Healthy Nails: ನಿಮ್ಮ ಉಗುರುಗಳು ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್
Healthy Nails: ಉಗುರು(Nail)ಗಳ ಅಂದವನ್ನು ಇಮ್ಮಡಿಗೊಳಿಸುವ ಹಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ನೈಸರ್ಗಿಕವಾಗಿ ಉಗುರಿನ ಆರೋಗ್ಯವನ್ನು ಕಾಪಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನವಿದೆ. ನಿಂಬೆಯ ರಸದಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ಉಗುರಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ
ಉಗುರು(Nail)ಗಳ ಅಂದವನ್ನು ಇಮ್ಮಡಿಗೊಳಿಸುವ ಹಲವು ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ನೈಸರ್ಗಿಕವಾಗಿ ಉಗುರಿನ ಆರೋಗ್ಯವನ್ನು ಕಾಪಾಡುವುದು ಹೇಗೆ ಎಂಬುದರ ಬಗ್ಗೆ ಈ ಲೇಖನವಿದೆ. ನಿಂಬೆಯ ರಸದಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ಉಗುರಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಿಂಬೆ ಹಣ್ಣನ್ನು ತೆಗೆದುಕೊಂಡು ಕೈ ಹಾಗೂ ಕಾಲಿನ ಉಗುರುಗಳ ಮೇಲೆ ಉಜ್ಜಬೇಕು ನಂತರ ಬಿಸಿ ನೀರಿನಲ್ಲಿ ಕೈ ತೊಳೆದುಕೊಳ್ಳಬೇಕು. ಕೆಲವೊಮ್ಮೆ ಉಗುರು ಕಟ್ಟರ್ ಬಳಸಿ ಉಗುರು ಕತ್ತರಿಸಿಕೊಳ್ಳುವಾಗಲೂ ಅಗತ್ಯಕ್ಕೂ ಹೆಚ್ಚು ಆಳದಲ್ಲಿ ಕತ್ತರಿಸಿದರೆ ಇದರಿಂದಲೂ ಉಗುರು ಪ್ರಾರಂಭವಾಗುವ ಅಂಗಾಂಶದ ಭಾಗ ಕತ್ತರಿಸಿ ನೋವು ಎದುರಾಗುತ್ತದೆ. ಇವು ಕೇವಲ ನೋವು ನೀಡುವುದು ಮಾತ್ರವಲ್ಲ, ನಿಮ್ಮ ಬೆರಳುಗಳ ಸೌಂದರ್ಯವನ್ನೂ ಕೆಡಿಸುತ್ತವೆ ಹಾಗೂ ನೋಡುವ ವರು ನಿಮ್ಮ ಬಗ್ಗೆ ಅಸಹ್ಯ ಪಡುವಂತೆ ನಿಮಗೆ ಭಾಸವಾಗುತ್ತದೆ.
ಉಗುರುಗಳನ್ನು ಹಲ್ಲಿನಿಂದ ಕಚ್ಚಬೇಡಿ ಉಗುರು ಕಚ್ಚುವ ಕೆಟ್ಟ ಅಭ್ಯಾಸ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೂ ಇದೆ. ಈ ಅಭ್ಯಾಸವನ್ನು ಬಿಡಿ ಎಂದು ಯಾರೇ ಹೇಳಿದರೂ ಸರಿ, ಅಥವಾ ನೀವೇ ಇಚ್ಛಿಸಿದರೂ ನಿಮ್ಮ ಅರಿವಿಗೇ ಬಾರದಂತೆ ಬೆರಳುಗಳು ಹಲ್ಲುಗಳ ನಡುವೆ ಇರುತ್ತವೆ. ಹಾಗಾಗಿ ಮೊದಲಿಗೆ ನೀವು ಈ ಅಭ್ಯಾಸವನ್ನು ಬಿಡುವತ್ತ ದೃಢ ಮನಸ್ಸು ಮಾಡಬೇಕು. ಮಕ್ಕಳ ಉಗುರುಗಳಿಗೆ ಬೇವಿನ ಎಣ್ಣೆ ಹಚ್ಚಿ ತಡೆಯುವುದು ನಮ್ಮ ಹಿಂದಿನವರು ನಿರ್ವಹಿಸುತ್ತಿದ್ದ ಒಂದು ಕ್ರಮವಾಗಿದೆ. ಈ ಕ್ರಮ ಈಗಲೂ ಪ್ರಸ್ತುತವಾಗಿದ್ದು ನೀವೂ ಪ್ರಯತ್ನಿಸಬಹುದು.
ಉಗುರು ಸ್ವಚ್ಛವಾಗಿಸಲು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಉಗುರಿನ ಮಧ್ಯದಲ್ಲಿ ಉರಿ ಇದ್ದರೆ ಅಥವಾ ಧೂಳು ಸಿಲುಕಿಕೊಂಡಿದ್ದರೆ ಸುಲಭವಾಗಿ ತೆಗೆಯಲು ಹೈಡ್ರೋಜನ್ ಪೆರಾಕ್ಸೈಡ್ನ್ನು ಬಳಕೆ ಮಾಡಿ. ನೋವು ಮತ್ತು ಉರಿ ಇದ್ದರೆ ಈ ಉರಿಯನ್ನೂ ಶಮನಗೊಳಿಸುತ್ತದೆ. ಇದಕ್ಕಾಗಿ ಈ ದ್ರಾವಣವನ್ನು ಉಗುರುಗಳ ಕೊಳೆಭಾಗ ಹೀರಿಕೊಳ್ಳುವಂತೆ ತೊಟ್ಟು ತೊಟ್ಟಾಗಿ ಹಾಕಿ ತೇವಗೊಳಿಸಬೇಕು.
ಉರಿ ಇರುವ ಸಮಯದಲ್ಲಿ ಸ್ವಚ್ಛಗೊಳಿಸಲು ಹೋಗದೇ ಕೊಂಚ ಕಾಲ ಹಾಗೇ ಇರಿಸಿ ಸ್ವಚ್ಛ ಬಟ್ಟೆಯನ್ನು ಸುತ್ತಿಕೊಳ್ಳಬೇಕು. ಉರಿ ಕಡಿಮೆಯಾದ ಬಳಿಕವೇ ಈ ಭಾಗವನ್ನು ಇನ್ನಷ್ಟು ದ್ರಾವಣದಿಂದ ತೇವಗೊಳಿಸಿ ಬಟ್ಟೆಯ ಅಂಚಿನಿಂದ ಸ್ವಚ್ಛಗೊಳಿಸಬೇಕು.
ತೆಂಗಿನ ಎಣ್ಣೆ ಬಳಕೆ ಮಾಡಿ: ಈ ಎಣ್ಣೆಯಲ್ಲಿ ವಿಟಮಿನ್ ಇ ಅಂಶವಿರುವುದರಿಂದ ಉಗುರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಮಲಗುವ ಮೊದಲು ತೆಂಗಿನೆಣ್ಣೆಯಲ್ಲಿ ಉಗುರಿಗೆ ಮಸಾಜ್ ಮಾಡಿಕೊಳ್ಳಿ ಇದು ಸೌಂದರ್ಯದ ಜೊತೆಗೆ ಕಾಲಿನ ಸಮಸ್ಯೆಗಳಿಗೂ ಪರಿಹಾರದಂತೆ ಕೆಲಸ ಮಾಡುತ್ತದೆ.
ಇನ್ನು ಶುದ್ಧ ತೆಂಗಿನೆಣ್ಣೆಯೂ ಸಹ ಉಗುರಿನ ಆರೋಗ್ಯ ಕಾಪಾಡುವಲ್ಲಿ ಸಹಾಯಕ. ಉಗುರು ಬೆಚ್ಚಗೆ ಮಾಡಿದ ತೆಂಗಿನ ಎಣ್ಣೆಯನ್ನು ಉಗುರುಗಳ ಮೇಲೆ ನಿಧಾನವಾಗಿ ಮಸಾಜ್ ಮಾಡಬೇಕು.
ಜೇನುತುಪ್ಪ ಹಾಗೂ ನಿಂಬೆ ರಸದ ಮಿಶ್ರಣ ಹಚ್ಚಿ: ಜೇನುತುಪ್ಪ ಹಾಗೂ ನಿಂಬೆರಸವನ್ನು ಮಿಶ್ರಣ ಮಾಡಿ ಉಗುರಿಗೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಟ್ಟು ನಂತರ ಅದನ್ನು ಬಿಸಿನೀರಿನಿಂದ ತೊಳೆಯಬೇಕು. ಹೀಗೆ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡುವುದರಿಂದ ಉಗುರು ಸದೃಢವಾಗಿ ಬೆಳೆಯುತ್ತದೆ.
ಉಗುರು ಬೆಳವಣಿಗೆಯಲ್ಲಿ ಸಮಸ್ಯೆ ಇದ್ದರೆ ಏನು ಮಾಡಬೇಕು? ಕೆಲವರಿಗೆ ಉಗುರು ಬೆಳವಣಿಗೆಯಲ್ಲಿ ಸಾಕಷ್ಟು ಸಮಸ್ಯೆ ಇರುತ್ತದೆ, ಬಹುಬೇಗ ತುಂಡಾಗುತ್ತದೆ. ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಉಗುರಿನ ಸುತ್ತಲೂ ಹಚ್ಚಿ, ಕೆಲ ಸಮಯದ ಬಳಿಕ ಬಿಸಿ ನೀರಿನಿಂದ ತೊಳೆಯುವುದರಿಂದ ಉಗುರಿನ ಬೆಳವಣಿಗೆಯಾಗಲಿದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ