ್ಕಿಗಳ ಚೆಲ್ಲಾಟ, ತುಂಟಾಟ, ಚಿಲಿಪಿಲಿ ನಿನಾದ ನೋಡಿ ಕಣ್ಮುಂಬಿಕೊಳ್ಳಲು ಬರುತ್ತಾರೆ. ಕಣ್ಮನ ಸೆಳೆಯುವ ಹಕ್ಕಿಗಳ ಚೆಲ್ಲಾಟವನ್ನು ನೋಡುತ್ತಾ. ಜನರು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ. ಪಕ್ಷಿ ಪ್ರಿಯರಿಗಂತೂ ಇದೊಂದು ಯಾತ್ರಾ ಸ್ಥಳವಾಗಿದೆ.

ಮಾಗಡಿ ಗ್ರಾಮದ 136 ಎಕರೆ ವಿಶಾಲವಾದ ಕೆರೆಯಲ್ಲಿ ಈ ವಿದೇಶಿ ಹಕ್ಕಿಗಳು ಇಡೀ ದಿನ ಸ್ವಚ್ಛಂಧವಾಗಿ ವಿಹರಿಸುತ್ತವೆ. ಬೆಳಗ್ಗೆ 9 ಗಂಟೆಯಾದರೆ ಸಾಕು ವಿದೇಶಿ ಹಕ್ಕಿಗಳ ಚಿಲಿಪಿಲಿ ಕಲವರ ನೋಡೋದೆ ಕಣ್ಣಿಗೆ ಹಬ್ಬ, ಮನಸ್ಸಿಗೆ ಶಾಂತಿ.

ಸುಮಾರು 15 ಸಾವಿರಕ್ಕೂ ಹೆಚ್ಚು ವಿದೇಶಿ ಬಾನಾಡಿಗಳು ಈ ಕೆರೆಗೆ ಆಗಮಿಸುತ್ತವೆ. ತಮ್ಮ ಆರೋಗ್ಯ ಹಾಗೂ ಆಹಾರದ ಹಿತದೃಷ್ಠಿಯಿಂದ ಬರುವು ವಿದೇಶಿ ಹಕ್ಕಿಗಳು ಇಲ್ಲಿನ ಜನರಿಗೆ ಮುದ ನೀಡುವ ಮೂಲಕ ಜನರ ಮನ ಗೆದ್ದಿವೆ.
Published On - 7:30 am, Sat, 26 November 22




