AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Polish Remover: ನೇಲ್ ಪಾಲಿಶ್ ತೆಗೆಯಲು ಇಲ್ಲಿದೆ ಸುಲಭ ವಿಧಾನ

ನಿಮ್ಮ ನೇಲ್ ಪಾಲಿಶ್ ತೆಗೆಯಲು ನೀವೂ ನೇಲ್ ಪಾಲಿಶ್ ರಿಮೂವರ್‌ ಲಿಕ್ವಿಡ್ ಇಲ್ಲ ಎಂದು ಚಿಂತಿಸಬೇಡಿ. ಈ ಕೆಳಗಿನವುಗಳನ್ನು ಬಳಸಿಕೊಂಡು ಸುಲಭವಾಗಿ ನೇಲ್ ಪಾಲಿಶ್ ತೆಗೆಯಬಹುದು.

Nail Polish Remover: ನೇಲ್ ಪಾಲಿಶ್ ತೆಗೆಯಲು ಇಲ್ಲಿದೆ ಸುಲಭ ವಿಧಾನ
Nail Polish RemoverImage Credit source: Healthline
TV9 Web
| Updated By: ಅಕ್ಷತಾ ವರ್ಕಾಡಿ|

Updated on: Nov 24, 2022 | 5:38 PM

Share

ವಿಶೇಷ ದಿನಗಳ ಸಂದರ್ಭದಲ್ಲಿ ಅಥವಾ ದೈನಂದಿನ ಜೀವನ ಶೈಲಿಯಲ್ಲಿ ನಿಮ್ಮ ಉಗುರುಗಳು ಸುಂದರವಾಗಿ ಕಾಣಲು ವಿವಿಧ ಬಣ್ಣಗಳ ನೇಲ್ ಪಾಲಿಶ್(Nail Polish) ಬಳಸುವುದು ಸಾಮಾನ್ಯ. ಅದರಲ್ಲೂ ಕೆಲವೊಂದಷ್ಟು ಮಹಿಳೆಯರು ಹಾಕುವ ಬಟ್ಟೆ ಹಾಗೂ ಇತರ ಆಭರಣಗಳಿಗೆ ಹೋಲಿಕೆಯಾಗುವಂತೆ ಪ್ರತಿದಿನ ಉಗುರುಗಳಿಗೆ ಬಣ್ಣ ಹಚ್ಚುವುದುಂಟು. ಆ ಸಮಯದಲ್ಲಿ ನೈಲ್ ಪೇಂಟ್ ರಿಮೂವರ್‌(Nail Polish Remover)ಗಳನ್ನು ಬಳಸಿ ಸುಲಭವಾಗಿ ನೈಲ್ ಪೇಂಟ್ ತೆಗೆಯಲಾಗುತ್ತದೆ. ಇಂತಹ ಪ್ರವೃತ್ತಿಯನ್ನು ನೀವು ಹೊಂದಿದ್ದರೆ ಈ ಸ್ಟೋರಿಯನ್ನು ನೀವು ಓದಿ.

ನೀವು ಪ್ರತಿ ದಿನ ನೈಲ್ ಪೇಂಟ್(Nail polish) ಬಳಸುತ್ತಿದ್ದು, ಜೊತೆಗೆ ನೈಲ್ ಪೇಂಟ್ ರಿಮೂವರ್‌ಗಳನ್ನು ಹೆಚ್ಚಾಗಿ ಬಳಸುತ್ತಿದ್ದರೆ ಅದು ನಿಮ್ಮ ಉಗುರಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದರಲ್ಲಿ ಸಾಕಷ್ಟು ರಾಸಾಯನಿಕಗಳನ್ನು ಬಳಸಿರುವುದರಿಂದ ಉಗುರು ಮತ್ತು ಚರ್ಮದ ಮೇಲಿನ ಕಾಯಿಲೆಗೆ ಕಾರಣವಾಗಬಹುದು. ಆದ್ದರಿಂದ ಆದಷ್ಟು ನಿಮ್ಮ ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನೇಲ್ ಪೇಂಟ್ ಮತ್ತು ನೇಲ್ ಪಾಲಿಶ್ ರಿಮೂವರ್‌ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ.

ಇದನ್ನು ಓದಿ: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

ನಿಮ್ಮ ನೇಲ್ ಪಾಲಿಶ್ ತೆಗೆಯಲು ನೀವೂ ನೇಲ್ ಪಾಲಿಶ್ ರಿಮೂವರ್‌ ಲಿಕ್ವಿಡ್ ಇಲ್ಲ ಎಂದು ಚಿಂತಿಸಬೇಡಿ. ಈ ಕೆಳಗಿನವುಗಳನ್ನು ಬಳಸಿಕೊಂಡು ಸುಲಭವಾಗಿ ನೇಲ್ ಪಾಲಿಶ್ ತೆಗೆಯಬಹುದು.

1. ಡಿಯೋಡರೆಂಟ್ ಅಥವಾ ಸುಗಂಧ ದ್ರವ್ಯ:

ಡಿಯೋಡರೆಂಟ್‌ನಂತಹ ಆಲ್ಕೋಹಾಲ್ ಆಧಾರಿತ ಉತ್ಪನ್ನಗಳು ಉಗುರು ಬಣ್ಣವನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಮೊದಲಿಗೆ ನಿಮ್ಮ ಉಗುರುಗಳ ಮೇಲೆ ಸ್ವಲ್ಪ ಡಿಯೋಡರೆಂಟ್ ಸ್ಪ್ರೇ ಮಾಡಿ. ನಂತರ ಹತ್ತಿಯಿಂದ ಉಜ್ಜಿ. ಹೀಗೆ ಎರಡು ಮೂರು ಬಾರಿ ಪ್ರಯತ್ನಿಸಿ.

2. ಸ್ಯಾನಿಟೈಸರ್:

ಸ್ಯಾನಿಟೈಸರ್‌ಗಳು ಡಿಯೋಡರೆಂಟ್‌ ಮತ್ತು ಸುಗಂಧ ದ್ರವ್ಯಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಏಕೆಂದರೆ ಅವುಗಳು ಹೆಚ್ಚಿನ ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತವೆ. ಟಿಶ್ಯೂ ಅಥವಾ ಹತ್ತಿ ಉಂಡೆಯ ಮೇಲೆ ಸ್ವಲ್ಪ ಹ್ಯಾಂಡ್ ಸ್ಯಾನಿಟೈಸರ್ ಹಾಕಿ ಮತ್ತು ನಿಮ್ಮ ಉಗುರುಗಳ ಮೇಲೆ ಉಜ್ಜಿಕೊಳ್ಳಿ. ಇದು ನಿಮ್ಮ ಉಗುರಿನ ನೇಲ್ ಪಾಲಿಶ್ ಸುಲಭವಾಗಿ ತೆಗೆಯಲು ಸಹಾಯ ಮಾಡುತ್ತದೆ.

3.ವಿನೆಗರ್:

ವಿನೆಗರ್ ಉಗುರು ಬಣ್ಣವನ್ನು ತೆಗೆಯಲು ಸಹಾಯಕವಾಗಿದೆ. ನಿಮ್ಮ ಬೆರಳುಗಳನ್ನು ವಿನೆಗರ್ ನಲ್ಲಿ ಸುಮಾರು 10 ನಿಮಿಷಗಳ ಕಾಲ ನೆನೆಸಿಡಿ. ಜೊತೆಗೆ ಅರ್ಧ ನಿಂಬೆಯನ್ನು ಹಿಂಡಬಹುದು. ನಂತರ ಹತ್ತಿ ಉಂಡೆ, ಟಿಶ್ಯೂ ಅಥವಾ ಸ್ವಚ್ಚ ಬಟ್ಟೆಯ ಸಹಾಯದಿಂದ ನೇಲ್ ಪಾಲಿಶ್ ತೆಗೆಯಿರಿ.

4. ಟೂತ್‌ಪೇಸ್ಟ್:

ಟೂತ್‌ಪೇಸ್ಟ್ ಈಥೈಲ್ ಅಂಶವನ್ನು ಹೊಂದಿರುವುದ್ದರಿಂದ ರಿಮೂವರ್ ಇಲ್ಲದೆ ನೇಲ್ ಪಾಲಿಷ್ ತೆಗೆಯಲು ಬಿಳಿ ಟೂತ್ ಪೇಸ್ಟ್ ಬಳಸುವುದು ಉತ್ತಮ. ನಿಮ್ಮ ಉಗುರಿನ ಮೇಲೆ ಸ್ವಲ್ಪ ಟೂತ್ ಪೇಸ್ಟ್ ಅನ್ನು ಉಜ್ಜಲು ಹಳೆಯ ಟೂತ್ ಬ್ರಶ್ ಬಳಸಿ. ಇದರ ಜೊತೆಗೆ ನೀವು ಅಡುಗೆ ಸೋಡಾವನ್ನು ಕೂಡ ಸೇರಿಸಿಕೊಳ್ಳಬಹುದು.

5.ಟಾಪ್ ಕೋಟ್:

ನೀವು ಈಗಾಗಲೇ ಹಚ್ಚಿರುವ ನೇಲ್ ಪಾಲಿಶ್ ಮೇಲೆ ಇನ್ನೊಂದು ಬಾರಿ ನೇಲ್ ಪಾಲಿಶ್ ಹಚ್ಚಿ. ಇದು ಒಣಗುವ ಮುನ್ನ ಹತ್ತಿ ಉಂಡೆ ಅಥವಾ ಟಿಶ್ಯೂ ಬಳಸಿ ಉಜ್ಜಿ. ಇದರಿಂದಲೂ ನಿಮ್ಮ ನೇಲ್ ಪಾಲಿಶ್ ತೆಗೆಯಬಹುದು. ನೈಲ್ ಪಾಲಿಶ್ ರಿಮೂವರ್‌ಗಳನ್ನು ಬಳಸದೇ, ಅಥವಾ ರಿಮೂವರ್‌ಗಳು ಖಾಲಿಯಾದಂತಹ ಸಮಯದಲ್ಲಿ ಮನೆಯಲ್ಲಿಯೇ ಸುಲಭವಾಗಿ ಈ ಮೇಲಿನ ವಿಧಾನವನ್ನೊಮ್ಮೆ ಪ್ರಯತ್ನಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ