Long-Distance Relationship: ನಿಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಉಳಿಸಿಕೊಳ್ಳಲು ಇಲ್ಲಿದೆ ಸಲಹೆ
ನೀವು ವರ್ಷಕ್ಕೆ ಕೆಲವು ಬಾರಿ ಅಥವಾ ಎರಡು ವರ್ಷಗಳಿಗೊಮ್ಮೆ ಒಬ್ಬರನ್ನೊಬ್ಬರು ನೋಡಿದರೂ ಸಹ ಆರೋಗ್ಯಕರ, ಅರ್ಥಪೂರ್ಣ ಮತ್ತು ತೃಪ್ತಿಕರ ಸಂಬಂಧವನ್ನು ಹೊಂದಲು ಸಾಧ್ಯವಿದೆ. ಆದ್ದರಿಂದ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಿ.
ನಿಮಗೆ ಪ್ರೀತಿ ಪಾತ್ರರಾದವರು ವಿದೇಶದಲ್ಲಿದ್ದರೆ ಅಥವಾ ಸಾಕಷ್ಟು ದೂರದಲ್ಲಿದ್ದರೆ ಆ ಸಂಬಂಧದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಮಾನಸಿಕವಾಗಿ ಜೊತೆಗಿದ್ದರೂ ಕೂಡ ಕೆಲವೊಮ್ಮೆ ನಿಮ್ಮ ಸಂಗಾತಿಗೆ ಒಂಟಿಯಾದೇ ಎಂಬ ಭಾವನೆ ಕಾಡಬಹುದು.ನೀವು ವರ್ಷಕ್ಕೆ ಕೆಲವು ಬಾರಿ ಅಥವಾ ಎರಡು ವರ್ಷಗಳಿಗೊಮ್ಮೆ ಒಬ್ಬರನ್ನೊಬ್ಬರು ನೋಡಿದರೂ ಸಹ ಆರೋಗ್ಯಕರ, ಅರ್ಥಪೂರ್ಣ ಮತ್ತು ತೃಪ್ತಿಕರ ಸಂಬಂಧವನ್ನು ಹೊಂದಲು ಸಾಧ್ಯವಿದೆ ಎಂದು ಸಂಶೋಧನೆಗಳು ತಿಳಿಸುತ್ತದೆ.
ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ದೈಹಿಕವಾಗಿ ಒಟ್ಟಿಗೆ ಇರದಿದ್ದರೂ ಪರಸ್ಪರ ಸಂಪರ್ಕದಲ್ಲಿರಲು ನೀವು ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಿ.
1. ಪರಸ್ಪರ ಮಾತುಕತೆ ಅಗತ್ಯ(Communication Is The Key):
ದಿನದಲ್ಲಿ ಒಂದು ಬಾರಿಯಾದರೂ ಪರಸ್ಪರ ಸಂವಹನ ನಡೆಸುವುದು ಅತ್ಯಂತ ಅಗತ್ಯವಾಗಿದೆ. ಇಂದು ತಂತ್ರಜ್ಞನ ಸಾಕಷ್ಟು ಬೆಳೆದಿದೆ. ಆದ್ದರಿಂದ ನೀವೂ ನಿಮ್ಮ ಸಂಗಾತಿ, ಅಥವಾ ನಿಮ್ಮ ಕುಟುಂಬದವರಿಂದ ಸಾಕಷ್ಟು ದೂರವಿದ್ದರೂ ಕೂಡ ಸಂವಹನ ನಡೆಸಬಹುದಾಗಿದೆ. ಆದ್ದರಿಂದ ನಿಮ್ಮ ಬಿಡುವಿನ ಸಮಯದಲ್ಲಿ ಆದಷ್ಟು ಪರಸ್ಪರ ಮಾತುಕತೆ ನಡೆಸುವುದು ಉತ್ತಮವಾಗಿದೆ. ಇದರಿಂದ ನಿಮ್ಮ ಸಂಬಂಧದಲ್ಲಿ ಭಿನ್ನಾಭಿಪ್ರಾಯ, ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಬಹುದು. ಇದರೊಂದಿಗೆ ನಿಮ್ಮ ಭಾಂಧವ್ಯ ಉತ್ತಮವಾಗಿ ಆರೋಗ್ಯವಾಗಿರುತ್ತದೆ.
2. ಒಟ್ಟಿಗೆ ಪ್ಲಾನ್ ಮಾಡಿ(Plan Activities Together):
ನಿಮ್ಮ ವಾರಾಂತ್ಯದಲ್ಲಿ ನೀವು ಪರಸ್ಪರ ದೈಹಿಕವಾಗಿ ಜೊತೆಗಿಲ್ಲದ್ದಿದ್ದರೂ ಸಹ ಅವರೊಂದಿಗೆ ಉತ್ತಮ ಸಮಯವನ್ನು ಕಳೆಯಿರಿ. ಒಟ್ಟಿಗೆ ಪ್ಲಾನ್ ಮಾಡಿ ಒನ್ಲೈನ್ ಗೇಮ್ ಗಳಲ್ಲಿ ತೊಡಗಿಸಿಕೊಳ್ಳಿ, ಅಥವಾ ನಿಮಗೆ ಆಸಕ್ತಿಯಿರುವ ಚಲನಚಿತ್ರಗಳನ್ನು ವೀಕ್ಷಿಸಿ. ವಿಡಿಯೋ ಕಾಲ್ ಗಳ ಮೂಲಕ ಒಟ್ಟಿಗೆ ಊಟವನ್ನು ಆನಂದಿಸಿ. ಇದ್ದರಿಂದಾಗಿ ನಿಮ್ಮ ಭಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಸಾಧ್ಯವಿದೆ. ದೈಹಿಕವಾಗಿ ದೂರವಿದ್ದರೂ ಕೂಡ ನಿಮ್ಮ ಸಂಬಂಧದಲ್ಲಿ ಆರೋಗ್ಯವಾಗಿರಲು ಸಾಧ್ಯ. ಸಂಬಂಧದಲ್ಲಿ ಅನುಭವಗಳು ಸಂಬಂಧದ ಒಗ್ಗಟ್ಟನ್ನು ಹೆಚ್ಚಿಸುತ್ತವೆ.
3. ಸಮಸ್ಯೆಗಳನ್ನು ನಿವಾರಿಸಿ ಮತ್ತು ಸರಿಪಡಿಸಿ(Troubleshoot And Fix Issues):
ನಿಮ್ಮ ಸಂಗಾತಿ ನಿಮ್ಮಿಂದ ಬಹಳಷ್ಟು ದೂರವಿದ್ದಾಗ, ಅವರ ಸಮಸ್ಯೆಗಳೇನು? ಎಂಬುದನ್ನು ಸರಿಯಾಗಿ ತಿಳಿದುಕೊಳ್ಳುಲು ಸಾಧ್ಯಾವಾಗುವುದಿಲ್ಲ. ಆದ್ದರಿಂದ ಎನೇ ತೊಂದರೆಗಳಿದ್ದರೂ ಕೂಡ ಸರಿಯಾಗಿ ಮಾತುಕತೆ ನಡೆಸಿ ಪರಿಹರಿಸಿಕೊಳ್ಳಿ. ಎಷ್ಟೇ ದೂರದಲ್ಲಿದರೂ ಸಂಬಂಧದಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಅತ್ಯಂತ ಅಗತ್ಯ.
ಇದನ್ನು ಓದಿ: ಪುರುಷ ಹಾಗೂ ಮಹಿಳೆಯರ ಸ್ನೇಹ ಸಂಬಂಧಗಳೇ ವಿಭಿನ್ನ
4. ಯಾವಾಗಲೂ ಪರಸ್ಪರ ಸಹಕರಿಸಿ(Always Be There For Each Other):
ನಿಮ್ಮ ಸಂಗಾತಿಯನ್ನು ನೀವು ಎಷ್ಟು ಪ್ರೀತಿಸುತ್ತೀರಿ ಎಂಬುದನ್ನು ಅವರಿಗೆ ತಿಳಿಸಿ. ದೈಹಿಕವಾಗಿ ಅಲ್ಲದಿದ್ದರೂ ಯಾವಾಗಲೂ ಅವರೊಂದಿಗೆ ಇರಿ, ಅವರನ್ನು ಭಾವನಾತ್ಮಕ ಅರ್ಥಮಾಡಿಕೊಳ್ಳಿ ಮತ್ತು ಅವರ ಪ್ರತಿ ಕೆಲಸಕ್ಕೂ ಬೆಂಬಲ ನೀಡಿ. ನಿಮ್ಮ ಭಾವನಾತ್ಮಕ ಬಂಧವನ್ನು ಬಲಪಡಿಸಲು, ಒಂಟಿತನವನ್ನು ದೂರ ಮಾಡಲು ಜೊತೆಗೆ ನಿಮ್ಮ ಸಂಬಂಧವು ಎಷ್ಟೇ ವರ್ಷ ಕಳೆದರೂ ಆರೋಗ್ಯವಾಗಿರಲು ಈ ಮೇಲಿನ ಸಲಹೆಗಳನ್ನು ಪಾಲಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:04 pm, Thu, 24 November 22