AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Buddha Purnima 2022: ಬುದ್ಧ ಪೂರ್ಣಿಮಾ ದಿನಾಂಕ, ಇತಿಹಾಸ ಮತ್ತು ಮಹತ್ವ

Buddha Purnima 2022:ಹಿಂದೂ ಧರ್ಮದಲ್ಲಿ, ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ, ಬೌದ್ಧ ಧರ್ಮದ ಸ್ಥಾಪಕ ಬುದ್ಧ( Buddha) ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಜನಿಸಿದರು ಎಂದು ನಂಬಲಾಗಿದೆ. ಹೀಗಾಗಿ ಈ ದಿನವನ್ನು ಬುದ್ಧ ಪೂರ್ಣಿಮಾ( Buddha Purnima) ಎಂದು ಆಚರಣೆ ಮಾಡಲಾಗುತ್ತದೆ.

Buddha Purnima 2022: ಬುದ್ಧ ಪೂರ್ಣಿಮಾ ದಿನಾಂಕ, ಇತಿಹಾಸ ಮತ್ತು ಮಹತ್ವ
ಬುದ್ಧ ಪೂರ್ಣಿಮೆ
TV9 Web
| Updated By: ನಯನಾ ರಾಜೀವ್|

Updated on: May 14, 2022 | 2:58 PM

Share

ಹಿಂದೂ ಧರ್ಮದಲ್ಲಿ, ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ, ಬೌದ್ಧ ಧರ್ಮದ ಸ್ಥಾಪಕ ಬುದ್ಧ( Buddha) ವೈಶಾಖ ಮಾಸದ ಹುಣ್ಣಿಮೆಯ ದಿನದಂದು ಜನಿಸಿದರು ಎಂದು ನಂಬಲಾಗಿದೆ. ಹೀಗಾಗಿ ಈ ದಿನವನ್ನು ಬುದ್ಧ ಪೂರ್ಣಿಮಾ( Buddha Purnima) ಎಂದು ಆಚರಣೆ ಮಾಡಲಾಗುತ್ತದೆ. ಈ ವರ್ಷ ಬುದ್ಧ ಪೂರ್ಣಿಮಾ ವ್ರತವನ್ನು ಮೇ 16 ರಂದು ಸೋಮವಾರ ಆಚರಿಸಲಾಗುವುದು. ವೈಶಾಖ ಪೂರ್ಣಿಮಾದ ಶುಭ ಮುಹೂರ್ತ, ಮಹತ್ವ ಮತ್ತು ಪ್ರಯೋಜನದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಶ್ರೀ ವಿಷ್ಣುವಿನ ದಶಾವತಾರದಲ್ಲಿ 9ನೇ ಅವತಾರ ಎಂದೇ ಪೂಜಿಸಲ್ಪಡುವ ಬುದ್ಧ ಎಂದರೆ ‘ಜ್ಞಾನ ಪಡೆದವನು’ ಎಂದರ್ಥ. ಬುದ್ಧ ಪೂರ್ಣಿಮಾ ದಿನಾಂಕ ಪ್ರತಿ ವರ್ಷವೂ ಭಿನ್ನವಾಗಿರುತ್ತದೆ. ಇದು ಸಾಮಾನ್ಯವಾಗಿ ಹಿಂದೂ ತಿಂಗಳ ವೈಶಾಖದಲ್ಲಿ ಹುಣ್ಣಿಮೆಯ ದಿನದಂದು ಬರುತ್ತದೆಯಾದರೂ, ಪಶ್ಚಿಮ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ದಿನಾಂಕವು ಬದಲಾಗುತ್ತದೆ.

ಬುದ್ಧನು ಸಿದ್ಧಾರ್ಥ ಗೌತಮ ಎಂಬ ರಾಜಕುಮಾರನಾಗಿ ಪೂರ್ಣಿಮಾ ತಿಥಿಯಂದು ಕ್ರಿ.ಪೂ. 563 ರಲ್ಲಿ ಹುಣ್ಣಿಮೆಯ ದಿನ ಲುಂಬಿನಿಯಲ್ಲಿ (ನೇಪಾಳದ ಪ್ರದೇಶ) ಜನಿಸಿದರು. ಬುದ್ಧ ಪೂರ್ಣಿಮಾಗೆ ಅಪಾರವಾದ ಮಹತ್ವವಿದೆ. ಪ್ರಪಂಚದಾದ್ಯಂತದ ಬೌದ್ಧ ಸಮುದಾಯಗಳು, ಮಠಗಳು ಪ್ರಾರ್ಥನೆಗಳನ್ನು ನಡೆಸುತ್ತವೆ, ಪಠಿಸುತ್ತವೆ, ಧ್ಯಾನಿಸುತ್ತವೆ, ಉಪವಾಸವನ್ನು ಆಚರಿಸುತ್ತವೆ.

ಅವರ ಧರ್ಮೋಪದೇಶಗಳನ್ನು ಚರ್ಚಿಸುತ್ತವೆ ಮತ್ತು ಅವರ ಬೋಧನೆಗಳನ್ನು ಪಾಲಿಸುತ್ತವೆ. ಬುದ್ಧ ಜಯಂತಿಯಂದು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡುವ ಸಂಪ್ರದಾಯವು ಪಾಪಗಳನ್ನು ತೊಳೆಯುತ್ತದೆ ಎಂಬ ನಂಬಿಕೆಯಿಂದ ಹುಟ್ಟಿಕೊಂಡಿದೆ.

ಬುದ್ಧ ಪೂರ್ಣಿಮಾದ ಮುಹೂರ್ತ ಹೀಗಿದೆ ವೈಶಾಖ ಪೂರ್ಣಿಮಾ 2022: 2022 ರ ಮೇ 16 ರಂದು ಸೋಮವಾರ ತಿಥಿ ಆರಂಭ: 2022 ಮೇ 15 ರಂದು ಭಾನುವಾರ ರಾತ್ರಿ 12:45 ರಿಂದ ತಿಥಿ ಮುಕ್ತಾಯ: 2022 ಮೇ 16 ರಂದು ಸೋಮವಾರ ರಾತ್ರಿ 9:45 ರವರೆಗೆ ಇರಲಿದೆ.

ಬುದ್ಧ ಪೂರ್ಣಿಮಾ ಪೂಜಾ ವಿಧಾನ ಬುದ್ಧ ಪೂರ್ಣಿಮಾಗೆ ಇನ್ನು ಎರಡು ದಿನ ಬಾಕಿ ಇದೆ. ಅಂದು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡುವಾಗ ನೀರಿಗೆ ಒಂದೆರಡು ಹನಿ ಗಂಗಾಜಲ ಸೇರಿಸಿ. ದೇವರ ಕೋಣೆಯನ್ನು ಶುಚಿಗೊಳಿಸಿ ಅಲ್ಲಿಯೂ ಗಂಗಾಜಲ ಸಿಂಪಡಿಸಿ ಶುದ್ಧಿ ಮಾಡಬೇಕು. ದೇವರನ್ನು ಪೂಜೆಗೆ ಆಹ್ವಾನಿಸಿ ಬಳಿಕ ವಿಷ್ಣುವಿನ ವಿಗ್ರಹ ಅಥವಾ ಚಿತ್ರಕ್ಕೆ ಅರಿಶಿನ ಹಚ್ಚಿ ತುಳಸಿ ಮಾಲೆಯನ್ನು ಹಾಕಬೇಕು. ಬಳಿಕ ಪೂಜೆ ಮಾಡಬೇಕು.

ಪೂರ್ಣಿಮಾ ಉಪವಾಸದಿಂದಾಗುವ ಪ್ರಯೋಜನವೇನು? ಬುದ್ಧ ಪೂರ್ಣಿಮಾದಂದು ಬೌದ್ಧ ಧರ್ಮವನ್ನು ನಂಬುವ ಜನರು ಎಲ್ಲೇ ಇದ್ದರೂ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ದೀಪವನ್ನು ಬೆಳಗಿಸಿ ಭಗವಾನ್ ಬುದ್ಧನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.ವೈಶಾಖ ಪೂರ್ಣಿಮೆಯ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ವರ್ಷ ಈ ದಿನ ಚಂದ್ರಗ್ರಹಣ ಬೀಳುವುದರಿಂದ ಚಂದ್ರ ದೇವರನ್ನೂ ಪೂಜಿಸಬೇಕು.

ವೈಶಾಖ ಪೂರ್ಣಿಮೆಯ ಮಹತ್ವ: ವೈಶಾಖ ಮಾಸದ ಹುಣ್ಣಿಮೆಯಂದು ವೈಶಾಖ ಸ್ನಾನ ಮತ್ತು ಕಳೆದ 1 ತಿಂಗಳಿಂದ ನಡೆಯುತ್ತಿದ್ದ ವಿಶೇಷ ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಳ್ಳುತ್ತವೆ. ಹಿರಿಕರು ಹೇಳುವ ಪ್ರಕಾರ ವೈಶಾಖ ಪೂರ್ಣಿಮೆಯ ದಿನದಂದು ಉಪವಾಸ ವ್ರತವನ್ನು ಮಾಡಿ ಚಂದ್ರನನ್ನು ಮತ್ತು ವಿಷ್ಣುವನ್ನು ಪೂಜಿಸುವ ಸಂಪ್ರದಾಯವಿದೆ.

ಜೀವನ ಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ